Brain Disorder: ನರ್ತಿಸುತ್ತ ನಡೆಯುವಂತೆ ಮಾಡುವ ಕೊರಿಯಾ ಡಿಸಾರ್ಡರ್ !

Suvarna News   | Asianet News
Published : Mar 25, 2022, 06:49 PM ISTUpdated : Mar 25, 2022, 06:50 PM IST
Brain Disorder: ನರ್ತಿಸುತ್ತ ನಡೆಯುವಂತೆ ಮಾಡುವ ಕೊರಿಯಾ ಡಿಸಾರ್ಡರ್ !

ಸಾರಾಂಶ

ಕೆಲವರು ನಿರ್ದಿಷ್ಟ ಲಯದೊಂದಿಗೆ ನರ್ತಿಸುತ್ತ (Dancing) ಓಡಾಡಿದಂತೆ ಕಾಣುತ್ತಾರೆ. ಇದು ಮೆದುಳಿಗೆ (Brain) ಸಂಬಂಧಿಸಿದ ಒಂದು ಸಮಸ್ಯೆ. ಮಿದುಳಿನ ಬೇಸಲ್ ಗ್ಯಾಂಗ್ಲಿಯಾ ಎನ್ನುವ ಪ್ರದೇಶಕ್ಕೆ ಹಾನಿಯುಂಟಾದಾಗ ಹೀಗಾಗುತ್ತದೆ. ಇದೇನು ? ವಿವರವಾಗಿ ತಿಳ್ಕೊಳ್ಳೋಣ.

ನರ್ತಿಸುತ್ತ (Dance) ಓಡಾಡುವವರನ್ನು (Walk) ನೀವು ಎಂದಾದರೂ ನೋಡಿದ್ದೀರಾ? ಒಂದು ರೀತಿಯ ಲಯದೊಂದಿಗೆ ದೇಹದ (Body) ಅವಯವಗಳನ್ನು ಅಲ್ಲಾಡಿಸುವವರನ್ನು ಕಂಡಿದ್ದೀರಾ? ಕೈಕಾಲು, ಸೊಂಟಗಳ ನಿರ್ದಿಷ್ಟ ಚಲನೆಯೊಂದಿಗೆ (Movement) ಡಾನ್ಸ್‌ ಮಾಡುವವರಂತೆ ಓಡಾಡುವವರನ್ನು ಸಮಾಜ ಅಪಹಾಸ್ಯ ಮಾಡುವುದಿದೆ. ಆದರೆ, ಇದನ್ನವರು ಬೇಕೆಂದೇ ಅಥವಾ ಉದ್ದೇಶಪೂರ್ವಕಾಗಿ ಮಾಡುವುದಿಲ್ಲ. ಇದೊಂದು ಡಿಸಾರ್ಡರ್ (Disorder).‌ ಮಿದುಳಿನ ಬೇಸಲ್‌ ಗ್ಯಾಂಗ್ಲಿಯಾ (Basal Ganglia) ಎನ್ನುವ ಪ್ರದೇಶಕ್ಕೆ ಏಟು ಬಿದ್ದರೆ “ಕೊರಿಯಾʼ (Chorea) ಎನ್ನುವ ಚಲನೆಗೆ ಸಂಬಂಧಿಸಿದ ಸಮಸ್ಯೆ ಸೃಷ್ಟಿಯಾಗುತ್ತದೆ.

ಮಿದುಳಿಗೆ (Brain) ಗಾಯವಾದರೆ ಸಾಮಾನ್ಯವಾಗಿ ಎಲ್ಲರೂ ಕಾಳಜಿ (care)  ವಹಿಸುತ್ತೇವೆ. ಸೂಕ್ತ ಪರೀಕ್ಷೆ, ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತೇವೆ. ಆದರೂ ಕೆಲವೊಮ್ಮೆ ಅನೇಕ ಕಾರಣಗಳಿಂದ ಮಿದುಳಿಗೆ ಶಾಶ್ವತವಾದ ಗಾಯವಾಗಿಬಿಡುತ್ತದೆ. ಅದರಿಂದ ಅನೇಕ ಸಮಸ್ಯೆಗಳು ಕಂಡುಬರಬಹುದು. ಒಂದೊಮ್ಮೆ ಮಿದುಳಿದ ಬೇಸಲ್‌ ಗ್ಯಾಂಗ್ಲಿಯಾ ಎನ್ನುವ ಭಾಗಕ್ಕೆ ಏಟಾದರೆ ಚಲನೆಗೆ ಸಂಬಂಧಿಸಿದ ಸಮಸ್ಯೆಗಳು ತಲೆದೋರುತ್ತವೆ. ಮಾಂಸಖಂಡಗಳು ಅನಿಯಂತ್ರಿತವಾಗಿ ಚಲಿಸುತ್ತವೆ, ಆಗ ನಮಗೆ ಆ ವ್ಯಕ್ತಿ ನರ್ತಿಸುವಂತೆ ಕಾಣುತ್ತದೆ.

Healthy Habits: ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರ್ತಿವೆ ಖುಷಿ ನೀಡುವ ಕೆಲಸಗಳು..!

ಚಲನೆಗೆ ಸಂಬಂಧಿಸಿದ ಸಮಸ್ಯೆ
ದೇಹದ ಮೇಲಿನ ನಿಯಂತ್ರಣ, ಭಂಗಿ, ಕೆಲವು ಚಲನೆಗಳು ಸಾಧ್ಯವಾಗುವುದಿಲ್ಲ. ಬೇಸಲ್‌ ಗ್ಯಾಂಗ್ಲಿಯಾ ಎಂದರೆ, ಒಂದು ಗುಂಪಿನ ರಚನೆ. ಇದರಲ್ಲಿ ಕಾಡೇಟ್‌, ಪ್ಯುಟಮೆನ್‌, ಗ್ಲೋಬಸ್‌ ಪಾಲಿಡಸ್‌, ಸಬ್‌ ಥಾಲಮಿಕ್‌ ನ್ಯೂಕ್ಲಿಯಸ್‌ ಭಾಗಗಳಿರುತ್ತವೆ. ಇವು ಮಿದುಳಿನ ತಳಭಾಗದಲ್ಲಿರುತ್ತವೆ. ಪ್ರತಿಯೊಂದೂ ಭಾಗಕ್ಕೂ ಇವುಗಳದ್ದೇ ಆದ ಕಾರ್ಯವಿಧಾನಗಳಿವೆ. ಜತೆಗೆ, ಇವು ಪರಸ್ಪರ ಬಂಧವನ್ನೂ ಹೊಂದಿವೆ. ಇವುಗಳ ಜಾಲವು ದೈಹಿಕ ಚಲನೆಯನ್ನು ನಿಯಂತ್ರಿಸುತ್ತದೆ. ಕೈಕಾಲುಗಳ ಚಲನೆ, ಕುತ್ತಿಗೆ ಸೇರಿದಂತೆ ದೇಹದ ಯಾವುದೇ ಅಂಗಾಂಗಗಳ ಕೌಶಲದ ಚಲನೆಗೂ ಬೇಸಲ್‌ ಗ್ಯಾಂಗ್ಲಿಯಾಗೂ ಸಂಬಂಧವಿರುತ್ತದೆ.

ನಿಮಗೆ ಗೊತ್ತೇ? ದೇಹದ ಯಾವುದೇ ಚಲನೆಗೆ ಎರಡು ಕಾರ್ಯಗಳು ಒಟ್ಟಾಗಿ ಆಗಬೇಕು. ಅಗೋನಿಸ್ಟ್‌ (Agonist) ಎಂದು ಕರೆಯಲಾಗುವ ಮಾಂಸಖಂಡಗಳು ಕಡ್ಡಾಯವಾಗಿ ಕುಗ್ಗಬೇಕು ಅಥವಾ ಸಂಕೋಚನಗೊಳ್ಳಬೇಕು ಹಾಗೂ ಆಂಟಗೋನಿಸ್ಟ್‌ (Antagonist) ಮಾಂಸಖಂಡಗಳು (Muscle) ಕಡ್ಡಾಯವಾಗಿ ರಿಲ್ಯಾಕ್ಸ್‌ ಆಗಬೇಕು. ಬೇಸಲ್‌ ಗ್ಯಾಂಗ್ಲಿಯಾ ಈ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಯಾವ ಮಾಂಸಖಂಡ ಚುರುಕಾಗಬೇಕು ಹಾಗೂ ಯಾವ ಮಾಂಸಖಂಡ ಸುಮ್ಮನಿರಬೇಕು ಎನ್ನುವ ಕ್ರಿಯೆಯ ಮೇಲುಸ್ತುವಾರಿ ಇದರದ್ದೇ ಆಗಿದೆ. ನಿರ್ದಿಷ್ಟ ಮಾಂಸಖಂಡಗಳ ಗುಂಪಿಗೆ ಸಂದೇಶ ರವಾನಿಸುವ ಮೂಲಕ ಇದು ಸಾಧ್ಯವಾಗುತ್ತದೆ.

ಕೊರೋನಾ ಕಡಿಮೆಯಾದ್ರೂ ಆರೋಗ್ಯ ಸಮಸ್ಯೆ ಹಾಗೇ ಇದ್ಯಾ ? ಅದಕ್ಕೇನು ಕಾರಣ ತಿಳ್ಕೊಳ್ಳಿ

ಉದಾಹರಣೆಗೆ, ನಿಮಗೆ ಚಮಚವನ್ನು ಕೈಗೆತ್ತಿಕೊಳ್ಳಬೇಕು, ಆಗ ನೀವು ತೋಳನ್ನು ಚಾಚಬೇಕು. ಆದರೆ, ಆಗ ನಿಮ್ಮ ಬೈಸೆಪ್‌ ಮಾಂಸಖಂಡಕ್ಕೂ ಅಲ್ಲಿ ನಡೆಯುವ ಕ್ರಿಯೆಗೂ ಪರಸ್ಪರ ವಿರೋಧಾಭಾಸ ಉಂಟಾಗಬಾರದು. ಹೀಗಾಗಿ, ಬೇಸಲ್‌ ಗ್ಯಾಂಗ್ಲಿಯಾ ಬೈಸೆಪ್‌ ಮಾಂಸಖಂಡಗಳಿಗೆ ಸುಮ್ಮನಿರುವಂತೆ ಸಂದೇಶ ರವಾನಿಸುತ್ತದೆ. ಆಗ ನಿಮಗೆ ಸುಲಭವಾಗಿ ತೋಳನ್ನು ಚಾಚಲು ಸಾಧ್ಯವಾಗುತ್ತದೆ. ದುರದೃಷ್ಟವಶಾತ್‌ ಬೇಸಲ್‌ ಗ್ಯಾಂಗ್ಲಿಯಾಕ್ಕೆ ಹಾನಿಯಾಗಿದ್ದರೆ ಈ ಸಾಮರಸ್ಯ ಸಾಧ್ಯವಾಗುವುದಿಲ್ಲ. ಅಗೋನಿಸ್ಟ್‌ ಹಾಗೂ ಆಂಟಗೋನಿಸ್ಟ್‌ ಮಾಂಸಖಂಡಗಳು ಒಟ್ಟಿಗೇ ಕ್ರಿಯಾಶೀಲವಾಗಿಬಿಡುತ್ತವೆ. ಆಗ ಚಲನೆಗೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

ಮಿದುಳಿನ ಬೇಸಲ್‌ ಗ್ಯಾಂಗ್ಲಿಯಾಕ್ಕೆ ಹಾನಿಯಾಗಿದೆ ಎನ್ನುವುದು ಕೆಲವು ರೀತಿಯ ಚಲನೆಗಳಿಂದ ತಿಳಿದುಬರುತ್ತದೆ. ಅವುಗಳಲ್ಲಿ ಕೊರಿಯಾ ಕೂಡ ಒಂದು. ಕೊರಿಯಾ ಸಮಸ್ಯೆಯಾದಾಗ ವಿಚಿತ್ರ ರೀತಿಯಲ್ಲಿ ಮನುಷ್ಯ ಚಲಿಸುತ್ತಾನೆ. ದೇಹದ ಒಂದೇ ಭಾಗವನ್ನು ಪದೇ ಪದೆ ಚಲಿಸಬಹುದು, ನರ್ತಿಸುವಂತೆ ಚಲಿಸಬಹುದು, ಥಟ್ಟನೆ ಯಾವುದೋ ಭಾಗದ ಚಲನೆಯಾಗಬಹುದು.

ಕೊರಿಯಾ ಎಂದರೆ ಗ್ರೀನ್ ನಲ್ಲಿ ಡಾನ್ಸ್ !
ಕೊರಿಯಾ ಸಮಸ್ಯೆ ಕೆಲವೊಮ್ಮೆ ಅನುವಂಶಿಕವಾಗಿಯೂ ಕಂಡುಬರಬಹುದು. ಈ ಸಮಸ್ಯೆಯನ್ನು ಸೂಕ್ತ ಔಷಧಗಳ ಮೂಲಕ, ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ಮಾಡಿಕೊಳ್ಳಬಹುದು. ಆದರೆ, ಇವು ಶಾಶ್ವತ ಪರಿಹಾರಗಳಲ್ಲ. ಇತ್ತೀಚೆಗೆ, ನ್ಯೂರೋಪ್ಲಾಸ್ಟಿಸಿಟಿ (Neuroplasticity) ವಿಧಾನವೂ ಚಾಲ್ತಿಯಲ್ಲಿದೆ. ನಿಗದಿತ ಥೆರಪಿ ಹಾಗೂ ವ್ಯಾಯಾಮಗಳ ಮೂಲಕ ಮಿದುಳಿನ ಸಾಮರ್ಥ್ಯವನ್ನು ಉದ್ದೀಪಿಸಲಾಗುತ್ತದೆ. ಅಂದ ಹಾಗೆ, ಕೊರಿಯಾ ಎಂದರೆ ಗ್ರೀಕ್ (Greek) ಭಾಷೆಯಲ್ಲಿ ಡಾನ್ಸ್ ಎಂದರ್ಥ. ಹೀಗಾಗಿಯೇ ಇದಕ್ಕೆ ಕೊರಿಯಾ ಡಿಸಾರ್ಡರ್ ಎನ್ನುವ ಹೆಸರು ಬಂದಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ