ಗಸಗಸೆ ಎಂದರೆ ಥಟ್ಟಂತ ನೆನಪಾಗೋದು ಸಿಹಿ ತಿಂಡಿಗಳು. ಪಾಯಸ ಮಾಡಿ ಕುಡಿದರಂತೂ ಅದ್ಭುತ ರುಚಿಯಿರುತ್ತದೆ. ಗಸಗಸೆಯು ರುಚಿಯಾಗಿರುವುದು ಮಾತ್ರವಲ್ಲದೆ ಉತ್ತಮ ಆರೋಗ್ಯಕ್ಕೂ ಕಾರಣವಾಗುತ್ತದೆ. ಅದ್ಹೇಗೆ ತಿಳಿಯೋಣ.
ಗಸಗಸೆಯು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಉತ್ತಮ ಆರೋಗ್ಯವನ್ನೂ ಕಾಯ್ದುಕೊಳ್ಳುತ್ತದೆ. ಯಾಕೆಂದರೆ ಗಸಗಸೆಯಲ್ಲಿ ಸಾಕಷ್ಟು ವಿಟಮಿನ್, ಫೈಬರ್ ಗಳಿವೆ. ಮಹಿಳೆಯರಲ್ಲಿ ಬಂಜೆತನಕ್ಕೆ ಚಿಕಿತ್ಸೆ ನೀಡುವುದಲ್ಲದೆ ಹೃದಯ, ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ಗಸಗಸೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ. ಇಲ್ಲಿದೆ ಅದರ ಮಾಹಿತಿ.
ಮಲಬದ್ಧತೆ ನಿವಾರಣೆ: ಗಸಗಸೆ ಸೇವನೆ ಮಲಬದ್ಧತೆ (Constipation) ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ. ಹಾಗೆ ಹೊಟ್ಟೆಯಲ್ಲಿನ ವೇಸ್ಟ್ ಗ್ಯಾಸ್ ಅನ್ನೂ ತೆಗೆದುಹಾಕುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ಗಸಗಸೆ ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ, ಗ್ಯಾಸ್ಟಿçಕ್, ಸಮಸ್ಯೆಗಳನ್ನು ನಿವಾರಿಸುತ್ತದೆ. ಏಕೆಂದರೆ ಇದರಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದೆ.
undefined
ನಿದ್ರಾಹೀನತೆ: ಗಸಗಸೆಯನ್ನು ಬೆಚ್ಚಗಿನ ಹಾಲು, ಸಕ್ಕರೆಯೊಂದಿಗೆ ತೆಗೆದುಕೊಳ್ಳುವುದರಿಂದ ನಿದ್ರಾಹೀನತೆ ಗುಣಪಡಿಸಬಹುದು. ಇದನ್ನು ಸೇವಿಸುವುದರಿಂದ ಸ್ನಾಯುಗಳು ಶಾಂತವಾಗಿರಿಸಿ ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಅಂದರೆ ಒತ್ತಡದ ಹಾರ್ಮೋನ್ ಅನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನಿಮಗೆ ನಿದ್ದೆ (Sleep) ಬರುವಂತೆ ಮಾಡುತ್ತದೆ. ಮಲಗುವ ಒಂದು ಗಂಟೆಯ ಮೊದಲು ಹಾಲಿನಲ್ಲಿ ಗಸಗಸೆಯನ್ನು ಸೇರಿಸಿ ಕುಡಿದರೆ ನಿದ್ರೆ ಉತ್ತಮವಾಗಿ ಮಾಡಬಹುದು.
Pregnancy Food: ಗರ್ಭಾವಸ್ಥೆಯಲ್ಲಿ ಗಸಗಸೆ ಬೀಜ ತಿಂದರೆ ಏನಾಗುತ್ತದೆ?
ರೋಗನಿರೋಧಕ ಶಕ್ತಿ: ಗಸಗಸೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಸತುವು ಸಮೃದ್ಧವಾಗಿದ್ದು, ಚಯಾಪಚಯ ಕ್ರಿಯೆಯನ್ನು ಬಲಪಡಿಸಿ, ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಹಲವಾರು ದೀರ್ಘಕಾಲದ ಕಾಯಿಲೆ (Disease)ಗಳಿಂದ ರಕ್ಷಿಸುತ್ತದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸಿ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ದೂರಮಾಡುತ್ತದೆ.
ಬಂಜೆತನಕ್ಕೆ ಚಿಕಿತ್ಸೆ: ಗಸಗಸೆ ಸೇವನೆ ಮಹಿಳೆ (Woman)ಯರಲ್ಲಿ ಬಂಜೆತನ ನಿವಾರಿಸುವುದಲ್ಲದೆ, ಸಂತಾನೋತ್ಪತ್ತಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಜೊತೆಗೆ ಇದರ ಸೇವನೆಯು ಲೈಂಗಿಕ ಆರೋಗ್ಯವನ್ನು ಹೆಚ್ಚಿಸಿ, ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಹೃದಯ: ಹೃದಯದ (Heart) ಆರೋಗ್ಯಕ್ಕೆ ಬೇಕಾದ ಎಲ್ಲಾ ಗುಣಗಳು ಇದರಲ್ಲಿದೆ. ಕಬ್ಬಿಣದ ಅಂಶ ಹೇರಳವಾಗಿದ್ದು ರಕ್ತ ಶುದ್ಧೀಕರಿಸುತ್ತದೆ. ಜೊತೆಗೆ ಕೆಂಪು ರಕ್ತ ಕಣಗಳು ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆಹಾರದ ಫೈಬರ್ ಮತ್ತು ಓಲಿಕ್ ಆಮ್ಲದ ಸಮೃದ್ಧಿಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಒಮೆಗಾ -೬ ಕೊಬ್ಬಿನಾಮ್ಲಗಳು ಅತ್ಯಂತ ಪ್ರಯೋಜನಕಾರಿಯಾಗಿದ್ದು ಹೃದಯಾಘಾತ, ಹೃದಯ ಕಾಯಿಲೆಗಳು ತಡೆಯುತ್ತದೆ.
ಮೂಳೆ ಬಲಪಡಿಸುವುದು: ಗಸಗಸೆ ಬೀಜಗಳು ಅಪಾರ ಪ್ರಮಾಣದ ಕ್ಯಾಲ್ಸಿಯಂ, ಸತು ಮತ್ತು ತಾಮ್ರವನ್ನು ಒಳಗೊಂಡಿದೆ. ಈ ಎಲ್ಲಾ ಖನಿಜಗಳು ಮೂಳೆ (Bone)ಗಳನ್ನು ಬಲಪಡಿಸಲು, ಮೂಳೆ ಖನಿಜ ಸಾಂದ್ರತೆಯನ್ನು ಹೆಚ್ಚಿಸಲು ಮತ್ತು ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಕಾಲಜನ್ ಉತ್ಪಾದನೆಗೆ ಸಹಾಯ ಮಾಡಿ, ವಯಸ್ಸಾದವರಲ್ಲಿ ಮೂಳೆಗಳ ಸಾಂದ್ರತೆಯನ್ನು ಕಾಪಾಡಿಕೊಳ್ಳುತ್ತದೆ.
ಕೆಲ ತರಕಾರಿ, ಹಣ್ಣಿ ಬೀಜವನ್ನು ಅಪ್ಪಿತಪ್ಪಿಯೂ ತಿನ್ನಬಾರದು!
ಕ್ಯಾನ್ಸರ್ : ಗಸಗಸೆ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಗೆಡ್ಡೆಗಳ ವಿರುದ್ಧ ಹೋರಾಡಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜತೆಗೆ ಗಸಗಸೆಯನ್ನು ಕ್ಯಾನ್ಸರ್ ಔಷಧಿಗಳಲ್ಲಿ ಬಳಸಲಾಗುತ್ತದೆ, ಇದು ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ಕುಗ್ಗಿಸಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ ಮತ್ತು ಕ್ಯಾನ್ಸರ್ ಹುಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ.
ದೃಷ್ಟಿ ಸುಧಾರಣೆ: ಗಸಗಸೆಯಲ್ಲಿ ಸತುವಿನಂತಹ ಖನಿಜಗಳು ದೃಷ್ಟಿ ಸುಧಾರಿಸುತ್ತದೆ. ಜೊತೆಗೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಣ್ಣುಗಳಿಗೂ ಪ್ರಯೋಜನಕಾರಿ. ದೇಹವನ್ನು ತಂಪಾಗಿಸಿ, ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ. ಪುಡಿಮಾಡಿದ ಒಣ ತೆಂಗಿನಕಾಯಿಯನ್ನು ಗಸಗಸೆ ಬೀಜಗಳು ಮತ್ತು ಪುಡಿ ಮಾಡಿದ ಸಕ್ಕರೆಯೊಂದಿಗೆ ನೆಕ್ಕುವುದರಿಂದ ಬಾಯಿ ಹುಣ್ಣಿನಿಂದ ತ್ವರಿತ ಪರಿಹಾರ ನೀಡುತ್ತದೆ.