Health Tips : ಅರೆ ನಿದ್ರೆಯ ಕಾರಣಕ್ಕೆ ಕೆಟ್ಟ ವಿಚಾರ ಬರುತ್ತೆ ಗೊತ್ತಾ?

By Suvarna News  |  First Published Mar 20, 2023, 5:28 PM IST

ನಿದ್ರೆ ಮಾಡಿಲ್ಲವೆಂದ್ರೆ ಕಾಡುವ ಸಮಸ್ಯೆ ಒಂದೆರಡಲ್ಲ.  ನಿದ್ರೆ  ಹಾಗೂ ಒತ್ತಡದ ಮಧ್ಯೆ ಸಂಬಂಧವಿದೆ. ನಿದ್ರೆ ಬಂದಿಲ್ಲವೆಂದ್ರೂ ಒತ್ತಡ ಕಾಡುತ್ತದೆ. ಒತ್ತಡವಿದ್ರೆ ನಿದ್ರೆ ಸಮಸ್ಯೆ ಕಾಡುತ್ತದೆ. ಇವೆರಡರಿಂದ ಮುಕ್ತಿಪಡೆಯೋದು ಚಾಲೆಂಜಿಂಗ್. 
 


ಬೆಳಗ್ಗೆಯಿಂದ ಸಂಜೆಯತನಕ ಬಿಡುವಿಲ್ಲದ ಕೆಲಸ, ಒತ್ತಡ, ಟೆನ್ಶನ್ ಗಳ ಮಧ್ಯೆ ಜನರು ತಮಗರಿವಿಲ್ಲದೆಯೇ ಖಿನ್ನತೆಗೆ ಒಳಗಾಗುತ್ತಾರೆ. ಹೆಚ್ಚಿನ ಜನರಿಗೆ ಒತ್ತಡದ ಕಾರಣದಿಂದಾಗಿ ನಿದ್ರೆಯೂ ಸರಿಯಾಗಿ ಬರುವುದಿಲ್ಲ. ದಿನವಿಡೀ ಕೆಲಸ ಮಾಡಿ ಶರೀರ ದಣಿದಿದ್ದರೂ ಕೂಡ ರಾತ್ರಿ ಚೆನ್ನಾಗಿ ನಿದ್ದೆ ಮಾಡದೇ ಇರುವವರು ಎಷ್ಟೋ ಮಂದಿಯಿದ್ದಾರೆ. ಶರೀರ ದಣಿದಿದ್ದರೂ ಮನಸ್ಸು, ಮೆದುಳು ತಮ್ಮ ಕೆಲಸವನ್ನು ನಿರ್ವಹಿಸುತ್ತಿರುತ್ತದೆ. ಕಣ್ಮುಚ್ಚಿ ಮಲಗಿದರೂ ಯಾವುದೋ ಕೆಟ್ಟ ವಿಚಾರಗಳು ನೆಮ್ಮದಿಯ ನಿದ್ದೆಗೆ ಅವಕಾಶ ಕೊಡುವುದಿಲ್ಲ. 

ಚಿಂತೆಯ ಕಾರಣದಿಂದ ಹಲವರು ನಿದ್ರೆ (Sleep) ಮಾಡದೇ ಇದ್ದರೆ ಇನ್ಕೆಲವರು ಎಷ್ಟೇ ಚಿಂತೆಗಳಿದ್ದರೂ ಕೂಡ ಹಾಸಿಗೆ (Bed)ಯ ಮೇಲೆ ಮಲಗಿದಾಕ್ಷಣ ನಿದ್ರೆಗೆ ಜಾರಿಬಿಡುತ್ತಾರೆ. ಇಂತಹ ಸ್ಥಿತಿ ಕೂಡ ಗಂಭೀರವೇ ಆಗಿದೆ. ಚೆನ್ನಾಗಿ ನಿದ್ರೆ ಮಾಡಿದ ಮೇಲೆಯೂ ನಿದ್ರಾಹೀನತೆ (Insomnia)ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ‘ರೇಸಿಂಗ್ ಥಾಟ್ಸ್’ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಜನರು ಕಣ್ಣುಮುಚ್ಚಿಯೂ ಎಚ್ಚರವಾಗಿರ್ತಾರೆ. ಚಿಕ್ಕ ಮಕ್ಕಳು ಕೂಡ ಹಗಲು ಹೊತ್ತಿನಲ್ಲಿ ಟಿವಿ ಅಥವಾ ಮೊಬೈಲ್ ನಲ್ಲಿ ನೋಡಿದ ಚಿತ್ರಗಳನ್ನೇ ನೆನಪಿಸಿಕೊಂಡು ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆಮಾಡದೇ ಇರುವುದನ್ನು ನಾವು ಎಷ್ಟೋ ಬಾರಿ ನೋಡಿದ್ದೇವೆ. ಇಂತಹ ಸ್ಥಿತಿಯಲ್ಲಿ ಮಕ್ಕಳು ಕಣ್ಮುಚ್ಚಿಕೊಂಡಿದ್ದರೂ ಅವರ ಮೆದುಳು ಕಾರ್ಯಪ್ರವೃತ್ತವಾಗಿರುತ್ತೆ. ಪ್ರತಿಯೊಬ್ಬ ಮನುಷ್ಯನಿಗೂ ಎಂಟು ಗಂಟೆಗಳ ನಿದ್ರೆ ಬೇಕೇ ಬೇಕು. ಹಾಗಾಗಿ ಚೆನ್ನಾಗಿ ನಿದ್ರೆ ಮಾಡಲು ಮತ್ತು ಮನಸ್ಸಿನ ಹೊಯ್ದಾಟಗಳಿಗೆ ಪೂರ್ಣವಿರಾಮ ನೀಡಲು ಬೇಕಾದ ಉಪಾಯಗಳನ್ನು, ಟ್ರಿಕ್ ಗಳನ್ನು ನಾವೇ ತಿಳಿದುಕೊಳ್ಳಬೇಕಿದೆ.

Tap to resize

Latest Videos

CORONA VIRUS: ಕೊರೋನಾ ತಡೆಗೆ ಆಹಾರ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ನಿದ್ರಾಹೀನತೆ ಮತ್ತು ರೇಸಿಂಗ್ ಥಾಟ್ಸ್ ನ ಲಕ್ಷಣ : ರೇಸಿಂಗ್ ಥಾಟ್ಸ್ ಅಥವಾ ರಾತ್ರಿಯ ಸಮಯದಲ್ಲಿ ಬರುವ ಕೆಟ್ಟ ಆಲೋಚನೆಗಳಿಂದ ಬೇಸತ್ತಿರುವವರು ಹಲವು ಮಂದಿಯಿದ್ದಾರೆ. ರಾತ್ರಿ ಕೋಣೆಯಲ್ಲಿ ಸಂಪೂರ್ಣ ಕತ್ತಲು ಆವರಿಸಿದಾಗಲೂ ಅವರಿಗೆ ಒಳ್ಳೆಯ ನಿದ್ದೆಮಾಡಲು ಸಾಧ್ಯವಾಗುವುದಿಲ್ಲ. ಅವರ ಮನಸ್ಸು ಯೋಚನೆಯೆಂಬ ಸುಳಿಯಲ್ಲಿ ಮುಳುಗಿಹೋಗಿರುತ್ತದೆ. ಹಾಸಿಗೆಯ ಮೇಲೆ ಮಲಗಿದ ಸ್ವಲ್ಪ ಹೊತ್ತಲ್ಲೇ ಅವರ ಮನಸ್ಸು ಚಂಚಲವಾಗುತ್ತೆ. ನಿದ್ರೆ ಬರದೇ ಕೆಲವರು ಮೊಬೈಲ್ ಗಳ ಮೊರೆಹೋಗುತ್ತಾರೆ. ಎಷ್ಟೇ ಹೊತ್ತು ಮೊಬೈಲ್ ನೋಡಿದರೂ ಕೆಲವರಿಗೆ ನಿದ್ದೆ ಹತ್ತಿರ ಸುಳಿಯುವುದಿಲ್ಲ.

ನಿದ್ರಾಹೀನತೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಉಪಾಯ : 
• ನಿದ್ರಾಹೀನತೆ ಮತ್ತು ರೇಸಿಂಗ್ ಥಾಟ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ರೇಸಿಂಗ್ ಥಾಟ್ಸ್ ಅನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಈ ಸಮಸ್ಯೆಯನ್ನು ನೀಗಿಸಲು ನೀವು ದಿನದ ಸಮಯದಲ್ಲಿ ಬಿಡುವು ಮಾಡಿಕೊಂಡು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ರೇಸಿಂಗ್ಸ್ ಥಾಟ್ಸ್ ಪರಿಹಾರವಾಗಲು ಸಾಧ್ಯ.
• ಪ್ರತಿದಿನ ನಿಗದಿತ ಸಮಯದಲ್ಲಿ ನಿಮ್ಮ ಕಾರ್ಯಯೋಜನೆಗಳನ್ನು ಪರಿಶೀಲಿಸಿ. ಇದರಿಂದ ನಿಮ್ಮ ಕೆಲಸದ ಬಗ್ಗೆ ನಿಮಗೆ ತೃಪ್ತಿಯಾಗಿ ಒತ್ತಡ ಕೂಡ ಕಡಿಮೆಯಾಗುತ್ತದೆ.

Health Tips: ನೆಮ್ಮದಿಯಾಗಿ ನಿದ್ರೆ ಮಾಡ್ಬೇಕಾ? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಮಾಲ್ಟ್ ಕುಡೀರಿ

• ಪೂರ್ತಿ ಅವಧಿ ನಿದ್ರೆ ಮಾಡಲು ಕಂಪ್ಯೂಟರ್, ಫೋನ್, ಸೋಷಿಯಲ್ ಮೀಡಿಯಾಗಳಿಂದ ನಿಮ್ಮನ್ನು ನೀವು ದೂರವಿಡಿ.
• ನಿದ್ರೆ ಮಾಡುವ ಮೊದಲು ನೀವು ಪುಸ್ತಕ ಓದುವುದು, ವ್ಯಾಯಾಮ ಮಾಡುವುದು, ಸಂಗೀತ ಕೇಳುವುದು, ಧ್ಯಾನ ಅಥವಾ ಶ್ಲೋಕಗಳನ್ನು ಕೂಡ ಹೇಳಬಹುದು. ಒಳ್ಳೆಯ ನಿದ್ರೆಗಾಗಿ ಮೆಡಿಟೇಶನ್ ಕೂಡ ಮಾಡಬಹುದು. ಡಿಜಿಟಲ್ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದರಿಂದಲೂ ಚೆನ್ನಾಗಿ ನಿದ್ರೆ ಮಾಡಬಹುದು. ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ ಅದೇ ಸಮಯದಲ್ಲಿ ಒಳ್ಳೆಯ ಪುಸ್ತಕವನ್ನು ಓದಿದರೆ ಮನಸ್ಸು ಕೂಡ ಚಿಂತೆಯಿಂದ ದೂರವಾಗಿ ನಿರಾಳವಾಗುತ್ತದೆ. ಯೋಗ ಪ್ರಾಣಾಯಾಮ ಧ್ಯಾನಗಳಿಂದಲೂ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರುವುದಿಲ್ಲ. ಹಾಗಾಗಿ ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೂ ನಿದ್ರಾಹೀನತೆ ಮತ್ತು ರೇಸಿಂಗ್ ಥಾಟ್ಸ್ ನಿಂದ ಹೊರಬರಬಹುದು.

click me!