ಜುಂಬಾ ಡ್ಯಾನ್ಸ್ ಮಾಡಿ ಬಿಂದಾಸ್ ಆಗಿ, ಫಿಟ್ ಆಗಿರಿ

By Suvarna NewsFirst Published Jan 9, 2023, 5:51 PM IST
Highlights

ನಗರ ಪ್ರದೇಶದಲ್ಲಿ ಬಹುತೇಕ ಯುವ ಜನತೆ(Youths) ಈ ಜುಂಬಾ ಎಂಬಾ ವ್ಯಾಯಾಮಕ್ಕೆ ಮೊರೆಹೋಗುವವರು ಹೆಚ್ಚು. ಇದೊಂದು ಒಳಾಂಗಣ ವ್ಯಾಯಾಮವಾಗಿದ್ದು, ಸಂಗೀತದೊAದಿಗೆ ಮಾಡಲಾಗುವ ತಾಲೀಮು ಇದಾಗಿದೆ. ಈ ಜುಂಬಾ(Zumba) ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ತಾಲೀಮು ಎಂದರೆ ಕೇವಲ ವ್ಯಾಯಾಮವಲ್ಲ(Exercise). ವ್ಯಾಯಾಮದಲ್ಲೂ ಇಂದು ಬಹಳ ವಿಧಗಳಿವೆ. ಅದರಲ್ಲೊಂದು ಈ ಜುಂಬಾ ವ್ಯಾಯಾಮ. ಶನಿವಾರ ಬಂತೆAದರೆ ಬಹುತೇಕ ಕ್ಲಬ್‌ನ ಡ್ಯಾನ್ಸ್ ಫ್ಲೋರ್‌ನಲ್ಲಿ(Club Dance Floor) ವಿಶಿಷ್ಟವಾದ ಒಳಾಂಗಣದಲ್ಲಿ ಜುಂಬಾ ನೃತ್ಯವನ್ನು ಮಾಡುತ್ತಾರೆ. ಇದು ಆಕರ್ಷಕ ನೃತ್ಯ ಸಂಗೀತ, ಚಪ್ಪಾಳೆ ತಟ್ಟುವಿಕೆ ಮತ್ತು ಸಾಂದರ್ಭಿಕ ವೋ(Wo) ಶಬ್ಧಗಳು ಕೇಳುತ್ತಿರುತ್ತದೆ. ಜುಂಬಾ ಎಂಬುದು ಸಂಗೀತಕ್ಕೆ ಪ್ರದರ್ಶಿಸಲಾದ ಲ್ಯಾಟಿನ್ ಅಮೇರಿಕನ್ ನೃತ್ಯ ಶೈಲಿಯ(Latin American Dance Style) ಒಂದು ತಾಲೀಮು. ಪ್ರಪಂಚದಾದ್ಯAತ ಟ್ರೆಂಡ್‌ನಲ್ಲಿರುವ ತಾಲೀಮು ಇದಾಗಿದೆ. 

ಜುಂಬಾ ಹುಟ್ಟಿದ್ದು ಹೀಗೆ
ಅಲ್ಬರ್ಟೊ ಬರ್ಟೊ ಪೆರೆಜ್ ಕೊಲಂಬಿಯಾದ(Colombia) ನರ್ತಕಿ ಮತ್ತಯ ನೃತ್ಯ ಸಂಯೋಜಕ ಜುಂಬಾವನ್ನು ಮೊದಲ ಬಾರಿ ಸ್ಥಾಪಿಸಿದರು. ಇದು ಲ್ಯಾಟಿನ್ ಅಮೇರಿಕನ್ ನೃತ್ಯ ಪ್ರಕಾರಗಳ ಹಲವಾರು ಶೈಲಿಗಳಿಂದ ಪ್ರೇರಿತವಾಗಿದೆ. ಜುಂಬಾ ನೃತ್ಯ ಶೈಲಿಯ ತಾಲೀಮು ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ. 

ಫಿಟ್ನೆಸ್ ಎಂದು ಬಂದಾಗ ಜಿಮ್(Gym), ವ್ಯಾಯಾಮ(Exercise), ಯೋಗದಂತೆ(Yoga) ಜುಂಬಾ ವ್ಯಾಯಾಮವೂ ಇಂದು ಹೆಚ್ಚು ಚಾಲ್ತಿಯಲ್ಲಿದೆ. ಇದು ತೂಕ ಕಳೆದುಕೊಳ್ಳಲು(Weight Loss), ದೇಹದ ಆಕಾರವನ್ನು(Body Shape) ಪಡೆಯಲು ಮತ್ತು ಸಕ್ರಿಯವಾಗಿ ಉಳಿಯಲು ಸಹಾಯ ಮಾಡುತ್ತದೆ. ಬಹಳಷ್ಟು ವಿನೋದದಿಂದ ನೃತ್ಯ(Dance) ಮತ್ತು ಸಂಗೀತವು(Music) ಉತ್ಸಾಹವನ್ನು ಸುಧಾರಿಸಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಚಿಕಿತ್ಸೆಯಾಗಿಯೂ ಸಹ ಒತ್ತಡ ನಿವಾರಕಗಳು ಎಂದು ನಿರೂಪಿಸಿದೆ. ದೈಹಿಕ(Physical) ಹಾಗೂ ಮಾನಸಿಕ ಚಟುವಟಿಕೆಯೊಂದಿಗೆ(Mental Activities) ಎರಡನ್ನೂ ಸಂಯೋಜಿಸುವ ಉತ್ತಮ ವಿಧಾನವಾಗಿದೆ.

ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ

1. ಸಂಪೂರ್ಣ ದೇಹವನ್ನು ತೊಡಗಿಸುತ್ತದೆ: ಜುಂಬಾ ವ್ಯಾಯಾಮದ ವಿಶೇಷವೇ ದೇಹವನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು. ತಲೆ(Head), ಕುತ್ತಿಗೆ(Neck), ಭುಜಗಳು, ಸೊಂಟ, ತೊಡೆಗಳು, ಕರುಗಳು ಮತ್ತು ಕಣಕಾಲುಗಳು ಸೇರಿದಂತೆ ಚಲನೆಗಳೊಂದಿಗೆ ದೇಹದ ಯಾವುದೇ ಭಾಗವನ್ನು ಸುಮ್ಮನಿರಲು ಬಿಡುವುದಿಲ್ಲ. ಇಡೀ ದೇಹವು ಶಕ್ತಿಯುತ ಸಂಗೀತದೊAದಿಗೆ ಚಲಿಸುತ್ತದೆ. ಉತ್ತಮವಾದ ಮೈಕಟ್ಟು ನೀಡುತ್ತದಲ್ಲದೆ, ಹೃದಯ(Heart) ಮತ್ತು ಶ್ವಾಸಕೋಶವನ್ನು(Lungs) ಬಲಪಡಿಸಲು ಸಹಾಯ ಮಾಡುತ್ತದೆ. ಪೂರ್ಣ ದೇಹದ ವ್ಯಾಯಾಮವು ರಕ್ತದಲ್ಲಿನ ಗ್ಲೂಕೋಸ್(Blood Glucose) ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಸ್ನಾಯುಗಳಿಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದಲ್ಲಿ ಸಹಾಯ ಮಾಡುವುದರಿಂದ ಮಧುಮೇಹದ ಆರೈಕೆಗೆ ಅವಶ್ಯಕವಾಗಿದೆ.

2. ಉತ್ತಮ ಸಮನ್ವಯ ಹೊಂದಿದ್ದೀರಿ: ಜುಂಬಾ ಅಭ್ಯಾಸ ಮಾಡುವಾಗ, ನಿಮ್ಮ ಚಲನೆಗಳು ಸಂಗೀತದ ವೇಗದ ಬೀಟ್‌ಗಳಿಗೆ(Beat) ಹೊಂದಿಕೆಯಾಗುವAತೆ ಮತ್ತು ಹೆಜ್ಜೆಗಳು ನಿಮ್ಮ ಸುತ್ತಲಿನ ನೃತ್ಯ ಮಾಡುವವರೊಂದಿಗೆ ಸಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮನಸ್ಸು ಮತ್ತು ಶ್ರಮಿಸುತ್ತದೆ. ನಿಯಮಿತವಾಗಿ ಜುಂಬಾ ವ್ಯಾಯಾಮವು ಮನಸ್ಸು ದೇಹದ ಸಮನ್ವಯವನ್ನು ಸುಧಾರಿಸುತ್ತದೆ.

3. ರೋಮಾಂಚನಕಾರಿಯಾಗಿದೆ: ಜುಂಬಾ ವೇಗದ ಗತಿಯ, ತೀವ್ರವಾದ ಮತ್ತು ಕಠಿಣ ಅಭ್ಯಾಸವಾಗಿದೆ. ಜುಂಬಾ ಅಭ್ಯಾಸ ಮಾಡುವ ಜನರು ಅದನ್ನು ಮುಂದುವರಿಸಲು ಇಚ್ಛಿಸುತ್ತಾರೆ. ಏಕೆಂದರೆ ಜುಂಬಾ ಮಾಡುವುದರಿಂದ ಮನಸ್ಸಿಗೆ ಸಂತೋಷ ಆನಂದ ನೀಡುತ್ತದೆ. ಪಾಠಕ್ಕೆ ಹಾಜರಾಗಲು ಎದುರು ನೋಡುತ್ತಾರೆ. ಇದರಿಂದ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊAದಿಗೆ ಸಂಗೀತಕ್ಕೆ ನೃತ್ಯ ಮಾಡಬಹುದು. ಜುಂಬಾ ಹೊಸ ಜನರೊಂದಿಗೆ ಸಂವಹನ ನಡೆಸಲು ಮತ್ತು ಭೇಟಿ ಮಾಡಲು ಅವಕಾಶವನ್ನು ಒದಗಿಸುತ್ತದೆ.

5. ಆರೋಗ್ಯ ಪ್ರಯೋಜನಗಳು: ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುವುದಲ್ಲದೆ, ಜುಂಬಾ ಹಂತದ ವ್ಯಾಯಾಮದಲ್ಲಿ ತೂಕವನ್ನು ಬಳಸಲಾಗುತ್ತದೆ. ಇದು ತೋಳು(Shoulder), ಗ್ಲುಟ್ಸ್(Gluts) ಮತ್ತು ಕಾಲುಗಳಲ್ಲಿನ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ನಾಯುವಿನ ಸ್ಥಿತಿಸ್ಥಾಪಕತ್ವವು ಜುಂಬಾ ಚಲನೆಗಳ ಟೋನ್ ಮತ್ತು ದೇಹದ ಸ್ನಾಯುಗಳನ್ನು ಹಿಗ್ಗಿಸಲು ಸ್ನಾಯುವಿನ ನಮ್ಯತೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

ಯಾರು ನೋಡಲಿ ಒಂದೆಡೆ ಕುಳಿತೇ ಕೆಲಸ ಮಾಡುತ್ತಾರೆ, ಅನಾರೋಗ್ಯಕ್ಕಿದು ಹಾಡುತ್ತೆ ನಾಂದಿ!

ಮಧುಮೇಹ(Diabetes), ಹೃದ್ರೋಗ(Heart disease), ಅಥವಾ ಅಧಿಕ ಕೊಲೆಸ್ಟ್ರಾಲ್‌ನಂತಹ(High Cholesterol) ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಜುಂಬಾ ವ್ಯಾಯಾಮವು ಸೂಕ್ತವಾಗಿದೆ. ಹೃದಯದ ತ್ರಾಣವನ್ನು ಸುಧಾರಿಸುವ ಮಧ್ಯಂತರ ಜುಂಬಾಭ್ಯಾಸ ಹಾಗೂ ಮಧ್ಯಂತರ ನೃತ್ಯ ತಂತ್ರಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ.

click me!