Kids Care : ಬಾಲ್ಯದಲ್ಲೇ ಮಕ್ಕಳ ಕೂದಲು ಉದುರ್ತಿದ್ದರೆ ಕಾರಣ ತಿಳಿದು ಚಿಕಿತ್ಸೆ ನೀಡಿ

By Suvarna NewsFirst Published Jul 1, 2022, 5:16 PM IST
Highlights

ಈಗಿನ ಜೀವನ ಶೈಲಿ ಬದಲಾಗಿದೆ. ಮಕ್ಕಳಿಗೆ ದೊಡ್ಡವರ ಖಾಯಿಲೆ ಕಾಣಿಸಿಕೊಳ್ತಿದೆ. ಚಿಕ್ಕ ಮಕ್ಕಳು ಕೂದಲು ಉದುರುವ ಸಮಸ್ಯೆ ಎದುರಿಸ್ತಿದ್ದಾರೆ. ಆರಂಭದಲ್ಲಿಯೇ ಚಿಕಿತ್ಸೆ ನೀಡಿದ್ರೆ ಸಮಸ್ಯೆಯನ್ನು ಬೇಗ ದೂರ ಮಾಡ್ಬಹುದು.
 

ಕೂದಲು (Hair) ಬೆಳ್ಳಗಾಗ್ತಿದೆ, ಕೂದಲು ಉದುರ್ತಾ ಇದೆ ಅಂದ್ರೆ ವಯಸ್ಸಾಯ್ತು ಅಂತಾ ಜನ ಭಾವಿಸ್ತಾ ಇದ್ರು. ಆದ್ರೆ ಈಗ ಯೌವನ (Youth) ದಲ್ಲಿ ಮಾತ್ರವಲ್ಲದೆ ಬಾಲ್ಯ (Childhood) ದಲ್ಲಿಯೂ ಕೆಲವು ಮಕ್ಕಳ (Children ) ಕೂದಲು ಉದುರಲು (fall) ಪ್ರಾರಂಭವಾಗಿದೆ. 12 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿ (Age) ನ ಮಕ್ಕಳಲ್ಲೂ ಕೂದಲು ವಿಪರೀತ ಉದುರುವುದುಂಟು. ಮಗುವಿನ ಕೂದಲು ಕೈಗೆ ಬರ್ತಿದೆ ಅಂದಾಗ ಸಾಮಾನ್ಯವಾಗಿ ಪಾಲಕರು ತಲೆಕೆಡಿಸಿಕೊಳ್ತಾರೆ. ಕೂದಲ ಆರೋಗ್ಯಕ್ಕೆ ಏನು ಮಾಡ್ಬೇಕೆಂದು ಚಿಂತಿತರಾಗ್ತಾರೆ. ಭಯದಲ್ಲಿ ಕೆಲವರು ವೈದ್ಯರ ಬಳಿ ಹೋಗುವುದಿದೆ. ಆದ್ರೆ ಮಕ್ಕಳಲ್ಲಿ ಕೂದಲು ಉದುರ್ತಿದೆ ಅಂದ್ರೆ ಅದು ಯಾವುದೇ ಅನಾರೋಗ್ಯದ ಕಾರಣವನ್ನು ಸೂಚಿಸುತ್ತಿದೆ ಅದ್ರ ಜೊತೆಗೆ ಮಗುವಿನ ಭಾವನೆಗೆ ಸಂಬಂಧಿಸಿದ ವಿಷ್ಯವೂ ಸೇರಿರುತ್ತದೆ. ನಿಮ್ಮ ಮಗುವಿನ ಕೂದಲು ಉದುರುತ್ತಿದ್ದರೆ ಪಾಲಕರಾದ ನೀವು ಮೊದಲು ಕಾರಣವನ್ನು ತಿಳಿದುಕೊಳ್ಳಬೇಕು.  ಹಾಗೆ ಅದಕ್ಕೆ ತಕ್ಕ ಚಿಕಿತ್ಸೆ ಶುರು ಮಾಡ್ಬೇಕು ಎನ್ನುತ್ತಾರೆ ತಜ್ಞರು. ಇಂದು ನಾವು ಮಕ್ಕಳ ಕೂದಲು ಉದುರಲು ಕಾರಣವೇನು ಎಂಬುದನ್ನು ಹೇಳ್ತೇವೆ.

ಮಕ್ಕಳಲ್ಲಿ ಕೂದಲು ಉದುರಲು ಕಾರಣ : 

ಟೆಲೋಜೆನ್ ಎಫ್ಲುವಿಯಮ್ (Telogen Effluvium): ಜ್ವರ ಅಥವಾ ಸೋಂಕು, ಗಾಯ, ಒತ್ತಡ ಮತ್ತು ವಿಟಮಿನ್ ಅಸಮತೋಲನದಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಶಾಶ್ವತ ಕೂದಲು ಉದುರುವಿಕೆಯಾಗಿದೆ. ಟೆಲೋಜೆನ್ ಎಫ್ಲುವಿಯಂನಲ್ಲಿ, ಮಕ್ಕಳು ಟೆಲೋಜೆನ್ ಹಂತಕ್ಕಿಂತ ಹೆಚ್ಚು ಕೂದಲನ್ನು ಕಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಹಂತದಲ್ಲಿ ಒಂದು ದಿನದಲ್ಲಿ 100 ಕೂದಲುಗಳು ಉದುರುತ್ತವೆ ಆದರೆ ಟೆಲೋಜೆನ್ ಎಫ್ಲುವಿಯಂನಲ್ಲಿ 300 ಕೂದಲುಗಳು ಒಂದು ದಿನದಲ್ಲಿ ಬೀಳಬಹುದು.  

ಅಲೋಪೆಸಿಯಾ ಅರೆಟಾ (Alopecia Areata ) ( ಬೊಕ್ಕತಲೆ): ಅಲೋಪೆಸಿಯಾ ಅರೆಟಾ ಕೂದಲಿನ ಮೇಲೆ ಹೆಚ್ಚಿನ ಒತ್ತಡದಿಂದ ಉಂಟಾಗುತ್ತದೆ. ನೀವು ದೀರ್ಘಕಾಲದವರೆಗೆ ಬಿಗಿಯಾದ ರಬ್ಬರ್ ಬ್ಯಾಂಡ್ ಅನ್ನು ಅನ್ವಯಿಸಿದರೆ ಅಥವಾ ಬಿಗಿಯಾದ ಕೂದಲನ್ನು ಕಟ್ಟಿದ್ದರೆ ಹೀಗಾಗುತ್ತದೆ. ಇದರಿಂದಾಗಿ ತುರಿಕೆ, ನೆತ್ತಿಯ ಮೇಲೆ ಕೆಂಪಾಗುವುದು ಮತ್ತು ಅಲ್ಲಲ್ಲಿ ಕೂದಲು ಸಂಪೂರ್ಣ ಉದುರಿರುವುದನ್ನು ನೀವು ನೋಡ್ಬಹುದು. ಕೂದಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಬಹುದು. ಅಲೋಪೆಸಿಯಾ ಅರೆಟಾ ಎಂಬುದು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದರಲ್ಲಿ ಸಂಪೂರ್ಣ ಬೋಳು ಉಂಟಾಗುತ್ತದೆ ಮತ್ತು ಹುಬ್ಬು ಮತ್ತು ರೆಪ್ಪೆಗೂದಲುಗಳ ಉದುರಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ:: Child Care: ಮಕ್ಕಳಿಗೆ ನಾನ್ ವೆಜ್ ಕೊಡಬಹುದಾ? ಯಾವಾಗ ಏಕೆ?

ಪೋಷಕಾಂಶ (Nutrition) ಗಳ ಕೊರತೆ : ಮಕ್ಕಳಲ್ಲಿ ಕಬ್ಬಿಣ, ಸತು, ಬಯೋಟಿನ್, ನಿಸಿನ್ ಮತ್ತು ಪ್ರೋಟೀನ್‌ನಂತಹ ಅಗತ್ಯವಾದ ಪೋಷಕಾಂಶಗಳ ಕೊರತೆಯಿಂದಾಗಿ  ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಪೌಷ್ಟಿಕಾಂಶದ ಕೊರತೆಯಿಂದಾಗಿ, ಬುಲಿಮಿಯಾ ಮತ್ತು ಅನೋರೆಕ್ಸಿಯಾದಂತಹ ತಿನ್ನುವ ಅಸ್ವಸ್ಥತೆಗಳು ಮಕ್ಕಳಲ್ಲಿ ಕಂಡುಬರುತ್ತವೆ. ಮಕ್ಕಳ ಕೂದಲು ಆರೋಗ್ಯಕರವಾಗಿರಬೇಕೆಂದ್ರೆ ಮಕ್ಕಳಿಗೆ ಪೋಷಕಾಂಶವಿರುವ ಆಹಾರವನ್ನು ನೀಡ್ಬೇಕು, ಫಾಸ್ಟ್ ಫುಡ್ ಹಾಗೂ ಕುರುಕಲು ತಿಂಡಿಗಳಿಂದ ದೂರವಿಡಬೇಕು.
ಇದಲ್ಲದೆ, ಮಕ್ಕಳಲ್ಲಿ ಕೂದಲು ಉದುರುವಿಕೆ ಥೈರಾಯ್ಡ್, ಮಧುಮೇಹ ಮೆಲ್ಲಿಟಸ್, ರಕ್ತಹೀನತೆ ಇತ್ಯಾದಿಗಳಿಂದ ಉಂಟಾಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: Parenting Tips: ನಿಮ್ಮ ಮಗು ಯಾವ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲದು? ಕಂಡು ಹಿಡಿಯುವುದು ಹೀಗೆ

ವೈದ್ಯರ ಭೇಟಿ ಯಾವಾಗ ? :  ನೆತ್ತಿಯ ಮೇಲೆ ತುರಿಕೆ ಅಥವಾ ಕೆಂಪಾಗುವುದು, ಹುಬ್ಬು ಮತ್ತು ರೆಪ್ಪೆಗಳಲ್ಲಿ ಕೂದಲು ಉದುರುವುದು, ನೆತ್ತಿಯ ಮೇಲೆ ಬೋಳು ಗುರುತುಗಳು, ಅತಿಯಾದ ಕೂದಲು ಉದುರುವಿಕೆ ಮತ್ತು ನೆತ್ತಿಯ ಮೇಲೆ ಗಾಯದಂತಹ ಲಕ್ಷಣಗಳು ಕಂಡುಬಂದಲ್ಲಿ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಈ ಸಂದರ್ಭದಲ್ಲಿ  ಮಗುವಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪಾಲಕರು ಪ್ರಯತ್ನಿಸಬೇಕಾಗುತ್ತದೆ.

click me!