Healthy Lifestyle: ಜಾಸ್ತಿ ವರ್ಷ ಬದುಕ್ಬೇಕಾ? ಇಲ್ಲಿವೆ ಆರೋಗ್ಯಯುತ ತುಂಬು ಜೀವನಕ್ಕೆ ಟಿಪ್ಸ್

By Suvarna News  |  First Published Jan 27, 2022, 5:59 PM IST

ಆಯಸ್ಸು ವೃದ್ಧಿಸುವ ಬಯಕೆಯೇ? ಅದಕ್ಕಾಗಿ ಏನೇನು ಮಾಡಬೇಕೆಂದು ಸಂಶೋಧನೆಗಳು ಹೇಳಿರುವುದು ಇಲ್ಲಿದೆ..


ಎಲ್ಲರಿಗೂ ಹೆಚ್ಚು ವರ್ಷ ಬದುಕುವ ಬಯಕೆ ಇರುತ್ತದೆ. ಸುಮ್ಮನೆ ಅಷ್ಟು ವರ್ಷ ಇರುವುದಲ್ಲ, ಆರೋಗ್ಯವಂತರಾಗಿ, ಸಂತೋಷದಿಂದ ಗೆಳೆಯರು, ಕುಟುಂಬದೊಡನೆ ಸಮಯ ಕಳೆಯುತ್ತಾ, ಜಗತ್ತನ್ನು ನೋಡುತ್ತಾ ಬದುಕಬೇಕು ಎಂದು ಬಯಸುತ್ತೇವೆ. ಹೀಗೆ ಹೆಚ್ಚು ವರ್ಷ ಬದುಕಲು ಏನು ಮಾಡಬೇಕು ಎಂಬ ಬಗ್ಗೆ ಆಸ್ಟ್ರೇಲಿಯದ ಸಂಶೋಧಕರು ಅಧ್ಯಯನ ನಡೆಸಿದ್ದು ಅವರು ಕಂಡುಕೊಂಡ ವಿಷಯಗಳೇನೇನು ನೋಡೋಣ.

ಜನರೊಂದಿಗೆ ಬೆರೆಯಿರಿ(Socialize)
ಪ್ರೀತಿಸುವ ಜನರ ನಡುವೆ ಇದ್ದಾಗ ಜನರು ಹೆಚ್ಚು ವರ್ಷ ಬದುಕುತ್ತಾರಂತೆ. ನಿಮ್ಮ ಸುತ್ತಲೂ ಧನಾತ್ಮಕ ಮನಸ್ಥಿತಿ ಇರುವ ಜನರ ಸಂಪರ್ಕ ಇಟ್ಟುಕೊಳ್ಳಿ. ಹೆಚ್ಚು ಹೆಚ್ಚು ಜನರ ನಡುವೆ ಇದ್ದಷ್ಟೂ ಹೆಚ್ಚು ಆರೋಗ್ಯಕರವಾಗಿರುತ್ತದೆ ಮನಸ್ಸು ಹಾಗೂ ದೇಹ. ಒಂಟಿತನ(Loneliness)ದ ಮಾನಸಿಕ ಸಮಸ್ಯೆಗಳು ಕಾಡುವುದಿಲ್ಲ. ಮಾತು, ನಗು, ಹರಟೆಯು ಮಾನಸಿಕ ಆರೋಗ್ಯ ಕಾಪಾಡುತ್ತದೆ. ಈ ಜನರ ಸ್ನೇಹ ಮಾಡುವಾಗ ಅವರು ಸಜ್ಜನರೇ ಆಗಿರಬೇಕು ಎಂಬುದು ಗಮನದಲ್ಲಿರಲಿ.

Tap to resize

Latest Videos

undefined

ಪ್ರತಿ ದಿನ ವ್ಯಾಯಾಮ(Regular exercise)
ಇಂದಿನ ತಲೆಮಾರಿನ ಬಹುತೇಕರು ಲ್ಯಾಪ್ಟಾಪ್ ಮುಂದೆ ಕುಳಿತು ಸಮಯ ಕಳೆಯುತ್ತಾರೆ. ಇದಕ್ಕೆ ಮಕ್ಕಳೂ ಹೊರತಲ್ಲ. ಆದರೆ, ದೇಹಕ್ಕೆ ವ್ಯಾಯಾಮವಿಲ್ಲದಿದ್ದರೆ ಅದು ಹೆಚ್ಚು ವರ್ಷಗಳ ಕಾಲ ನಮಗೆ ಸಾಥ್ ನೀಡುವುದಿಲ್ಲ. ಹೆಚ್ಚು ವರ್ಷ ಆರೋಗ್ಯವಂತರಾಗಿ ಬದುಕಬೇಕು ಎಂದರೆ, ಹೇಗೋ ಸಮಯ ಹೊಂದಿಸಿಕೊಂಡು ವ್ಯಾಯಾಮ, ಯೋಗ, ಪ್ರಾಣಾಯಾಮ, ನೃತ್ಯ, ಕ್ರೀಡೆ- ಇವುಗಳಲ್ಲಿ ಯಾವುದರಲ್ಲಾದರೂ ತೊಡಗಿಸಿಕೊಳ್ಳಲೇಬೇಕು. ಇದರಿಂದ ಹೃದಯ, ಮನಸ್ಸು, ಸ್ನಾಯುಗಳು(muscles), ದೇಹ ಎಲ್ಲವೂ ಫಿಟ್ ಆಗಿರುತ್ತದೆ. ವಾಕಿಂಗ್(Walking) ಕೂಡಾ ಒಳ್ಳೆಯದೇ. 

ತೂಕ(Weight)
ಆರೋಗ್ಯವಂತರಾಗಿರಬೇಕು ಎಂದರೆ ಮೊದಲು ನಿಮ್ಮ ತೂಕದ ಬಗ್ಗೆ ಗಮನ ಹರಿಸಿ. ತೂಕ ಹೆಚ್ಚಳವಾದ್ರೆ ಆರೋಗ್ಯ ಸಮಸ್ಯೆಗಳು ಒಂದರ ಮೇಲೊಂದು ಕಾಡುತ್ತವೆ. ನಿಮ್ಮ ಆಹಾರದ ಮೇಲೆ ಗಮನವಿರಲಿ. ವ್ಯಾಯಾಮ, ಆಹಾರದ ಮೂಲಕ ನಿಮ್ಮ ಎತ್ತರಕ್ಕೆ ತಕ್ಕ ತೂಕ ನಿಭಾಯಿಸಿ.

After Divorce : ವಿಚ್ಛೇದನದ ನಂತ್ರ ಸಂಗಾತಿಯ ನೆನಪು ಕಾಡೋದು ತಪ್ಪಾ?

ಚಟಮುಕ್ತರಾಗಿ
ಹೆಚ್ಚು ವರ್ಷ ಬದುಕುವ ಬಯಕೆ ಇರುವವರು ಯಾರೂ ತಮ್ಮ ಆರೋಗ್ಯವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುವುದಿಲ್ಲ. ಮೊದಲು ಶ್ವಾಸಕೋಶವನ್ನು ನುಜ್ಜುಗುಜ್ಜಾಗಿಸುವ, ಕ್ಯಾನ್ಸರ್ ತರುವ ಸಿಗರೇಟಿ(cigarettes)ನಿಂದ ಬಿಡಿಸಿಕೊಳ್ಳಿ. ಇನ್ನು ಲಿವರ್, ಕಿಡ್ನಿಯನ್ನು ಡ್ಯಾಮೇಜ್ ಮಾಡುವ ಆಲ್ಕೋಹಾಲ್ ಬೇಕಾದರೂ ಏಕೆ? ಉಳಿದಂತೆ ಚಟವೆನಿಸುವ ಯಾವೊಂದೂ ಇಲ್ಲದಿದ್ದರೆ ಬದುಕು ಸುಂದರವಾಗಿರುತ್ತದೆ.

ಆಹಾರಶೈಲಿ(diet)
ಆಹಾರದಲ್ಲಿ ಆರೋಗ್ಯ ತುಂಬಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಿದ್ದೂ ಚೋಟುದ್ದ ನಾಲಿಗೆಗೆ ಬೆಲೆ ಕೊಟ್ಟು ಮಾರುದ್ದ ದೇಹಕ್ಕೆ ಶಿಕ್ಷೆ ನೀಡುವ ಕೆಲಸ ಮಾಡುತ್ತೇವೆ. ಮೊದಲು ಆರೋಗ್ಯಕ್ಕೆ ಉತ್ತಮವಾಗಿರುವ ಸೊಪ್ಪು, ತರಕಾರಿಗಳು, ಹಣ್ಣುಗಳು, ಬೇಳೆ ಕಾಳುಗಳನ್ನು ಆಹಾರದಲ್ಲಿ ಹೆಚ್ಚಿಸಿ, ಜಂಕ್‌ನಿಂದ ಸಾಧ್ಯವಾದಷ್ಟು ದೂರವಾಗಿರಿ. ವಯಸ್ಸಿಗೆ ಸರಿಯಾಗಿ ಆಹಾರ ಪದ್ಧತಿಯನ್ನೂ ಬದಲಿಸಬೇಕು. ಆಗ ಕೊಲೆಸ್ಟೆರಾಲ್, ಬಿಪಿ, ಶುಗರ್‌ನಿಂದ ದೂರವಿರಲು ಸಾಧ್ಯವಾಗುತ್ತದೆ. 

Lip Care: ಚೆಲುವೆಯ ಅಂದದ ಮೊಗಕೆ ತುಟಿಯೂ ಭೂಷಣ

ಕೆಲಸ
ಬೇರೆ ಎಲ್ಲ ಮಾಡಿ ಉದಾಸೀನವಾಗಿ ದಿನ ಕಳೆಯುತ್ತಿದ್ದರೆ ಯಾವುದೇ ಪ್ರಯೋಜನವಿಲ್ಲ. ಮೆದುಳಿಗೆ ಕೆಲಸ ಕೊಡಬೇಕು. ದೇಹಕ್ಕೂ ಕೆಲಸ ಬೇಕು. ಹೀಗಾಗಿ, ಎಷ್ಟೇ ವರ್ಷವಾಗಲಿ ಕೆಲಸ ಮಾಡುತ್ತಲೇ ಇರಿ, ಆಗಷ್ಟೇ ಸಂತೋಷವಾಗಿಯೂ, ಚೈತನ್ಯದಿಂದಲೂ ಇರಲು ಸಾಧ್ಯವಾಗುವುದು. ಸದಾ ಕೆಲಸ ಮಾಡುತ್ತಿರುವವರ ಮೆದುಳು ಇಳಿಗಾಲದಲ್ಲಿಯೂ ಚುರುಕಾಗಿರುತ್ತದೆ. 

ಇವೆಲ್ಲವೂ ನಿಯಮಿತವಾಗಿದ್ದು, ದೈನಂದಿನ ಜೀವನದ ಭಾಗವೇ ಆಗಿದ್ದಾಗ, ಆಯಸ್ಸು ವೃದ್ಧಿಗಾಗಿ ನೀವೇನೋ ಹೆಚ್ಚಿನ ಪ್ರಯತ್ನ ಹಾಕಬೇಕಾಗಿಲ್ಲ. ಆಗ ಇವೆಲ್ಲ ಹೆಚ್ಚಿನ ಪ್ರಯತ್ನ ಎನಿಸುವುದೂ ಇಲ್ಲ. 

click me!