ಕಲಬುರಗಿ: ಧುತ್ತರಗಾಂವ್‌ ಖೋವಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

By Kannadaprabha NewsFirst Published Jul 31, 2022, 2:26 PM IST
Highlights

ಆಳಂದ ತಾಲೂಕಿನ ಈ ಪುಟ್ಟ ಊರಲ್ಲಿ 4 ದಶಕದಿಂದ ಖೋವಾ ಉದ್ಯಮ ಬೆಳೆದು ನಿಂತಿದೆ

ಶೇಷಮೂರ್ತಿ ಅವಧಾನಿ

ಕಲಬುರಗಿ(ಜು.31):  ಖೋವಾ ಇದೊಂದು ಹೈನುಗಾರಿಕೆ ಉತ್ಪನ್ನ. ಹಾಲನ್ನು ತೆರೆದ ಕಬ್ಬಿಣದ ಬಾಣಲೆಯಲ್ಲಿ ಹಾಕಿ ನಿಯಮಿತ ಶಾಖ ಕೊಡುತ್ತ ತುಂಬಾ ಹೊತ್ತು ಹದವಾಗಿ ಕಾಯಿಸಿ ಗಟ್ಟಿಯಾಗಿಸಿ ಸಿದ್ಧಪಡಿಸಲಾಗುವ ‘ಖೋವಾ’ ಭಾರತ, ನೇಪಾಳ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳ ಪಾಕ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಸಿಹಿ ಸವಿ ಅಡುಗೆಗೆ ಖೋವಾ (ಖವಾ) ಇರಲೇಬೇಕು, ಸಿಹಿ ಪದಾರ್ಥಗಳ ತಯ್ಯಾರಿಕೆಯಲ್ಲಿ ತನ್ನದೇ ಮಹತ್ವ ಹೊಂದಿರುವ, ಸ್ವಾದಿಷ್ಟ, ಮೃದು ‘ಖೋವಾ’ ಉದ್ದಿಮೆ ಕಲಬುರಗಿ ಜಿಲ್ಲೆಯ ಧುತ್ತರಗಾಂವ್‌ ಊರಲ್ಲಿ ಸದ್ದಿಲ್ಲದೆ ಅರಳಿ ನಿಂತಿದೆ. ಬರಗಾಲದಲ್ಲಿ ಈ ಊರಿನ ಹಲವು ಕುಟುಂಬಗಳ ಕೈ ಹಿಡಿದಿರುವ ಖೋವಾ ಉದ್ಯಮ ಇಂದಿಗೂ ತನ್ನ ಬೇಡಿಕೆ ಉಳಿಸಿಕೊಂಡಿದೆ.

ಇಲ್ಲಿರುವ ಹೂಗಾರ್‌ ಮನೆತನದ 10 ಕ್ಕೂ ಹೆಚ್ಚು ಕುಟುಂಬದವರು ಖೋವಾ ಉದ್ಯಮದಲ್ಲಿದ್ದು ತಾವು ಸಿದ್ಧಪಡಿಸುವ ಸ್ವಾದಿಷ್ಟಖೋವಾ ದಿಂದಲೇ ತಮ್ಮೂರು ಧುತ್ತರಗಾಂವನ್ನು ಜನ ಗುರುತಿಸುವಂತೆ ಮಾಡಿದ್ದಾರೆ. ಈ ಊರಿನ ವೀರೇಶ್ವರ ಮಂದಿರದಷ್ಟೇ ಇಲ್ಲಿನ ಸವಾದಿಷ್ಟಖೋವಾ ಜನರ ಗಮನ ಸೆಳೆಯುತ್ತ ಇಂದಿಗೂ ತನ್ನ ಬೇಡಿಕೆ ಉಳಿಸಿಕೊಂಡಿದೆ.

ಮೂಲಂಗಿ ತಿಂದ್ರೆ ಒಂದೆರಡಲ್ಲ, ಸುಮಾರು ರೋಗಕ್ಕೆ ಮದ್ದಾಗುತ್ತೆ!

ಲಾಭದಾಯದಕ ಉದ್ಯಮ:

ಪ್ರತಿ ಕುಟುಂಬದವರು ನಿತ್ಯ 10ರಿಂದ 15 ಕೆಜಿಯಂತೆ ಖೋವಾ ಸಿದ್ಧಪಡಿಸುತ್ತಾರೆ. ಇವರು ಹೀಗೆ ಸಿದ್ಧಪಡಿಸುವ ಖೋವಾಕ್ಕೆ ಕಲಬುರಗಿ ಹಾಗೂ ಸುತ್ತಲಿನ ಹೋಟಲ್‌ಗಳೇ ಮಾರುಕಟ್ಟೆ. ನಮಗಂತೂ ಫೋನ್‌ ಮಾಡಿ ಖೋವಾ ಬೇಕಂತ ಕೇಳ್ತಾರ್ರಿ, ಎಂದಿಗೂ ಮಾರಾಟದ ಸಮಸ್ಯೆ ಕಾಡಿಲ್ಲ, ನಿತ್ಯ 10 ರಿಂದ 15 ಕೆಜಿಯಂತೆ ಖೋವಾ ಮಾಡಿ ತಾಜಾ ಇದ್ದಾಗಲೇ ಮಾರಾಟ ಮಾಡಿ ಬಿಡ್ತೀವಿ ಎನ್ನುವ ತಾಯವ್ವ ಹಾಗೂ ಬಂಡೆಪ್ಪ ಸಹೋದರ ಸಂಬಂಧಿ ಏಳೆಂಟು ಕುಟುಂಬಗಳು ಖೋವಾ ಉದ್ಯಮದಲ್ಲಿವೆ. 1 ಕೆಜಿ ಖೋವಾ ಮಾರಾಟವಾದಾಗ ಎಲ್ಲ ಖರ್ಚು- ವೆಚ್ಚ, ಶ್ರಮ ಹೋಗಿ ಏನಿಲ್ಲವೆಂದರು 70 ರಿಂದ 80 ರುಪಾಯಿ ಲಾಭಾಂಶ ಕೈ ಸೇರುತ್ತದೆ.

ಗೃಹ ಉದ್ಯಮವಾಗಿ ಖೋವಾ ತಯಾರಿಕೆಯನ್ನು ಧುತ್ತರಗಾಂವ್‌ ಹೂಗಾರ್‌ ಕುಟುಂಬದವರು 4 ದಶಕದಿಂದ ಹಾಗೇ ಪೋಷಿಸಿಕೊಂಡು ಹೊರಟಿರೋದು ಇತರರಿಗೆ ಮಾದರಿ. ಕೆಲಸವಿಲ್ಲ ಎಂದು ಗೊಣಗುತ್ತ ಕೂರುವವರು ಧುತ್ತರಗಾಂವ್‌ಗೆ ಹೋಗಿ ಖೋವಾ ಭಟ್ಟಿಅದ್ಹೇಗೆ ಕೆಲಸ ಮಾಡುತ್ತದಂಬುದನ್ನ ಕಲಿತು ಇಂತಹ ಗೃಹ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇದು ಸಕಾಲ.

ಊರಾಗಿನ ಹೈನ ಇರೋರಿಂದ ಹಾಲ ಖರೀದಿ ಮಾಡ್ತೀನಿ, ಇದರಿಂದ ಅವರಿಗೂ ದಂಧಾ ಆಯ್ತು, ಹಾಲನ್ನ ಹದವಾಗಿ ಕಾಯಿಸಿ ಗಟ್ಟಿಮಾಡುತ್ತ ಖೋವಾ ಮಾಡ್ತೀನಿ, ಅದಕ್ಕಂತೂ ಡಿಮ್ಯಾಂಡ್‌ ಕಮ್ಮಿ ಆಗಿಲ್ಲ. ಕಲಬುರಗಿ ಸ್ವೀಟ್‌ ದುಕಾನದಾಗ್‌ ಧುತ್ತರಗಾಂವ್‌ ಕೋವಾ ಮಾರಾಟ ಆಗ್ತದ. ಖೋವಾ ಉದ್ಯಮದಿಂದ ಬಾಳು ಬೆಳಗೋದು ನಿಶ್ಚಿತ. ತಾಜಾ ಖೋವಾ ಬೇಕಾದವರು 8722421795 ಗೆ ಕರೆ ಮಾಡಬಹುದು ಅಂತ ಧುತ್ತರಗಾಂವ್‌ ಖೋವಾ ಉದ್ಯಮಿ ತಾಯವ್ವ ಹೂಗಾರ್‌ ತಿಳಿಸಿದ್ದಾರೆ. 

click me!