National Doctors Day: ಪ್ರಿಸ್ಕ್ರಿಪ್ಷನ್‌ನಲ್ಲಿ ಡಾಕ್ಟರ್ ಬಳಸೋ ಕೋಡ್ ವರ್ಡ್ ಅರ್ಥ ಗೊತ್ತಾ?

By Suvarna NewsFirst Published Jul 1, 2022, 4:23 PM IST
Highlights

ಹುಷಾರಿಲ್ಲ ಅಂತ ಡಾಕ್ಟರ್ ಬಳಿ ಹೋದ್ರೆ ಪರೀಕ್ಷೆ ಮಾಡಿ ಚೀಟಿಯಲ್ಲಿ ವೈದ್ಯರು ಏನೇನೋ ಬರೀತಾರೆ. ಅದ್ಯಾವುದೂ ಮನೆಗೆ ಸರಿ ತಿಳಿಯೋದಿಲ್ಲ. ನಾಲ್ಕೈದು ಬಾರಿ ಮಾತ್ರೆ ಬಗ್ಗೆ ವಿಚಾರಿಸಿ ಮನೆಗೆ ಬರ್ತೇವೆ. ಅದ್ರ ಬದಲು ವೈದ್ಯರ ಕೆಲ ಶಬ್ಧದ ಅರ್ಥ ಗೊತ್ತಿದ್ರೆ ಟೆನ್ಷನ್ ಮಾಡ್ಕೊಳ್ಳೋದು ತಪ್ಪುತ್ತೆ.
 

ಪ್ರತಿ ವರ್ಷ ಜುಲೈ ಒಂದನೇ ತಾರೀಕು ರಾಷ್ಟ್ರೀಯ ವೈದ್ಯರ ದಿನ (National Doctors Day )ಆಚರಣೆ ಮಾಡಲಾಗುತ್ತದೆ. ತಮ್ಮ ಜೀವನ ಮುಡುಪಿಟ್ಟು, ಜನಸೇವೆಯಲ್ಲಿ ತೊಡಗಿರುವ ವೈದ್ಯ (Doctor) ರಿಗೆ ಧನ್ಯವಾದ ಹೇಳಲು ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ವೈದ್ಯರ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಅಥವಾ ಅವರ ಕೈಬರಹ (Handwriting) ವನ್ನು ಓದುವುದು ತುಂಬಾ ಕಷ್ಟ. ವೈದ್ಯರಿಗೆ ಬಿಟ್ರೆ ಔಷಧಿ ಮಳಿಗೆಯಲ್ಲಿರುವ ವ್ಯಕ್ತಿಗೆ ಮಾತ್ರ ಅವರ ಕೈಬರಹ ಅರ್ಥವಾಗಲು ಸಾಧ್ಯ. ನೀವು ಗಮನಿಸಿರಬಹುದು ವೈದ್ಯರು ನಮಗೆ ನೀಡುವ ಮಾತ್ರೆ ಚೀಟಿ ಮೇಲೆ ಕೆಲವೊಂದು ಶಬ್ಧ ಬರೆಯುತ್ತಾರೆ. ಆ ಶಬ್ಧದ ಅರ್ಥ ನಮಗೆ ತಿಳಿದಿರೋದಿಲ್ಲ. ಉದಾಹರಣೆಗೆ Rx, AC ಮತ್ತು AMP ಇತ್ಯಾದಿ. ಅದು ಏನು ಎಂದು ಕೆಲವರು ತಲೆಕೆಡಿಸಿಕೊಳ್ತಾರೆ. ಇಂದು ವೈದ್ಯರು ಬರೆದ ಅಂತಹ 10 ಪದಗಳ ಅರ್ಥವನ್ನು ನಾವು ನಿಮಗೆ ಹೇಳ್ತೇವೆ.

ಕ್ಯೂಡಿ (QD) : ಪ್ರಿಸ್ಕ್ರಿಪ್ಷನ್‌ನಲ್ಲಿ ಔಷಧಿಗಳ ಜೊತೆಗೆ ಕ್ಯೂಡಿ ಎಂದು ವೈದ್ಯರು ಬರೆದಿರುತ್ತಾರೆ. QD (Quarter In Die) ಅಂದ್ರೆ ನೀವು ದಿನಕ್ಕೆ ನಾಲ್ಕು ಬಾರಿ ಈ ಔಷಧಿಯನ್ನು ತೆಗೆದುಕೊಳ್ಳಬೇಕು ಎಂದರ್ಥ. 

ಚಾಕೋಲೇಟ್‌ ಪ್ರಿಯರಾ ? ಹರಡ್ತಿದೆ ಸಾಲ್ಮೊನೆಲ್ಲಾ ಸೋಂಕು, ಎಚ್ಚರವಿರಲಿ

ಆರ್ಎಕ್ಸ್ (Rx) (To Take) : ವೈದ್ಯರು ಯಾವಾಗಲೂ ತಮ್ಮ ಪ್ರಿಸ್ಕ್ರಿಪ್ಷನ್‌ ಆರಂಭದಲ್ಲಿ Rx ಚಿಹ್ನೆ  ಇಡುವುದನ್ನು ನೀವು ಗಮನಿಸಿರಬೇಕು. ಟೇಕ್ ಎಂದರೆ ತೆಗೆದುಕೊಳ್ಳುವುದು ಎಂದರ್ಥ. ವೈದ್ಯರು ಪ್ರಿಸ್ಕ್ರಿಪ್ಷನ್‌ನಲ್ಲಿ Rx ಅನ್ನು ಬರೆದರೆ ಮತ್ತು ಅದರ ನಂತರ ಅವರು ಔಷಧಿಗಳ ಹೆಸರನ್ನು ಬರೆದರೆ, ನೀವು ಈ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದರ್ಥ.

ಎಸಿ (AC) : ವೈದ್ಯರು ಪ್ರಿಸ್ಕ್ರಿಪ್ಷನ್‌ ನಲ್ಲಿ ಎಸಿ ಎಂದು ಬರೆದಿದ್ದಾರೆ ಎಂದರೆ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಆಹಾರ ಸೇವನೆ ಮೊದಲು ನೀವು ತಿನ್ನಬೇಕು ಎಂದರ್ಥ. 

ಪಿಸಿ (PC) :  ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ನಲ್ಲಿ ಪಿಸಿ ಎಂದು ಬರೆದಿದ್ದರೆ, ನಿಮಗೆ ಸೂಚಿಸಿದ ಔಷಧಿಗಳನ್ನು ಆಹಾರ ಸೇವಿಸಿದ ನಂತರ ನೀವು ತೆಗೆದುಕೊಳ್ಳಬೇಕು ಎಂದರ್ಥ.

ಒಡಿ (OD) : ವೈದ್ಯರು ಔಷಧಗಳನ್ನು ತೆಗೆದುಕೊಳ್ಳಲು ಓಡಿ ಗುರುತು ಹಾಕಿದ್ದರೆ, ನೀವು ದಿನಕ್ಕೆ ಒಂದು ಬಾರಿ ಮಾತ್ರ ಆ ಔಷಧಿಯನ್ನು ತೆಗೆದುಕೊಳ್ಳಬೇಕು ಎಂದರ್ಥ.

ಬಿಡಿ (BD) : ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ನಲ್ಲಿ ಬಿಡಿ ಎಂದು ಬರೆದಿದ್ದರೆ, ನೀವು ದಿನಕ್ಕೆ ಎರಡು ಬಾರಿ ಆ ಔಷಧಿಯನ್ನು ತೆಗೆದುಕೊಳ್ಳಬೇಕು ಎಂದರ್ಥ

ಇದನ್ನೂ ಓದಿ: ಎರಡನೇ ಬಾರಿ ಕೋವಿಡ್ ಸೋಂಕು ತಗುಲಿದರೆ ಅಪಾಯ ಹೆಚ್ಚು!

ಟಿಡಿ (TD) : ಮತ್ತೊಂದೆಡೆ, ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ನಲ್ಲಿ ಟಿಡಿ ಬರೆದಿದ್ದರೆ, ಇದರರ್ಥ ದಿನಕ್ಕೆ ಮೂರು ಬಾರಿ ಅಂದರೆ ನೀವು ದಿನಕ್ಕೆ ಮೂರು ಬಾರಿ ಈ ಔಷಧಿಯನ್ನು ತೆಗೆದುಕೊಳ್ಳಬೇಕು.

ಎಸ್ ಒಎಸ್ (SOS) : ಅನೇಕ ಬಾರಿ ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ (Prescription) ನಲ್ಲಿ SOS ಅನ್ನು ಬರೆಯುತ್ತಾರೆ. ಇದರರ್ಥ ನಿಮಗೆ ಔಷಧಿ ಅಗತ್ಯವಿದ್ದಾಗ ಮಾತ್ರ ನೀವು ಆ ಔಷಧಿಯನ್ನು ತೆಗೆದುಕೊಳ್ಳಬೇಕು. ಜ್ವರ ಅಥವಾ ವಾಂತಿಗೆ ವೈದ್ಯರು ಸಾಮಾನ್ಯವಾಗಿ ಔಷಧಿಯನ್ನು ಕೊಡುತ್ತಾರೆ. ಹಾಗಾಗಿ ಜ್ವರ ಅಥವಾ ವಾಂತಿ ಬಂದಾಗ ಔಷಧಿ ಸೇವಿಸಿ ಎಂಬ ಸೂಚನೆಯಾಗಿದೆ.

ಎಎಂಪಿ (AMP) : ವೈದ್ಯರು ಪ್ರಿಸ್ಕ್ರಿಪ್ಷನ್‌ನಲ್ಲಿ AMP ಎಂದು ಬರೆದಿದ್ದರೆ, ಇದರರ್ಥ ನೀವು ಪಡೆಯಬೇಕಾದ ಇಂಜೆಕ್ಷನ್ ಇದು ಎಂದರ್ಥ. ವೈದ್ಯರು ಹೇಳಿದಾಗ ನೀವು ಈ ಇಂಜೆಕ್ಷನ್ (injection ) ಹಾಕಿಸಿಕೊಳ್ಳಬೇಕಾಗುತ್ತದೆ.

ಟಿಎಬಿ (TAB) : ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ನಲ್ಲಿ TAB ಎಂದು ಬರೆದರೆ, ಅದು ಟ್ಯಾಬ್ಲೆಟ್ (tablet) ಅಥವಾ ಮಾತ್ರೆ ಎಂದರ್ಥ.
 

click me!