
ಲಿವರ್ (liver) ನಮ್ಮ ದೇಹದ ಪ್ರಮುಖ ಅಂಗ. ಜೀರ್ಣಕ್ರಿಯೆ, ಡಿಟಾಕ್ಸ್, ಎನರ್ಜಿ ಹೆಚ್ಚಿಸುವ ಕೆಲ್ಸವನ್ನು ಇದು ಮಾಡುತ್ತೆ. ಕಳಪೆ ಜೀವನಶೈಲಿ ಮತ್ತು ತಪ್ಪು ಅಭ್ಯಾಸಗಳಿಂದಾಗಿ ಲಿವರ್ ಕ್ರಮೇಣ ದುರ್ಬಲವಾಗ್ತಾ ಬರುತ್ತೆ. ಕೆಲ ಸಾಮಾನ್ಯ ಕಾರಣಗಳನ್ನು ಜನರು ನಿರ್ಲಕ್ಷ್ಯ ಮಾಡೋದ್ರಿಂದ ಲಿವರ್ ಆರೋಗ್ಯ ಹದಗೆಡುತ್ತೆ. ನಾವು ಮಾಡುವ ಸಣ್ಣ ಕೆಲ್ಸವೂ ನಮ್ಮ ಲಿವರ್ ಆರೋಗ್ಯ (health) ವೃದ್ಧಿಯಲ್ಲಿ ದೊಡ್ಡ ಪಾತ್ರವಹಿಸುತ್ತೆ. ನಿಮ್ಮ ಲಿವರ್ ಸದಾ ಆರೋಗ್ಯವಾಗಿರಬೇಕು ಅಂದ್ರೆ ನೀವು ಕೇವಲ ನಾಲ್ಕು ನಿಯಮ ಪಾಲನೆ ಮಾಡಿದ್ರೆ ಸಾಕು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲಿವರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಲಿವರ್ ಆರೋಗ್ಯ ಕಾಪಾಡಲು ಈ ಕೆಲ್ಸ ಮಾಡಿ :
1.ಆಲ್ಕೋಹಾಲ್ – ಸಂಸ್ಕರಿಸಿದ ಆಹಾರದಿಂದ ದೂರ ಇರಿ : ಆಲ್ಕೋಹಾಲ್ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರ ಕಡಿಮೆ ಮಾಡಲು ಸೌರಭ್ಸೂಚಿಸಿದ್ದಾರೆ. ಜನವರಿ 2024 ರ ಅಧ್ಯಯನದ ಪ್ರಕಾರ, ಅಲ್ಟ್ರಾ-ಸಂಸ್ಕರಿಸಿದ ಆಹಾರ ಸೇವನೆ ಲಿವರ್ ಆರೋಗ್ಯವನ್ನು ಹಾಳು ಮಾಡುತ್ತೆ, ಅಲ್ಟ್ರಾ-ಸಂಸ್ಕರಿಸಿದ ಆಹಾರಗಳನ್ನು ನೀವು ಹೆಚ್ಚು ಸೇವನೆ ಮಾಡಿದ್ರೆ ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD), ಲಿವರ್ ಸಿರೋಸಿಸ್ ಅಥವಾ ಫೈಬ್ರೋಸಿಸ್ ಮತ್ತು ತೀವ್ರ ಲಿವರ್ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ.
2.3 Bs ಸೇವನೆ ಮಾಡಿ : ಡಾ. ಸೌರಭ್ ಸೇಥಿ, ನಿಮ್ಮ ಆಹಾರದಲ್ಲಿ 3ಬಿಗಳನ್ನು ಸೇವಿಸುವಂತೆ ಸಲಹೆ ನೀಡಿದ್ದಾರೆ. ಬೀಟ್ರೂಟ್, ಬ್ರೊಕೊಲಿ ಮತ್ತು ಹಣ್ಣುಗಳ ಸೇವನೆ ಲಿವರ್ ಆರೋಗ್ಯವನ್ನು ಸುಧಾರಿಸುತ್ತದೆ. ಇದೇ ವೇಳೆ ಮತ್ತೊಬ್ಬ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಜೋಸೆಫ್ ಸಲ್ಹಾಬ್, ಲಿವರ್ ಆರೋಗ್ಯಕ್ಕೆ ಬೆರಿಹಣ್ಣುಗಳು ಬಹಳ ಒಳ್ಳೆಯದು ಎಂದಿದ್ದಾರೆ. ಬೆರಿಹಣ್ಣುಗಳು ಒಂದು ಟನ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಅವು ಪ್ಟೆರೋಸ್ಟಿಲ್ಬೀನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇದು ವಿಶೇಷವಾಗಿ ಯಕೃತ್ತಿಗೆ ಬಹಳ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಆಂಟಿ ಎಜಿಂಗ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದಿದ್ದಾರೆ.
3. ಬ್ಲಾಕ್ ಕಾಫಿ : ಲಿವರ್ ಆರೋಗ್ಯಕ್ಕೆ ಬ್ಲಾಕ್ ಕಾಫಿ ಉತ್ತಮ. ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇದ್ರ ಸೇವನೆ ಮಾಡ್ಬೇಕು. ದೇಹಕ್ಕೆ ಇದು ಒಗ್ಗಿಕೊಳ್ಳುತ್ತದೆ ಎಂದಾದಲ್ಲಿ ಮಾತ್ರ ಬ್ಲಾಕ್ ಕಾಫಿ ಸೇವನೆ ಮಾಡಿ ಎಂದು ಡಾ. ಸೌರಬ್ ಸೇಥಿ ಹೇಳಿದ್ದಾರೆ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಲ್ಲಿ ಹೃದಯರಕ್ತನಾಳದ ಆರೋಗ್ಯ ಮತ್ತು ಲಿವರ್ ಆರೋಗ್ಯಕ್ಕೆ ಬ್ಲಾಕ್ ಕಾಫಿ ಸಹಕಾರಿ ಎಂದು ತಜ್ಞರು ಹೇಳಿದ್ದಾರೆ. ಇದು ಲಿವರ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
4.ನಿದ್ರೆ ಅಗತ್ಯ : ಪ್ರತಿ ದಿನ ಉತ್ತಮ ನಿದ್ರೆ ಅತ್ಯಗತ್ಯ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಲಿವರನ್ನು ಆರೋಗ್ಯವಾಗಿಡುತ್ತದೆ. ದೇಹ ಮತ್ತು ಲಿವರ್ ಚೇತರಿಕೆಗೆ ಪ್ರತಿ ವ್ಯಕ್ತಿ ರಾತ್ರಿ 7 -9 ಗಂಟೆಗಳ ಕಾಲ ನಿದ್ರೆ ಮಾಡ್ಬೇಕು.
ಲಿವರ್ ಅನಾರೋಗ್ಯದ ಲಕ್ಷಣ : ಕಾರಣವಿಲ್ಲದೆ ನೀವು ಆಯಾಸಗೊಳ್ತಿದ್ದರೆ, ಬಲಭಾಗದಲ್ಲಿ ಪಕ್ಕೆಲುಬುಗಳ ಕೆಳಗೆ ನೋವು ಕಾಣಿಸಿಕೊಳ್ತಿದ್ದರೆ, ನಿದ್ರಾಹೀನತೆ ನಿಮ್ಮನ್ನು ಕಾಡ್ತಿದ್ದರೆ. ಎಲ್ಲಾ ಸಮಯ ತುರಿಕೆಯಾಗ್ತಿದ್ದರೆ, ಹಸಿವಾಗ್ತಿಲ್ಲ ಎನ್ನುವವರು ತಕ್ಷಣ ವೈದ್ಯರನ್ನು ಭೇಟಿಯಾಗಿ. ಕಾಮಾಲೆ, ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗಿದ್ರೆ, ವಾಂತಿಯಲ್ಲಿ ರಕ್ತ ಕಾಣಿಸಿಕೊಂಡ್ರೆ ಲಿವರ್ ಹಾಳಾಗಿದೆ ಎಂದರ್ಥ.
ಎಚ್ಚರಿಕೆ : ಲಿವರ್ ಆರೋಗ್ಯದಲ್ಲಿ ಏರುಪೇರಾಗಲು ಇನ್ನೂ ಅನೇಕ ಕಾರಣಗಳಿವೆ. ಹಾಗೆಯೇ ಲಿವರ್ ಆರೋಗ್ಯ ಸುಧಾರಿಸಿಕೊಳ್ಳಲು ಇವು ಮಾತ್ರ ಪರಿಹಾರವಲ್ಲ. ಯಾವುದೇ ಸ್ವಯಂ ಚಿಕಿತ್ಸೆಗೆ ಮುನ್ನ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.