ಇಂಗಿನಲ್ಲಿ ನಮ್ಮ ಆರೋಗ್ಯ ವೃದ್ಧಿಸುವ ಶಕ್ತಿಯಿದೆ. ಹಾಗಾಗಿಯೇ ಭಾರತದ ಅಡುಗೆಗಳಲ್ಲಿ ಇಂಗಿನ ಬಳಕೆ ಹೆಚ್ಚು. ಜೊತೆಗೆ ಇಂಗನ್ನು ಔಷಧಿ ರೂಪದಲ್ಲಿಯೂ ಬಳಕೆ ಮಾಡಲಾಗುತ್ತದೆ. ಸೇವಿಸೋದು ಮಾತ್ರವಲ್ಲ ಹೊಕ್ಕಳಿಗೆ ಇಂಗಿನ ಎಣ್ಣೆ ಹಾಕಿದ್ರೂ ನೀವು ಪ್ರಯೋಜನ ಕಾಣಬಹುದು.
ಹಿಂದೆ ಹಿರಿಯರು ಮಕ್ಕಳ ಹೊಕ್ಕುಳಿಗೆ ಎಣ್ಣೆ ಹಾಕ್ತಿದ್ದರು. ನವಜಾತ ಶಿಶುವಿನ ಹೊಕ್ಕುಳಿಗೆ ಎಣ್ಣೆ ಹಾಕಿ ನಂತ್ರ ಸ್ನಾನ ಮಾಡಿಸುವ ಪದ್ಧತಿ ಇನ್ನೂ ಅನೇಕ ಕಡೆಗಿದೆ. ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಬದಾಮಿ ಎಣ್ಣೆ ಹೀಗೆ ಅನೇಕ ಬಗೆಯ ಎಣ್ಣೆಗಳನ್ನು ಹೊಕ್ಕುಳಿಗೆ ಹಾಕಲಾಗುತ್ತದೆ. ಪ್ರತಿಯೊಂದು ಎಣ್ಣೆಯೂ ಅದರದೆ ಆದ ಪ್ರಯೋಜನವನ್ನು ಹೊಂದಿದೆ.
ಆಯುರ್ವೇದ (Ayurveda) ದಲ್ಲಿ ಹೊಕ್ಕುಳಿ (Navel) ಗೆ ಎಣ್ಣೆ (Oil) ಹಾಕುವುದಕ್ಕೆ ಆದ್ಯತೆ ನೀಡಲಾಗಿದೆ. ಇದನ್ನು ನಾಭಿ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ, ಹೊಕ್ಕುಳು ಜೀವನ ಪ್ರಾರಂಭವಾಗುವ ಸ್ಥಳವಾಗಿದೆ. ಇದು ತಾಯಿಯನ್ನು ಗರ್ಭದಲ್ಲಿರುವ ಮಗುವಿಗೆ ಸಂಪರ್ಕಿಸುವ ಸೇತುವೆಯಾಗಿದೆ. ಹೊಕ್ಕುಳು ದೇಹದ ವಿವಿಧ ಅಂಗಗಳಿಗೆ ಕಾರಣವಾಗುವ ಅನೇಕ ನರಗಳ ಸಂಪರ್ಕಿಸುವ ಕೋಣೆಯಾಗಿದೆ. ಆಯುರ್ವೇದದಲ್ಲಿ ಕೂಡ ಹೊಕ್ಕುಳಿಗೆ ಇಂಗಿನ ಎಣ್ಣೆ ಬಳಸುವ ಬಗ್ಗೆ ಹೇಳಲಾಗಿದೆ. ಇಂದು ಇಂಗಿನ ಎಣ್ಣೆಯನ್ನು ಹಾಕೋದ್ರಿಂದ ಏನೆಲ್ಲ ಲಾಭವಿದೆ ಎನ್ನುವ ಬಗ್ಗೆ ನಿಮಗೆ ತಿಳಿಸ್ತೇವೆ.
ಇಂಗಿನ (Asafetida) ಎಣ್ಣೆ ತಯಾರಿಸುವುದು ಹೇಗೆ? : ಇಂಗಿನ ಎಣ್ಣೆಯನ್ನು ತಯಾರಿಸುವುದು ತುಂಬಾ ಸುಲಭ. ಇತರ ಎಣ್ಣೆಗಳಿಗಿಂತ ಇದು ಭಿನ್ನವಾಗಿದೆ. ಸಾಸಿವೆ ಎಣ್ಣೆಗೆ ಇಂಗು ಸೇರಿಸುವ ಮೂಲಕ ಇಂಗಿನ ಎಣ್ಣೆಯನ್ನುತಯಾರಿಸಲಾಗುತ್ತದೆ. ಇದಕ್ಕಾಗಿ ನೀವು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಬೇಕು. ಎಣ್ಣೆ ಬಿಸಿಯಾಗಲು ಪ್ರಾರಂಭಿಸಿದಾಗ, ಅದಕ್ಕೆ ಒಂದು ಚಿಟಿಕೆ ಇಂಗಿನ ಪುಡಿಯನ್ನು ಸೇರಿಸಬೇಕು. ನಂತರ ಗ್ಯಾಸ್ ಆಫ್ ಮಾಡಬೇಕು. ಎಣ್ಣೆಯ ಶಾಖವು ಇಂಗುವಿನ ಅಂಶವನ್ನು ಹೀರಿಕೊಳ್ಳುತ್ತದೆ. ಆಗ ಇಂಗಿನ ಎಣ್ಣೆ ಸಿದ್ಧವಾಗುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಂಗಿನ ಎಣ್ಣೆ ಪ್ರಯೋಜನಕಾರಿ.
ಅಳೋದು ದೌರ್ಬಲ್ಯದ ಸಂಕೇತವಲ್ಲ, ಕಣ್ಣೀರು ಬರದಿದ್ರೆ ಈ ಕಾಯಿಲೆನೂ ಆಗಿರ್ಬೋದು !
ಇಂಗಿನ ಎಣ್ಣೆಯ ಪ್ರಯೋಜನಗಳು :
ಹೊಟ್ಟೆ ನೋವಿಗೆ ಪರಿಹಾರ : ಹಿಂದಿನ ಕಾಲದಿಂದಲೂ ಹೊಟ್ಟೆ ನೋವು ಬಂದ್ರೆ ಜನರು ಇಂಗಿನ ಸೇವನೆ ಮಾಡ್ತಿದ್ದರು. ಹಾಗೆಯೇ ಇಂಗಿನ ಎಣ್ಣೆಯನ್ನು ಹೊಕ್ಕುಳಿಗೆ ಹಾಕ್ತಿದ್ದರು. ಇಂಗುವಿನಲ್ಲಿರುವ ಅಂಶಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿ ಸ್ಪಾಸ್ಮೊಡಿಕ್, ವಾಯು ವಿರೋಧಿ, ಉರಿಯೂತದ ಮತ್ತು ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ವಾಯು ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹೊಟ್ಟೆ ನೋವಿನಿಂದ ಬಳಲುವವರು ಇಂಗಿನ ಎಣ್ಣೆ ಬಳಸಬಹುದು.
ಮಕ್ಕಳಿಗೆ ಪ್ರಯೋಜನಕಾರಿ ಇಂಗಿನ ಎಣ್ಣೆ : ಮಕ್ಕಳಿಗೆ ಇಂಗು ತಿನ್ನಿಸೋದು ಸೂಕ್ತವಲ್ಲ. ಹಾಗಾಗಿ ಚಿಕ್ಕ ಮಕ್ಕಳ ಹೊಕ್ಕುಳಿಗೆ ನೀವು ಇಂಗಿನ ಎಣ್ಣೆ ಹಾಕಬಹುದು. ಮಗುವಿಗೆ ಹೊಟ್ಟೆ ನೋವಿದ್ದರೆ ಇದ್ರಿಂದ ಕಡಿಮೆಯಾಗುತ್ತದೆ. ಕೆಲವೊಮ್ಮೆ ಮಕ್ಕಳು ದಿನವಿಡೀ ಮಲಗುತ್ತಾರೆ. ಇದರಿಂದಾಗಿ ಅವರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಗ ಮಕ್ಕಳು ಅಳಲು ಶುರು ಮಾಡ್ತಾರೆ. ಗ್ಯಾಸ್ ಸಮಸ್ಯೆಗೆ ಇಂಗಿನ ಎಣ್ಣೆ ಅತ್ಯುತ್ತಮ ಮದ್ದು. ಇಂಗಿನ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚುವುದ್ರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.
ಹಸಿವು ಹೆಚ್ಚಿಸುತ್ತೆ ಇಂಗಿನ ಎಣ್ಣೆ : ಅನೇಕ ದಿನಗಳಿಂದ ಹೊರಗಿನ ಆಹಾರ ಸೇವಿಸುತ್ತಿದ್ದರೆ ಹೊಟ್ಟೆ ಆರೋಗ್ಯ ಕೆಡುತ್ತದೆ. ಹೊಟ್ಟೆ ಭಾರವಾಗಿರುವ ಅನುಭವವಾಗುತ್ತದೆ. ಹಾಗೆಯೇ ಹಸಿವಿನ ಸಮಸ್ಯೆ ಆಗುತ್ತದೆ. ಅಂಥವರಿಗೆ ಇಂಗಿನ ಎಣ್ಣೆ ಬೆಸ್ಟ್. ಇದು ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಬೆಳಗ್ಗೆ ಹೃದಯಾಘಾತದ ಅಪಾಯ ಹೆಚ್ಚು, ತಪ್ಪಿಸಲು ಏನ್ ಮಾಡ್ಬೇಕು ?
ಕಾಮೋತ್ತೇಜಕ ಇಂಗಿನ ಎಣ್ಣೆ : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಇಂಗಿನ ಎಣ್ಣೆ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ. ಲೈಂಗಿಕ ಆಸಕ್ತಿ ಹೆಚ್ಚಿಸುವ ಹಾರ್ಮೋನುಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇಂಗಿನ ಸೇವನೆಯಿಂದ ದೇಹದಲ್ಲಿ ಶಕ್ತಿ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. ಮಹಿಳೆಯರು ಇಂಗು ಸೇವನೆ ಮಾಡಿದ್ರೆ ಪ್ರೊಜೆಸ್ಟರಾನ್ ಉತ್ಪಾದನೆ ಹೆಚ್ಚಾಗುತ್ತದೆ.