National Milk Day : ಸೇವನೆ ಅತಿಯಾದ್ರೆ ಹಾಲು ವಿಷವಾಗುತ್ತೆ ಎಚ್ಚರ!

By Suvarna News  |  First Published Nov 25, 2022, 4:18 PM IST

ಹಾಲು ಆರೋಗ್ಯಕ್ಕೆ ಒಳ್ಳೆಯದು.. ಯಾರು ಕುಡಿದ್ರೂ ಅಪಾಯವಿಲ್ಲ.. ಇದನ್ನು ನಾವು ನಂಬಿದ್ದೇವೆ. ಆದ್ರೆ ಹಾಲಿನಲ್ಲೂ ಹಾಲಾಹಲವಿದೆ. ಕೆಲವರು ಇದ್ರ ಸೇವನೆ ಮಾಡಿದ್ರೆ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತೆ.
 


ಒಂದು ಲೋಟ ಹಾಲು ಕುಡಿ, ನನ್ನಷ್ಟು ಎತ್ತರವಾಗ್ತಿಯಾ ಅಂತಾ ತಾಯಂದಿರು ಮಕ್ಕಳನ್ನು ನಂಬಿಸಿ ಹಾಲು ಕುಡಿಸ್ತಾರೆ. ಮಗುವಿಗೆ ಒಂದು ವರ್ಷವಾಗ್ತಿದ್ದಂತೆ  ಹಸುವಿನ ಹಾಲನ್ನು ಕೊಡಲಾಗುತ್ತದೆ.  ಎರಡು ಹೊತ್ತು ಹಾಲು ಕುಡಿದ್ರೆ ಶಕ್ತಿ ಬರುತ್ತೆ ಎಂದು ನಾವೆಲ್ಲ ನಂಬಿದ್ದೇವೆ. ಇಷ್ಟವಿರಲಿ, ಬಿಡಲಿ, ಮೂಗು ಹಿಡಿದು ಹಾಲು ಕುಡಿಯುವ ಜನರಿದ್ದಾರೆ. ಮತ್ತೆ ಕೆಲವರಿಗೆ ಹಾಲು ಇಷ್ಟವಾಗುತ್ತದೆ. ಹಾಲು ಕುಡಿಯೋದ್ರಿಂದ ಸಾಕಷ್ಟು ಪ್ರಯೋಜನವಿದೆ. ಹಾಲನ್ನು ಪ್ರೋಟೀನ್ ಪ್ಯಾಕ್ಡ್ ಪಾನೀಯವೆಂದು ಪರಿಗಣಿಸಲಾಗುತ್ತದೆ. ಹಾಲು ಕುಡಿಯೋದ್ರಿಂದ ಮೂಳೆ, ಹಲ್ಲು ಮತ್ತು ಮೆದುಳು ಬಲಪಡೆಯುತ್ತದೆ. ಆದರೆ ಒಳ್ಳೆಯದ್ರಲ್ಲೂ ಕೆಟ್ಟ ಅಂಶವಿದ್ದೇ ಇರುತ್ತೆ. ಹಾಲು ಕುಡಿಯುವುದರಿಂದ ಕೆಲವು ಅಡ್ಡಪರಿಣಾಮಗಳೂ ಇವೆ. ರಾಷ್ಟ್ರೀಯ ಹಾಲು ದಿನದ ಸಂದರ್ಭದಲ್ಲಿ ನಾವು ಹಾಲಿನ ಸೇವನೆಯಿಂದ ಏನೆಲ್ಲ ಅನಾನುಕೂಲವಿದೆ ಎಂಬುದನ್ನು ನಿಮಗೆ ಹೇಳ್ತೆವೆ.

ಎಂದು ಆಚರಿಸಲಾಗುತ್ತೆ ರಾಷ್ಟ್ರೀಯ ಹಾಲಿನ ದಿನ (National Milk Day) ? : ನವೆಂಬರ್ 26ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ. ಭಾರತ (India) ದಲ್ಲಿ ಶ್ವೇತ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ (Verghese Kurien) ನವೆಂಬರ್ 26 ರಂದು ಜನಿಸಿದ್ದರು. ಅವರ ಜನ್ಮ ದಿನವನ್ನು ಹಾಲಿನ ದಿನವಾಗಿ ಆಚರಣೆ ಮಾಡಲಾಗುತ್ತದೆ. ವರ್ಗೀಸ್, ದೇಶದಲ್ಲಿ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಶ್ವೇತ ಕ್ರಾಂತಿಯನ್ನು ಪ್ರಾರಂಭಿಸಿದ್ದರು. ಅವರನ್ನು ಭಾರತದ ಮಿಲ್ಕ್ ಮ್ಯಾನ್ ಎಂದೂ ಕರೆಯುತ್ತಾರೆ.  

Tap to resize

Latest Videos

ಹಾಲಿನ ಸೇವನೆ ಹೀಗಿರಲಿ : ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನುವ ಕಾರಣಕ್ಕೆ ಅನೇಕರು ಹಸಿ ಹಾಲಿನ ಸೇವನೆ ಮಾಡ್ತಾರೆ. ಅಪ್ಪಿತಪ್ಪಿಯೂ ಹಸಿ ಹಾಲನ್ನು ಕುಡಿಯಬಾರದು. ಯಾವಾಗ್ಲೂ ಹಾಲನ್ನು ಕುದಿಸಿ ಕುಡಿಯಬೇಕು. ಹಾಗೆ ಬಿಸಿ ಬಿಸಿ ಹಾಲಿನ ಸೇವನೆ ಮಾಡಬಾರದು. ಉಗುರುಬೆಚ್ಚಗಿನ ಹಾಲನ್ನು ಕುಡಿಯಬೇಕು. ಹಸಿ ಹಾಲಿನಲ್ಲಿ ಸೂಕ್ಷ್ಮಜೀವಿಗಳು ಮತ್ತು ವೈರಸ್‌ ಇರುತ್ತದೆ. ನೀವು ಹಾಲನ್ನು ಕುದಿಸಿದಾಗ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಹಸಿ ಹಾಲಿನ ಸೇವನೆ ಮಾಡಿದ್ರೆ ವಾಂತಿ – ಬೇಧಿ ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ.

ಹಾಲಿನ ಸೇವೆನಯಿಂದ ಕಾಡುತ್ತೆ ಈ ಸಮಸ್ಯೆ :
ಇಂಥವರು ಹೆಚ್ಚು ಹಾಲು ಸೇವಿಸಬೇಡಿ :
ಜೀರ್ಣಕಾರಿ ಸಮಸ್ಯೆಯಿರುವವರು ಹಾಲಿನಿಂದ ದೂರವಿರುವುದು ಒಳ್ಳೆಯದು. ಹಾಗೆಯೇ ಗ್ಯಾಸ್ ಸಮಸ್ಯೆಯಿಂದ ಬಳಲುವವರು ಕೂಡ ಹಾಲನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಹಾಲಿನಲ್ಲಿ ಲ್ಯಾಕ್ಟೋಸ್ ಕಂಡುಬರುತ್ತದೆ. ಇದು ಜೀರ್ಣಕಾರಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದ್ರಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ.

ಇನ್ನೂ ಈ FOOD COMBINATIONS ತಿಂದಿಲ್ಲ ಅಂದ್ರೆ ಈಗ್ಲೇ ಟ್ರೈ ಮಾಡಿ

ಅಲರ್ಜಿ ಸಮಸ್ಯೆ (Allergy Issue) : ಹಾಲು ಕುಡಿದ ನಂತರ ಕೆಲವರಿಗೆ ದೈಹಿಕ ಸಮಸ್ಯೆಗಳು ಶುರುವಾಗುತ್ತವೆ. ಅದು ಒಂದು ರೀತಿಯ ಅಲರ್ಜಿಯಾಗಿದ್ದು ಇದನ್ನು ಲ್ಯಾಕ್ಟೋಸ್ ಇನ್ಟಾಲರೆನ್ಸ್ ಎಂದು ಕರೆಯುತ್ತಾರೆ. ಈ ಜನರು ಹಾಲು ಕುಡಿಯುವುದರಿಂದ ಹೊಟ್ಟೆ ಊತ, ನೋವು, ಅತಿಸಾರ ಇತ್ಯಾದಿ ಸಮಸ್ಯೆ ಕಾಡುತ್ತದೆ.

ಫ್ಯಾಟಿ ಲಿವರ್ (Fatty Liver) : ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿರುವವರು ಹಾಲಿನ ಸೇವನೆಯನ್ನು ಕಡಿಮೆ ಮಾಡಬೇಕು, ಕೊಬ್ಬಿನ ಲಿವರ್  ಹೊಂದಿರುವ ಜನರು ಹಾಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಅವರ ಯಕೃತ್ತಿನಲ್ಲಿ ಊತವನ್ನು ಉಂಟುಮಾಡುತ್ತದೆ. ಕೊಬ್ಬನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂಥವರು ಹಾಲು ಸೇವನೆ ಮಾಡದಿದ್ದರೆ ಒಳ್ಳೆಯದು. 

Food Poisoning Remedies: ಫುಡ್ ಪಾಯಿಸನ್ ಸಮಸ್ಯೆಯೇ? ಮನೆಯಲ್ಲಿಯೇ ಈ ಔಷಧ ಮಾಡಿ

ಹೆಚ್ಚಾಗುತ್ತೆ ಮೊಡವೆ (Acne):  ಕೊಬ್ಬಿನ ಹಾಲು ಅಥವಾ ಕೆನೆ ಹಾಲು (Creamy Milk) ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸುವ ಜನರಿಗೆ ಚರ್ಮದ ಸಮಸ್ಯೆ ಕಾಣಿಸುತ್ತದೆ. ಎಣ್ಣೆಯುಕ್ತ ಚರ್ಮ (Oily skin) ಹೊಂದಿರುವವರ ಸಮಸ್ಯೆ ಹೆಚ್ಚಾಗುತ್ತದೆ. ಅವರ ಮುಖದ ಮೇಲೆ ಮೊಡವೆ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮೊಡವೆಯಿಂದ ಬಳಲುವವರು, ಎಣ್ಣೆ ಚರ್ಮದವರು ಹಾಲನ್ನು ಮಿತವಾಗಿ ಸೇವನೆ ಮಾಡಬೇಕು.
 

click me!