ಇನ್ನೆರಡು ವರ್ಷದೊಳಗೆ ಕೊನೆಯಾಗುತ್ತೆ ಕೊರೋನಾ: ವಿಶ್ವ ಆರೋಗ್ಯ ಸಂಸ್ಥೆ

Suvarna News   | Asianet News
Published : Aug 22, 2020, 01:23 PM ISTUpdated : Aug 22, 2020, 03:10 PM IST
ಇನ್ನೆರಡು ವರ್ಷದೊಳಗೆ ಕೊನೆಯಾಗುತ್ತೆ ಕೊರೋನಾ: ವಿಶ್ವ ಆರೋಗ್ಯ ಸಂಸ್ಥೆ

ಸಾರಾಂಶ

ಕೊರೋನಾ ಇನ್ನೆರಡು ವರ್ಷದಲ್ಲಿ ದೂರವಾಗಲಿದ್ದು, 1918ರ ಸ್ಪಾನಿಷ್ ಫ್ಲೂಗಿಂತ ವೇಗವಾಗಿ ಕೊರೋನಾ ಗುಣಮುಖವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಅಧನೋಮ್ಗೆಬ್ರಿಯೆನ್ಸಸ್ ತಿಳಿಸಿದ್ದಾರೆ.  

ಕೊರೋನಾ ಇನ್ನೆರಡು ವರ್ಷದಲ್ಲಿ ದೂರವಾಗಲಿದ್ದು, 1918ರ ಸ್ಪಾನಿಷ್ ಫ್ಲೂಗಿಂತ ವೇಗವಾಗಿ ಕೊರೋನಾ ಗುಣಮುಖವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಅಧನೋಮ್ಗೆಬ್ರಿಯೆನ್ಸಸ್ ತಿಳಿಸಿದ್ದಾರೆ.

ಇಂದು ಕೊರೋನಾ ವೈರಸ್ ವಿರುದ್ಧ ಹೋರಾಡಲು ಅಭಿವೃದ್ಧಿ ಹೊಂದಿದ ತಂತ್ರಜ್ಞಾನವಿದೆ. ಈಗ ಹೆಚ್ಚು ಟೆಟ್ನಾಲಜಿ ಹಾಗೂ ಸಂಪರ್ಕವಿರುವುದರಿಂದ ಕೊರೋನಾ ಹೆಚ್ಚು ಹರಡುವ ಸಾಧ್ಯತೆ ಇದೆ ಇದೆ ಎಂದಿದ್ದಾರೆ.

ಭಾರತದಲ್ಲಿ ಕೊರೋನಾ ಹರಡೋ ವೇಗ ಈಗ ಅತ್ಯಂತ ಕಡಿಮೆ

ಇದರ ಜೊತೆಗೇ ಕೊರೋನಾ ಹರಡುವುದನ್ನು ತಡೆಯುವ ಹಾಗೂ ವೈರಸ್‌ನ್ನು ತಡೆಯುವ ಜ್ಞಾನ ನಮ್ಮಲ್ಲಿದೆ. ನಮಗೆ ಜಾಗತೀಕರಣ, ಸಂಪರ್ಕದಿಂದ ತೊಂದರೆಗಳಿರುವಂತೆ ಟೆಕ್ನಾಲಜಿಯಿಂದ ಪ್ರಯೋಜನವೂ ಇದೆ. ಹಾಗಾಗಿ ಎರಡು ವರ್ಷದ ಒಳಗೆ ಕೊರೋನಾ ದೂರವಾಗಬಹುದು. ಸ್ಪಾನಿಷ್ ಫ್ಲೂ ಜಗತ್ತಿನಿಂದ ಹೋಗಲು 2 ವರ್ಷ ಹಿಡಿಯಿತು ಎಂದಿದ್ದಾರೆ.

ಕೊರೋನಾ ವೈರಸ್‌ ಲಸಿಕೆಗಾಗಿ ಜಗತ್ತು ಒಟ್ಟಿಗೆ ಶ್ರಮಿಸಬೇಕಿದೆ. ಎಲ್ಲ ತಂತ್ರಜ್ಞಾನ ಜೊತೆಯಾಗಿ ಬಳಿಸಿ ಲಸಿಕೆ ಕಂಡು ಹಿಡಿಯಬೇಕಿದೆ. ಲಸಿಕೆಯಿಂದ ಮಾತ್ರ ಕೊರೋನಾ ಕಡಿಮೆ ಮಾಡಲು ಸಾಧ್ಯವಿಲ್ಲ. ಜನರು ಕೂಡಾ ಅಗತ್ಯ ಜಾಗರೂಕತೆ ವಹಿಸಬೇಕು ಎಂದಿದ್ದಾರೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಹರಡುತ್ತೆ ರೂಪಾಂತರಗೊಂಡ ಕೊರೋನಾ ವೈರಸ್

ಈಗಾಗಲೇ ಜಗತ್ತಿನಾದ್ಯಂತ 2.28 ಕೋಟಿ ಜನರು ಕೊರೋನಾ ಸೋಂಕಿತರಾಗಿದ್ದಾರೆ. 7,97,871 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 56 ಲಕ್ಷ ಕೊರೋನಾ ಪ್ರಕರಣಗಳಿದ್ದು, 1.75 ಲಕ್ಷ ಜನ ಸಾವನ್ನಪ್ಪಿದ್ದಾರೆ.

ಬ್ರೆಜಿಲ್‌ನಲ್ಲಿ 35 ಲಕ್ಷ ಕೊರೋನಾ ಪ್ರಕರಣಗಳಿದ್ದು, 1,13,358 ಜನ ಸಾವನ್ನಪ್ಪಿದ್ದಾರೆ. ಭಾರತ ಮೂರನೇ ಸ್ಥಾನದಲ್ಲಿದ್ದು, ಸೋಂಕಿತ ಸಂಖ್ಯೆ ಈಗಾಗಲೇ 29 ಲಕ್ಷದ ಗಡಿ ದಾಟಿದೆ. ಅರ್ಧ ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ