ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಹೀಟ್ ವೇವ್ (Heat wave) ಬಗ್ಗೆ ಹವಾಮಾನ ಇಲಾಖೆ ಈಗಾಗ್ಲೇ ಮುನ್ನೆಚ್ಚರಿಕೆಯನ್ನು ಸಹ ನೀಡಿದೆ. ಇದ್ರಿಂದ ಹಲವು ಆರೋಗ್ಯ ಸಮಸ್ಯೆಗಳು (HealtH Problem) ಕಾಣಿಸಿಕೊಳ್ಳೋ ಅಪಾಯ (Danger) ಸಹ ಇದೆ. ಹಾಗಿದ್ರೆ ವಿಪರೀತ ಶಾಖದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ?
ಬೇಸಿಗೆಯಲ್ಲಿ ಉಷ್ಣದ ಅಲೆ ಸಾಮಾನ್ಯವಾಗಿದೆ. ಆದರೂ ಈ ವರ್ಷ ಎಲ್ಲಾ ರಾಜ್ಯಗಳಲ್ಲೂ ಬಿಸಿ ಗಾಳಿಯ ಆತಂಕ ಹೆಚ್ಚಾಗಿದೆ. ವಿಶ್ವ ಹವಾಮಾನ ಸಂಸ್ಥೆಯ ತಾಪಮಾನವು ಸಾಮಾನ್ಯಕ್ಕಿಂತ ೫ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದ ಐದು ಅಥವಾ ಅದಕ್ಕಿಂತ ಹೆಚ್ಚು ಸತತ ದಿನಗಳ ಅವಧಿಯನ್ನು ಹೀಟ್ ವೇವ್ ಎಂದು ವ್ಯಾಖ್ಯಾನಿಸುತ್ತದೆ. ಭಾರತದ (India) ಅನೇಕ ರಾಜ್ಯಗಳು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ (Temparature)ವನ್ನು ಎದುರಿಸುತ್ತಿವೆ. ವಿಪರೀತ ಬಿಸಿಲು, ಧಗೆಯ ಶಾಖದಿಂದ ಜನರು ತತ್ತರಿಸಿ ಹೋಗಿದ್ದಾರೆ.
ಭಾರತ ಯಾವಾಗ ಹೀಟ್ ವೇವ್‌ನ್ನು ಘೋಷಿಸುತ್ತದೆ ?
ಆರೋಗ್ಯ ಸಚಿವಾಲಯದ ಪ್ರಕಾರ, ಒಂದು ನಿಲ್ದಾಣದ ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಿಗೆ ಕನಿಷ್ಠ 40 ° C ಅಥವಾ ಅದಕ್ಕಿಂತ ಹೆಚ್ಚು, ಕರಾವಳಿ ನಿಲ್ದಾಣಗಳಿಗೆ 37 ° C ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಕನಿಷ್ಠ 30 ° C ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತಲುಪಿದಾಗ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ.
ಬಿಸಿಲ ಧಗೆಯಿಂದ ಬರೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ, ಹೀಟ್ ಸ್ಟ್ರೋಕ್ ಕೂಡಾ ಆಗ್ಬೋದು !
ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆ
ಬಾಹ್ಯ ಉಷ್ಣತೆಯು ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ಹೆಚ್ಚಾದರೆ, ಆಂತರಿಕ ತಾಪಮಾನವನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಆಂತರಿಕ ದೇಹದ ಉಷ್ಣತೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್‌ನ ಡಾ.ಮನೀಶ್ ತಿವಾರಿ ಪ್ರಕಾರ ಹೇಳುತ್ತಾರೆ. ಸುಡುವ ಬಿಸಿಲು ಮತ್ತು ಶಾಖದ ಅಲೆಗಳು ಹಲವಾರು ಗಂಭೀರ ಕಾಯಿಲೆ (Disease)ಗಳಿಗೆ ಕಾರಣವಾಗಬಹುದು. ಸೌಮ್ಯವಾದ ಶಾಖದ ಸೆಳೆತದಿಂದ ಆರಂಭವಾಗಿ ಗಂಭೀರವಾದ ಶಾಖ-ಸ್ಟ್ರೋಕ್ ಕೂಡಾ ಕಾಣಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಸಿಲಿನ ಧಗೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿವೆ
1. ಬಿಸಿಲಿನಲ್ಲಿದ್ದಾಗ, ನೆರಳು ಇರುವ ಸ್ಥಳಗಳಲ್ಲಿ ಅಥವಾ ಮರದ ಕೆಳಗೆ ನಿಲ್ಲುವ ಅಭ್ಯಾಸ ಮಾಡಿ
2. ಬಿಸಿಲಿನ ಧಗೆ ಹೆಚ್ಚಾಗಿರುವಾಗ ದೂರದ ಪ್ರಯಾಣವನ್ನು ತಪ್ಪಿಸಿ.
3. ಮನೆಯಿಂದ ಹೊರಗಿನ ಆಹಾರ, ದೊಡ್ಡ ಊಟ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
4. ಚಹಾ ಅಥವಾ ಕಾಫಿಯ ಅತಿಯಾದ ಬಳಕೆ, ಪಾನೀಯಗಳು, ಮತ್ತು, ಹೆಚ್ಚು ಗಮನಾರ್ಹವಾಗಿ, ಆಲ್ಕೋಹಾಲ್ ಅನ್ನು ತಪ್ಪಿಸಬೇಕು.
5. ಸಡಿಲವಾದ, ಹಗುರವಾದ ಬಟ್ಟೆಗಳನ್ನು ಧರಿಸಿ.
6. ಸನ್ ಬರ್ನ್ ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ನಿಮ್ಮ ಚರ್ಮಕ್ಕೆ ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ. ಮನೆಯಿಂದ ಹೊರ ಹೋಗುವಾಗ ಟೋಪಿ ಧರಿಸಿ ಅಥವಾ ತಲೆಯನ್ನು ಬಟ್ಟೆಯಿಂದ ಕವರ್ ಮಾಡಿಕೊಳ್ಳಿ.
7. ಶಿಶುಗಳು ಮತ್ತು ವಯಸ್ಸಾದವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅವರನ್ನು ಹೊರಗೆ ಸುಡುವ ಬಿಸಿಲಿಗೆ ಕಳಿಸದಿರಿ.
8. ಬೇಸಿಗೆಯಲ್ಲಿ, ನೀವು ಹೆಚ್ಚು ಬಿಸಿಲಿನಲ್ಲಿ ಇರುವಾಗ, ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ಇದು ಶಾಖದಿಂದ ಉಂಟಾಗುವ ಚರ್ಮದ ಸೋಂಕನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ.
9. ಸಾಧ್ಯವಾದಷ್ಟು ಮನೆಯೊಳಗೆ ಇರಲು ಪ್ರಯತ್ನಿಸಿ ಮತ್ತು ಸಂಪೂರ್ಣವಾಗಿ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಿ.
10. ಬಿಸಿಲಿನಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಏಕೆಂದರೆ ಅದು ನಿಮ್ಮ ದೇಹದಲ್ಲಿ ಹೆಚ್ಚುವರಿ ಶಾಖ ಮತ್ತು ಬೆವರುವಿಕೆಯನ್ನು ಉಂಟುಮಾಡುತ್ತದೆ. ಬದಲಾಗಿ, ಒಳಾಂಗಣದಲ್ಲಿ ವ್ಯಾಯಾಮ ಮಾಡಿ.
ಎಸಿ ಇಲ್ಲದೆ ಮನೆಯನ್ನು ತಂಪಾಗಿ ಇರಿಸಲು ಕೆಲವು ಟಿಪ್ಸ್!
ತಾಪಮಾನವನ್ನು ಎದುರಿಸಲು ಆಹಾರಶೈಲಿ ಹೀಗಿರಲಿ
ತಾಪಮಾನವನ್ನು ಸಮರ್ಥವಾಗಿ ಎದುರಿಸಲು ಯಾವಾಗಲೂ ದೇಹ ಹೈಡ್ರೇಟ್ ಆಗಿರುವಂತೆ ನೊಡಿಕೊಳ್ಳಿ. ನೀರು ಮತ್ತು ಉಪ್ಪುಸಹಿತ ಪಾನೀಯಗಳನ್ನು (ಲಸ್ಸಿ, ನಿಂಬೆ ನೀರು, ಹಣ್ಣಿನ ರಸಗಳು) ಆಗಾಗ ಕುಡಿಯಿರಿ. ಕಲ್ಲಂಗಡಿ, ಸೌತೆಕಾಯಿ, ನಿಂಬೆ, ಕಿತ್ತಳೆ ಮೊದಲಾದ ಹಣ್ಣುಗಳನ್ನು ಸೇವಿಸಿ. ನೀರಿನಂಶವಿರುವ ಸೊಪ್ಪು, ಇತರ ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ.