Life Lessons: ಎಲ್ರೂ ಮಾಡೋ ಮಿಸ್ಟೇಕ್..ನೀವು ಕೂಡಾ ಮಾಡಿರ್ಬೋದು ನೋಡಿ

By Suvarna News  |  First Published Jan 28, 2022, 1:23 PM IST

ಲೈಫ್ (Life) ಎಂದರೆ ಹಾಗೆ. ಅಲ್ಲಿ ಪರ್ಫೆಕ್ಟ್ (Perfect), ರೈಟ್ ಅನ್ನೋದಕ್ಕಿಂತ ಕನ್‌ಫ್ಯೂಶನ್, ಮಿಸ್ಟೇಕ್ಸ್‌ಗಳೇ ಜಾಸ್ತಿ. ಇದು ಸರಿ ಎಂದು ತಿಳಿದುಕೊಳ್ಳುವ ಹೊತ್ತಿಗೆ ಹತ್ತು ತಪ್ಪಾಗಿ ಹೋಗಿರುತ್ತದೆ.  ಒಂದಷ್ಟು ವಿಷ್ಯಗಳು ಅರ್ಥವಾಗೋದು ಲೇಟಾಗಿಯೇ. ಆ ತಪ್ಪುಗಳ ಲಿಸ್ಟ್‌ನಲ್ಲಿ ನೀವು ಮಾಡಿರೋ ಮಿಸ್ಟೇಕ್‌ (Mistake)ಗಳು ಇದ್ರೂ ಇರ್ಬೋದು. ಜಸ್ಟ್ ಒಮ್ಮೆ ಚೆಕ್ ಮಾಡಿ.


ಜೀವನ (Life)ವೇ ಹಾಗೇ. ಅದೊಂಥರಾ ಬಿಡಿಸಲಾಗದ ಒಗಟು. ಅರ್ಥ ಮಾಡಿಕೊಳ್ಳಲು ಯತ್ನಿಸಿದಾಗಲ್ಲೆಲ್ಲಾ ಮತ್ತಷ್ಟು ಕಗ್ಗಂಟಾಗುತ್ತಾ ಹೋಗುತ್ತದೆ. ಎಷ್ಟು ವಿಷಯಗಳನ್ನು ಕಲಿತುಕೊಂಡರೂ ಮತ್ತಷ್ಟು ವಿಷಯಗಳು ಕಲಿಯಲು ಬಾಕಿ ಉಳಿಯುತ್ತದೆ. ನಾವು ಸಾಮಾನ್ಯವಾಗಿ ಜೀವನದಲ್ಲಿ ಎಲ್ಲಾ ವಿಷಯಗಳನ್ನು ತಡವಾಗಿ ಅರಿತುಕೊಳ್ಳುತ್ತೇವೆ. ತಪ್ಪಾಗಿದೆ ಎಂದು ಗೊತ್ತಾದಾಗ ತಡವಾಗಿ ಹೋಗಿರುತ್ತದೆ. ಸೋಲುತ್ತಿದ್ದೇವೆ ಎಂದು ತಿಳಿಯುವ ಹೊತ್ತಿಗೆ ಸೋತಾಗಿರುತ್ತದೆ. ಈ ಪಾಠಗಳು ನಮಗೆ ಜೀವನದ ಬಗ್ಗೆ ತುಂಬಾ ವಿಚಾರಗಳನ್ನು ಕಲಿಸುತ್ತದೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಬಹಳ ಆಳವಾಗಿ ಮತ್ತು ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. 

ಆದರೆ ಕೆಲವೊಮ್ಮೆ, ಅವಕಾಶಗಳು ಶಾಶ್ವತವಾಗಿ ಉಳಿಯುವುದಿಲ್ಲ. ಮತ್ತು ನಾವು ಹೊಂದಿರಬೇಕಾದ ವಿಷಯಗಳನ್ನು ಅರಿತುಕೊಳ್ಳುವಲ್ಲಿ ನಾವು ತಡವಾಗಿದ್ದರೆ, ಈ ಅವಕಾಶಗಳು ನಮ್ಮ ಹಿಂದೆ ಸರಿಯುತ್ತವೆ. ಜನರು ಜೀವನದಲ್ಲಿ ತಡವಾಗಿ ಕಲಿಯುವ ಕೆಲವು ಪಾಠಗಳು ಇಲ್ಲಿವೆ.

Tap to resize

Latest Videos

undefined

Healthy Lifestyle: ಜಾಸ್ತಿ ವರ್ಷ ಬದುಕ್ಬೇಕಾ? ಇಲ್ಲಿವೆ ಆರೋಗ್ಯಯುತ ತುಂಬು ಜೀವನಕ್ಕೆ ಟಿಪ್ಸ್

ಕಷ್ಟಪಟ್ಟು ಕೆಲಸ ಮಾಡಬೇಕು
ಕಷ್ಟಪಡದೆ ಸುಲಭವಾಗಿ ಯಾವುದೂ ಸಿಗುವುದಿಲ್ಲ. ಹೀಗಾಗಿ ಜೀವನದಲ್ಲಿ ಯಶಸ್ಸನ್ನು ಕಾಣಲು ಕಷ್ಟಪಟ್ಟು ಕೆಲಸ (Work) ಮಾಡುವುದು ಮುಖ್ಯ. ನೀವು ಜೀವನದಲ್ಲಿ ವಿಭಿನ್ನವಾದದ್ದನ್ನು ಸಾಧಿಸಬೇಕಾದರೆ, ಕಷ್ಟಪಟ್ಟು ಕೆಲಸ ಮಾಡಬೇಕು.  ನಿರಂತರವಾಗಿ ಕಷ್ಟ ಪಡುತ್ತಿರುವುದು ಕೊನೆಗೆ ಉತ್ತಮ ಫಲಿತಂಶವನ್ನೇ ಕೊಡುತ್ತದೆ. ಇದಕ್ಕೆ ಜೀವನದಲ್ಲಿ ಮೋಜು, ಮಸ್ತಿಯನ್ನು ಕಡಿಮೆ ಮಾಡುವುದು ಮುಖ್ಯ. ಸಂಪೂರ್ಣವಾಗಿ ಸಾಧನೆಯತ್ತ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು. ಆದರೆ ಎಲ್ಲರೂ ಇದನ್ನು ತಡವಾಗಿ ಅರಿತುಕೊಳ್ಳುತ್ತಾರೆ. ಗುಡ್ ಲಕ್ (Luck) ಅಥವಾ ಅದೃಷ್ಟದಿಂದಲೇ ನಮಗೆಲ್ಲವೂ ದೊರಕುತ್ತದೆ ಎಂದು ಭಾವಿಸುತ್ತಾರೆ. ಆದರೆ ಯಶಸ್ಸು ಸಿಗಲು ಕಷ್ಟಪಟ್ಟು ಕೆಲಸ ಮಾಡುವುದು ಅತೀ ಮುಖ್ಯ. 

ಭಯವನ್ನು ಹೋಗಲಾಡಿಸಿ
ಭಯ (Fear)ವಿದ್ದಾಗ ಏನನ್ನಾದರೂ ಸಾಧಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಮನಸ್ಸಿನಲ್ಲಿ ಹುದುಗಿರುವ ಭಯವನ್ನು ಹೋಗಲಾಡಿಸಿಕೊಳ್ಳುವುದು ಮುಖ್ಯ. ಯಾವುದಾದರ ಬಗ್ಗೆಯಾದರೂ ಭಯವಿದ್ದಾಗ ನಾವದನ್ನು ದ್ವೇಷಿಷಲು ಪ್ರಾರಂಭಿಸುತ್ತೇವೆ. ನಂತರ ಹತಾಶೆ, ಕೋಪ, ಅಸಮಾಧಾನ ಇತ್ಯಾದಿಗಳು ಬರುತ್ತವೆ.  ಈ ರೀತಿಯ ವರ್ತನೆಯಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸುವುದೇ ನಿಮ್ಮ ಮೊದಲ ಪ್ರಯತ್ನವಾಗಿರಲಿ. ಭಯವಿದ್ದಾಗ ನಾವು ಜೀವನದಲ್ಲಿ ಸಣ್ಣ ಹೆಜ್ಜೆಯನ್ನಿಡಲೂ ಹಿಂಜರಿಯುತ್ತೇವೆ. ಭಯವೇ ನಿಮ್ಮ ಜೀವನವನ್ನು ಸೀಮಿತಗೊಳಿಸಿದೆ ಎಂದು ನಿಮ್ಮ ತಡವಾಗಿ ಅರಿವಾಗುತ್ತದೆ. ಮತ್ತು ಆ ದಿನ ಭಯಪಡದಿದ್ದರೆ ಇಂದೇನೋ ಆಗಿರುತ್ತಿದ್ದೆವು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.

Work From Home: ಬೋರಿಂಗ್ ಅನಿಸ್ತಿದ್ಯಾ ? ಹ್ಯಾಪಿಯಾಗಿರಲು ಹೀಗೆ ಮಾಡಿ

ನಿರಂತರ ಪರಿಶ್ರಮ ಅಗತ್ಯ
ಯಾವುದೇ ವಿಷಯವನ್ನು ನಿರಂತರವಾಗಿ ಮಾಡುವುದು ಆ ವಿಷಯದಲ್ಲಿ ನಮ್ಮನ್ನು ಎಕ್ಸ್‌ಪರ್ಟ್ (Exper) ಮಾಡುತ್ತದೆ. ಕೋಪವನ್ನು ನಿಯಂತ್ರಿಸಲು, ಹೆಚ್ಚು ತಾಳ್ಮೆ ಹೊಂದಲು ಹೆಚ್ಚು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ನೀವು ಕ್ಷಮಿಸುವ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಭಾವನೆಗಳಿಗೆ ಅಭ್ಯಾಸದ ಅಗತ್ಯವಿರುತ್ತದೆ. 

ಜೀವನದಲ್ಲಿ ಸಮತೋಲನ ಇರಬೇಕು
ಜೀವನದಲ್ಲಿ ಯಾವುದಕ್ಕೆ ಎಷ್ಟೆಷ್ಟು ಪ್ರಾಮುಖ್ಯತೆ ನೀಡಬೇಕೆಂದು ಸ್ಪಷ್ಟವಾಗಿ ತಿಳಿದಿರಬೇಕು. ಕಲಿಕೆ, ಉದ್ಯೋಗ, ಮನೆ, ವಿವಾಹ (Marriage) ಎಲ್ಲದಕ್ಕೂ ಅದರದ್ದೇ ಆದ ಆದ್ಯತೆಯಿದೆ. ಯಾವುದಕ್ಕೆ ಎಷ್ಟು ಆದ್ಯತೆ ನೀಡಬೇಕೋ ಅಷ್ಟನ್ನು ನೀಡಿದಾಗ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಅಸಹನೆ, ಮದುವೆಯಲ್ಲಿ ಬಿರುಕು, ಉದ್ಯೋಗದಲ್ಲಿ ಅಸಮಾಧಾನ ಮೂಡುತ್ತದೆ. ಹೀಗಾಗಿ ಎಲ್ಲವನ್ನೂ ಸಮತೋಲನವಾಗಿ ನಿಭಾಯಿಸುವುದು ಮುಖ್ಯವಾಗುತ್ತದೆ.

ಜೀವಾನಾನುಭವ ಮುಖ್ಯ
ಜೀವನದಲ್ಲಿ ಭಾವನೆಗಳು ಮತ್ತು ವಿಭಿನ್ನ ವಿಷಯಗಳನ್ನು ಅನುಭವಿಸುವುದರಿಂದ ದೂರ ಹೋಗಬೇಡಿ. ಅನುಭವ (Experience) ಗಳೇ ನಮ್ಮನ್ನು ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಲು ರೂಪುಗೊಳಿಸುತ್ತವೆ. ಅನುಭವಗಳ ಸಹಾಯದಿಂದ ನೀವು ಬೆಳೆಯುತ್ತೀರಿ, ಕಲಿಯುತ್ತೀರಿ ಮತ್ತು ಸಂಪೂರ್ಣ ಹೊಸ ವ್ಯಕ್ತಿಯಾಗುತ್ತೀರಿ. ಹೀಗಾಗಿ ಜೀವನದಲ್ಲಿ ಆಗುವ ತಪ್ಪುಗಳಿಂದ, ಸೋಲಿನಿಂದ ಪಾಠವನ್ನು ಕಲಿಯಿರಿ. ಮತ್ತು ಆ ತಪ್ಪು ಜೀವನದಲ್ಲಿ ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.

click me!