ಬೊಜ್ಜು ಈಗ ಸಾಂಕ್ರಾಮಿಕದಂತಾಗಿದೆ. ಯಾರನ್ನು ಕೇಳಿದ್ರೂ ಓವರ್ ವೇಟ್ ಅಂತಾ ಮಾತನಾಡ್ತಾರೆ. ಈ ಸಂಖ್ಯೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಅದ್ರಲ್ಲೂ ಅಭಿವೃದ್ಧಿ ಶೀಲ ದೇಶಗಳ ಸ್ಥಿತಿ ಗಂಭೀರವಾಗಲಿದೆ. ಇದು ಮಕ್ಕಳನ್ನು ಕಾಡಲಿದೆ ಎಂಬ ಎಚ್ಚರಿಕೆಯೊಂದು ಹೊರಬಿದ್ದಿದೆ.
ಸ್ಥೂಲಕಾಯತೆ ಸದ್ಯ ಗಂಭೀರ ಸಮಸ್ಯೆ. ಆದ್ರೆ ಜಾಗತಿಕವಾಗಿ ಬೊಜ್ಜಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಮುಂದಿನ 12 ವರ್ಷಗಳಲ್ಲಿ 4 ಬಿಲಿಯನ್ ಜನರು ಅಥವಾ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆ ಹೊಂದುವ ನಿರೀಕ್ಷೆಯಿದೆ. ವಿಶ್ವ ಬೊಜ್ಜು ಒಕ್ಕೂಟ ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ನೀಡಿದೆ.
ಜಾಗತಿಕ (Global) ವಾಗಿ ಸುಮಾರು 2.6 ಶತಕೋಟಿ ಜನರು ಈಗಾಗಲೇ ಅಧಿಕ ತೂಕ (Overweight) ಅಥವಾ ಬೊಜ್ಜಿನಿಂದ ಬಳಲುತ್ತಿದ್ದಾರೆ. ಆದರೆ ವಿಶ್ವ (World) ಸ್ಥೂಲಕಾಯ ಒಕ್ಕೂಟದ ಅಟ್ಲಾಸ್-2023 ರ ಪ್ರಕಾರ, ವಿಶ್ವದ ಜನಸಂಖ್ಯೆಯ 4 ಶತಕೋಟಿ ಅಂದ್ರೆ ಶೇಕಡಾ 51 ಕ್ಕಿಂತ ಹೆಚ್ಚು ಜನರು ಮುಂದಿನ 12 ವರ್ಷಗಳಲ್ಲಿ ಬೊಜ್ಜಿನಿಂದ ಬಳಲಿದ್ದಾರೆ.
undefined
ಬೊಜ್ಜು (Obesity) ಹೆಚ್ಚಾಗಲು ಅನೇಕ ಕಾರಣವಿದೆ. ಅನಾರೋಗ್ಯಕರ ಆಹಾರದ ಪ್ರಚಾರದ ಮೇಲೆ ಯಾವುದೇ ತೆರಿಗೆ ಮತ್ತು ಮಿತಿಗಳಂತಹ ತಂತ್ರಗಳನ್ನು ವ್ಯಾಪಕವಾಗಿ ಬಳಸಲಾಗ್ತಿಲ್ಲ. ಇದು ಬೊಜ್ಜು ಹೆಚ್ಚಾಗಲು ಕಾರಣವಾಗಿದೆ. ಇಂದು ಏಳರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಕಾಡ್ತಿದೆ. 2035ರ ವೇಳೆಗೆ ನಾಲ್ಕರಲ್ಲಿ ಒಬ್ಬರಿಗೆ ಬೊಜ್ಜು ಹೆಚ್ಚಾಗಲಿದೆ. ಒಂದ್ವೇಳೆ ಅಂದಾಜಿನಂತೆ ಇದು ಸಂಭವಿಸಿದ್ರೆ ಪ್ರಪಂಚದಾದ್ಯಂತ ಸುಮಾರು 2 ಬಿಲಿಯನ್ ಜನರು ಸ್ಥೂಲಕಾಯತೆಯಿಂದ ಬಳಲುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
WORLD KIDNEY DAY 2023: ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ, ಆರೋಗ್ಯದ ಬಗೆಗಿರಲಿ ಕಾಳಜಿ
ಕಡಿಮೆ ಆದಾಯವುಳ್ಳ ದೇಶದಲ್ಲಿ ಇದು ಹೆಚ್ಚು : ಮಕ್ಕಳಲ್ಲಿ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸ್ಥೂಲಕಾಯತೆಯ ಪ್ರಮಾಣ ವಿಶೇಷವಾಗಿ ಏರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಧಿಕ ಬಾಡಿ ಮಾಸ್ ಇಂಡೆಕ್ಸ್ (BMI) ಯ ಆರ್ಥಿಕ ಪರಿಣಾಮವು 2035 ರ ವೇಳೆಗೆ 4.32 ಡಾಲರ್ ಟ್ರಿಲಿಯನ್‌ಗೆ ಹೆಚ್ಚಾಗುವ ಸಾಧ್ಯತೆಯಿದೆ. ಸ್ಥೂಲಕಾಯತೆಯು ಇಂದು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಆರೋಗ್ಯ ಸವಾಲುಗಳಲ್ಲಿ ಒಂದಾಗಿದೆ. ಇದು 800 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳನ್ನ ಕಾಡಲಿದೆ ಸಮಸ್ಯೆ : ಮಕ್ಕಳು ಮತ್ತು ಯುವಕರಲ್ಲಿ ಬೊಜ್ಜು ಖಂಡಿತವಾಗಿಯೂ ವಯಸ್ಕರಿಗಿಂತ ವೇಗವಾಗಿ ಹೆಚ್ಚುತ್ತಿದೆ. ವರದಿಯ ಪ್ರಕಾರ, ಈ ದರವು 2035 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರಲ್ಲಿ ಸ್ಥೂಲಕಾಯತೆಯು ಶೇಕಡಾ 100ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು 208 ಮಿಲಿಯನ್ ಹುಡುಗರ ಮೇಲೆ ಪರಿಣಾಮ ಬೀರಲಿದೆ. ಆದರೆ ಅದೇ ವಯಸ್ಸಿನ ಶೇಕಡಾ 125 ಹುಡುಗಿಯರಲ್ಲಿ ಇದು ಕಾಡಲಿದೆ ಎಂದು ವರದಿ ಹೇಳಿದೆ. 1975 ರಿಂದ ಯಾವುದೇ ದೇಶದ ಸ್ಥೂಲಕಾಯತೆ ಪ್ರಮಾಣ ಇಳಿಕೆ ಕಂಡಿಲ್ಲ. ಇದು ಮಕ್ಕಳ ಸ್ಥೂಲಕಾಯತೆಯ ಪ್ರಮಾಣವನ್ನು ಸಹ ಒಳಗೊಂಡಿದೆ. ಹದಿಹರೆಯದವರು ಈಗ ದೀರ್ಘಕಾಲದ ಕಾಯಿಲೆಗೆ ಬಹುಬೇಗ ತುತ್ತಾಗ್ತಿದ್ದಾರೆ. ಪ್ರೌಢಾವಸ್ಥೆಯಲ್ಲಿಯೇ ಟೈಪ್ -2 ಮಧುಮೇಹ, ಹೃದ್ರೋಗ, ಮೂಳೆ ಸಮಸ್ಯೆ, ನಿದ್ರಾಹೀನತೆಯ ಸಮಸ್ಯೆ, ಕೊಬ್ಬಿನ ಯಕೃತ್ತಿನ ಕಾಯಿಲೆಗಳಿಗೆ ತುತ್ತಾಗ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರಿನಲ್ಲಿ ಮುಟ್ಟಿದ ಕಡೆಯಲೆಲ್ಲಾ ಶಾಕ್ ಹೊಡೀತಿದ್ಯಲ್ಲಾ, ಯಾಕ್ ಹೀಗೆ?
ಬೊಜ್ಜು, ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮತ್ತು ಅಸ್ಥಿಸಂಧಿವಾತ, ಯಕೃತ್ತು, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು, ನಿದ್ರಾಹೀನತೆ, ಖಿನ್ನತೆಯಂತಹ ಇತರ ದೀರ್ಘಕಾಲದ ಕಾಯಿಲೆಗಳಿಗೆ ಗಮನಾರ್ಹ ಕೊಡುಗೆ ನೀಡ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಸಾಂಕ್ರಾಮಿಕವಾಗ್ತಿದೆ. ವಿಶೇಷವಾಗಿ ಮಧ್ಯವಯಸ್ಕ ಜನಸಂಖ್ಯೆಯಲ್ಲಿ ಮರಣ ಪ್ರಮಾಣವನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ. ನಿದ್ರೆಯ ಮಾದರಿಯಲ್ಲಿನ ಬದಲಾವಣೆ, ತಪ್ಪಾದ ಸಮಯದಲ್ಲಿ ತಿನ್ನುವುದು ಇದಕ್ಕೆ ದೊಡ್ಡ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಬಡದೇಶಗಳಲ್ಲಿ ಸಂಪನ್ಮೂಲ ಕೊರತೆ ಕಾರಣ : ವಿಶ್ವದ ಅನೇಕ ಬಡ ದೇಶಗಳು ಸ್ಥೂಲಕಾಯತೆಯ ವೇಗದ ಬೆಳವಣಿಗೆಯನ್ನು ಅನುಭವಿಸುತ್ತಿವೆ ಎಂದು ಫೆಡರೇಶನ್ ವರದಿ ಹೇಳಿದೆ. ಆದ್ರೆ ಈ ದೇಶಗಳು ರೋಗವನ್ನು ಎದುರಿಸಲು ಕನಿಷ್ಠಮಟ್ಟಕ್ಕೂ ಸಿದ್ಧತೆ ನಡೆಸಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಸ್ಥೂಲಕಾಯದ ಒಟ್ಟು ಆರ್ಥಿಕ ಪರಿಣಾಮವು 2060 ರ ವೇಳೆಗೆ ಹೆಚ್ಚಿನ ಆದಾಯದ ದೇಶಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ ಮತ್ತು ಕಡಿಮೆ ಸಂಪನ್ಮೂಲ ಹೊಂದಿರುವ ದೇಶಗಳಲ್ಲಿ 12 ರಿಂದ 25 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಪ್ರಯೋಜನಗಳನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.