Summer Health : ಸಪ್ಪೆ ನೀರು ಕುಡ್ದು ಬೋರ್ ಆಗಿದ್ರೆ ರುಚಿ ಹೆಚ್ಚಾಗಲು ಹೀಗೆ ಮಾಡಿ

Suvarna News   | Asianet News
Published : Mar 25, 2022, 03:57 PM ISTUpdated : Mar 25, 2022, 04:00 PM IST
Summer Health : ಸಪ್ಪೆ ನೀರು ಕುಡ್ದು ಬೋರ್ ಆಗಿದ್ರೆ ರುಚಿ ಹೆಚ್ಚಾಗಲು ಹೀಗೆ ಮಾಡಿ

ಸಾರಾಂಶ

ಪ್ರತಿ ದಿನ ನೀರು (Water) ಕುಡಿಯುವುದು ಅತ್ಯಗತ್ಯ. ದಿನದಲ್ಲಿ 8-10 ಗ್ಲಾಸ್ ನೀರು ಕುಡಿಯಲೇಬೇಕು. ಆದ್ರೆ ಬೇಸಿಗೆ (Summer)ಯಲ್ಲಿ ಯಾವಾಗ್ಲೂ ನೀರು ಕುಡಿಯುವಾಗ ಸಪ್ಪೆ ಅನಿಸ್ತಿದ್ಯಾ ? ನೀರಿನ ರುಚಿ (Taste) ಇನ್ನಷ್ಟು ಹೆಚ್ಚಾಗಬೇಕು ಹಾಗೇ ಹೆಚ್ಚುವರಿ ಆರೋಗ್ಯ (Health) ವೃದ್ಧಿಯಾಗ್ಬೇಕೆನ್ನುವವರು ನೀರಿಗೆ ಇದನ್ನು ಬೆರೆಸಬಹುದು

ಬೇಸಿಗೆ (Summer) ಯಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೇಹ ಡೀಹೈಡ್ರೇಟ್ (Dehydrate) ಆಗದಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ಬೆವರು (Sweat) ಹೆಚ್ಚು ಬರುವ ಕಾರಣ ಬೇಗ ಸುಸ್ತಾಗುತ್ತದೆ. ದೇಹದಲ್ಲಿರುವ ನೀರಿನ ಅಂಶ ಬೆವರಿನ ರೂಪದಲ್ಲಿ ಹೊರಗೆ ಬರುತ್ತದೆ. ಇದ್ರಿಂದ ರಕ್ಷಣೆ ಪಡೆಯಲು ಜನರು ನೀರಿನಾಂಶವಿರುವ ಆಹಾರ ಸೇವನೆಗೆ ಆದ್ಯತೆ ನೀಡ್ತಾರೆ. ಕೆಲವರು ಆರೋಗ್ಯಕರ ಹಣ್ಣಿನ ಜ್ಯೂಸ್ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಬಿಸಿಲ ಧಗೆ ತಪ್ಪಿಸಲು ನೆಚ್ಚಿನ ಪಾನೀಯಗಳ ಮೊರೆ ಹೋಗ್ತಾರೆ. ಇವೆಲ್ಲದರ ಹೊರತಾಗಿಯೂ ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ.

ಆದರೆ ಕೆಲವರಿಗೆ ಬೇಸಿಗೆಯಲ್ಸಲಿ ಪ್ಪೆ ನೀರು ಇಷ್ಟವಾಗುವುದಿಲ್ಲ. ಅಂಥವರು ಆರೋಗ್ಯಕರ, ಸುವಾಸನೆಯುಳ್ಳ ನೀರನ್ನು ಕುಡಿಯುವುದು ಒಳ್ಳೆಯದು. ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಬೇಕು. ಯಥೇಚ್ಛವಾಗಿ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ ಮತ್ತು ದೇಹವೂ ಹೈಡ್ರೇಟ್ ಆಗಿರುತ್ತದೆ. ನೀರಿಗೆ ವಿವಿಧ ರುಚಿಗಳನ್ನು ಸೇರಿಸುವ ಮೂಲಕ ನೀವು ಅದನ್ನು ಇನ್ನಷ್ಟು ಆರೋಗ್ಯಕರ ಮತ್ತು ಪ್ರಯೋಜನಕಾರಿ ಮಾಡಬಹುದು. ಇಂದು ಸುವಾಸನೆಯ ನೀರನ್ನು ಹೇಗೆ ತಯಾರಿಸಬೇಕೆಂದು ನಾವು ಹೇಳ್ತೇವೆ.

ಸುವಾಸನೆಯ ನೀರು ತಯಾರಿಸೋದು ಹೇಗೆ ?  :
ಪುದೀನಾ ನೀರು (Pudina Water) : ಒಂದು ಬಾಟಲಿ ಹಾಗೂ ನೀರನ್ನು ತೆಗೆದುಕೊಳ್ಳಿ. ನೀರನ್ನು ಬಾಟಲಿಗೆ ತುಂಬಿಸಿ. ಅದಕ್ಕೆ ಸ್ವಲ್ಪ ಪುದೀನಾ ಎಲೆಗಳನ್ನು ಹಾಕಿ. ಹಾಗೆ ಸ್ವಲ್ಪ ಸಕ್ಕರೆ ಹಾಕಿ. ಸ್ವಲ್ಪ ಹುಳಿ ಬೇಕು ಎನ್ನುವವರು ಅದಕ್ಕೆ ನಿಂಬೆ ರಸವನ್ನು ಹಾಕಬಹುದು. ರುಚಿಯಾದ ಪುದೀನಾ ನೀರು ಸಿದ್ಧವಾಗುತ್ತದೆ. ಬಾಯಾರಿಕೆಯಾದಾಗ ಸ್ವಲ್ಪ ಸ್ವಲ್ಪವಾಗಿ ಈ ನೀರನ್ನು ಕುಡಿಯಿರಿ. ಒಂದು ವೇಳೆ ಬಾಟಲಿಯಲ್ಲಿರುವ ನೀರು ಖಾಲಿಯಾದ್ರೆ ಮತ್ತೆ ಬಾಟಲಿಗೆ ನೀರು ಹಾಕಿ.  ಪುದೀನಾ ನೀರು ಟೇಸ್ಟಿ ಮಾತ್ರವಲ್ಲದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.  

ಮಾನವನ ರಕ್ತದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದ ಸೂಕ್ಷ್ಮ ಪ್ಲಾಸ್ಟಿಕ್, ವಿಜ್ಞಾನಿಗಳ ಎಚ್ಚರಿಕೆ!

ಪುದೀನ ನೀರಿನ ಪ್ರಯೋಜನಗಳು : 
ಪುದೀನಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪುದೀನಾದಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿ ಕಂಡುಬರುತ್ತವೆ. ಪುದೀನಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಪುದೀನಾ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯೂ ಆರೋಗ್ಯಕರವಾಗಿರುತ್ತದೆ.

ದಾಲ್ಚಿನಿ ನೀರು : ಪುದೀನಾ ಬೇಡ ಎನ್ನುವವರು ದಾಲ್ಚಿನಿ (Cinnamon) ನೀರನ್ನು ಕೂಡ ಸೇವನೆ ಮಾಡಬಹುದು. ಪುದೀನಾ ನೀರು ತಯಾರಿಸಿದಂತೆ ಬಾಟಲಿಗೆ ಒಂದೆರಡು ದಾಲ್ಚಿನಿ ಎಲೆಯನ್ನು ಹಾಕಬೇಕು. 

ದಾಲ್ಚಿನಿ ನೀರಿನ ಪ್ರಯೋಜನ : ದಾಲ್ಚಿನಿ ಔಷದಿ ಗುಣಗಳಿಂದ ಸಮೃದ್ಧವಾಗಿದೆ. ದಾಲ್ಚಿನಿಯಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳಿವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವೈರಲ್ ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಇದು ಸಹಾಯಕವಾಗಿದೆ. ಅಲ್ಲದೆ, ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಮತ್ತು ಋತುಮಾನದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ. 

Mental Health: ಮಾನಸಿಕವಾಗಿ ತೊಂದರೆಯಲ್ಲಿರೋರಿಗೆ ನಿಮ್ಮ ಸಹಾಯ ಹೀಗಿರಲಿ

ನಿಂಬೆ ನೀರು : ನೀರಿಗೆ ನೀವು ಸ್ವಲ್ಪ ನಿಂಬೆ (Lemon) ರಸವನ್ನು ಬೆರೆಸಿ ಅದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಈ ನೀರನ್ನು ಆಗಾಗ ಸೇವನೆ ಮಾಡ್ತಿರಿ. 

ನಿಂಬೆ ನೀರಿನ ಪ್ರಯೋಜನ : ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ನಿಂಬೆ ಹಣ್ಣಿನಲ್ಲಿವೆ. ಇದು ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಿ, ನಿರ್ಜಲೀಕರಣದಂತಹ ಸಮಸ್ಯೆ ಬರದಂತೆ ತಡೆಯುತ್ತದೆ. ನೀರಿಗೆ ಸಕ್ಕರೆ ಬೇಡ ಎನ್ನುವವರು ಬೆಲ್ಲವನ್ನು ಬಳಸಬಹುದು. ಬೆಲ್ಲ ಬಾಯಾರಿಗೆಯನ್ನು ಕಡಿಮೆ ಮಾಡುವ ಜೊತೆಗೆ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಗಿಲು, ಕಿಟಕಿ ಮುಚ್ಚಿ ಬಾತ್‌ರೂಮ್ ಕ್ಲೀನ್ ಮಾಡ್ತೀರಾ? ಈ ಸತ್ಯ ತಿಳಿದರೆ ಶಾಕ್ ಆಗ್ತೀರಾ!
ಚಳಿಗಾಲದಲ್ಲಿ ಪ್ರತಿದಿನ ಎಳ್ಳು ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?