Covid Fourth Wave: ಸೋಂಕಿನಿಂದ ಪಾರಾಗಲು ಸ್ಟಿರಾಯ್ಡ್‌ ಬಳಕೆ ನೆರವಾಗುತ್ತಾ ?

By Suvarna News  |  First Published Apr 30, 2022, 8:33 AM IST

ಭಾರತದಲ್ಲಿ ಕೊರೋನಾ ಸೋಂಕು (Corona Virus) ಹರಡಲು ಆರಂಭವಾದ ಸಮಯದಲ್ಲಿ ಸ್ಟಿರಾಯ್ಡ್ (Steroids) ಹೆಚ್ಚು ಬಳಕೆಗೆ ಬಂತು. ಸದ್ಯ ಕೊರೋನಾ ನಾಲ್ಕನೇ ಅಲೆಯ ಭೀತಿ ದೇಶಾದ್ಯಂತ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಯಾಗುತ್ತದೆ. ಹೀಗಿರುವಾಗ ಸ್ಟಿರಾಯ್ಡ್ ಬಳಕೆಯ ಬಗ್ಗೆ ಒಂದಷ್ಟು ವಿಚಾರ ತಿಳಿದುಕೊಳ್ಳೋಣ.


ಸ್ಟಿರಾಯ್ಡ್‌ಗಳು (Steroids) ಮಾನವನ ದೇಹದಲ್ಲಿ ನೈಸರ್ಗಿಕವಾಗಿ ತಯಾರಿಸಲಾದ ಹಾರ್ಮೋನುಗಳು (Harmone0 ಎಂದು ಕರೆಯಲ್ಪಡುವ ರಾಸಾಯನಿಕಗಳ ಮಾನವ ನಿರ್ಮಿತ ಆವೃತ್ತಿಯಾಗಿದೆ. ಉರಿಯೂತವನ್ನು ಕಡಿಮೆ ಮಾಡಲು ಈ ಹಾರ್ಮೋನುಗಳಂತೆ ಕಾರ್ಯನಿರ್ವಹಿಸಲು ಸ್ಟಿರಾಯ್ಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಕಾರ್ಟಿಕೊಸ್ಟೆರಾಯ್ಡ್‌ಗಳು ಎಂದು ಸಹ ಕರೆಯುತ್ತಾರೆ, ಭಾರತದಲ್ಲಿ ಕೊರೋನಾ ಸೋಂಕು (Corona Virus) ಹರಡಲು ಆರಂಭವಾದ ಸಮಯದಲ್ಲಿ ರೋಗಿಗಳ ಮೇಲೆ ಸ್ಟಿರಾಯ್ಡ್ ಹೆಚ್ಚು ಬಳಕೆಗೆ ಬಂತು. 

ಆದರೆ, ಸ್ಟಿರಾಯ್ಡ್‌ಗಳ ಬಳಕೆಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸದೇನಲ್ಲ. SARs-CoV-2 ಸೋಂಕುಗಳು ಪ್ರಾರಂಭವಾಗುವ ಮೊದಲೇ ಇದನ್ನು ಬಳಸಲಾಗುತ್ತಿದೆ. ದೇಹದ ರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದ ಮತ್ತು ಅಂಗಾಂಶ ಹಾನಿಯನ್ನು ಉಂಟುಮಾಡುವ ಹಲವಾರು ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಉರಿಯೂತವನ್ನು ಕಡಿಮೆ ಮಾಡುಲು ಇವು ತುಂಬಾ ಒಳ್ಳೆಯದು ಮತ್ತು ಊತ, ನೋವು ಮತ್ತು ಬಿಗಿತದಂತಹ ರೋಗಲಕ್ಷಣಗಳನ್ನು ಸರಾಗಗೊಳಿಸುತ್ತವೆ.

Tap to resize

Latest Videos

ಸಾಮಾನ್ಯವಾಗಿ ಸ್ಟಿರಾಯ್ಡ್‌ಗಳನ್ನು ಅಲ್ಪಾವಧಿಯ ಬಳಕೆಗಾಗಿ ಸೂಚಿಸಲಾಗುತ್ತದೆ. ಇದು ಕೆಲವೇ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಆದರೆ ಸ್ಟಿರಾಯ್ಡ್‌ ಬಳಕೆಯ ಕೋರ್ಸ್ ದೀರ್ಘಕಾಲದ ವರೆಗೆ ಮುಂದುವರಿಸಿದರೆ, ಅಂದರೆ 2-3 ತಿಂಗಳುಗಳಿಗಿಂತ ಹೆಚ್ಚು ಬಳಸಿದರೆ ಅಡ್ಡ ಪರಿಣಾಮಗಳು ಉಂಟಾಗಬಹುದು.

ಸುಶ್ಮಿತಾ ಸೇನ್ ಬದುಕಬೇಕೆಂದರೆ 8 ಗಂಟೆಗೊಮ್ಮೆ ಸ್ಟೆರಾಯ್ಡ್ ತೆಗೆದುಕೊಳ್ಳಬೇಕಿತ್ತು!

ದೀರ್ಘಕಾಲೀನ ಸ್ಟಿರಾಯ್ಡ್ ಬಳಕೆಯ ಅಡ್ಡ ಪರಿಣಾಮಗಳು ಯಾವುವು ?
ಸ್ಟಿರಾಯ್ಡ್‌ಗಳ ದೀರ್ಘಾವಧಿಯ ಬಳಕೆಯು ದೇಹದ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ವೈದ್ಯರು ಸಾಮಾನ್ಯವಾಗಿ ಈ ಔಷಧಿಗಳನ್ನು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಶಿಫಾರಸು ಮಾಡುತ್ತಾರೆ.

ವ್ಯವಸ್ಥಿತ ಸ್ಟಿರಾಯ್ಡ್‌ಗಳು ಮೂತ್ರಜನಕಾಂಗದ ಗ್ರಂಥಿಗಳಿಂದ ಉತ್ಪತ್ತಿಯಾಗುವ ನೈಸರ್ಗಿಕ ಸ್ಟಿರಾಯ್ಡ್‌ ಕಾರ್ಟಿಸೋಲ್‌ನ ಸಂಶ್ಲೇಷಿತ ಅಥವಾ ಕೃತಕ ಉತ್ಪನ್ನಗಳಾಗಿವೆ. ಈ ಔಷಧಿಗಳ ದೀರ್ಘಕಾಲದ ಬಳಕೆಯು ಮಧುಮೇಹ, ಕಣ್ಣಿನ ಪೊರೆ, ಆಸ್ಟಿಯೊಪೊರೋಸಿಸ್, ಅಥವಾ ಮೂಳೆ ಸಾಂದ್ರತೆಯ ನಷ್ಟ ಅಥವಾ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಸ್ಟಿರಾಯ್ಡ್‌ ಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ನಿಗ್ರಹಿಸಬಹುದು ಇವಿಷ್ಟೇ ಅಲ್ಲದೆ ಸತತವಾಗಿ ಸ್ಟಿರೋಯ್ಡ್ ಬಳಸುವುದು ಈ ಕೆಳಗಿನ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

- ಬೊಜ್ಜು
- ಚರ್ಮ ತೆಳುವಾಗುವುದು
- ಕೂದಲು ಉದುರುವಿಕೆ
- ಪಚನಕ್ರಿಯೆ ಸರಿಯಾಗಿ ಆಗದಿರುವುದು
-  ಗ್ಯಾಸ್ಟ್ರಿಕ್ ಹುಣ್ಣುಗಳು
- ಮಧುಮೇಹ- ಗ್ಲುಕೋಮಾ ಮತ್ತು ಆರಂಭಿಕ ಕಣ್ಣಿನ ಪೊರೆ
- ಸೋಂಕುಗಳಿಗೆ ಹೆಚ್ಚಿದ ಸಂವೇದನೆ
- ಮೂಡ್ ಬದಲಾವಣೆಗಳು ಮತ್ತು ಪ್ರತಿರೋಧಕ ನಿದ್ರಾ ಉಸಿರುಕಟ್ಟುವಿಕೆ 
-ಬ್ಲಡ್ ಶುಗರ್ ಪ್ರಮಾಣ ಏರಿಕೆಯಾಗುವುದು

ಸ್ಟಿರಾಯ್ಡ್‌ಗಳು ಯಾವುವು ? 
ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಗಳ (NHS) ಪ್ರಕಾರ, ಕಾರ್ಟಿಕೊಸ್ಟೆರಾಯ್ಡ್‌ಗಳು ಎಂದೂ ಕರೆಯಲ್ಪಡುವ ಸ್ಟಿರಾಯ್ಡ್‌ಗಳು ಉರಿಯೂತದ ಔಷಧಗಳಾಗಿವೆ, ಇದನ್ನು ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಕೊರೋನಾ ಜೀವ ರಕ್ಷಕ ಇಂಜೆಕ್ಷನ್‌ಗೆ ಕೇವಲ 10ರೂ!

ಸ್ಟಿರಾಯ್ಡ್‌ಗಳನ್ನು ಯಾವಾಗ ಸೂಚಿಸಲಾಗುತ್ತದೆ ?
ಅಲರ್ಜಿಗಳು, ಅಸ್ತಮಾ, ಎಸ್ಜಿಮಾ, ಉರಿಯೂತದ ಕರುಳಿನ ಕಾಯಿಲೆ, ಸಂಧಿವಾತ ಮತ್ತು ಹೆಚ್ಚಿನವುಗಳಂತಹ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ಸ್ಟಿರಾಯ್ಡ್‌ಗಳನ್ನು ಬಳಸಲಾಗುತ್ತದೆ.

ದೀರ್ಘಕಾಲದ ಸ್ಟಿರಾಯ್ಡ್‌ ಬಳಕೆಯಿಂದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವುದು ಹೇಗೆ?
ಡೋಸೇಜ್ ಅನ್ನು ಕ್ರಮೇಣ ಕಡಿಮೆ ಮಾಡಲು ನಿಮ್ಮ ವೈದ್ಯರನ್ನು ನೀವು ಕೇಳಬಹುದು. ದೀರ್ಘಕಾಲದ ಸ್ಟಿರಾಯ್ಡ್‌ ಬಳಕೆಯಿಂದ ಮೂಳೆ ಹಾನಿಯನ್ನು ತಡೆಗಟ್ಟಲು ನೀವು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರವಾಗಿ ತಿನ್ನಿರಿ ಮತ್ತು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬಹುದು.

click me!