ರಾತ್ರಿ ಮೊಬೈಲ್ ನೋಡೋದು ಈಗಿನ ಜನರಿಗೆ ಒಂದು ಹವ್ಯಾಸ. ಗಂಟೆ ಒಂದಾದ್ರೂ ಮೊಬೈಲ್ ನೋಡ್ತಾ ಕಾಲ ಕಳೆಯೋರು ನೀವಾಗಿದ್ದರೆ ಹುಷಾರಾಗಿರಿ. ಇದು ಸಿಲ್ಲಿ ಅನಿಸಿದ್ರೂ ನಿರ್ಲಕ್ಷ್ಯ ಮಾಡಿದ್ರೆ ಆಪತ್ತು ನಿಶ್ಚಿತ.
ಮೊಬೈಲ್ ನಮ್ಮ ದೇಹದ ಒಂದು ಭಾಗದಂತಾಗಿದೆ. ಈಗಿನ ದಿನಗಳಲ್ಲಿ ಜನರು ಮೊಬೈಲನ್ನು ಅತಿಯಾಗಿ ಬಳಕೆ ಮಾಡ್ತಿದ್ದಾರೆ. ಕೈನಲ್ಲೊಂದು ಮೊಬೈಲ್, ಫುಲ್ ಡೇಟಾ ಇದ್ರೆ ಯಾರ ಅವಶ್ಯಕತೆಯೂ ಈಗಿನ ಜನರಿಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್, ಸಿನಿಮಾ ಸೇರಿದಂತೆ ಸಿರೀಸ್, ಕ್ರಿಕೆಟ್, ಮನರಂಜನಾ ವಿಡಿಯೋಗಳನ್ನು ವೀಕ್ಷಣೆ ಮಾಡ್ತಾ ಜನರು ಸಮಯ ಕಳೆಯುತ್ತಾರೆ. ಹಗಲಿಡಿ ಕೆಲಸದ ನಿಮಿತ್ತ ಬ್ಯುಸಿಯಿರುವ ಜನರಿಗೆ ರಾತ್ರಿ ಮೊಬೈಲ್ ನೋಡೋದೇ ಕೆಲಸ. ರಾತ್ರಿ ಹಾಸಿಗೆಗೆ ಹೋದ್ರೂ ಮೊಬೈಲ್ ಬಿಡೋದಿಲ್ಲ. ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3-4 ಗಂಟೆಯವರೆಗೂ ಮೊಬೈಲ್ ನೋಡ್ತಾ ಕಾಲ ಕಳೆಯುವವರಿದ್ದಾರೆ. ಆರಂಭದಲ್ಲಿ ನಿಮಗೆ ಇದು ಮನರಂಜನೆ ನೀಡ್ಬಹುದು. ಆದ್ರೆ ನಿಮ್ಮ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುವುದಲ್ಲದೆ ನಿಮ್ಮ ಮಾನಸಿಕ ಸಮಸ್ಯೆಗೆ ಇದು ಕಾರಣವಾಗುತ್ತದೆ. ಮೊಬೈಲ್ ಬಳಕೆಯಿಂದ ನೀವು ಡಿಪ್ರೆಶನ್ ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ನಾವಿಂದು ರಾತ್ರಿ ಮೊಬೈಲ್ ಬಳಕೆಯಿಂದ ಆಗುವ ನಷ್ಟವೇನು ಹಾಗೇ ರಾತ್ರಿ ಬೆಡ್ ಗೆ ಹೋಗುವ ಮೊದಲು ಏನು ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.
ತಡರಾತ್ರಿ ಮೊಬೈಲ್ (Mobile) ನೋಡುವುದ್ರಿಂದ ಆಗುವ ಸಮಸ್ಯೆಗಳು:
ಡಿಪ್ರೆಶನ್ (Depression): ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಗಂಟೆ ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ವೀಕ್ಷಣೆ ಮಾಡಬಾರದು ಎಂದು ತಜ್ಞರು ಹೇಳ್ತಾರೆ. ರಾತ್ರಿ ಮೊಬೈಲ್ ನೋಡಿದಾಗ ಮೆದುಳಿನಲ್ಲಿರುವ ಹ್ಯಾಬೆನುಲಾ, ಒಂದು ನಿರ್ದಿಷ್ಟ ಸರ್ಕ್ಯೂಟ್ ಅನ್ನು ಸಕ್ರಿಯಗೊಳಿಸುತ್ತದೆ. ಇದ್ರಿಂದ ಡೋಪಮೈನ್ ಬಿಡುಗಡೆ ಕಡಿಮೆಯಾಗುತ್ತದೆ. ಇದು ನಮ್ಮನ್ನು ನಿರಾಶೆಗೊಳಿಸುತ್ತದೆ. ಇದರಿಂದ ಖಿನ್ನತೆ ಕಾಡಲು ಶುರುವಾಗುತ್ತದೆ. ಆತಂಕ, ಭಯ, ಖಿನ್ನತೆ ಮತ್ತು ನಿಕೋಟಿನ್ ಹಿಂತೆಗೆದುಕೊಳ್ಳುವಿಕೆ ಸೇರಿ ವಿವಿಧ ರೀತಿಯ ಭಾವನೆ-ಸಂಬಂಧಿತ ನಡವಳಿಕೆಗಳನ್ನು ನಿಯಂತ್ರಿಸುವ ಕೆಲಸವನ್ನು ಹ್ಯಾಬೆನುಲಾ ಮಾಡುತ್ತದೆ. ನೀವು ತಡರಾತ್ರಿಯವರೆಗೆ ಮೊಬೈಲ್ ನೋಡಿದ್ರೆ ಮೊಬೈಲ್ ನೀಲಿ ಬೆಳಕು ನಮಗೆ ಅರಿವಿಲ್ಲದೆ ನಮ್ಮ ಹಾರ್ಮೋನ್ಸ್ ಮೇಲೆ ಪರಿಣಾಮ ಬೀರಿರುತ್ತದೆ. ರಾತ್ರಿ ನಿದ್ರೆಗೆಡುವ ಕಾರಣ, ಹಗಲಲ್ಲಿ ಸಮಸ್ಯೆಯಾಗುತ್ತದೆ. ಇದ್ರಿಂದ ನಾನಾ ಖಾಯಿಲೆ ಆವರಿಸುವ ಜೊತೆಗೆ ಯಾವುದೇ ಕೆಲಸದಲ್ಲಿ ಆಸಕ್ತಿ ಇರೋದಿಲ್ಲ.
undefined
ಫ್ಯಾಟ್ ಕಡಿಮೆಯಾಗ್ಬೇಕು ಅಂದ್ರೆ ಇಂಥಾ ಫುಡ್ ಜಾಸ್ತಿ ತಿನ್ನಿ
ರಾತ್ರಿ 11 ಗಂಟೆಯಿಂದ ನಾಲ್ಕು ಗಂಟೆ ಮಧ್ಯೆ ನೀವು ಮೊಬೈಲ್ ವೀಕ್ಷಣೆ ಮಾಡಿದ್ರೆ ಅದು ನಿಮ್ಮ ಜ್ಞಾಪಕ ಶಕ್ತಿ ಮೇಲೂ ಪ್ರಭಾವ ಬೀರುತ್ತದೆ. ಬ್ರೈನ್ ಜೊತೆ ಕನೆಕ್ಷನ್ ತಪ್ಪುವ ಅಪಾಯವಿರುತ್ತದೆ. ಇದ್ರಿಂದಾಗಿ ನೀವು ನಿತ್ಯದ ವಿಷಯ ಮರೆಯುವುದಲ್ಲದೆ ಸೂಕ್ತ ಆಲೋಚನೆ ಮಾಡುವ ಸಾಮರ್ಥ್ಯವನ್ನು ನಿಮ್ಮ ಮೆದುಳು ಕಳೆದುಕೊಳ್ಳುತ್ತದೆ.
ರಾತ್ರಿ ಮಲಗುವ ಮೊದಲು ಈ ಕೆಲಸ ಮಾಡಿ: ರಾತ್ರಿ ಮಲಗುವ ಒಂದು ಗಂಟೆ ಮೊದಲು ನೀವು ಗ್ಯಾಜೆಟ್ ನಿಂದ ದೂರವಿರಬೇಕು. ಗ್ಯಾಜೆಟ್ (Gazette) ಬದಿಗಿಟ್ಟು ಹಾಸಿಗೆಗೆ ಹೋದ್ರೂ ನಿದ್ರೆ ಬರ್ತಿಲ್ಲ ಎನ್ನುವವರು ಪ್ರತಿ ದಿನ ಐದು ಮುಖ್ಯ ಕೆಲಸಗಳನ್ನು ಮಾಡಬೇಕು. ನಾನು ಆರಾಮವಾಗಿದ್ದೇನೆ, ನಾನು ಆರೋಗ್ಯವಾಗಿದ್ದೇನೆ, ನಾನು ತೃಪ್ತನಾಗಿದ್ದೇನೆ, ನಾನು ಶಾಂತವಾಗಿದ್ದೇನೆ, ನಾನು ಯಾರನ್ನೂ ಅವಲಂಬಿಸಿಲ್ಲ ಎಂದು ಹೇಳಿಕೊಂಡು ಮಲಗಬೇಕು. ಪ್ರತಿ ದಿನ ಹೀಗೆ ಮಾಡ್ತಿದ್ದರೆ ನಿಮಗರಿವಿಲ್ಲದೆ ನಿಮ್ಮಲ್ಲಿ ದೊಡ್ಡ ಬದಲಾವಣೆಯೊಂದು ಆಗಿರುತ್ತದೆ.
ಫಿಟ್‌ನೆಸ್ ಚಾಲೆಂಜ್‌ಗಾಗಿ ಅತಿ ಹೆಚ್ಚು ನೀರು ಕುಡಿದ ಟಿಕ್‌ಟಾಕರ್ ಆಸ್ಪತ್ರೆಗೆ ದಾಖಲು
ಸಾಮಾನ್ಯವಾಗಿ ನಾವು ನಿದ್ರೆ ಮಾಡಿದ ವೇಳೆ ನಮ್ಮ ಸಬ್ಕಾನ್ಶಿಯಸ್ ಮೈಂಡ್ ಎದ್ದಿರುತ್ತದೆ. ಅದು ಇಂದು ಮಾಡಿದ ತಪ್ಪು, ಕೆಲಸದ ಒತ್ತಡ (Work Pressure) ಎಲ್ಲವನ್ನೂ ನೆನಪಿಸುತ್ತಿರುತ್ತದೆ. ನಾವು ಮಲಗಿದ 8 ಗಂಟೆಗಳ ಕಾಲ ಮನಸ್ಸಿನಲ್ಲಿ ಅದೇ ಓಡ್ತಿರುತ್ತದೆ. ಮರುದಿನ ಬೆಳಿಗ್ಗೆ ನಾವು ಫ್ರೆಶ್ ಆಗಿ ಏಳಲು ಸಾಧ್ಯವಾಗೋದಿಲ್ಲ. ಅದೇ ನೀವು ಮಲಗುವ ವೇಳೆ ಒಳ್ಳೆ ವಿಚಾರವನ್ನು ಹೇಳಿ ಮಲಗಿದ್ರೆ ನಿಮ್ಮ ಉಪಪ್ರಜ್ಞೆಯಲ್ಲಿ ಅದೇ ಓಡುವ ಕಾರಣ ಮರುದಿನ ನೀವು ಫ್ರೆಶ್ ಆಗಿ ಏಳ್ಬಹುದು.