
ಅಡುಗೆಯ ರುಚಿಯನ್ನು ಹೆಚ್ಚಿಸುವಂಥ ಕರಿಬೇವು, ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತದೆ. ಬಹಳಷ್ಟು ಜನ ಊಟದಲ್ಲಿರುವ ಕರಿಬೇವನ್ನು ಸೇವಿಸುವುದಿಲ್ಲ ಪಕ್ಕಕ್ಕೆ ಇಡುತ್ತಾರೆ ಆದರೆ ಇದರ ಮಹತ್ವನ್ನು ತಿಳಿದ ಮೇಲೆ ಯಾವುದೇ ಕಾರಣಕ್ಕೂ ಮತ್ತೆ ಅಂತ ತಪ್ಪು ಮಾಡಬೇಡಿ. ಈ ಕರಿಬೇವಿನಿಂದ ಯಾವ ರೀತಿಯಾಗಿ ಕಾನ್ಸರ್ ಹೋಗಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ.
ಕರಿಬೇವು ತಿಂದ್ರೆ ಕ್ಯಾನ್ಸರ್ ನಿವಾರಣೆಯಾಗುವುದು, ನಮ್ಮ ದೇಶದಲ್ಲಿ ಪುರುಷರಲ್ಲಿ ಹೆಚ್ಚಾಗಿ ಕಾಡುವಂತ ”ಪ್ರಾಸ್ಪೇಟ್ ಕ್ಯಾನ್ಸರ್” ಅನ್ನು ಕರಿಬೇವು ನಿವಾರಿಸುತ್ತದೆ ಎಂಬುದಾಗಿ ಕೆಲವು ಸಂಶೋಧನೆಗಳಿಂದ ತಿಳಿಯಲಾಗಿದೆ. ಕರಿಬೇವಿನಲ್ಲಿ ಸಾಕಷ್ಟು ಕಬ್ಬಿಣದಂಶ ಇದೆ ಹಾಗು ದೇಹಕ್ಕೆ ಬೇಕಾಗುವ ಪೋಷಕಾಂಶಗಳಿವೆ.
ಕ್ಯಾನ್ಸರ್ ದೂರ
ಕೊಲ್ಕತ್ತದಲಿರುವ ಭಾರತಿ ವಿಶ್ವವಿದ್ಯಾಲಯದ ಸಂಶೋಧನೆ ತಂಡವೊಂದು ಇತ್ತೀಚಿಗೆ ಕರಿಬೇವಿನಲ್ಲಿ ಕ್ಯಾನ್ಸರ್ ನಿವಾರಕ ಗುಣಗಳಿರುವುದನ್ನು ಕಂಡುಹಿಡಿದಿದೆ. ಇದರ ಎಲೆಗಳಲ್ಲಿ ”ಮಹಾನೈನ್” ಎಂಬ ಪದಾರ್ಥ ಇದ್ದು, ಇದು ಕ್ಯಾನ್ಸರ್ ನಿಯಂತ್ರಣ ಮಾಡಬಲ್ಲದು ಅನ್ನೋದನ್ನ ತಂಡ ತಿಳಿಸಿದೆ. ಇದರಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಪ್ರತ್ಯೇಕವಾಗಿ ಇದು ಕ್ಯಾನ್ಸರ್ ಕಣಗಳನ್ನು ಮಾತ್ರ ನಿಯಂತ್ರಿಸುತ್ತದೆ. ಮತ್ತೊಂದು ಉಪಯೋಗವೇನೆಂದರೆ ಕರಿಬೇವಿನಲ್ಲಿರುವ ‘ಮಹಾನೈನ್’ ಅಂಶ ಲ್ಯುಕೇಮಿಯ ಎಂಬ ಚರ್ಮ ರೋಗವನ್ನು ಕೂಡ ನಿಯಂತ್ರಿಸುತ್ತದೆ.
ಮಧುಮೇಹ ದೂರ
ನಮ್ಮ ಪುರಾತನ ಆಯುರ್ವೇದ ಪದ್ಧತಿಯಲ್ಲಿ ಕೂಡ ಕರಿಬೇವಿನ ಸೊಪ್ಪಿಗೆ ನಮ್ಮ ಆರೋಗ್ಯ ಪಂಡಿತರು ಬಹಳ ಗೌರವದ ಸ್ಥಾನ ನೀಡಿ ಅನೇಕ ಕಾಯಿಲೆಗಳನ್ನು ಗುಣ ಪಡಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಈಗಲೂ ಸಹ ಇದು ಮುಂದುವರೆದಿದ್ದು ಅನೇಕ ಬಗೆಯ ಸೋಂಕುಗಳು, ಉರಿಯೂತದ ಲಕ್ಷಣಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಅದ್ಭುತ ಶಕ್ತಿ ಕರಿಬೇವಿನ ಸೊಪ್ಪಿನಲ್ಲಿ ಇದೆ.
ಕಾಫಿ ,ಟೀ, ಜ್ಯೂಸ್ ಜೊತೆ ಔಷಧಿ ತೆಗೆದುಕೊಳ್ಳೋದು ಅಪಾಯ! ...
ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ' ಸಿ ' ಮತ್ತು ಬೀಟಾ - ಕ್ಯಾರೋಟಿನ್ ಅಂಶಗಳಿದ್ದು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಉಪಯೋಗಿಸಲ್ಪಡುತ್ತದೆ. ಯಾವುದೇ ಆಂಗ್ಲ ಔಷಧಿಗಳಿಗಿಂತ ಮನುಷ್ಯನ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಟೈಪ್ - 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕರಿಬೇವಿನ ಸೊಪ್ಪು ನಿಯಂತ್ರಣದಲ್ಲಿಡುತ್ತದೆ ಎಂದರೆ ಇದರ ಅದ್ಭುತ ಶಕ್ತಿಯ ಬಗ್ಗೆ ನೀವೇ ಒಮ್ಮೆ ಯೋಚಿಸಬೇಕು. ಹಾಗಾದರೆ ಅಂತಹ ವಿಶೇಷ ಗುಣಗಳಿಂದ ಕರಿಬೇವಿನ ಸೊಪ್ಪು ಮಾಡುವ ಚಮತ್ಕಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆ ಅಲ್ಲವೇ? ಮುಂದೆ ಓದಿ.
ಸಂಶೋಧಕರ ಪ್ರಕಾರ ಅವರು ಸಂಶೋಧನೆಯಲ್ಲಿ ಬಳಸಿದ ಕರಿಬೇವಿನ ಸೊಪ್ಪಿನಿಂದ ಸಂಶೋಧನೆಗೆ ಒಳಪಡಿಸಿದ ಅತಿಯಾದ ಮಧುಮೇಹ ಹೊಂದಿದ ಜನರಲ್ಲಿ ಶೇಕಡ 45 ರಷ್ಟು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕರಿಬೇವಿನ ಸೊಪ್ಪು ತನ್ನ ಶಕ್ತಿ ತೋರಿಸಿದೆ. ಇದರಿಂದ ಟೈಪ್ -2 ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ಕರಿಬೇವಿನ ಸೊಪ್ಪಿನ ಯಶಸ್ವಿ ದಾಖಲಾಗಿದೆ.
ಬೇಸಿಗೆಯಲ್ಲಿ ಈ ಕೆಲಸ ಮಾಡಿದೇ ಹೋದರೆ ಆರೋಗ್ಯವಾಗಿರಬಹುದು! ...
ಅಡುಗೆಯಲ್ಲಿ ಬಲಿತ ಕರಿಬೇವಿನ ಎಲೆಗಳನ್ನು ಒಣಗಿಸಿ ಬಳಸುವುದರಿಂದ ಕೂಡ ಪ್ರಯೋಜನವಿದೆ. ಆಮ್ಲಪಿತ್ತದಿಂದ (ಎಸಿಡಿಟಿ) ಬಳಲುವವರು ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಬೇಕು.
ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆ ಬರುವುದನ್ನು ತಡೆಯಬಹುದು. ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ. ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು. ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.
ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು. ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚುವುದು ಒಳ್ಳೆಯದು. ಇದು ನಿಮ್ಮನ್ನು ತಂಪಾಗಿಡುತ್ತದೆ.
ಜ್ವರದಿಂದ ಬಳಲುವಾಗ ಕರಿಬೇವಿನ ಕಷಾಯ ಸೇವಿಸಿದರೆ ದಾಹ, ಉಷ್ಣತೆ ಕಡಿಮೆಯಾಗುತ್ತದೆ.
ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು. ದಿನವೂ ಕರಿಬೇವಿನ ಎಲೆ ತಿಂದರೆ ದೇಹದ ತೂಕ ಕಡಿಮೆಯಾಗುವುದು. ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.
ಮಕ್ಕಳ ಆರೋಗ್ಯದಿಂದ ಹಿಡಿದು, ಹಿರಿಯರ ಸದೃಢತೆಗೆ ನೇಂದ್ರ ಬಾಳೆಹಣ್ಣೆಂಬ ಔಷಧ ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.