ಮಧುಮೇಹಿಗಳಿಗೆ ಬೀಟ್ ರೂಟ್ ಬೆಸ್ಟ್! ಎಷ್ಟು ಪ್ರಮಾಣ ಬೆಟರ್?

Published : Jan 09, 2023, 05:36 PM IST
ಮಧುಮೇಹಿಗಳಿಗೆ ಬೀಟ್ ರೂಟ್ ಬೆಸ್ಟ್! ಎಷ್ಟು ಪ್ರಮಾಣ ಬೆಟರ್?

ಸಾರಾಂಶ

ಮಧುಮೇಹಿಗಳು ಸಾಮಾನ್ಯವಾಗಿ ಗಡ್ಡೆಗೆಣಸಿನಂತಹ ತರಕಾರಿಯಿಂದ ದೂರವಿರುತ್ತಾರೆ. ಬಾಕಿ ತರಕಾರಿಗಳಿಗಿಂತ ಇವು ಕಾರ್ಬೋಹೈಡ್ರೇಟ್ ನಿಂದ ಕೂಡಿರುತ್ತವೆ ಎನ್ನುವುದು ಒಂದು ಕಾರಣ. ಇದೇ ಸಾಲಿಗೆ ಬೀಟ್ ರೂಟನ್ನೂ ಸೇರಿಸಲಾಗುತ್ತದೆ. ಆದರೆ, ಬೀಟ್ ರೂಟ್ ಮಧುಮೇಹಿಗಳ ಪಾಲಿಗೆ ಉತ್ತಮ ಆಯ್ಕೆಯಾಗಿದ್ದು, ಮಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.  

ಮಧುಮೇಹದಿಂದ ಬಳಲುತ್ತಿರುವವರಿಗೆ ಆಹಾರಕ್ಕೆ ಸಂಬಂಧಿಸಿದ ಗೊಂದಲ ಕಾಡುವುದು ಸಾಮಾನ್ಯ. ಯಾವ ಹಾರ ಪದಾರ್ಥಗಳನ್ನು ಸೇವಿಸಬಹುದು, ಯಾವುದು ಸೇವನೆಗೆ ಯೋಗ್ಯವಲ್ಲ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಕೆಲವು ಆಹಾರಗಳು ನೈಸರ್ಗಿಕವಾಗಿದ್ದರೂ ಹೆಚ್ಚು ಸಕ್ಕರೆಯಂಶ ಹೊಂದಿರುವ ಕಾರಣ ಮಧುಮೇಹಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ತರಕಾರಿಗಳಲ್ಲೂ ಎಲ್ಲವೂ ಸೇವಿಸಲು ಪರಿಪೂರ್ಣವಲ್ಲ. ಅಂತಹ ಸಾಲಿಗೆ ಹಲವರು ಬೀಟ್ ರೂಟನ್ನೂ ಸೇರಿಸುತ್ತಾರೆ. ಮಧುಮೇಹಿಗಳಿಗೆ ಬೀಟ್ ರೂಟ್ ವರ್ಜ್ಯ ಎನ್ನುವ ನಂಬಿಕೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಆದರೆ, ಮ್ಯಾಂಗನೀಸ್ ಭರಿತವಾಗಿರುವ ಬೀಟ್ ರೂಟ್ ನಿಂದ ಇನ್ಸುಲಿನ್ ಉತ್ಪಾದನೆಗೆ ಸಹಕಾರಿಯಾಗುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ, ಇದರಲ್ಲಿರುವ ನೈಟ್ರೇಟ್ ಅಂಶವು ಇನ್ಸುಲಿನ್ ಪ್ರತಿರೋಧಕವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಎನ್ನಲಾಗುತ್ತದೆ. ಬೀಟ್ ರೂಟ್ ಮಧುಮೇಹಿಗಳು ಮಾತ್ರವಲ್ಲ, ಸಾಕಷ್ಟು ಜನ ಅಸಡ್ಡೆ ತೋರುವ ತರಕಾರಿಗಳ ಸಾಲಿನಲ್ಲಿ ಸೇರಿದೆ. ವಿಟಮಿನ್ ಮತ್ತು ಮಿನರಲ್ ನಿಂದ ಕೂಡಿರುವ ಈ ಅಪೂರ್ವ ತರಕಾರಿ ಹೃದಯದ ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕಂಡುಬರುವ ಫೋಲೇಟ್ ಹೃದಯ ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶವಾಗಿದೆ. 

ಬೀಟ್ ರೂಟನ್ನು (Beetroot) ಮಧುಮೇಹಿಗಳು (Diabetics) ಸೇವಿಸಬಹುದು ಎನ್ನುವ ವಿಚಾರವೇ ಹಲವರಿಗೆ ಅಚ್ಚರಿ ಎನಿಸುವಂತೆ ಮಾಡಬಹುದು. ಅಸಲಿಗೆ, ಇದರಲ್ಲಿ ಕಾರ್ಬೋಹೈಡ್ರೇಟ್ (Carbohydrates) ಕಡಿಮೆ ಪ್ರಮಾಣದಲ್ಲಿದೆ. ಮಣ್ಣಿನಡಿ (Root) ಬೆಳೆಯುವ ಇತರ ಗಡ್ಡೆಗೆಣಸುಗಳಿಗೆ ಹೋಲಿಸಿದರೆ ಇದರಲ್ಲಿರುವ ಕಾರ್ಬೋಹೈಡ್ರೇಟ್ ಪ್ರಮಾಣ ಅತಿ ಕಡಿಮೆ. ಇದು ಸಹ ಮಧುಮೇಹಿಗಳಿಗೆ ಒಂದು ಪೂರಕ ಅಂಶವೆಂದರೆ ತಪ್ಪಾಗಲಾರದು. ಇದರಲ್ಲಿರುವ ನಾರಿನಂಶವು (Fibre)  ಕಾರ್ಬೋಹೈಡ್ರೇಟ್ ಹೀರುವಿಕೆಯನ್ನು ನಿಯಂತ್ರಿಸುವ ಮೂಲಕ ರಕ್ತದ ಸಕ್ಕರೆ ಮಟ್ಟ (Blood Sugar Level) ದಿಢೀರನೆ ಏರಿಕೆಯಾಗದಂತೆ ನೋಡಿಕೊಳ್ಳುತ್ತದೆ. ಬೀಟ್ ರೂಟನ್ನು ಪ್ರೊಟೀನ್ (Protein)ನಿಂದ ಸಮೃದ್ಧವಾಗಿರುವ ಆಹಾರ ಪದಾರ್ಥಗಳೊಂದಿಗೆ ಸೇರಿಸಿ ಸೇವನೆ ಮಾಡುವುದು ಉತ್ತಮ. ಮೊಸರು (Curd), ಧಾನ್ಯ, ಬೀಜಗಳೊಂದಿಗೆ ಸೇವನೆ ಮಾಡುವುದರಿಂದ ಆಹಾರದಲ್ಲಿರುವ ಗ್ಲೈಸೆಮಿಕ್ (Glycaemic) ಹೊರೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. 

Beetroot Benefits: ಕೆಂಪು ತರಕಾರಿ ಸೇವಿಸೋ ಮೂಲಕ ಈ ಎಲ್ಲಾ ರೋಗಗಳಿಗೆ ಹೇಳಿ ಗುಡ್ ಬೈ!

ಬೀಟ್ ರೂಟಿಂದ ಎಷ್ಟೆಲ್ಲ ಲಾಭ
ಅತ್ಯುತ್ತಮ ಗಡ್ಡೆ ತರಕಾರಿಗಳಲ್ಲಿ ಒಂದಾದ ಬೀಟ್ ರೂಟಿನಲ್ಲಿ ಆಂಟಿಆಕ್ಸಿಡಂಟ್ (Antioxidants) ಅಂಶ ಸಮೃದ್ಧವಾಗಿದೆ. ಬೆಟಾಲೇನ್ ಎನ್ನುವ ಆಂಟಿಆಕ್ಸಿಡಂಟ್ ಸಂಯುಕ್ತವನ್ನೂ ಇದು ಒಳಗೊಂಡಿದೆ. ಇದು ಉರಿಯೂತ ಕಡಿಮೆಗೊಳಿಸಿ ಇನ್ಸುಲಿನ್ (Insulin) ಸೂಕ್ಷ್ಮತೆ ಸುಧಾರಿಸಲು ನೆರವಾಗುತ್ತದೆ. ಅಲ್ಲದೆ, ಫ್ರೀ ರ್ಯಾಡಿಕಲ್ಸ್ (Free Radicals) ಅನ್ನು ನಿಯಂತ್ರಿಸುತ್ತದೆ. ದೇಹದಲ್ಲಿರುವ ಕೆಲ ಬಗೆಯ  ಫ್ರೀ ರ್ಯಾಡಿಕಲ್ಸ್ ಮಧುಮೇಹದ ಹಲವು ತೊಡಕುಗಳನ್ನು ನಿವಾರಿಸುತ್ತವೆ. ರೆಟಿನೋಪಥಿ, ಕಿಡ್ನಿ ಸಮಸ್ಯೆ, ಕಾರ್ಡಿಯೋವಾಸ್ಕ್ಯುಲಾರ್ ಸಮಸ್ಯೆಗಳ ಅಪಾಯ ಈ ಫ್ರೀ ರ್ಯಾಡಿಕಲ್ಸ್ ನಿಂದ ಕಡಿಮೆಯಾಗುತ್ತದೆ. ಹೀಗಾಗಿ, ಇದು ಮಧುಮೇಹಿಗಳಿಗೆ ಉತ್ತಮ ತರಕಾರಿ ಎನ್ನುತ್ತಾರೆ ತಜ್ಞರು. 

ಡಯಟಲ್ಲಿ ಈ ಆಹಾರ ಸೇರಿಸಿ, ಲೈಫ್ ಸ್ಟೈಲ್ ಡಿಸೀಸ್ ದೂರ ಮಾಡಿ

ಹೇಗೆ, ಯಾವ ಪ್ರಮಾಣ ಬೆಸ್ಟ್?
ಬೀಟ್ ರೂಟ್ ಮಧುಮೇಹಕ್ಕೆ ಉತ್ತಮ ಎಂದ ಮಾತ್ರಕ್ಕೆ ಹೆಚ್ಚು ಪ್ರಮಾಣದಲ್ಲಿ ತಿನ್ನಬೇಕು ಎಂದರ್ಥವಲ್ಲ. ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡುವುದು ಉತ್ತಮ. ಆದರೆ, ಇದನ್ನು ಜ್ಯೂಸ್ (Juice) ಮಾಡಿ ಸೇವಿಸಬಾರದು. ಹಸಿಯಾದ (Raw) ಬೀಟ್ ರೂಟ್ ಹೋಳುಗಳನ್ನೇ ಸೇವಿಸುವುದು ಉತ್ತಮ. ನೀರಿನಲ್ಲಿ ಬೇಯಿಸುವುದು (Boil) ಅಷ್ಟು ಉತ್ತಮವಲ್ಲ, ಒಂದೊಮ್ಮೆ ಬೇಯಿಸಿದರೂ ಆ ನೀರನ್ನು ವೇಸ್ಟ್ ಮಾಡಬಾರದು. ಅಲ್ಪ ಪ್ರಮಾಣದಲ್ಲಿ ರೋಸ್ಟ್ (Roast) ಮಾಡಿಯೂ ತಿನ್ನಬಹುದು. ಬೀಟ್ ರೂಟಿನಿಂದ ಉತ್ತಮ ಲಾಭ ದೊರೆಯಬೇಕು ಎಂದಾದರೆ ಮಿತ ಅಥವಾ ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಇದರ ಹೋಳುಗಳನ್ನು ಉಪ್ಪಿನಕಾಯಿಗೂ (Pickle) ಬೆರೆಸಬಹುದು. ಇದರಿಂದ ಉತ್ತಮ ಪ್ರೊಬಯಾಟಿಕ್ಸ್ ಲಭ್ಯವಾಗುತ್ತದೆ. ಬೀಟ್ ಸಲಾಡ್, ರೋಸ್ಟೆಡ್ ಚಿಪ್ಸ್, ಗ್ರಿಲ್ ಮಾಡಿದ ಬೀಟ್, ಬೀಟ್ ರೂಟ್-ಟೊಮ್ಯಾಟೋ ಸೂಪ್, ಮಸಾಲೆ ಸೇರಿಸಿದ ಬೀಟ್ ವಿತ್ ಬಟರ್ ಮಿಲ್ಕ್ ಕೂಡ ಉತ್ತಮ ಆಯ್ಕೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ