
ಬೆಂಗಳೂರು(ಜೂ.20): ದೇಶದಲ್ಲಿ ಎರಡನೇ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಹೃದಯ ಕಸಿ (ಮರು ಕಸಿ) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಟರ್ ಹಾಸ್ಟಿಟಲ್ ತಿಳಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್‌ನ ಲೀಡ್ ಕನ್ಸಲ್ಟೆಂಂಟ್ ಪ್ರೊ. ಡಾ. ನಾಗಮಲೇಶ್ ಯು.ಎಂ., ‘ 32 ವರ್ಷದ ಎಂಜಿನಿಯರ್‌ಗೆ ಆಸ್ಟರ್ ಹಾಸ್ಪಿಟಲ್‌ನಲ್ಲಿ ಆರು ತಿಂಗಳ ಹಿಂದೆ ಹೃದಯ ಮರುಕಸಿ ಮಾಡಲಾಗಿದೆ. ಪ್ರಸ್ತುತ ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿದ್ದಾರೆ’ ಎಂದರು.
ಈಕೆ ಪಾಕಿಸ್ತಾನಿ, ಆದ್ರೆ ದಿಲ್ ಹೈ ಹಿಂದೂಸ್ತಾನಿ; ಪಾಕ್ ಹುಡುಗಿಗೆ ಭಾರತೀಯ ದಾನಿಯ ಹೃದಯ ಕಸಿ
‘ಹಿಗ್ಗಿದ ಕಾರ್ಡಿಯೋಮಿಪತಿ ಮತ್ತು ಹೃದಯದ ವೈಫಲ್ಯದಿಂದ ಈ ಹಿಂದೆ 2016ರಲ್ಲಿ ಮೊದಲ ಬಾರಿ ಹೃದಯ ಕಸಿಗೆ ಒಳಗಾಗಿದ್ದರು. 2018ರಲ್ಲಿ ವಿವಾಹವಾಗಿದ್ದ ಅವರ ಆರೋಗ್ಯ 2020ರಲ್ಲಿ ಕೋವಿಡ್ ಸೋಂಕು ತಗುಲಿದ್ದರೂ ಗುಣಮುಖರಾಗಿದ್ದರು. ಆದರೆ 2021ರಲ್ಲಿ ಕಾರ್ಡಿಯಾಕ್ ಅಲೋಗ್ರಾಫ್ಟ್ ವಾಸ್ಕುಲೋಪತಿ, ಕಸಿ ಮಾಡಿದ ಹೃದಯದಲ್ಲಿನ ಅಪಧಮನಿಗಳ ಕಿರಿದಾಗುವಿಕೆ, ಬೈವೆಂಟ್ರಿಕ್ಯುಲರ್ ಸಮಸ್ಯೆ ಉಂಟಾಯಿತು. ಇದಕ್ಕೆ ಹೃದಯದ ಮರು ಕಸಿ ಅಗತ್ಯವಿತ್ತು’ ಎಂದು ಹೇಳಿದರು. ಡಾ. ದಿವಾಕರ್ ಭಟ್ ಮಾತನಾಡಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.