ಆರೋಗ್ಯ ಹಾಳು ಮಾಡೋದೊಂದೆ ಅಲ್ಲ ಸುಧಾರಣೆ ಕೆಲಸ ಕೂಡ ಮಾಡುತ್ತೆ ಒತ್ತಡ!

Published : Sep 18, 2023, 04:06 PM IST
ಆರೋಗ್ಯ ಹಾಳು ಮಾಡೋದೊಂದೆ ಅಲ್ಲ ಸುಧಾರಣೆ ಕೆಲಸ ಕೂಡ ಮಾಡುತ್ತೆ ಒತ್ತಡ!

ಸಾರಾಂಶ

ಒತ್ತಡ ಎಂದಾಗ ಅದು ಆರೋಗ್ಯಕ್ಕೆ ಕೆಟ್ಟದ್ದು ಎಂದೇ ನಾವು ಭಾವಿಸ್ತೇವೆ. ಇದು ತಪ್ಪು. ಒತ್ತಡದಲ್ಲೂ ಎರಡು ವಿಧವಿದೆ. ಒಂದು ಒತ್ತಡ ಉತ್ಪಾದನೆ ನಮ್ಮ ಆರೋಗ್ಯ ಸುಧಾರಿಸುವ ಕೆಲಸ ಮಾಡುತ್ತೆ. ಅದ್ಯಾವುದು ಗೊತ್ತಾ?  

ಒತ್ತಡ  ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಂತ ನಾವು ಅನೇಕ ಬಾರಿ ಹೇಳ್ತಿರುತ್ತೇವೆ. ಒತ್ತಡ ಕಡಿಮೆ ಮಾಡಲು ಏನೆಲ್ಲ ಪ್ರಯತ್ನಪಡಬೇಕು, ಒತ್ತಡ ನಿಯಂತ್ರಣ ಮಾಡೋದು ಹೇಗೆ, ಒತ್ತಡಕಾಡದಂತೆ ಏನೆಲ್ಲ ಮುಂಜಾಗ್ರತೆ ವಹಿಸಬೇಕು ಹೀಗೆ ಒತ್ತಡಕ್ಕೆ ಸಂಬಂಧಿಸಿದ ನಾನಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿರುತ್ತದೆ. ಆದ್ರೆ ಒತ್ತಡ ಆರೋಗ್ಯವನ್ನು ಸದಾ ಹಾಳು ಮಾಡೋದಿಲ್ಲ. ಕೆಲ ಒತ್ತಡ ಆರೋಗ್ಯಕ್ಕೆ ಒಳ್ಳೆಯದು.  ಉತ್ತಮ ಒತ್ತಡ ಯಾವುದು ಮತ್ತು ನಿಮ್ಮ ಆರೋಗ್ಯದ ಮೇಲೆ ಅದರ ಪ್ರಯೋಜನಗಳೇನು ಎಂಬುದನ್ನು ನಿಮಗೆ ತಿಳಿಸ್ತೇವೆ.

ನಿಮ್ಮ ದೇಹಕ್ಕೆ ಒಳ್ಳೆಯದು ಮಾಡಬಲ್ಲ ಒತ್ತಡ (Stress) ನಿಮಗೆ ಯಾವುದೇ ಸ್ಥಿತಿಯಲ್ಲಿ ಕಾಡಬಹುದು.  ನೀವು ತುಂಬಾ ಸಂತೋಷ (Happiness)ವಾಗಿರುವಾಗ ಅಥವಾ ನೀವು ಯಾವುದೋ ಒಂದು ವಿಷಯದ ಬಗ್ಗೆ ತುಂಬಾ ಉತ್ಸುಕರಾಗಿರುವಾಗ ಅಥವಾ ನೀವು ಏನನ್ನಾದರೂ ಮಾಡಲು ಹೊರಟಿರುವಾಗ ನಿಮಗೆ ಈ ಒತ್ತಡ ಸಂಭವಿಸಬಹುದು.

ಮಲಗೋ ಮುನ್ನ ನೀವು ಮಾಡೋ ಈ ತಪ್ಪು ನಿಮ್ಮನ್ನ ಝೋಂಬಿಯನ್ನಾಗಿಸುತ್ತೆ!

ಉತ್ತಮ ಒತ್ತಡ ಎಂದರೇನು? : ಉತ್ತಮ ಒತ್ತಡ, ಸಾಮಾನ್ಯವಾಗಿ ಯುಸ್ಟ್ರೆಸ್ (Eustress) ಎಂದು ಕರೆಯಲ್ಪಡುವ ಒತ್ತಡವಾಗಿದೆ. ಈ ಒತ್ತಡ ಧನಾತ್ಮಕ ಅಥವಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಈ ಒತ್ತಡವು ವ್ಯಕ್ತಿಗೆ ಒಳ್ಳೆಯದನ್ನು ಮಾಡಲು ಪ್ರೋತ್ಸಾಹಿಸುತ್ತದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡುತ್ತದೆ.  
ಸಂಕಟ ಅಥವಾ ನೋವುಂಟು ಮಾಡುವ ಸಂದರ್ಭದಲ್ಲಿ ಬರುವ ಒತ್ತಡವು ಒಳ್ಳೆಯದಲ್ಲ. ಹೆಚ್ಚಾಗಿ ರೋಮಾಂಚನಕಾರಿ ಮತ್ತು ಸಂತೋಷವಾಗಿರುವಾಗ ಬರುವ ಒತ್ತಡ ಆರೋಗ್ಯಕ್ಕೆ ಒಳ್ಳೆಯದು. ಈ ಸಂದರ್ಭದಲ್ಲಿ ಯುಸ್ಟ್ರಸ್ ಉತ್ಪಾದನೆಯಾಗುತ್ತದೆ.  ವೈಯಕ್ತಿಕ ಸಹಿಷ್ಣುತೆ, ಅನುಭವ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತೆ  ವ್ಯಕ್ತಿಯಿಂದ ವ್ಯಕ್ತಿಗೆ ಯುಸ್ಟ್ರಸ್ ಬದಲಾಗುವುದನ್ನು ನಾವು ಗಮನಿಸಬಹುದು. 

ಉತ್ತಮ ಒತ್ತಡದಿಂದ ಆಗುವ ಪ್ರಯೋಜನಗಳು ಏನೇನು? : ಕಾರ್ಯಕ್ಷಮತೆಯಲ್ಲಿ ಹೆಚ್ಚಳ : ಯುಸ್ಟ್ರೆಸ್ ವ್ಯಕ್ತಿ ಒಳ್ಳೆಯದನ್ನು ಮಾಡಲು, ಗುರಿ ಸಾಧಿಸಲು, ತನ್ನ ಕೆಲಸ ತಾನು ಮಾಡಲು ಪ್ರೇರೇಪಿಸುತ್ತದೆ. ಇದು ಕೆಲಸ, ಶಿಕ್ಷಣ ಅಥವಾ ವೈಯಕ್ತಿಕ ಚಟುವಟಿಕೆಗಳಂತಹ ಜೀವನದ ವಿವಿಧ ಅಂಶಗಳಲ್ಲಿ ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯವಾದ ಶಕ್ತಿ ಮತ್ತು ಪ್ರೇರಣೆಯನ್ನು ಒದಗಿಸುತ್ತದೆ. ನಮ್ಮ ದೇಹದಲ್ಲಿ ಒಳ್ಳೆಯ ಒತ್ತಡ ಹೆಚ್ಚೆಚ್ಚು ಉತ್ಪಾದನೆಯಾದ್ರೆ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ಸೆಕ್ಸ್ ಲೈಫ್‌ ತುಂಬಾ ಬೋರಿಂಗ್ ಆಗಿದ್ಯಾ ? ಈ ಟಿಪ್ಸ್ ಫಾಲೋ ಮಾಡಿ ಚಾರ್ಮ್ ಮರಳಿ ತನ್ನಿ

ನಿಮ್ಮನ್ನು ಜಾಗ್ರತಗೊಳಿಸಲು ಸಹಕಾರಿ :  ಒಳ್ಳೆಯ ಒತ್ತಡ ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ಜಾಗ್ರತಗೊಳಿಸುತ್ತದೆ. ಮೊದಲ ಬಾರಿ ಡೇಟಿಂಗ್‌ಗೆ ಹೋಗುತ್ತಿದ್ದರೆ, ಈ ಬಗ್ಗೆ  ನೀವು ನರ್ವಸ್ ಆಗಿದ್ದರೆ  ಆ ಸಮಯದಲ್ಲಿ ನೀವು ಯುಸ್ಟ್ರೆಸ್ ಸ್ಥಿತಿಯಲ್ಲಿರುತ್ತೀರಿ. ಕ್ರೀಡಾಕೂಟದ ಮೊದಲು ಸ್ವಲ್ಪ ಒತ್ತಡವು ನಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ನಮ್ಮ ಜಾಗರೂಕತೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ.

ವೈಯಕ್ತಿಕ ಅಭಿವೃದ್ಧಿಗೆ ಒಳ್ಳೆಯದು : ಯುಸ್ಟ್ರೆಸ್ ವೈಯಕ್ತಿಕ ಬೆಳವಣಿಗೆ ಮತ್ತು ಸ್ವಯಂ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಹೊಸ ಸವಾಲುಗಳನ್ನು ಎದುರಿಸಲು ನಿಮ್ಮನ್ನು ಸಿದ್ಧಪಡಿಸುತ್ತದೆ. ನಿಮ್ಮ ಆರಾಮ ವಲಯದಿಂದ ಹೊರಬರಲು ನಿಮಗೆ ಇದು ಸಹಾಯ ಮಾಡುತ್ತೆ. ಹೊಸ ಕೌಶಲ್ಯಗಳನ್ನು ಕಲಿಯಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಇದು ಸಹಕಾರಿ. ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನೂ ಇದು ಮಾಡುತ್ತದೆ. 

ದೈಹಿಕ ಆರೋಗ್ಯ  : ಯುಸ್ಟ್ರೆಸ್ ಶಾರೀರಿಕ ಪ್ರಯೋಜನಗಳನ್ನು ಹೊಂದಿದೆ. ಯುಸ್ಟ್ರೆಸ್ ಹೆಚ್ಚಳದಿಂದ  ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ತಾತ್ಕಾಲಿಕ ಹೆಚ್ಚಳ ಕಂಡು ಬರುತ್ತದೆ. ಎಂಡಾರ್ಫಿನ್‌ಗಳಂತಹ ಉತ್ತಮ ಹಾರ್ಮೋನ್‌ಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ನೀವು ಸಂತೋಷವಾಗಿದ್ದ ಕೆಟ್ಟ ಒತ್ತಡ ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಾರ್ಟ್ ಪ್ರಾಬ್ಲಮ್‌ಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!