ದಿನವೂ ಲಿಪ್‌ಸ್ಟಿಕ್ ಹಚ್ಚೋದು ಆರೋಗ್ಯಕ್ಕೆ ಒಳ್ಳೆಯದಲ್ಲ, ಏನಾಗುತ್ತೆ?

By Suvarna News  |  First Published Nov 25, 2022, 4:59 PM IST

ಮಹಿಳೆಯರು ಮೇಕಪ್‌ಗೆ(Makeup) ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಅದರಲ್ಲೂ ಲಿಪ್‌ಸ್ಟಿಕ್(Lipstick) ಎಂದರೆ ಹೆಣ್ಮಕ್ಳಿಗೆ ಎಲ್ಲಿಲ್ಲದ ಪ್ರೀತಿ, ಆಸೆ. ಉಡುಗೆ, ಸಂದರ್ಭ, ಮನಸ್ಥಿತಿ ಮತ್ತು ಶೈಲಿಗೆ ಅನುಗುಣವಾಗಿ ಲಿಪ್‌ಸ್ಟಿಕ್ ಆಯ್ಕೆ ಮಾಡುತ್ತಾರೆ. ಲಿಪ್‌ಸ್ಟಿಕ್ ಹಚ್ಚುವುದು ಆರೋಗ್ಯಕ್ಕೆ ಒಳ್ಳೆಯದೇ ಈ ಬಗ್ಗೆ ಇಲ್ಲಿದೆ ಮಾಹಿತಿ. 


ನೀವು ಲಿಪ್‌ಸ್ಟಿಕ್ ಪ್ರಿಯರೇ? ಲಿಪ್‌ಸ್ಟಿಕ್ ಹಚ್ಚುತ್ತೀರಾ? ಯಾವ ಬಣ್ಣದ ಲಿಪ್‌ಸ್ಟಿಕ್ ಹಚ್ಚುತ್ತೀರಿ? ಗಾಢ ಬಣ್ಣದ ಲಿಪ್‌ಸ್ಟಿಕ್(Lipstick) ನಿಮ್ಮನ್ನು ಬೋಲ್ಡ್(Bold) ಆಗಿಸಿದರೆ ತಿಳಿ ಬಣ್ಣದ (Light Color) ಲಿಪ್‌ಸ್ಟಿಕ್ ನಿಮ್ಮ ಸಾಫ್ಟ್ ನೇಚರ್ (Soft Nature) ಅನ್ನು ತೋರಿಸುತ್ತದೆ.ಮಹಿಳೆಯರು ಉಡುಗೆ (Dress), ಸಂದರ್ಭ (Occasions), ಮನಸ್ಥಿತಿ ಮತ್ತು ಶೈಲಿಗೆ(Style) ಅನುಗುಣವಾಗಿ ಲಿಪ್‌ಸ್ಟಿಕ್‌ಗಳನ್ನು ಬಳಸುತ್ತಾರೆ. ಅವರ ಸೈಡ್ ಬ್ಯಾಗ್‌ನಲ್ಲಿ (Side Bag) ಪರ್ಫ್ಯೂಮ್(Perfume), ಬಾಚಣಿಗೆ (Coamb), ಕಾಡಿಗೆ (Kajal) ಜೊತೆಗೆ ಒಂದಲ್ಲ ಎರಡು ಲಿಪ್‌ಸ್ಟಿಕ್ ಇದ್ದೇ ಇರುತ್ತೆ. 

ಲೈಟ್ ಲಿಪ್‌ಸ್ಟಿಕ್ ಯಾವುದೇ ಸಂದರ್ಭದಲ್ಲಿ ನಿಮ್ಮ ಸಂಪೂರ್ಣ ನೋಟವನ್ನು ಬದಲಾಯಿಸಬಹುದು. ಪರ್ಫ್ಯೂಮ್ ಬಳಸುವುದು ದೇಹಕ್ಕೆ ಹೇಗೆ ಹಾನಿ ಮಾಡುತ್ತದೆಯೋ ಹಾಗೆ ಲಿಪ್‌ಸ್ಟಿಕ್ ದೇಹಕ್ಕೆ ಅಡ್ಡಪರಿಣಾಮಗಳು(Side effect) ಬಹಳ ಅಪಾಯಕಾರಿ. ಏಕೆಂದರೆ ಲಿಪ್‌ಸ್ಟಿಕ್ ಅನ್ನು ತುಂಟಿಗೆ ಹಚ್ಚುವುದರಿಂದ ಹಾಗೂ ಆಹಾರ ಸೇವಿಸುವುದರಿಂದ ಅದು ನೇರವಾಗಿ ದೇಹದೊಳಗೆ ನೇರವಾಗಿ ಹೋಗುತ್ತದೆ. ಈ ಕಾರಣದಿಂದಾಗಿ ಅದರಲ್ಲಿನ ಹಾನಿಕಾರಕ ರಾಸಾಯನಿಕಗಳು(Dangerous Chemicals) ನೇರವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ತಲುಪಬಹುದು.

ಲಿಪ್‌ಸ್ಟಿಕ್‌ನ ಕೆಲವು ವಿಷಯಗಳು ನಿಮ್ಮ ತುಟಿಗಳನ್ನು ಹಾನಿಗೊಳಿಸುವುದಲ್ಲದೆ ಅದು ನಿಮ್ಮ ಆರೋಗ್ಯಕ್ಕೂ ಹಾನಿ ಮಾಡುವ ಕೆಲ ಮಾಹಿತಿ ಇಲ್ಲಿವೆ.  

ಪುಟ್ಟ ಬಾಲಕನ ಕಿತಾಪತಿಗೆ ಅಪ್ಪನ ಕಾರು ಅಮ್ಮನ ಲಿಪ್‌ಸ್ಟಿಕ್ ಎರಡೂ ಢಮಾರ್

Latest Videos

undefined

ಲಿಪ್ಸ್ಟಿಕ್ ಖರೀದಿಸುವಾಗ ಈ ಅಂಶಗಳನ್ನು ಪರಿಶೀಲಿಸಿ
ಮ್ಯಾಂಗನೀಸ್(Manganese), ಕ್ಯಾಡ್ಮಿಯಂ(Cadmium), ಕ್ರೋಮಿಯಂ(Chromium) ಮತ್ತು ಅಲ್ಯೂಮಿನಿಯಂ(Aluminum) ದೇಹದಲ್ಲಿ ಸೇರಿಕೊಂಡರೆ, ಅವು ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ. ಲಿಪ್‌ಸ್ಟಿಕ್ ಹಾಕಿಕೊಂಡು ಆಹಾರ ಸೇವಿಸುವಾಗ ಈ ಎಲ್ಲಾ ಅಂಶಗಳು ದೇಹಕ್ಕೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಲಿಪ್‌ಸ್ಟಿಕ್ ಅನ್ನು ಖರೀದಿಸುವಾಗ, ಅದರಲ್ಲಿ ಈ ಮೇಲಿನ ಉತ್ಪನ್ನಗಳನ್ನು ಹೊಂದಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.

ಲಿಪ್‌ಸ್ಟಿಕ್ ಹಚ್ಚುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳು 
1. ಬಹುತೇಕ ಲಿಪ್‌ಸ್ಟಿಕ್‌ಗಳಲ್ಲಿ ಸೀಸ(Lead) ಅಥವಾ ಲೆಡ್ ಅನ್ನು ಬಳಸಲಾಗುತ್ತದೆ. ಸೀಸವು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಅಧಿಕ ರಕ್ತದೊತ್ತಡ(High Blood Pressure) ಮತ್ತು ಹೃದಯದ ಸಮಸ್ಯೆಗಳನ್ನು(Heart Problems) ಉಂಟುಮಾಡಬಹುದು. 
2. ಲಿಪ್‌ಸ್ಟಿಕ್ ಗಳಲ್ಲಿ ದೇಹಕ್ಕೆ ಹಾನಿ ಮಾಡುವ ಹಲವು ರೀತಿಯ ಪ್ರಿಸರ್ವೇಟಿವ್‌ಗಳನ್ನು(Preservative) ಬಳಸುತ್ತಾರೆ. ಅವುಗಳ ಪ್ರಮಾಣವು ಅಧಿಕವಾಗಿದ್ದರೆ ಕಾಲಕ್ರಮೇಣ ಕ್ಯಾನ್ಸರ್(Cancer) ಅಪಾಯವನ್ನು ತಂದೊಡ್ಡಬಹುದು. ಅಲ್ಲದೆ ಪ್ಯಾರಾಬೆನ್ (Paraben) ಅಂತಹ ಸಂರಕ್ಷ ಇದರಲ್ಲಿದ್ದು, ಇದು ಕ್ಯಾನ್ಸರ್ ಗೆ ಕಾರಣವಾಗಿದೆ. ಇದರಿಂದಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್(Brest Cancer) ಸಮಸ್ಯೆ ಕಾಣಿಸಿಕೊಳ್ಳುತ್ತದೆ.

3. ವಾಸ್ತವವಾಗಿ, ಬಿಸ್ಮತ್ ಆಕ್ಸಿಕ್ಲೋರೈಡ್ Bismuth oxychloride) ಅನ್ನು ಲಿಪ್‌ಸ್ಟಿಕ್‌ನಲ್ಲಿ ಸಂರಕ್ಷಕವಾಗಿ ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವೂ ಇದ್ದು, ದೇಹಕ್ಕೆ ಕಾಯಿಲೆ ಬರಬಹುದು. ಹಲವರಿಗೆ ಇದರ ಅಲರ್ಜಿಯೂ (Allergy) ಇರುತ್ತದೆ.
4. ಗರ್ಭಿಣಿಯರು(Pregnant woman) ಎಲ್ಲಾ ಸಮಯದಲ್ಲಿ ಲಿಪ್‌ಸ್ಟಿಕ್ ಹಚ್ಚುವುದು ಒಳ್ಳೆಯದಲ್ಲ. ಸಾಂದರ್ಭಿಕವಾಗಿ ಲಿಪ್‌ಸ್ಟಿಕ್ ಹಚ್ಚುವುದು ಮತ್ತು ಅಗ್ಗದ ಬ್ರಾಂಡ್‌ಗಳನ್ನು ಖರೀದಿಸದಿರಿ. ನಿಮಗೆ ಇಷ್ಟವಾಗುವಂತಹ ಗಿಡಮೂಲಿಕೆಗಳ(Herbal) ಲಿಪ್‌ಸ್ಟಿಕ್ ಅನ್ನು ಬಳಸಬಹುದು.

ಬೋಲ್ಡ್ ಲುಕ್ ಗಾಗಿ ಹೆಚ್ಚು ಹೆಚ್ಚು ಲಿಪ್ ಸ್ಟಿಕ್ ಬಳಸೋದು ಭಾರಿ ಡೇಂಜರ್ !

ಲಿಪ್‌ಸ್ಟಿಕ್ ಬಳಸುವಾಗ ಈ ಸಲಹೆಗಳನ್ನು ಅನುಸರಿಸಿ 
1. ಕಪ್ಪು ಬಣ್ಣದ ಅಥವಾ ಗಾಢ ಬಣ್ಣದ(Dark Color) ಲಿಪ್‌ಸ್ಟಿಕ್ ಅನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಏಕೆಂದರೆ ಇದರಲ್ಲಿ ಭಾರೀ ಲೋಹಗಳು ಗಾಢ ಬಣ್ಣಗಳಲ್ಲಿ ಹೆಚ್ಚಾಗಿರುತ್ತದೆ.
2. ಲಿಪ್‌ಸ್ಟಿಕ್ ಹಚ್ಚುವ ಮೊದಲು ತುಟಿಗಳ ಮೇಲೆ ತುಪ್ಪ(Ghee) ಅಥವಾ ಪೆಟ್ರೋಲಿಯಂ ಜೆಲ್ಲಿಯ ಬೇಸ್(Petroleum Jelly Base) ಅನ್ನು ಅನ್ವಯಿಸಿ. ಇದು ಲಿಪ್‌ಸ್ಟಿಕ್‌ನಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
3. ಸ್ಥಳೀಯ ಬ್ರ‍್ಯಾಂಡ್‌ಗಳು ಅಗ್ಗವಾಗಿರಬಹುದು. ಆದರೆ ಅವು ನಿಮ್ಮ ತುಟಿಗಳಿಗೆ ಹಾನಿಯುಂಟುಮಾಡಬಹುದು. 
4. ಉತ್ತಮ ಬ್ರಾಂಡ್‌ನ ಲಿಪ್‌ಸ್ಟಿಕ್ ಅನ್ನು ಮಾತ್ರ ಖರೀದಿಸಿ. ಅಲ್ಲದೆ ಅದರಲ್ಲಿ ಬಳಸಲಾದ ಪದಾರ್ಥಗಳನ್ನು ಪರೀಕ್ಷಿಸುವುದು ಮರೆಯಬೇಡಿ.
5. ಲಿಪ್‌ಸ್ಟಿಕ್‌ಗಳು ಉಂಟುಮಾಡುವ ಪಿಗ್ಮೆಂಟೇಶನ್(Pigmentation) ಅನ್ನು ತೆಗೆದುಹಾಕಲು ಸಕ್ಕರೆ(Sugar) ಮತ್ತು ಜೇನುತುಪ್ಪದೊಂದಿಗೆ(Honey) ನಿಮ್ಮ ತುಟಿಗಳನ್ನು ಸ್ಕ್ರಬ್(Scrub) ಮಾಡಿ.

click me!