ಆಲ್ಕೋಹಾಲ್ ಸೇವನೆ ಆರಂಭದಲ್ಲಿ ಎಂಜಾಯ್ ಮೆಂಟ್ ಎನಿಸಿದರೂ ಬಳಿಕ ದೇಹಕ್ಕೆ ಅನಿವಾರ್ಯ ಎನ್ನುವಂತಾಗುತ್ತದೆ. ಬಳಿಕ ನಿಧಾನವಾಗಿ ದೇಹದ ಬೇರೆ ಬೇರೆ ಅಂಗಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಮದ್ಯಪಾನದ ಪ್ರಭಾವದಿಂದ ದೇಹದ ಹಲವು ಅಂಗಗಳಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಆಗ ಎಚ್ಚೆತ್ತುಕೊಂಡು ಮದ್ಯಪಾನ ತ್ಯಜಿಸುವುದು ಉತ್ತಮ.
ಮದ್ಯಪಾನದಿಂದ ಆರೋಗ್ಯದ ಮೇಲೆ ಹಂತಹಂತವಾಗಿ ಪರಿಣಾಮ ಉಂಟಾಗುತ್ತದೆ. ಮುಂದೊಂದು ದಿನ ಗಂಭೀರವಾದ ಕಾಯಿಲೆ ಅಥವಾ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮದ್ಯಪಾನವನ್ನು ಮೊದಲೆಲ್ಲ ಸೀಮಿತ ಜನರಷ್ಟೇ ಮಾಡುತ್ತಿದ್ದರು. ಈಗ ಎಂಜಾಯ್ ಮೆಂಟ್ ಜತೆಗೆ ಗುರುತಿಸಿಕೊಂಡಿರುವ ಪರಿಣಾಮ, ಕೌಟುಂಬಿಕ ವಾತಾವರಣದಲ್ಲೇ ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಯಾವುದೇ ಖುಷಿ ಸಂದರ್ಭಕ್ಕೆ ಮದ್ಯಪಾನ ಕಾಮನ್ ಎನ್ನುವಂತಾಗಿದೆ. ಮಹಿಳೆಯರು ಸಹ ಮದ್ಯಪಾನದಲ್ಲಿ ಇಂದು ಹಿಂದೆ ಬಿದ್ದಿಲ್ಲ. ಅಷ್ಟೇ ಏಕೆ? ಮಕ್ಕಳಿಗೂ ಅಲ್ಪಸ್ವಲ್ಪ ನೀಡುವವರಿದ್ದಾರೆ. ಯಾವುದೇ ರೀತಿಯ ಮದ್ಯಪಾನವಾದರೂ ಅದರ ಪರಿಣಾಮ ದೇಹದ ಮೇಲೆ ಇರುವಂತದ್ದೇ. ಕೆಲವರು ಕೆಲ ಸಂದರ್ಭಗಳಲ್ಲಿ ಸೇವನೆ ಮಾಡಿದರೆ, ಕೆಲವರು ದಿನವೂ ಸೇವಿಸುತ್ತಾರೆ. ಮದ್ಯಪಾನವನ್ನು ದಿನವೂ ಸೇವಿಸುವವರಲ್ಲಿ ಅಥವಾ ಅಪರೂಪಕ್ಕೆ ಸೇವಿಸುವವರಲ್ಲೂ ದೇಹದ ಮೇಲೆ ಪರಿಣಾಮವುಂಟಾದಾಗ ಕೆಲವು ಲಕ್ಷಣಗಳು ಗೋಚರಿಸುತ್ತವೆ. ತಜ್ಞರ ಪ್ರಕಾರ, ಮದ್ಯಪಾನದಿಂದ ಲಿವರ್ ಜತೆಗೆ ಇತರ ಅಂಗಗಳ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ. ದೇಹದಲ್ಲಿ ಕೆಲ ರೀತಿಯ ಪ್ರಭಾವಗಳು ಕಂಡುಬಂದಾಗ ಅದು ಮದ್ಯಪಾನವನ್ನು ತ್ಯಜಿಸುವ ಸಮಯ ಎಂದು ಅರಿತುಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸಮಸ್ಯೆಗಳು ಎದುರಾಗಬಹುದು.
• ಹೊಟ್ಟೆ ಉಬ್ಬರ (Bloating)
ನಿಮಗೆ ಪ್ರತಿದಿನವೂ ಹೊಟ್ಟೆಯುಬ್ಬರ ಉಂಟಾಗುತ್ತಿದೆ ಎಂದಾದರೆ ಅದಕ್ಕೆ ಮದ್ಯಪಾನ (Alcohol Drinking) ಪ್ರಮುಖ ಕಾರಣವಾಗಿರಬಹುದು. ಏಕೆಂದರೆ, ಮದ್ಯಪಾನದಿಂದ ಜೀರ್ಣಕ್ರಿಯೆ (Digestive System) ಮೇಲೆ ನಕಾರಾತ್ಮಕ (Nagetive) ಪರಿಣಾಮವುಂಟಾಗುತ್ತದೆ. ಹೊಟ್ಟೆಯಲ್ಲಿರುವ ಆರೋಗ್ಯವಂತ (Healthy) ಬ್ಯಾಕ್ಟೀರಿಯಾ ಹಾನಿಗೆ ಒಳಗಾಗುತ್ತವೆ.
Health Tips: ನೆಮ್ಮದಿಯಾಗಿ ನಿದ್ರೆ ಮಾಡ್ಬೇಕಾ? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಮಾಲ್ಟ್ ಕುಡೀರಿ
• ಅನಾರೋಗ್ಯದ (Unhealthy) ಭಾವನೆ
ದಿನವೂ ಬೆಳಗ್ಗೆ ಎದ್ದಾಗ ಅನಾರೋಗ್ಯದ ಭಾವನೆ ಉಂಟಾದರೆ, ಅದು ಮದ್ಯಪಾನದಿಂದಲೇ ಆಗಿರಬಹುದು. ಮದ್ಯಪಾನ ರೋಗ ನಿರೋಧಕ ಶಕ್ತಿಯ ಮೇಲೆ ಭಾರೀ ಪ್ರಭಾವ (Effect) ಬೀರುತ್ತದೆ. ಪದೇ ಪದೆ ಆಲ್ಕೋಹಾಲ್ ಸೇವನೆ ಮಾಡುವುದರಿಂದ ನಿಮ್ಮ ರಕ್ತದಲ್ಲಿ (Blood) ರೋಗದ ವಿರುದ್ಧ ಹೋರಾಡುವ ಕೋಶಗಳ ಸಂಖ್ಯೆ ಕಡಿಮೆ ಆಗುವುದು ಅಧ್ಯಯನಗಳಿಂದ (Study) ದೃಢಪಟ್ಟಿರುವ ಸಂಗತಿ.
• ನಿದ್ರೆಗೆ ತೊಂದರೆ (Sleep Disorder)
ಮದ್ಯಪಾನ ಮಾಡದಿದ್ದರೆ ನಿದ್ರೆ ಬರುವುದಿಲ್ಲ ಎಂದು ಹೇಳುವವರಿದ್ದಾರೆ. ಆದರೆ, ಮದ್ಯಪಾನದಿಂದಲೂ ನಿದ್ರೆಗೆ ಸಮಸ್ಯೆ ಉಂಟಾಗಬಹುದು. ದೀರ್ಘ ನಿದ್ರೆಗೆ ಮದ್ಯಪಾನ ತೊಂದರೆ ಒಡ್ಡುತ್ತದೆ. ನಿಮಗೆ ದಿನದಿನವೂ ನಿದ್ರೆಗೆ ಸಮಸ್ಯೆ ಉಂಟಾಗುತ್ತಿದ್ದರೆ ಇದು ಆಲ್ಕೋಹಾಲ್ ತ್ಯಜಿಸುವ (Stop) ಸಮಯ ಎಂದು ಅರಿಯಬಹುದು.
• ಚರ್ಮದ ಸಮಸ್ಯೆ (Skin Dosorder)
ಆರೋಗ್ಯ ತಜ್ಞರ ಪ್ರಕಾರ, ಆಲ್ಕೋಹಾಲ್ ನಿಂದ ಚರ್ಮದ ಮೇಲೆ ಪರಿಣಾಮ ಗ್ಯಾರೆಂಟಿ. ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಅಧಿಕ. ಹೆಚ್ಚು ಮದ್ಯ ಸೇವನೆ ಮಾಡುವುದರಿಂದ ಚರ್ಮ ಹೆಚ್ಚು ಸಂವೇದನಾಶೀಲವಾಗುತ್ತದೆ. ಆಗ ತುರಿಕೆಯಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ತ್ವಚೆ ಶುಷ್ಕ (Dry) ವಾಗಬಹುದು. ಚರ್ಮದ ಸಮಸ್ಯೆ ಗೋಚರಿಸಿದರೆ ಮದ್ಯಪಾನವನ್ನು ಬಿಡುವುದು ಉತ್ತಮ.
• ದಂತದಲ್ಲಿ ಸಮಸ್ಯೆ (Tooth)
ಹೆಚ್ಚು ಮದ್ಯದ ಸೇವನೆಯಿಂದ ಹಲ್ಲುಗಳು ಮತ್ತು ಒಸಡಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್ ನಲ್ಲಿರುವ ಅಂಶ ಹಲ್ಲುಗಳ ಎನಾಮಲ್ ಮೇಲೆ ದಾಳಿ ಮಾಡಿ ಅದನ್ನು ನಷ್ಟಗೊಳಿಸುತ್ತದೆ. ಇದರಿಂದ ಹಲ್ಲು ಮತ್ತು ಒಸಡುಗಳು ದುರ್ಬಲವಾಗುತ್ತವೆ.
Health Tips : ಸಾತ್ವಿಕ ಭೋಜನ ಆರೋಗ್ಯದ ಮೇಲೆ ಮಾಡುತ್ತೆ ಮ್ಯಾಜಿಕ್!
• ಆಲ್ಕೋಹಾಲಿಕ್ ಪ್ಯಾಂಕ್ರಿಯಾಟಿಟಿಸ್ (Pancreatitis)
ಸಾಮಾನ್ಯವಾಗಿ 40ರ ವಯೋಮಾನದ ಪುರುಷರಿಗೆ ಆಲ್ಕೋಹಾಲಿಕ್ ಪ್ಯಾಂಕ್ರಿಯಾಟಿಟಿಸ್ ಕಂಡುಬರುತ್ತದೆ. ಇದರ ಆರಂಭಿಕ ಹಂತವೆಂದರೆ. ವಾಂತಿ, ಹೊಟ್ಟೆನೋವು. ಸಣ್ಣ ಪ್ರಮಾಣದ ಹಾನಿಯಾಗಿದ್ದರೆ ಹೊಟ್ಟೆನೋವು ಕೇವಲ 2-3 ದಿನಗಳ ಕಾಲ ಇರಬಹುದು. ಪ್ಯಾಂಕ್ರಿಯಾಸ್ ಮೇಲೆ ಪರಿಣಾಮವುಂಟಾದರೆ ಬೇರೆ ಬೇರೆ ರೀತಿಯಲ್ಲಿ ತೀವ್ರ ಸಮಸ್ಯೆ ಆಗುತ್ತದೆ. ಒಂದೊಮ್ಮೆ ಪ್ಯಾಂಕ್ರಿಯಾಸ್ ಮೇಲೆ ಪರಿಣಾಮವಾದರೆ ಕಟ್ಟುನಿಟ್ಟಾದ ಜೀವನಶೈಲಿ (Lifestyle) ಅನುಸರಿಸಿದರೂ ಸುಧಾರಿಸಿಕೊಳ್ಳಲು 5-6 ವರ್ಷಗಳ ಸಮಯ ಬೇಕಾಗುತ್ತದೆ.