ಗ್ರೀನ್ ಟೀ, ಯೋಗದಿಂದ ತೂಕ ಇಳಿಯುತ್ತಾ? ಲೈಂಗಿಕ ಆರೋಗ್ಯದ ಬಗ್ಗೆ ಈ ಡಾಕ್ಟರ್ ಹೇಳಿದ್ದೇನು?

By Suvarna News  |  First Published Jul 1, 2023, 2:35 PM IST

ನಮ್ಮ ಆರೋಗ್ಯ ಕಾಳಜಿಗೆ ಕೆಲವರು ನೀಡುವ ಸಲಹೆ ಸರಿಯಲ್ಲ ಎನ್ನುವುದನ್ನು ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ಅವರು ಹೇಳಿದ್ದೇನು?
 


ಆರೋಗ್ಯದ ಕುರಿತು ಹಲವಾರು ಮಾಹಿತಿಗಳು ಲಭ್ಯವಾಗುತ್ತಲೇ ಇರುತ್ತವೆ. ಒಬ್ಬರು ಹೇಳಿದ ಔಷಧಗಳನ್ನು ಇನ್ನೊಬ್ಬರು ಒಪ್ಪುವುದಿಲ್ಲ. ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.  ಭಾರತದ ಅತ್ಯಂತ ಪುರಾತನ ವೈದ್ಯಪದ್ಧತಿಯಾದ  ಆಯುರ್ವೇದವನ್ನು  ಕೊರೋನಾ ಸಮಯದಲ್ಲಿ ಇಡೀ ವಿಶ್ವ ಕಂಡುಕೊಂಡಿದೆ.  ಆಯುರ್ವೇದ ಎಂದರೆ ಮೂಗು ಮುರಿಯುವವರು ಕೂಡ ಅದರ ಮಹತ್ವವನ್ನು ಅರಿತಿದ್ದಾರೆ. ಅಲೋಪಥಿ (English Medicine) ವೈದ್ಯ ಪದ್ಧತಿ ಅತಿ ಶೀಘ್ರದಲ್ಲಿ ಕೆಲವೊಂದು ಸಮಸ್ಯೆಗಳಿಗೆ ರಾಮಬಾಣ ಎನಿಸಿದರೂ ಅದರಿಂದ ಭವಿಷ್ಯದಲ್ಲಿ side effect ಗಳೇ ಹೆಚ್ಚು ಎಂದು ಹೇಳುವ ದೊಡ್ಡ ವರ್ಗ ಹುಟ್ಟಿಕೊಂಡಿದೆ. ಇದರ ಮಧ್ಯೆ ಆಯುರ್ವೇದ, ಹೋಮಿಯೋಪಥಿಗಳತ್ತ  ಜನರು ಮುಖ ಮಾಡುತ್ತಿದ್ದಾರೆ. ಹೀಗೆ ಇವುಗಳ ಬೇಡಿಕೆ ಹೆಚ್ಚಿದಂತೆ, ಆಯುರ್ವೇದ, ಹೋಮಿಯೋಪಥಿ ಹೆಸರಿನಲ್ಲಿ ಬಿಟ್ಟಿ ಸಲಹೆಗಳನ್ನೂ ನೀಡುವ ವರ್ಗವೂ ಹುಟ್ಟಿಕೊಂಡಿದೆ. ಅದೇ ರೀತಿ ಕೆಲವೊಂದು ಸಮಸ್ಯೆಗಳಿಗೆ ಹೀಗೆ ಮಾಡಿದರೆ ಹೆಚ್ಚು ಪರಿಣಾಮ ಎನ್ನುವ ಪುಕ್ಕಟೆ ಟಿಪ್ಸ್​ಗಳು ಬೇಕಾಬಿಟ್ಟೆಯಾಗಿ ಹರಿದಾಡುತ್ತಿವೆ. ಮನೆಮದ್ದು ಹೆಸರಿನಲ್ಲಿಯೂ ಉಚಿತ ಸಲಹೆ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಮರುಳಾಗುವುದು ಬೇಡ ಎನ್ನುತ್ತಿದ್ದಾರೆ ಯಕೃತ್ತಿನ ವೈದ್ಯ. 

Health Tips: ಟೋಮ್ಯಾಟೋ ತಿನ್ನೋದ್ರಿಂದ ಕಿಡ್ನಿ ಸ್ಟೋನ್ ಹೆಚ್ಚುತ್ತಾ?

Latest Videos

undefined

ಅವರು ಹೇಳಿರುವ ಟಿಪ್ಸ್​ ಇಲ್ಲಿದೆ: 

1. ದಿನಕ್ಕೆ ಒಂದು ಮೊಟ್ಟೆ ತಿಂದರೆ ಅದರಲ್ಲಿರುವ ಹಳದಿ ಲೋಳೆಯಿಂದ  ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎನ್ನುವುದು ಸುಳ್ಳು. 
2. ಗ್ರೀನ್ ಟೀ (Green tea) ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಿಲ್ಲ
4. 'ಆರೋಗ್ಯಕರ ಮದ್ಯ' ಎಂಬುದು ಇಲ್ಲವೇ ಇಲ್ಲ.
5. ಅಶ್ವಗಂಧವು ಒತ್ತಡವನ್ನು ಕಡಿಮೆ ಮಾಡುವುದಿಲ್ಲ. ಇದು  ನಿದ್ರೆಗೆ ಸಹಾಯ ಮಾಡುವುದಿಲ್ಲ.
6. ಶಿಲಾಜಿತ್ ಪುರುಷ ಲೈಂಗಿಕ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ ಎನ್ನುವುದು ಸರಿಯಲ್ಲ.
 7. ಹಾಲಿನಲ್ಲಿರುವ ಅರಿಶಿಣವು (Termeric) ದೇಹದಲ್ಲಿ ಪ್ರಯೋಜನಕಾರಿಯಾಗಿ ಹೀರಲ್ಪಡುತ್ತದೆ ಎನ್ನುವುದು ಸರಿಯಲ್ಲ. ಇದು  ಮಲದಲ್ಲಿ ಕಳೆದುಹೋಗುತ್ತದೆ.
8. ನೀವು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಹಣ್ಣುಗಳನ್ನು ಸೇವಿಸಬಹುದು. ಹಣ್ಣುಗಳನ್ನು ಇದೇ  ಸಮಯದಲ್ಲಿ ತಿನ್ನಬೇಕು ಎನ್ನುವುದು ಸರಿಯಲ್ಲ. 
9. ಸಕ್ಕರೆ ರಹಿತ ಕಪ್ಪು ಕಾಫಿಯನ್ನು ಕನಿಷ್ಠ 3 ಕಪ್‌ ದಿನಕ್ಕೆ ಕುಡಿದರೆ ಯಕೃತ್ತಿಗೆ ಒಳ್ಳೆಯದು.
 10. ಆಪಲ್ ಸೈಡರ್ ವಿನೆಗರ್ (Apple cider vinegar) ಮನುಷ್ಯನಿಗೆ ಪ್ರಯೋಜನಕಾರಿಯಲ್ಲ. ಇದು ಹಣ್ಣಿನ ನೊಣಗಳನ್ನು ಹಿಡಿಯಲು ಮಾತ್ರ ಒಳ್ಳೆಯದು
11. ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯಲೇಬೇಕು ಎನ್ನುವುದು ಒಂದು ಪುರಾಣವಷ್ಟೇ. ಮನುಷ್ಯನ ದೇಹ ಪ್ರಕೃತಿಗೆ ಅಗತ್ಯವಾಗಿ ನೀರನ್ನು ಕುಡಿಯಬೇಕಾಗುತ್ತದೆ.
12. ಕೆಲವೊಂದು ಸಸ್ಯಗಳಲ್ಲಿ ಕಂಡುಬರುವ ರೆಸ್ವೆರಾಟ್ರೊಲ್ ನಿಮ್ಮ ವಯಸ್ಸನ್ನು ಹಿಮ್ಮೆಟ್ಟಿಸುವುದಿಲ್ಲ
13. ಮೂಲ ವಿಜ್ಞಾನಿಗಳು ಕ್ಲಿನಿಕಲ್ ವೈದ್ಯರಲ್ಲ
14. ಮಲ್ಟಿವಿಟಾಮಿನ್​ (Multivitamine Tablets) ಟ್ಯಾಬ್ಲೆಟ್​ಗಳನ್ನು ತಿನ್ನುವುದರಿಂದ  ಆರೋಗ್ಯ ಸುಧಾರಿಸುವುದಿಲ್ಲ ಅಥವಾ ಸಾಮಾನ್ಯ ವ್ಯಕ್ತಿಗಳಲ್ಲಿ ರೋಗಗಳನ್ನು ತಡೆಯುವುದಿಲ್ಲ
15. ಬಯೋಟಿನ್ ಕೂದಲಿನ ಬೆಳವಣಿಗೆಗೆ ಅಥವಾ ಕೂದಲಿನ ಉದ್ದವನ್ನು ಹೆಚ್ಚಿಸಲು ಸಹಾಯ ಮಾಡುವುದಿಲ್ಲ.
16. ತೂಕವನ್ನು ಕಡಿಮೆ ಮಾಡುವುದಾಗಿ ಡಯೆಟ್​ ಮಾಡಿದರೆ, ಅದರಲ್ಲಿ ಕ್ಯಾಲೊರಿಗಳು ಕಡಿಮೆ ಇರುವ ಕಾರಣ, ತೂಕನಷ್ಟವಾಗುತ್ತದೆಯೇ ವಿನಾ ಮತ್ತಿನ್ನೇನೂ ಅಲ್ಲ.

ನಿಮಗೆ ಗೊತ್ತಾ? ಈ ನಾಲ್ಕು ಹಾರ್ಮೋನ್ ನಿಮ್ಮನ್ನು ಯಾವಾಗ್ಲೂ ಖುಷ್ ಖುಷಿಯಾಗಿಡುತ್ತೆ!

ಇವಿಷ್ಟು ಟಿಪ್ಸ್​ಗಳನ್ನು ನೀಡಿರುವ ಟ್ವಿಟರ್​ ವೈರಲ್​ ಆಗಿದ್ದು, ಇದಕ್ಕೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 

 

To summarize:

1. One whole egg with yolk a day does not increase blood cholesterol

2. Green tea does not help you lose weight

3. Jaggery, honey or sugarcane are not healthier than white sugar

4. There is no "healthy alcohol"

5. Ashwagandha does not reduce stress or help you…

— TheLiverDoc (@theliverdr)
click me!