ವಾಕಿಂಗ್ ಅಂದ್ರೆ ಕಿಲೋಮೀಟರ್ ಗಟ್ಟಲೆ ನಡೆಯೋದಲ್ಲ, ಇಷ್ಟು ಹೆಜ್ಜೆ ಹಾಕಿದ್ರೂ ಗುಂಡಿಗೆ ಗಟ್ಟಿ ಇರುತ್ತೆ

Published : Jul 24, 2025, 03:21 PM ISTUpdated : Jul 24, 2025, 03:26 PM IST
walking

ಸಾರಾಂಶ

ಆರೋಗ್ಯಕ್ಕೆ ವಾಕಿಂಗ್ ಬಹಳ ಮುಖ್ಯ. ದಿನಕ್ಕೆ 10 ಸಾವಿರ ಹೆಜ್ಜೆ ವಾಕ್ ಮಾಡೋದು ಕಷ್ಟ ಎನ್ನುವವರಿಗೆ ಹೊಸ ಸ್ಟಡಿ ಗುಡ್ ನ್ಯೂಸ್ ನೀಡಿದೆ. 

ಮನೆಗೆರಡು ಕಾರ್, ಬೈಕ್ ಇರೋದ್ರಿಂದ ಜನರು ಪಕ್ಕದ ಗಲ್ಲಿಗೂ ಸ್ಕೂಟರ್ ನಲ್ಲಿ ಹೋಗ್ತಾರೆ. ನಾಲ್ಕು ಹೆಜ್ಜೆ ನಡೆದ್ರೆ ಉಸಿರು ಮೇಲೆ ಬರುತ್ತೆ. ತೂಕ ಇಳಿಸೋಕೆ, ಆರೋಗ್ಯ ಕಾಪಾಡಿಕೊಳ್ಳೋಕೆ, ಹಾರ್ಟ್ ಹೆಲ್ತ್ (Heart Health) ಗೆ ಅಂತ ಒಂದಿಷ್ಟು ಮಾತ್ರೆ ನುಂಗೋ ಜನರೂ ಇದ್ದಾರೆ. ನಿಜವಾಗಿ ಹೇಳ್ಬೇಕು ಅಂದ್ರೆ ಖರ್ಚಿಲ್ಲದೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಸುಲಭ ವಿಧಾನ ವಾಕಿಂಗ್. ದಿನ ಒಂದಿಷ್ಟು ಹೆಜ್ಜೆ ನಡೆದ್ರೆ ನಿಮ್ಮ ಆರೋಗ್ಯ ಸುಧಾರಿಸೋದ್ರಲ್ಲಿ ಡೌಟೇ ಇಲ್ಲ. ಅನೇಕ ಸಂಶೋಧನೆಗಳು ನಿಮ್ಮ ಹೃದಯ ಆರೋಗ್ಯವಾಗಿರಬೇಕು, ಬಿಪಿ ಕಂಟ್ರೋಲ್ ನಲ್ಲಿ ಇರ್ಬೇಕು, ಸಕ್ಕರೆ ಕಾಯಿಲೆ ಬರ್ಬಾರದು ಅಂದ್ರೆ ದಿನಕ್ಕೆ 10 ಸಾವಿರ ಹೆಜ್ಜೆ ನಡೀಬೇಕು ಎಂದಿವೆ. ದಿನಕ್ಕೆ 10 -20 ಹೆಜ್ಜೆ ನಡೆಯೋಕೇ ಪುರಸೊತ್ತಿಲ್ಲ ಇನ್ನು 10 ಸಾವಿರನಾ ಅಂತ ಕಣ್ಣು ಬಿಡೋ ಜನ ಇದ್ದಾರೆ. ನಮ್ಮ ಆರೋಗ್ಯ (Health) ಸುಧಾರಿಸ್ಬೇಕು ಅಂದ್ರೆ ನಾವು ವಾಕಿಂಗ್ ಗೆ ಸಮಯ ಹೊಂದಿಸಿಕೊಳ್ಳಲೇಬೇಕು. ಈಗ ಹೊಸ ಸಂಶೋಧನೆ ಹೆಜ್ಜೆಯನ್ನು ಸ್ವಲ್ಪ ಕಡಿಮೆ ಮಾಡಿದೆ. ನೀವು ದಿನಕ್ಕೆ 10 ಸಾವಿರ ಹೆಜ್ಜೆ ನಡೀಬೇಕಾಗಿಲ್ಲ, ಇನ್ನೂ ಸ್ವಲ್ಪ ಕಡಿಮೆ ನಡೆದ್ರೂ ನಿಮ್ಮ ಹಾರ್ಟ್ ಗಟ್ಟಿ ಇರುತ್ತೆ.

ಹೊಸ ಸಂಶೋಧನೆ ಹೇಳೋದೇನು? : ಇತ್ತೀಚಿಗೆ ನಡೆದ ಹೊಸ ಸಂಶೋಧನೆ ಪ್ರಕಾರ, ನೀವು ದಿನಕ್ಕೆ 10 ಸಾವಿರ ಅಲ್ಲ 7 ಸಾವಿರ ಹೆಜ್ಜೆ ವಾಕಿಂಗ್ (Walking) ಮಾಡಿದ್ರೆ ಸಾಕು. ಬುಧವಾರ ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟವಾದ ಅಧ್ಯಯನ, ನಡಿಗೆ ಬಗ್ಗೆ ಕೆಲ ಮಹತ್ವದ ವಿಷ್ಯವನ್ನು ತಿಳಿಸಿದೆ. ದಿನವಿಡೀ 5,000 ರಿಂದ 7,000 ಹೆಜ್ಜೆ ನಡಿಗೆ, ವ್ಯಕ್ತಿಯ ಆರೋಗ್ಯದ ಮೇಲೆ ಆಳವಾದ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ನೀವು ದಿನಕ್ಕೆ ಸುಮಾರು 7,000 ಹೆಜ್ಜೆ ನಡೆದ್ರೆ ಕ್ಯಾನ್ಸರ್ ಮತ್ತು ಹೃದಯಾಘಾತವನ್ನು ತಡೆಗಟ್ಟಡಬಹುದು. ಹಠಾತ್ ಸಾವಿನ ಅಪಾಯ ಶೇಕಡಾ 47 ರಷ್ಟು ಕಡಿಮೆ ಮಾಡುತ್ತದೆ ಅಂತ ಸ್ಟಡಿ ಹೇಳಿದೆ.

ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು ಸುಮಾರು 160,000 ಕ್ಕೂ ಹೆಚ್ಚು ವಯಸ್ಕರ ಮೇಲೆ ಅಧ್ಯಯನ ನಡೆಸಿದ್ದಾರೆ. ಅಲ್ಲದೆ 57 ಅಧ್ಯಯನಗಳ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಪ್ರತಿದಿನ 7,000 ಹೆಜ್ಜೆ ವಾಕ್ ಮಾಡಿದ್ರೆ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆ ಆಗುತ್ತದೆ ಎಂಬುದನ್ನು ಅವರು ಕಂಡುಕೊಂಡಿದಾರೆ. ನೀವು ಪ್ರತಿ ದಿನ 7 ಸಾವಿರ ಹೆಜ್ಜೆ ನಡೆದ್ರೆ ಅದು ಬುದ್ಧಿಮಾಂದ್ಯತೆಯ ಅಪಾಯವನ್ನು ಶೇಕಡಾ 38 ರಷ್ಟು ಕಡಿಮೆ ಮಾಡುತ್ತದೆ. ಖಿನ್ನತೆಯನ್ನು ಶೇಕಡಾ 22ರಷ್ಟು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಅನ್ನು ಶೇಕಡಾ 6ರಷ್ಟು ಮತ್ತು ಹೃದ್ರೋಗವನ್ನು ಶೇಕಡಾ 25ರಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ ಸಾವಿನ ಅಪಾಯ ಕೂಡ ಶೇಕಡಾ 47 ರಷ್ಟು ಕಡಿಮೆ ಆಗುತ್ತದೆ ಎಂದು ಸಂಶೋಧನೆ ಹೇಳಿದೆ.

7 ಸಾವಿರ ಸಾಧ್ಯವಿಲ್ಲ ಎನ್ನುವವರು ಪ್ರತಿ ದಿನ 2 ಸಾವಿರ ಹೆಜ್ಜೆ ನಡೆಯಿರಿ. ಇದು ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂದು ಸಂಶೋಧನೆ ಹೇಳಿದೆ. ದೈಹಿಕವಾಗಿ ಆಕ್ಟಿವ್ ಇಲ್ಲದೆ ಹೋದವರು 7,000 ಹೆಜ್ಜೆ ನಡೆಯಬೇಕು. ಈಗಾಗಲೇ ಪ್ರತಿ ದಿನ 10 ಸಾವಿರ ಹೆಜ್ಜೆ ನಡೆಯುತ್ತಿರುವವರು ನೀವಾಗಿದ್ದರೆ ಅದ್ರ ಸಂಖ್ಯೆಯನ್ನು ಕಡಿಮೆ ಮಾಡಬೇಡಿ, ನಿಮ್ಮ ಕೆಲ್ಸ ಮುಂದುವರೆಸಿ ಎಂದು ಈ ಅಧ್ಯಯನದ ಪ್ರಮುಖ ಲೇಖಕಿ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕಿ ಮೆಲೊಡಿ ಡಿಂಗ್ ಸಲಹೆ ನೀಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?