H3N2 ವೈರಲ್​ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ

Published : Mar 10, 2023, 12:06 PM ISTUpdated : Mar 10, 2023, 12:07 PM IST
H3N2 ವೈರಲ್​ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ

ಸಾರಾಂಶ

ಜಿಲ್ಲೆಯಲ್ಲಿ H3N2ಗೆ ಮೊದಲ ಬಲಿ ಪ್ರಕರಣ ದಾಖಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ‌ಹಳ್ಳಿಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 

ಹಾಸನ (ಮಾ.09): ಜಿಲ್ಲೆಯಲ್ಲಿ H3N2ಗೆ ಮೊದಲ ಬಲಿ ಪ್ರಕರಣ ದಾಖಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ‌ಹಳ್ಳಿಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅನಾರೋಗ್ಯ ಪೀಡಿತ ಜನರು ಹಾಗು ವೃದ್ದರನ್ನ ಆರೋಗ್ಯ ಇಲಾಖೆಯ ವೈದ್ಯರ ತಂಡ ಪರೀಕ್ಷೆ ನಡೆಸಿದ್ದು, ಗಂಟಲು ದ್ರವವನ್ನು ಲ್ಯಾಬ್‌ಗೆ ಕಳುಹಿಸಿರುವುದಾಗಿ ಮಾಧ್ಯಮಗಳಿಗೆ ಡಿಎಚ್ಓ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಎಚ್‌3ಎನ್‌2 ಕೂಡ ಕೋವಿಡ್‌ ರೀತಿಯಲ್ಲೇ ಹಬ್ಬುತ್ತೆ: ಕಳೆದ ಮೂರು ತಿಂಗಳಿನಿಂದ ಜ್ವರ, ಶೀತ, ಕೆಮ್ಮು ಸಮಸ್ಯೆಗೆ ಕಾರಣವಾಗಿರುವ ಎಚ್‌3ಎನ್‌2 ವೈರಾಣು ಸೋಂಕು ವಿಶ್ವಾದ್ಯಂತ ಎರಡು ವರ್ಷಗಳ ಕಾಲ ಮರಣ ಮೃದಂಗ ಬಾರಿಸಿದ್ದ ಕೋವಿಡ್‌ ರೀತಿಯಲ್ಲೇ ಹಬ್ಬುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೋಂಕಿತ ವ್ಯಕ್ತಿ ಸೀನಿದಾಗ ಆತನ ದೇಹದಿಂದ ಹೊರಬರುವ ದ್ರವದ ಕಣಗಳಿಂದಾಗಿ ಸೋಂಕು ಹರಡುತ್ತದೆ (ಕೋವಿಡ್‌ನಲ್ಲೂ ಹೀಗೆಯೇ ಆಗುತ್ತಿತ್ತು). ಹಬ್ಬದ ಸೀಸನ್‌ ಹತ್ತಿರದಲ್ಲಿರುವುದರಿಂದ ಜನರು ಅದರಲ್ಲೂ ವಿಶೇಷವಾಗಿ ವಯೋವೃದ್ಧರು, ಮತ್ತು ಪೂರ್ವರೋಗಬಾಧಿತರು ಎಚ್ಚರದಿಂದ ಇರಬೇಕು ಎಂದು ದೆಹಲಿ ಏಮ್ಸ್‌ನ ಮಾಜಿ ಮುಖ್ಯಸ್ಥ ಡಾ. ರಣದೀಪ್‌ ಗುಲೇರಿಯಾ  ಅವರು ಎಚ್ಚರಿಕೆ ನೀಡಿದ್ದಾರೆ. 

ಎಚ್‌3ಎನ್‌2 ತಡೆಗೆ ರಾಜ್ಯ ಸರ್ಕಾರದ ಮುನ್ನೆಚ್ಚರಿಕೆ, ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ

ಈಗ ಕಂಡುಬರುತ್ತಿರುವ ಎಚ್‌3ಎನ್‌2  ಸಾಮಾನ್ಯ ವೈರಾಣು ತಳಿ. ಆದರೆ ಅದು ಈಗ ಅಲ್ಪಪ್ರಮಾಣದಲ್ಲಿ ರೂಪಾಂತರಗೊಂಡಿದೆ. ಜತೆಗೆ ವೈರಸ್‌ ವಿರುದ್ಧದ ನಮ್ಮ ರೋಗ ನಿರೋಧಕ ಶಕ್ತಿ  ಸ್ವಲ್ಪ ಕುಂದಿದೆ. ಹೀಗಾಗಿ ಜನರಿಗೆ ಸೋಂಕು ಹರಡುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಅಲ್ಲದೆ ಹವಾಮಾನ ಬದಲಾವಣೆಯಾಗುವ ಈ ಹಂತದಲ್ಲಿ ಜ್ವರ ಬಾಧಿಸುವ ಪ್ರಮಾಣ ಹೆಚ್ಚಿರುತ್ತದೆ. ಇದರ ಜತೆಗೆ ಜನರು ದಟ್ಟಣೆಯ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುತ್ತಿಲ್ಲ. ಸೋಂಕು ಹೆಚ್ಚಳಕ್ಕೆ ಇದು ಕೂಡ ಕಾರಣವಾಗಿದೆ ಎಂದಿದ್ದಾರೆ.

ಸೋಂಕು ಹೆಚ್ಚಿದ್ದರೂ ಆಸ್ಪತ್ರೆ ಸೇರುವವರ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಹೀಗಾಗಿ ಕಳವಳಪಡಬೇಕಾಗಿಲ್ಲ. ಈ ಸೋಂಕಿನಿಂದ ಪಾರಾಗಲು ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಪದೇಪದೇ ಕೈಗಳನ್ನು ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಪಾಲಿಸುವುದು ಮುನ್ನೆಚ್ಚರಿಕೆಯ ಕ್ರಮಗಳಾಗಿವೆ ಎಂದಿದ್ದಾರೆ.

ಲಕ್ಷಣಗಳೇನು?: ಸಾಮಾನ್ಯವಾಗಿ ಈ ಸೋಂಕಿಗೆ ಒಳಗಾದವರಲ್ಲಿ ಚಳಿ-ಜ್ವರ, ಅಸ್ವಸ್ಥತೆ, ಊಟ ರುಚಿಸದಿರುವುದು, ವಾಂತಿ, ದೀರ್ಘಕಾಲೀನ ಒಣ ಕೆಮ್ಮು, ಮೈ-ಕೈ ನೋವು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ 5ರಿಂದ 7 ದಿನಗಳಲ್ಲಿ ವಾಸಿಯಾಗಬಲ್ಲ ಲಕ್ಷಣಗಳು ಗಂಭೀರವಾಗಿ ಸೋಂಕಿತರಾದವರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೆಗೆ 3 ವಾರಗಳ ವರೆಗೆ ಕಾಡಬಹುದು. ಈ ಸೋಂಕಿನಿಂದ ಸಾವಿನ ಪ್ರಮಾಣ (Death rate) ಕಡಿಮೆಯಾದರೂ ನಿರ್ಲಕ್ಷಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಹೊತ್ತಿ ಉರಿದ ಬಿಎಂಟಿಸಿ: ಬಸ್‌ನಲ್ಲೇ ಕಂಡಕ್ಟರ್ ಸಜೀವ ದಹನ

ಯಾರಿಗೆ ಹೆಚ್ಚು ಅಪಾಯಕಾರಿ?: ಈ ಸೋಂಕು ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರಂತಹ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವರ್ಗದವರಿಗೆ ಹೆಚ್ಚು ಅಪಾಯಕಾರಿ. ಜತೆಗೆ ಸ್ಟೆರಾಯ್ಡ್‌ನಂತಹ ದೀರ್ಘಕಾಲಿನ ಚಿಕಿತ್ಸೆ ಪಡೆದವರಿಗೂ ಹೆಚ್ಚು ಕಾಡಬಹುದು ಎಂದು ತಿಳಿಸಲಾಗಿದೆ.

ಸರ್ಕಾರದಿಂದ ಮಾರ್ಗಸೂಚಿ
- 15 ವರ್ಷದೊಳಗಿನ ಮಕ್ಕಳು, 65 ಮೇಲ್ಪಟ್ಟವೃದ್ಧರಿಗೆ ಸೋಂಕಿನ ಅಪಾಯ ಅಧಿಕ: ಎಚ್ಚರ
- ಗರ್ಭಿಣಿಯರು ಮೊದಲಾದ ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಅಪಾಯ ಹೆಚ್ಚು
- ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ಐಎಲ್‌ಐ (ಶೀತಜ್ವರ), ಸಾರಿ (ಉಸಿರಾಟ ಸಮಸ್ಯೆ) ಪ್ರಕರಣಗಳ ಮಾದರಿ ಪರೀಕ್ಷಿಸಬೇಕು
- ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ಔಷಧ, ಉಪಕರಣ, ಪಿಪಿಇ ಕಿಟ್‌ ಸಿದ್ಧಪಡಿಸಿಕೊಳ್ಳಬೇಕು
- ಐಸಿಯು, ಹೈರಿಸ್ಕ್ ಪ್ರದೇಶದಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಬೇಕು
- ಕೊರೋನಾ ನೆಗೆಟಿವ್‌ ಇದ್ದರೂ ಸಾರಿ ಮಾದರಿ ವಿಆರ್‌ಡಿಎಲ್‌ ಪರೀಕ್ಷೆಗೆ ಒಳಪಡಿಸಬೇಕು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ