ಇಂದು ರಾಷ್ಟ್ರೀಯ ವೈದ್ಯರ ದಿನ : ಡಾಕ್ಟರ್ಸೇ ಗ್ರೇಟು ಗುರೂ!

By Suvarna NewsFirst Published Jul 1, 2023, 1:18 PM IST
Highlights

ಜುಲೈ 1 ನ್ಯಾಶನಲ್ ಡಾಕ್ಟರ್ಸ್ ಡೇ. ಕ್ಷಣ ಕ್ಷಣವೂ ಜೀವ ಕಾಯುವ ಇನ್ನೊಬ್ಬರ ಜೀವ ಉಳಿಸಲು ತಮ್ಮ ಬದುಕಿನ ಖುಷಿ, ಅಮೂಲ್ಯ ಕ್ಷಣಗಳನ್ನು ತ್ಯಾಗ ಮಾಡುವ ನಿಸ್ವಾರ್ಥ ವ್ಯಕ್ತಿಗಳಿಗೆ ನಮಿಸೋಣ.

ಜುಲೈ 1 ನ್ಯಾಶನಲ್ ಡಾಕ್ಟರ್ಸ್ ಡೇ. ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧನ ಚಂದ್ರ ರಾಯ್‌ ಅವರ ಜನನ ಹಾಗೂ ಮರಣ ದಿನವೇ ರಾಷ್ಟ್ರೀಯ ವೈದ್ಯರ ದಿನವಾಗಿದೆ. ಭಾರತದಲ್ಲಿ 1991 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಯಿತು.ಬಿಧನ್ ಚಂದ್ರ ರಾಯ್ ಅವರು ಮೆಡಿಕಲ್ ಕೌನ್ಸಿಲ್ ಆಫ್‌ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್‌ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ಧರು. ಪ್ರತಿ ವರ್ಷ ಹೊಸ ಹೊಸ ಥೀಮ್‌ನೊಂದಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ 'Celebrating Resilience and Healing Hands'. 'ಗುಣಪಡಿಸುವ ಕೈಗಳನ್ನು ಗೌರವಿಸೋಣ' ಅನ್ನುವ ಥೀಮ್‌ನಡಿ ವೈದ್ಯ ದಿನಾಚರಣೆ ಆಚರಿಸಲಾಗುತ್ತದೆ.

ಹಾಗೆ ನೋಡಿದರೆ ನಮ್ಮ ದೇಶದ ವೈದ್ಯಕೀಯ ಪರಂಪರೆ ಬಲು ಪ್ರಾಚೀನವಾದದ್ದು. ಭಾರತದಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ವೈದ್ಯ ಪದ್ಧತಿ ಜಾರಿಯಲ್ಲಿತ್ತು. ಭಾರತದ ಆಯುರ್ವೇದ ಪದ್ಧತಿಯು ಇಂದು ವಿಶ್ವದಾದ್ಯಂತ ಖ್ಯಾತಿ ಗಳಿಸಲು ಹಲವು ಪ್ರಾಚೀನ ಭಾರತದ ಹಲವು ವೈದ್ಯರ ಅನ್ವೇಷಣೆ ಹಾಗೂ ಆವಿಷ್ಕಾರಗಳೇ ಕಾರಣ. ಆತ್ರೇಯ ಪ್ರಾಚೀನ ಭಾರತದ ಮೊದಲ ವೈದ್ಯ ಎಂದು ಕರೆಯಲಾಗುತ್ತದೆ. ಇವರನ್ನು ವೈಜ್ಞಾನಿಕ ಔಷಧಿಯ ಪಿತಾಮಹ ಎಂದೂ ಕರೆಯಲಾಗುತ್ತದೆ. ಇವರು ಕ್ರಿಸ್ತಪೂರ್ವ 800ರ ಕಾಲಘಟ್ಟದಲ್ಲಿ ಇದ್ದರು ಎನ್ನಲಾಗುತ್ತದೆ. ಇವರು ಸಾಂಪ್ರದಾಯಿಕ ವೈದ್ಯ ಪದ್ಧತಿಯಾದ ಆಯುರ್ವೇದದ ಪ್ರತಿಪಾದಕರಾಗಿದ್ದರು. ಇವರು ಆತ್ರೇಯ ಸಂಹಿತೆಯನ್ನು ಬರೆದಿದ್ದರು. ಇದು ಆಯುರ್ವೇದದ ಅತ್ಯಂತ ಹಳೆಯ ಮತ್ತು ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ.

Latest Videos

ದೇಶದಲ್ಲಿ ವರ್ಷಕ್ಕೆ 10 ಲಕ್ಷ ಜನ ಕ್ಯಾನ್ಸರ್‌ಗೆ ಬಲಿ: ಕ್ಯಾನ್ಸರ್ ತಜ್ಞ ಡಾ. ಮಾಜಿದ್‌ ಅಹ್ಮದ್‌

ಕ್ರಿಸ್ತಪೂರ್ವ 600ರಲ್ಲಿ ಬಾಳಿದ್ದ ಸುಶ್ರುತ ವೈದ್ಯ ಹಾಗೂ ಶಸ್ತ್ರಚಿಕಿತ್ಸಕರಾಗಿದ್ದರು. ಶಸ್ತ್ರಚಿಕಿತ್ಸೆ ಕ್ಷೇತ್ರಕ್ಕೆ, ವಿಶೇಷವಾಗಿ ಪ್ಲಾಸ್ಟಿಕ್‌ ಸರ್ಜರಿ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇವರು ನೀಡಿದ್ದ ಕೊಡುಗೆ ಅನನ್ಯ. ಇವರನ್ನು ಪ್ಲಾಸ್ಟಿಕ್‌ ಸರ್ಜರಿಯ ಪಿತಾಮಹ ಎಂದೂ ಕರೆಯಲಾಗುತ್ತದೆ. ಇವರು ಸುಶ್ರುತ ಸಂಹಿತೆಯನ್ನು ಬರೆದಿದ್ದಾರೆ. ಇದನ್ನು ಇಂದಿಗೂ ಆಧುನಿಕ ಶಸ್ತ್ರಚಿಕಿತ್ಸಕರು ಉಲ್ಲೇಖವಾಗಿ ಬಳಸುತ್ತಾರೆ.

ಅಲ್ಲದೇ ಕಿಸ್ತಪೂರ್ವ 300ರ ಕಾಲಘಟ್ಟದಲ್ಲಿದ್ದ ಚರಕ ಪ್ರಖ್ಯಾತ ವೈದ್ಯರು. ಆಯುರ್ವೇದ ವೈದ್ಯ ಪದ್ಧತಿಗೆ ಇವರು ನೀಡಿದ ಕೊಡುಗೆ ದೊಡ್ಡದು. ಇವರು ಬರೆದ ಚರಕ ಸಂಹಿತ ಪುಸಕ್ತವನ್ನು ಆಯುರ್ವೇದ ಪಠ್ಯದಲ್ಲಿ ಪ್ರಮುಖವಾಗಿ ಪರಿಗಣಿಸುತ್ತಾರೆ.

ಕಿಸ್ತಪೂರ್ವ 600ರ ಸಮಯದಲ್ಲಿದ್ದ ವಾಗ್ಭಟ ಆಯುರ್ವೇದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಅಷ್ಟಾಂಗ ಹೃದಯ ಇವರು ಬರೆದ ಕೃತಿ. ಇದನ್ನು ಆಯುರ್ವೇದದ ಆಮೂಲಾಗ್ರ ಕೃತಿ ಎಂದು ಪರಿಗಣಿಸಲಾಗುತ್ತದೆ.

ಹೀಗೆ ಭಾರತೀಯ ವೈದ್ಯ ಪರಂಪರೆಯ ಇತಿಹಾಸ ಅಗಾಧವಾದದ್ದು. ಇಂಥಾ ಪರಂಪರೆಯಿಂದ(tradition) ಬಂದ ಭಾರತೀಯರು ವೈದ್ಯರನ್ನು ನಾರಾಯಣ ಎಂದೇ ಭಾವಿಸಿ ಗೌರವಿಸುವ ಮನಸ್ಥಿತಿಯವರು. ನಮ್ಮ ಪರಂಪರೆ ನಮಗೆ ವೈದ್ಯ ಪದ್ಧತಿ ಅನ್ನೋದು ದುರಾಸೆಯನ್ನು ಮೀರಿದ್ದು. ಮಾನವೀಯತೆಯುಳ್ಳದ್ದು(humanity) ಅನ್ನೋದನ್ನು ಸಾರಿದೆ. ಆಧುನಿಕ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ಹಣ ಗಳಿಸುವ ದಂಧೆಯಾಗಿ ಬದಲಾಗಿರುವ ಸಂದರ್ಭದಲ್ಲಿ ನಮ್ಮ ಅನೇಕ ವೈದ್ಯರು ಮಾನವೀಯತೆ, ಅಕ್ಕರೆಯಿಂದ ಜೀವ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಅಂಥವರನ್ನು ಈ ಸಂದರ್ಭ ಗೌರವಿಸೇಕು.

ವಿಟಮಿನ್ ಡಿ, ವಯಸ್ಸಾದವರಲ್ಲಿ ಹೃದಯಾಘಾತ ತಡೆಯಬಹುದು; ಅಧ್ಯಯನದಿಂದ ಮಾಹಿತಿ

ಡಾಕ್ಟರ್ಸ್‌(doctors) ತ್ಯಾಗ, ಬಲಿದಾನ ಎಂಥದ್ದು ಅನ್ನೋದಕ್ಕೆ ತೀರ ಇತ್ತೀಚಿನ ಉದಾಹರಣೆ ಅಂದರೆ ಕೋವಿಡ್(covid 19) ಬಂದ ಸಂದರ್ಭ. ನಾವೆಲ್ಲ ಗುಮ್ಮ ಬಂತು ಅನ್ನೋ ಥರ ಕೋವಿಡ್ ಬಂದಾಗ ಮನೆಯೊಳಗೆ ಬೆಚ್ಚಗೆ ಕೂತು ಟಿವಿಯಲ್ಲಿ ಹೊರಗಿನ ಸುದ್ದಿ ನೋಡುತ್ತಿದ್ದೆವು. ಆದರೆ ನಮ್ಮೆಲ್ಲರ ಹಾಗೆ ಕುಟುಂಬ, ಮನೆ, ಮಕ್ಕಳಿರುವ ಡಾಕ್ಟರ್ಸ್ ರಾತ್ರಿ ಹಗಲು ಆಸ್ಪತ್ರೆಗಳಲ್ಲಿ ತಮ್ಮ ಜೀವ ಪಣಕ್ಕಿಟ್ಟು ರೋಗಿಗಳ ಜೀವ ಕಾಯಲು ಮುಂದಾದರು. ಅನೇಕರು ಸೇವೆ ಮಾಡುತ್ತ ಮಾಡುತ್ತ ತಮ್ಮ ಜೀವವನ್ನೇ ತ್ಯಜಿಸಿದರು. ಇಂಥ ವೈದ್ಯರಿಗೆ ಎಷ್ಟು ನಮನ ಸಲ್ಲಿಸಿದರೂ ಕಡಿಮೆಯೇ.

 

click me!