64 ವರ್ಷದಿಂದ ಬಳಸ್ತಿದ್ದ ಸ್ಲೋಗನ್ ಕೈ ಬಿಟ್ಟ KFC: ಕಾರಣ ಕೊರೋನಾ

Suvarna News   | Asianet News
Published : Aug 25, 2020, 03:29 PM ISTUpdated : Aug 25, 2020, 03:39 PM IST
64 ವರ್ಷದಿಂದ ಬಳಸ್ತಿದ್ದ ಸ್ಲೋಗನ್ ಕೈ ಬಿಟ್ಟ KFC: ಕಾರಣ ಕೊರೋನಾ

ಸಾರಾಂಶ

ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕಾರಣ ಕೊರೋನಾ ವೈರಸ್..!  

ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕಾರಣ ಕೊರೋನಾ ವೈರಸ್..! ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕೊರೋನಾ ಜಗತ್ತನ್ನೇ ಬಾಧಿಸಿರುವಾಗ ಕೆಂಟುಕಿ ಫ್ರೈಡ್ ಚಿಕನ್ ಕಂಪನಿ ತನ್ನ ಸ್ಲೋಗನ್ ತಾತ್ಕಾಲಿಕವಾಗಿ ಕೈ ಬಿಡಲು ನಿರ್ಧರಿಸಿದೆ.

ಕಳೆದ 64 ವರ್ಷಗಳಿಂದ ಕೆಎಫ್‌ಸಿ  ಜಾಹೀರಾತಿನಲ್ಲಿ ಈ ಪ್ರಸಿದ್ಧ ಸ್ಲೋಗನ್ ಬಳಸಲಾಗುತ್ತಿತ್ತು. ಆಗಸ್ಟ್ 24ರಂದು ಲಾಂಚ್ ಮಾಡಿದ ಅಭಿಯಾನದಲ್ಲಿ ಕೆಎಫ್‌ಸಿ ಬಕೆಟ್‌ ತುಂಬಾ ಚಿಕ ವಿಂಗ್ಸ್ ಚಿಕನ್ ಚಿತ್ರದ ಜೊತೆ ಇದ್ದ ಫಿಂಗರ್ ಲಿಕ್ಕಿಂಗ್ ಭಾಗವನ್ನು ಅಳಿಸಲಾಗಿದೆ. ಇದು ನಾವು ಯಾವಾಗಲೂ ಹೆಳುವ ವಿಷಯ. ಆದರೆ ಸದ್ಯಕ್ಕೆ ಇದನ್ನು ಕಡೆಗಣಿಸಿ ಎಂದು ಹೇಳಲಾಗಿದೆ.

ಸಸ್ಯಾಹಾರಿ ಪ್ರೈಡ್ ಚಿಕನ್

ಜಾಹೀರಾತು ಟಿವಿ, ಮಾಧ್ಯಮ, ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಫ್ಲಾಟ್ ಫಾರ್ಮ್‌ಗಳಲ್ಲಿ ಓಡಾಡುತ್ತಿದ್ದು, ಔಟ್‌ ಡೋರ್ ಆಡ್‌ಗಳಲ್ಲಿ ಲಿಕ್ ಫಿಂಗರ್ಸ್ ಎಟ್ ವೋನ್ ರಿಸ್ಕ್ ಎಂದು ಬರೆಯಲಾಗಿದೆ.

ಕೆಎಫ್‌ಸಿ ರೀಟೇಲ್ ಹಾಗೂ ಜಾಹೀರಾತು ಮುಖ್ಯಸ್ಥ ಕೇಟ್ ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ಕಳೆದ 64 ವರ್ಷದಿಂದ ಈ ಸ್ಲೋಗನ್ ಬಳಸುತ್ತಿದ್ದೆವು. ಇದು ಜಗತ್ತಿನಲ್ಲಿಯೇ ಹೆಚ್ಚ ಫೇಮಸ್ ಕೂಡಾ. ನಮ್ಮ ಗ್ರಾಹಕರು ರುಚಿಯಾದ ಚಿಕನ್ ತಿಂದು ಬೆರಳು ಲಿಕ್ ಮಾಡುತ್ತಾರೆಂದು ಗೊತ್ತು. ಆದರೆ ಈ ವರ್ಷ ಎಲ್ಲರಿಗೂ ನೋವು ತಂದಿದೆ. ನಮ್ಮ ಸ್ಲೋಗನ್ ಈಗಿನ ಸಂದರ್ಭಕ್ಕೆ ಹೊಂದುವುದಿಲ್ಲ. ಹಾಗಾಗಿ ನಾವಿದನ್ನು ಹೇಳುವುದು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇವೆ ಎಂದಿದ್ದಾರೆ.

ಮಳೆಗಾಲದಲ್ಲಿ ಬೆಚ್ಚನೆ ಹಿತದ ಜೊತೆ ಇಮ್ಯುನಿಟಿ ಹೆಚ್ಚಿಸಲು ನಿಮ್ಮ ಟೀ ಹೀಗಿರಲಿ

ಕೊರೋನಾ ಸಂದರ್ಭ ಜನರಲ್ಲಿ ಫಿಂಗರ್ ಲಿಕ್ ಮಾಡಿ ಎನ್ನುವುದು ತಪ್ಪು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಕೊರೋನಾ ಬಂದಿದ್ದರೂ ನಮ್ಮ ಸ್ಲೋಗನ್‌ನಿಂದ ತೊಂದರೆಯಾಗಿಲ್ಲ. ಆದರೆ ಈ ಸಂದರ್ಭದಲ್ಲಿ ಇದು ಸೂಕ್ತವಲ್ಲದ ಕಾರಣ ನಾವು ಸ್ಲೋಗನ್ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?