ಬಿಸಿ – ಮಳೆ ಮಧ್ಯೆ ಫಾಸ್ಟ್ ಫುಡ್ ತಿಂದು ಬಾತ್ ರೂಮ್ ಸೇರಿದ್ರೆ ಸುಸ್ತಾಗೋದು ಸಹಜ. ಆದಷ್ಟು ಬೇಗ ಫುಡ್ ಪಾಯಿಸನ್ ನಿಂದ ಹೊರಗೆ ಬರ್ಬೇಕು, ದೇಹಕ್ಕೆ ಶಕ್ತಿಬೇಕು ಅಂದ್ರೆ ಮನೆಯಲ್ಲಿರೋ ಪದಾರ್ಥ ಬಳಸೋದನ್ನು ಮರೆಯಬೇಡಿ.
ವಾತಾವರಣ ಬದಲಾಗಿದೆ. ಬೆಳಿಗ್ಗೆ ಜೋರು ಸೆಖೆ ಇದ್ರೆ ಸಂಜೆಯಾಗ್ತಿದ್ದಂತೆ ಮೋಡ, ಮಳೆ ಬೀಳುತ್ತದೆ. ಒಂದು ದಿನ ರಣ ಬಿಸಿಲು, ಮತ್ತೊಂದು ದಿನ ಮೋಡ. ಇನ್ನೊಂದು ದಿನ ಧಾರಾಕಾರ ಮಳೆ. ಈ ವಾತಾವರಣದಲ್ಲಿ ಆಗುವ ಬದಲಾವಣೆ ನಮ್ಮ ಆಹಾರದ ಮೇಲೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಿಸಿಲು ಹಾಗೂ ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಬೇಸಿಗೆಯಲ್ಲಿ ಆಹಾರ ವಿಷವಾಗೋದು ಹೆಚ್ಚು.
ಸಾಮಾನ್ಯವಾಗಿ ಈ ವಾತಾವರಣದಲ್ಲಿ ಬಾಯಿ ಚಪಲ ಹೆಚ್ಚು. ಜನರು ಫಾಸ್ಟ್ ಫುಡ್ (Fast Food), ಮಸಾಲೆ ಆಹಾರವನ್ನು ತಿನ್ನಲು ಇಚ್ಛಿಸುತ್ತಾರೆ. ಬೀದಿ ಬದಿಯಲ್ಲಿ ಪಾನಿಪುರಿ (Panipuri), ಗೋಬಿ ಮಂಚೂರಿ ತಿನ್ನುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ನೀವೂ ಬಾಯಿಚಪಲಕ್ಕೆ ಬಿದ್ದು, ಇಂಥ ಆಹಾರ ಸೇವನೆ ಮಾಡ್ತಿದ್ದರೆ ಎಚ್ಚರ. ಬೀದಿ ಬದಿ, ಹೊಟೇಲ್ ಆಹಾರ (Food) ಮಾತ್ರವಲ್ಲ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವಾಗ್ಲೂ ನೀವು ಎಚ್ಚರವಾಗಿರಬೇಕು. ಒಂದ್ವೇಳೆ ಫುಡ್ ಪಾಯಿಸನ್ ಆಗಿದೆ ಎಂದಾದ್ರೆ ನೀವು ಮನೆ ಮದ್ದನ್ನು ಬಳಸುವ ಮೂಲಕ ನಿಮ್ಮ ಆರೋಗ್ಯವನ್ನು ಮೊದಲ ಸ್ಥಿತಿಗೆ ತರಬಹುದು. ನಾವಿಂದು ಫುಡ್ ಪಾಯಿಸನ್ ಗೆ ಮನೆ ಮದ್ದನ್ನು ಹೇಳ್ತೇವೆ.
ವೋಟ್ ಮಾಡಿ, ಉಚಿತವಾಗಿ ತಿಂಡಿ ತಿನ್ನಿ, ಫ್ರೀ ಸಿನಿಮಾ ಟಿಕೆಟ್ ಪಡೆಯಿರಿ
ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಕೊರತೆಯು ಆಹಾರ ವಿಷಕ್ಕೆ ಕಾರಣವಾಗುತ್ತದೆ. ಆಹಾರ ವಿಷವಾದಾಗ ನಿರ್ಜಲೀಕರಣ, ಹೊಟ್ಟೆ ನೋವು, ಹೊಟ್ಟೆ ಉರಿ, ಹೊಟ್ಟೆ ಉಬ್ಬರ ಶುರುವಾಗುತ್ತದೆ. ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಟ್ಟೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಫುಡ್ ಪಾಯಿಸನ್ ಗಂಭೀರವಾದಾಗ, ವಾಂತಿ, ಬೇಧಿ, ತಲೆಸುತ್ತು, ಸುಸ್ತು ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ನಿಮಗೂ ಫುಡ್ ಪಾಯಿಸನ್ ಆಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ದೇಹದಲ್ಲಿ ದ್ರವಗಳ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಫುಡ್ ಪಾಯಿಸನ್ ಆದಾಗ ದ್ರವ ಸೇವನೆಯನ್ನು ಹೆಚ್ಚಿಸಬೇಕು. ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಲ್ಲಿ ಎಲೆಕ್ಟ್ರೋಲೈಟ್ ಇರುತ್ತವೆ. ಎಲೆಕ್ಟ್ರೋಲೈಟ್ ಕಡಿಮೆಯಾದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ. ಹಾಗಾಗಿ ನೀವು ಅದನ್ನು ಹೋಗಲಾಡಿಸಲು ಹೆಚ್ಚು ದ್ರವದ ಆಹಾರ ಸೇವನೆ ಮಾಡಬೇಕು.
ಬಾಳೆ ಹಣ್ಣು – ಮೊಸರು : ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೆಚ್ಚಿನ ಪ್ರಮಾದಲ್ಲಿ ಇರುತ್ತದೆ. ದೇಹದಲ್ಲಿ ದ್ರವದ ಪ್ರಮಾಣ ಹೆಚ್ಚಿಸಲು ಇದು ನೆರವಾಗುತ್ತದೆ. ಹಾಗಾಗಿ ನೀವು ಫುಡ್ ಪಾಯಿಸನ್ ಆದ ಸಂದರ್ಭದಲ್ಲಿ ಹಗುರವಾದ ಹಾಗೂ ಸುಲಭವಾಗು ಜೀರ್ಣವಾಗುವ ಆಹಾರ ಸೇವನೆ ಮಾಡಬೇಕು. ಬಾಳೆ ಹಣ್ಣಿನ ಜೊತೆ ಮೊಸರನ್ನೂ ತಿನ್ನಬೇಕು. ಮೊಸರಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ದೇಹದ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ.
Healthy Food : ತೂಕ ಇಳಿಸ್ಬೇಕೆಂದ್ರೆ ಇದನ್ನು ತಪ್ಪದೆ ತಿನ್ನಿ
ಶುಂಠಿ ಟೀ ಜೊತೆ ಜೇನುತುಪ್ಪ : ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಶುಂಠಿ ವಾಯು ಮತ್ತು ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ನೀರಿನಲ್ಲಿ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಬೇಕು. ನಂತ್ರ ಅದಕ್ಕೆ ಅರ್ಧ ಟೀ ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ.
ಆಪಲ್ ವಿನೆಗರ್ : ಫುಡ್ ಪಾಯಿಸನ್ ಆದಾಗ ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಒಂದು ಚಮಚ ವಿನೆಗರ್ ಸೇರಿಸಿ ಕುಡಿಯಿರಿ. ಈ ಪರಿಹಾರವನ್ನು ದಿನಕ್ಕೆ ಎರಡು ಬಾರಿ ಮಾಡಬೇಕು. ಇದು ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುತ್ತದೆ. ದೇಹವು ಸುಲಭವಾಗಿ ಡಿಟಾಕ್ಸ್ ಆಗಲು ನೆರವಾಗುತ್ತದೆ.
ನಿಂಬೆ ಪಾನಕ : ನಿಂಬೆ ಪಾನಕ ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಆಹಾರ ವಿಷವಾಗಿ ತೊಂದ್ರೆಯಾಗ್ತಿದ್ದರೆ ಅರ್ಧ ಗ್ಲಾಸ್ ನೀರಿಗೆ ಒಂದು ನಿಂಬೆ ಹಣ್ಣಿನ ರಸ, ಚಿಟಿಕೆ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಇದು ದೇಹಕ್ಕೆ ಅಗತ್ಯವಿರುವ ನೀರನ್ನು ನೀಡುವ ಜೊತೆಗೆ ದೇಹಕ್ಕೆ ಶಕ್ತಿ ನೀಡುತ್ತದೆ. ಸೋಂಕನ್ನು ಕಡಿಮೆ ಮಾಡಿ, ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ.
ಪುದೀನಾ ನೀರು : ಪುದೀನಾ ಎಲೆಗಳನ್ನು ನೀರಿಗೆ ಹಾಕಿ ಕುದಿಸಬೇಕು. ನೀರು ಅರ್ಥವಾದ್ಮೇಲೆ ಅದನ್ನು ಸೋಸಿ ಕುಡಿಯಬೇಕು. ಮಾರುಕಟ್ಟೆಯಲ್ಲಿ ಸಿಗುವ ಪುದೀನಾ ರಸವನ್ನು ಕೂಡ ನೀವು ಔಷಧಿಯಾಗಿ ಬಳಸಬಹುದು. ಇದು ಹೊಟ್ಟೆಯನ್ನು ತಂಪು ಮಾಡುತ್ತದೆ.