ಮೊಬೈಲ್ ಮನುಷ್ಯನ ಜೀವನದ ಅತ್ಯಂತ ಪ್ರಮುಖ ಅಂಗವಾಗಿದೆ. ಆದರೆ ಪುರುಷರು ಓಡಾಡುವಾಗ, ಕುಳಿತುಕೊಳ್ಳುವಾಗ, ಬೇರೆ ಕೆಲಸ ಮಾಡುವಾಗ ಅದನ್ನು ಇಟ್ಟುಕೊಳ್ಳುವುದೆಲ್ಲಿ? ಎಲ್ಲಿ ಇಟ್ಟುಕೊಂಡರೆ ಏನು ಅಪಾಯ ಎಂಬುದು ನಿಮಗೆ ಗೊತ್ತಿದೆಯಾ?
ನಾವು ಎಲ್ಲದಕ್ಕೂ ಫೋನ್ ಅವಲಂಬಿಸಿದ್ದೇವೆ. ಹಾಗಾಗಿ ನಾವು ಹೋದಲ್ಲೆಲ್ಲ ಫೋನ್ ಒಯ್ಯುತ್ತೇವೆ. ಊಟ ಮಾಡುವಾಗ, ಟಾಯ್ಲೆಟ್‌ಗೆ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಕೂಡಾ ಮೊಬೈಲ್ ನಮ್ಮ ದಿಂಬಿನ ಕೆಳಗೆ ಇರಲೇ ಬೇಕು. ಸದಾ ಮೊಬೈಲ್ ನೋಡುತ್ತಿರುವುದರಿಂದ ಕಣ್ಣಿನ ದೃಷ್ಟಿಗೆ ಸಮಸ್ಯೆ ಉಂಟುಮಾಡಬಹುದು. ಕತ್ತು ಬಗ್ಗಿಸಿ ಮೊಬೈಲ್ ನೋಡುತ್ತಾ ಇದ್ದರೆ ಕುತ್ತಿಗೆ ನೋವು ಬರಬಹುದು.
ಇನ್ನೊಂದು ಮುಖ್ಯ ವಿಷಯ ಎಂದರೆ ಸದಾ ಸರ್ವದಾ ಮೊಬೈಲ್ ಬಳಕೆಯು ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ಸ್ಮಾರ್ಟ್ ಫೋನ್‌ನ ಹಾನಿಕಾರಕ ಪರಿಣಾಮಗಳು ಹಲವು. ಮೊಬೈಲ್ (Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಹಾಗಿದ್ದರೆ ಎಲ್ಲೆಲ್ಲಿ ಫೋನ್ ಇಟ್ಟುಕೊಳ್ಳಬಾರದು?
ಪ್ಯಾಂಟ್‌ನ ಮುಂಬದಿಯ ಜೇಬಿನಲ್ಲಿ ತುಂಬಾ ಮಂದಿ ಪೋನ್ ಇಟ್ಟುಕೊಳ್ಳುತ್ತಾರೆ. ವಿಶೇಷವಾಗಿ ಪುರುಷರಿಗೆ ಇದು ಹಾನಿಕರ. ಇದರಿಂದಾಗಿ ಅವರ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ ಗುಣಮಟ್ಟವು ತೀವ್ರವಾಗಿ ಕುಸಿಯುತ್ತದೆ. ಇದು ಯಾವುದೇ ಪುರುಷನ ಲೈಂಗಿಕ ಆರೋಗ್ಯವನ್ನು ಹಾಳುಮಾಡುವ ಮೂಲಕ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು. ಪುರುಷನ ಲೈಂಗಿಕ ಸಾಮರ್ಥ್ಯ ಕುಸಿಯಬಹುದು. ಆ ಮೂಲಕ ನಿಮ್ಮ ಸುಖ ಕಸಿಯುವ ಸಾಮರ್ಥ್ಯ ಈ ಮೊಬೈಲ್ ಫೋನ್‌ಗೆ ಇದೆ.
undefined
ಹಾಗಂತ ಪ್ಯಾಂಟ್ ಹಿಂದಿನ ಕಿಸೆಯಲ್ಲಿಡುತ್ತೀರಾ? ಪ್ಯಾಂಟ್ ಹಿಂದಿನ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಅನುಭವಿಸಬಹುದು.
ಜಾತಕ ತೋರಿಸೋದಕ್ಕಿಂತ, ಮದುವೆಗೂ ಮುಂಚೆ ಈ 2 ಮೆಡಿಕಲ್ ಟೆಸ್ಟ್ ಮಾಡಿಸಿ!
ಅಂಗಿಯ ಎದೆ ಬಳಿಯ ಪಾಕೆಟ್‌ನಲ್ಲಿ ಕೆಲವರು ಇಟ್ಟುಕೊಳ್ಳುತ್ತಾರೆ. ಇದು ಸ್ಮಾರ್ಟ್ ಕೆಲಸ ಅಲ್ಲವೇ ಅಲ್ಲ. ಫೋನ್ ಅನ್ನು ಈ ಸ್ಥಳದಲ್ಲಿ ಇಡುವ ಮೂಲಕ ಅದರಿಂದ ಹೊರಹೊಮ್ಮುವ ಹಾನಿಕಾರಕ ವಿದ್ಯುತ್ಕಾಂತೀಯ ವಿಕಿರಣವು ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು. ಅಲ್ಲಿಂದ ಕೇವಲ 2 ಇಂಚು ಕೆಳಗೆ ನಿಮ್ಮ ಹೃದಯ ಇದೆ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ರೋಗಿಗಳು, ಮಧುಮೇಹಿಗಳು ಮತ್ತು 40 ವರ್ಷ ಮೇಲ್ಪಟ್ಟವರು ತಮ್ಮ ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳಲೇಬಾರದು.
ಮಲಗುವಾಗ ತಲೆ ದಿಂಬಿನ ಕೆಳಗೆ ಕೆಲವರು ಇಡುತ್ತಾರೆ. ಊಹೂಂ, ಅಲ್ಲಿ ಫೋನ್ ಇಡುವುದು ನಿಷಿದ್ಧ. ನಾವು ದಿನಕ್ಕೆ 6ರಿಂದ 8 ಗಂಟೆ ನಿದ್ದೆ ಮಾಡುತ್ತಿದ್ದು, ಒಂದೊಮ್ಮೆ ಮೊಬೈಲ್ ಅನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ, 6-8 ಗಂಟೆಗಳ ಕಾಲ ಅದು ಬೀರುವ ರೇಡಿಯೇಶನ್ ನಮ್ಮ ಮೆದುಳಿನ ಸೆಲ್ ಅನ್ನು ಹಾಳು ಮಾಡುವುದು ಖಚಿತ. ಆದುದರಿಂದ ಇಡೀ ಆರೋಗ್ಯ ಕುಸಿತ ಉಂಟಾಗುವುದಲ್ಲದೆ, ಲೈಂಗಿಕ ಕ್ರಿಯೆಗೆ ಕೂಡಾ ಇದು ಅಡ್ಡಿಯಾಂದೀತು. ಕಾರಣ ಮನುಷ್ಯನ ಲೈಂಗಿಕ ಆಕರ್ಷಣೆ ಮತ್ತು ಪರ್ಫಾರ್ಮೆನ್ಸ್‌ನ ಮೂಲ ಇರುವುದು ಮೆದುಳಿನಲ್ಲಿ!
ದೀಪಿಕಾ ಪಡುಕೋಣೆ ಇದ್ಯಾವ ಯೋಗದ ಪೋಸ್ ಅಂತ ಕೇಳಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ಹಾಗಾಗಿ, ಮೊಬೈಲ್ ದೂರ ಇಡಿ. ಎಷ್ಟು ಹೊತ್ತಿಗೂ ಮೊಬೈಲ್ ಜತೆ ಆಟ ಆಡಬೇಡಿ. ಅದು ನಿಮ್ಮ ಶಯನಕೋಣೆಯಲ್ಲಿ ನಿಮ್ಮ ಸಾಮರ್ಥ್ಯದೊಂದಿಗೇ ಆಟವಾಡಿ, ನಿಮ್ಮನ್ನು ಬೇಗ ಔಟ್ ಮಾಡಬಹುದು. ಹಾಗಾದರೆ ಇಡುವುದೆಲ್ಲಿ? ಓಡಾಡುವಾಗ ಕೈಯಲ್ಲಿ ಹಿಡಿದುಕೊಳ್ಳಿ. ಅಥವಾ ಸೊಂಟದ ಎಡ ಅಥವಾ ಬಲಬದಿಯ ಪೌಚ್‌ನಲ್ಲಿಡಿ. ಇಲ್ಲವಾದರೆ ಬ್ಯಾಗ್‌ನಲ್ಲಿರಲಿ.
ಲೈಂಗಿಕ ಜೀವನದ ಕುರಿತು ಟೀನೇಜರ್ಸ್‌ಗೆ ಇರೋ ಗೊಂದಲಗಳಿಗೆ ಇಲ್ಲಿದೆ ಉತ್ತರ