Happiness Day: ಲೈಫಲ್ಲಿ ಖುಷಿಯಾಗಿರ್ಬೇಕಾ, ಕೃಷ್ಣ ಹೇಳಿದ್ದಷ್ಟು ಮಾಡಿ ಸಾಕು!

By Suvarna News  |  First Published Mar 20, 2023, 11:56 AM IST

ಸಂತೋಷ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯದ ಜೀವನದಲ್ಲಿ ನಗು ಮಾಸಿದೆ. ನಮ್ಮ ಸುತ್ತಲಿನ ಪರಿಸರ, ಪರಿಸ್ಥಿತಿ ನಮ್ಮ ಸಂತೋಷಕ್ಕೆ ಮೂಲವಾಗಬಾರದು. ಸಂತೋಷವನ್ನು ನಮ್ಮ ಮನಸ್ಸಿನಲ್ಲಿ ಹುಡುಕಬೇಕು.
 


ಪ್ರತಿ ವರ್ಷ ಮಾರ್ಚ್ 20 ಅನ್ನು ಅಂತಾರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಜನರಿಗೆ ಸಂತೋಷದ ಮಹತ್ವವನ್ನು ತಿಳಿಸುವುದು ಈ ದಿನದ ಉದ್ದೇಶವಾಗಿದೆ. ಈಗಿನ ದಿನಗಳಲ್ಲಿ ಜನರ ಜೀವನ ಗಿರಣಿಯಂತಾಗಿದೆ. ಪ್ರತಿ ದಿನ ಒಂದೇ ಕೆಲಸ ಮಾಡಿ ಜನರು ಒತ್ತಡ, ಆತಂಕಕ್ಕೆ ಒಳಗಾಗಿದ್ದಾರೆ. ದೈಹಿಕ ಸಮಸ್ಯೆಗಿಂತ ಮಾನಸಿಕ ಸಮಸ್ಯೆ ಜನರನ್ನು ಹೆಚ್ಚು ಕಾಡ್ತಿದೆ ಅಂದ್ರೆ ತಪ್ಪಾಗೋದಿಲ್ಲ. 

2012 ರಲ್ಲಿ ಜನರಿಗೆ ಸಂತೋಷ (Happiness) ದ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅಂದಿನಿಂದ  ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಲಾಗುತ್ತಿದೆ. ಮಾರ್ಚ್ 20ಕ್ಕೆ ಅಂತರಾಷ್ಟ್ರೀಯ ಸಂತೋಷದ ದಿನ ಮೀಸಲಾಗಿದೆ ಎನ್ನುವ ಕಾರಣಕ್ಕೆ ನೀವು ಆ ದಿನ ಮಾತ್ರ ಸಂತೋಷವಾಗಿರಬೇಕು, ಸಂತೋಷದ ಮಹತ್ವ ಅರಿಬೇಕು ಎಂದೇನಿಲ್ಲ. ಪ್ರತಿದಿನ ಸಂತೋಷವಾಗಿರುವುದು ಬಹಳ ಮುಖ್ಯ. ಸಂತೋಷ ಮಾನವ ಜೀವನ (Life) ದ ಹಕ್ಕು. ಜೀವನದಲ್ಲಿ ಸಂತೋಷದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮಕ್ಕಳಿಂದ ವೃದ್ಧರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿಯೊಬ್ಬರೂ ಸಂತೋಷವಾಗಿರಬೇಕಾಗುತ್ತದೆ. ನಮ್ಮ ಧಾರ್ಮಿಕ ಪುಸ್ತಕ (book) ಗಳು ಮತ್ತು ಗ್ರಂಥಗಳಲ್ಲಿ  ಸಂತೋಷವಾಗಿರುವ ವಿಧಾನಗಳು ಮತ್ತು ರಹಸ್ಯಗಳನ್ನು ಹೇಳಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ (Srikrishna) ಕೂಡ ಸಂತೋಷವಾಗಿರೋದು ಹೇಗೆ ಎಂಬುದನ್ನು ತಿಳಿಸಿದ್ದಾನೆ.   

Tap to resize

Latest Videos

HEALTH TIPS: ನೆಮ್ಮದಿಯಾಗಿ ನಿದ್ರೆ ಮಾಡ್ಬೇಕಾ? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಮಾಲ್ಟ್ ಕುಡೀರಿ

ಭಗವದ್ಗೀತೆಯಲ್ಲಿ ಸಂತೋಷದ (Happiness) ಬಗ್ಗೆ ಏನು ಹೇಳಲಾಗಿದೆ ಗೊತ್ತಾ? : ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಧರ್ಮ ಮತ್ತು ಕರ್ಮದ ಪಾಠವನ್ನು ಶ್ರೀಕೃಷ್ಣ ಬೋಧಿಸುತ್ತಾನೆ. ಅದನ್ನೇ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ವಿಷಯಗಳನ್ನು ನಾವು ಓದಿ ಬಿಡುವುದಲ್ಲ. ಅದನ್ನು ನಮ್ಮ ಜೀವನದಲ್ಲಿ ಜಾರಿಗೆ ತಂದ್ರೆ ಮಾತ್ರ ಸಂತೋಷದ ಜೀವನವನ್ನು ನಾವು ನಡೆಸಲು ಸಾಧ್ಯ. 

ಬೇರೆಯವರನ್ನು ಟೀಕಿಸಲು (Teasing) ಹೋಗ್ಬೇಡಿ : ನಮ್ಮ ಜೀವನದಲ್ಲಿ ಸದಾ ಸಂತೋಷ ಇರಬೇಕೆಂದು ಬಯಸುವ ವ್ಯಕ್ತಿ ಬೇರೆಯವರ ಸಂತೋಷವನ್ನು ಕಿತ್ತುಕೊಳ್ಳುವುದಿಲ್ಲ. ನೀವು ಎಂದಿಗೂ ಬೇರೆಯವರನ್ನು ಟೀಕಿಸಬೇಡಿ. ಅನೇಕರು ಬೇರೆಯವರನ್ನು ಟೀಕಿಸಿ ಸಂತೋಷ ಪಡೆಯುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಇದು ನಿಮ್ಮ ಸಂತೋವನ್ನು ನಾಶಪಡಿಸುತ್ತದೆ. ಸಂತೋಷವಾಗಿರಲು ಬಯಸುವ ಜನರು ನೀವಾಗಿದ್ದರೆ ನಿಮ್ಮ ಸಂತೋಷದ ಜೊತೆಗೆ ಇತರರ ಸಂತೋಷದ ಬಗ್ಗೆಯೂ ಗಮನ ಹರಿಸಿ.

ಸಿಕ್ಕಾಪಟ್ಟೆ ಬಿಸಿಲು ಅಂತ ರಸ್ತೆ ಬದಿ ಕಬ್ಬಿನ ಹಾಲು ಕುಡಿಯೋ ಮುನ್ನ ಈ ವಿಷ್ಯ ಗೊತ್ತಿರಲಿ

ಹೋಲಿಕೆಯಿಂದ (Comparision) ಸಂತೋಷ ನಾಶ ಎಂಬುದು ನೆನಪಿರಲಿ :  ಭಗವಂತ ಕೊಟ್ಟದ್ದರಲ್ಲಿ ಸಂತೋಷವಾಗಿರಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವುದೇ ಕಾರಣಕ್ಕೂ ನೀವು ಬೇರೆಯವರೊಂದಿಗೆ ನಿಮ್ಮ ಜೀವನವನ್ನು ಹೋಲಿಕೆ ಮಾಡಬೇಡಿ. ಅವರ ಜೀವನ ನಮಗಿಂತ ಕೆಟ್ಟದ್ದಾಗಿರಬಹುದು, ಅದ್ರ ಅರಿವು ನಮಗಿರೋದಿಲ್ಲ. ನಾವು ಹೋಲಿಕೆ ಮಾಡ್ತಾ ನಮ್ಮ ಜೀವನದ ಸಂತೋಷವನ್ನು ಕಳೆದುಕೊಂಡಿರುತ್ತೇವೆ. ಯಾರೊಂದಿಗೂ ಯಾವುದೇ ರೀತಿಯ ಹೋಲಿಕೆ ಮಾಡಬಾರದು ಎಂದು ಶ್ರೀಕೃಷ್ಣ ಹೇಳುತ್ತಾನೆ. ಬೇರೆಯವರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳದ ಜನರು ಸದಾ ಸಂತೋಷವಾಗಿರುತ್ತಾರೆ. 

ಬೇರೆಯವರನ್ನು ದೂರುವ ಸಾಹಸಕ್ಕೆ ಹೋಗ್ಬೇಡಿ : ತನಗೆ ಯಾವುದೇ ಸಮಸ್ಯೆಯಾಗ್ಲಿ ಅದಕ್ಕೆ ಬೇರೆಯವರು ಕಾರಣ ಎಂದು ದೂರುವವರು ಅನೇಕರಿದ್ದಾರೆ. ಈ ದೂರು ನಿಮಗೆ ಅಲ್ಪ ಸಂತೋಷವನ್ನು ನೀಡುತ್ತದೆ.  ಆದ್ರೆ ದೀರ್ಘಾವಧಿ ಸಂತೋಷವನ್ನು ಕಸಿದುಕೊಳ್ಳುತ್ತದೆ. ತನ್ನ ಸಂತೋಷಕ್ಕಾಗಿ ಬೇರೆಯವರನ್ನು ದೂರುವ ವ್ಯಕ್ತಿ ಎಂದೂ ಸಂತೋಷಪಡಲಾರ. 

ಹಿಂದೆ ಆಗಿದ್ದನ್ನು ಮರೆತುಬಿಡಿ (Forget the Past) :  ಕಳೆದು ಹೋದ ಸಮಯ ಮತ್ತೆ ಬರಲಾರದು ಎಂಬ ಕಟು ಸತ್ಯ ಎಲ್ಲರಿಗೂ ತಿಳಿದಿರಬೇಕು. ಹಿಂದಿನ ಕಹಿ ಘಟನೆ, ದಿನಗಳನ್ನು ನೆನೆದು ಚಿಂತಿಸುವುದು ಸೂಕ್ತವಲ್ಲ. ಇದು ಸಮಯ ಹಾಳು ಮಾಡುವ ಜೊತೆಗೆ ಈಗಿನ ಸಂತೋಷವನ್ನು ಕಸಿದುಕೊಳ್ಳುತ್ತದೆ. ಹಿಂದೆ ಆಗಿದ್ದು, ಮುಂದೆ ಆಗೋದರ ಬದಲು ಈಗ ಏನಾಗ್ತಿದೆ ಎಂಬುದರ ಬಗ್ಗೆ ನಿಮ್ಮ ಗಮನವಿರಲಿ. 
 

click me!