ಕೊರೋನಾದ ಬಗ್ಗೆ ಅನ್‌ಲೈನಲ್ಲಿ ಹುಡುಕುತ್ತಿದ್ದ ಜನ ಈಗ ಎದೆ ನೋವಿನ ಬಗ್ಗೆ ಹುಡುಕುತ್ತಿದ್ದಾರೆ. ಕೊರೋನಾ ವೈರಸ್ ಬಾಧಿಸಿ ತುರ್ತು ಪರಿಸ್ಥಿತಿಯಲ್ಲಿ ಎದೆನೋವಾಗುವ ಭಯದಿಂದಾಗಿ ಜನೆದೆ ನೋವಿನ ಬಗ್ಗೆಯೇ ಹೆಚ್ಚು ಹುಡುಕಿದ್ದಾರೆ.
ಕೊರೋನಾದ ಬಗ್ಗೆ ಅನ್‌ಲೈನಲ್ಲಿ ಹುಡುಕುತ್ತಿದ್ದ ಜನ ಈಗ ಎದೆ ನೋವಿನ ಬಗ್ಗೆ ಹುಡುಕುತ್ತಿದ್ದಾರೆ. ಕೊರೋನಾ ವೈರಸ್ ಬಾಧಿಸಿ ತುರ್ತು ಪರಿಸ್ಥಿತಿಯಲ್ಲಿ ಎದೆನೋವಾಗುವ ಭಯದಿಂದಾಗಿ ಜನೆದೆ ನೋವಿನ ಬಗ್ಗೆಯೇ ಹೆಚ್ಚು ಹುಡುಕಿದ್ದಾರೆ.
ಮಾಯೋ ಕ್ಲಿನಿಕ್ ಸಂಶೋಧಕರು ಇಟಲಿ, ಸ್ಫೇನ್, ಯುಕೆ, ಅಮೆರಿಕದಲ್ಲಿ ಜನರು ಗೂಗಲ್ ಮಾಡಿರೋದು ಎದೆ ನೋವಿನ ಬಗ್ಗೆ. 2019ರ ಜೂನ್ 1ರಿಂದ ಮೇ 31ರ ತನಕ ನಡೆಸಿದ ಸಂಶೋಧನೆಯಲ್ಲಿ ಜನ ಎದೆ ನೋವು, ಮತ್ತು ಹೃದಯಾಘಾತದ ಬಗ್ಗೆ ಹೆಚ್ಚು ಗೂಗಲ್ ಮಾಡಿರೋದು ತಿಳಿದುಬಂದಿದೆ.
ಬಸ್‌ನಲ್ಲೇ ಎದೆನೋವು: ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ
ಕೊರೋನಾಗೂ ಮುನ್ನ ಹೃದಯಾಘಾತ ಅಥವಾ ಸಂಬಂಧಿ ವಿಷಯದ ಬಗ್ಗೆ ಜನ ಗೂಗಲ್ ಮಾಡುತ್ತಿದ್ದರು. ಕೊರೋನಾ ಸಂದರ್ಭ ಹರದಯಾಘಾತದ ಕುರಿತ ಜನರ ಹುಡುಕಾಟ ಹೆಚ್ಚು ಅಥವಾ ಹಾಗೇ ಇರಬಹುದೆಂದು ಊಹಿಸಲಾಗಿತ್ತು. ಆದರೆ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಬಿಟ್ಟು ಎದೆ ನೋವಿನ ಬಗ್ಗೆ ಜನರು ಹುಡುಕಿದ್ದಾರೆ. ಎದೆ ನೋವಿನ ಕುರಿತು ಜನರ ಹುಡುಕಾಟ ಶೇ 34ರಷ್ಟು ಹೆಚ್ಚಾಗಿದೆ.
ಕೊರೋನಾದ 5 ಹೊಸ ಲಕ್ಷಣಗಳಿವು; ನಿರ್ಲಕ್ಷಿಸಬೇಡಿ!
ಹೃದಯಾಘಾತದ ಬಗ್ಗೆ ಹಿಂದೆ ಜನ ಹೆಚ್ಚು ಸರ್ಚ್ ಮಾಡುತ್ತಿದ್ದರು. ಆದರೆ ನಂತರದಲ್ಲಿ ಇದು ಕಡಿಮೆಯಾಗಿದೆ. ಆಶ್ಚರ್ಯ ಎಂದರೆ ಇದೇ ಸಂದರ್ಭದಲ್ಲಿ ಎದೆ ನೋವು ಬಗ್ಗೆ ಗೂಗಲ್ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ.
ಜನರು ಎದೆ ನೋವನ್ನು ಸಾಂಕ್ರಾಮಿಕ ಲಕ್ಷಣ ಎಂದು ತಪ್ಪಾಗಿ ಅಂದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಥವಾ COVID-19 ಭಯದಿಂದ ಜನರು ಈ ಬಗ್ಗೆ ಹುಡುಕಿರುವ ಸಾಧ್ಯತೆ ಇದೆ ಎಂದಿದ್ದಾರೆ ಡಾ.ಸೆನೆಕಲ್.
ಹೆಚ್ಚುತ್ತಿದೆ ಸಣ್ಣ ವಯಸ್ಸಿಗೇ ಹೃದಯ ಸಮಸ್ಯೆ, ಕಾರಣಗಳು ಹಲವು
ಜನರು ಸಮಾನ್ಯ ಕೊರೋನಾ ಲಕ್ಷಣ, ಕೆಮ್ಮು ಜ್ವರದ ಬಗ್ಗೆಯೂ ಹುಡುಕಾಡಿದ್ದಾರೆ. ಆರಂಭದಲ್ಲಿ ಜನರು ಹೆಚ್ಚಾಗಿ ಇದನ್ನೇ ಗೂಗಲ್ ಮಾಡುತ್ತಿದ್ದರು. ಆದರೆ ನಂತರ ಎದೆ ನೋವಿನ ಬಗ್ಗೆ ಜನರು ಹೆಚ್ಚಾಗಿ ಹುಡುಕಿದ್ದಾರೆ.
ಎದೆ ನೋವಿಗೆ ಮನೆ ಮದ್ದು, ಎದೆ ನೋವಿಗೆ ನೈಸರ್ಗಿಕ ಪರಿಹಾರ ಈ ತರದ ಹುಡುಕಾಟ ಹೆಚ್ಚಾಗಿದೆ. ಕೊರೋನಾ ಸಂದರ್ಭದಿಂದಾಗಿ ಜನರು ವೈದ್ಯರನ್ನು ಸಂಪರ್ಕಿಸಲು ಹೆದರುತ್ತಿದ್ದು, ಹೀಗಾಗಿ ಗೂಗಲ್ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.