Health Tips: ಸಕ್ಕರೆ ತಯಾರಿಸುವಾಗ ಮೂಳೆಯ ಪುಡಿ ಸೇರಿಸುತ್ತಾರಾ?

Suvarna News   | Asianet News
Published : Mar 12, 2022, 11:41 AM ISTUpdated : Mar 12, 2022, 11:45 AM IST
Health Tips: ಸಕ್ಕರೆ ತಯಾರಿಸುವಾಗ ಮೂಳೆಯ ಪುಡಿ ಸೇರಿಸುತ್ತಾರಾ?

ಸಾರಾಂಶ

ಸಕ್ಕರೆ (Sugar) ಸಸ್ಯಾಹಾರಿಯೇ ? ಹೀಗೊಂದು ಪ್ರಶ್ನೆ ಕೇಳಿದ್ರೆ ಎಲ್ಲರೂ ಕಣ್ಣು, ಬಾಯಿ ಬಿಟ್ಕೊಂಡು ನೋಡೋದು ಖಂಡಿತ. ಯಾಕೆಂದ್ರೆ ಸಕ್ಕರೆಗೂ ಮಾಂಸಾಹಾರ (Nonvegetarian)ಕ್ಕೂ ಏನೇನೂ ನಂಟಿಲ್ಲ ಎಂದು ನೀವಂದುಕೊಳ್ಳಬಹುದು. ಆದ್ರೆ ಸಕ್ಕರೆನೂ ಮಾಂಸಾಹಾರಿ. ಅದ್ಹೇಗೆ ನಾವ್‌ ಹೇಳ್ತೀವಿ. 

ಅಡುಗೆಮನೆಯಲ್ಲಿ ಏನಿಲ್ಲದಿದ್ದರೂ ಸಕ್ಕರೆ (Sugar)ಯಂತೂ ಇರಲೇಬೇಕು. ಟೀ, ಜ್ಯೂಸ್, ಪಾನೀಯ, ಸಿಹಿತಿಂಡಿಗಳನ್ನೆಲ್ಲಾ ತಯಾರಿಸುವಾಗ ಸಕ್ಕರೆಯನ್ನು ಬಳಸಲಾಗುತ್ತದೆ. ಆದ್ರೆ ಸಕ್ಕರೆ ತಯಾರಿ ಹೇಗೆ ? ಸಕ್ಕರೆ ತಯಾರಿಕೆಯ ಹಂತದಲ್ಲಿ ಅದಕ್ಕೆ ಏನೇನನ್ನು ಸೇರಿಸಲಾಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಹೀಗಾಗಿಯೇ ಸಕ್ಕರೆ ಸಸ್ಯಾಹಾರಿ (Vegetarian) ಯೇ, ಮಾಂಸಾಹಾರಿಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 

ಸಕ್ಕರೆ ನಿಜವಾಗಿಯೂ ಸಸ್ಯಾಹಾರಿಯೇ ?
ಹರಳಾಗಿಸಿದ ಅಥವಾ ಬಿಳಿ ಸಕ್ಕರೆಯು ಕಬ್ಬಿನ ಕಾಂಡಗಳಿಂದ ಬರುತ್ತದೆ, ಇದು ಸಸ್ಯಾಹಾರಿಯಾಗಿರುತ್ತದೆ. ಆದರೆ ಈ ಸಂಸ್ಕರಿಸಿದ ಸಕ್ಕರೆಯನ್ನು ಪ್ರಾಣಿಗಳ ಮೂಳೆ (Bone)ಯ ಪುಡಿಯೊಂದಿಗೆ ಬೆರೆಸಿ ಪರಿಪೂರ್ಣ ಬಿಳಿ ಬಣ್ಣವನ್ನು ನೀಡಲಾಗುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ವಾಣಿಜ್ಯ ಉತ್ಪಾದನೆಯಲ್ಲಿ ಸಂಸ್ಕರಿಸಿದ ಬಿಳಿ ಸಕ್ಕರೆಯನ್ನು ಬಿಳಿಯಾಗಿಸಲು ಪ್ರಾಣಿಗಳ ಮೂಳೆಯ ಪುಡಿಯನ್ನು ಬಳಸಲಾಗುತ್ತದೆ. ಇದನ್ನು ಏಕೆ ಮಾಡಲಾಗುತ್ತದೆ ಮತ್ತು ಎಲ್ಲಾ ರೀತಿಯ ಸಕ್ಕರೆಯನ್ನು ಪ್ರಾಣಿಗಳ ಮೂಳೆಯ ಪುಡಿಯಿಂದ ತಯಾರಿಸಲಾಗುತ್ತದೆಯೇ ಎಂಬುದನ್ನು ತಿಳಿಯೋಣ.

ಶುಗರ್ ಕಂಟ್ರೋಲ್‌ನಲ್ಲಿಡಲು ಈ ಮಾರ್ಗ ಅನುಸರಿಸಿ, ಆರೋಗ್ಯ ಸುಧಾರಿಸುತ್ತೆ?

ಬಿಳಿ ಸಕ್ಕರೆಯು ಪ್ರಪಂಚದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಸಕ್ಕರೆಯ ರೂಪಾಂತರವಾಗಿದೆ. ಸಕ್ಕರೆಯು ಹೆಚ್ಚು ಬಿಳಿ ಬಣ್ಣದಲ್ಲಿ ಮತ್ತು ವಿನ್ಯಾಸದಲ್ಲಿ ದಪ್ಪವಾಗಿರಲು ವಾಣಿಜ್ಯಿಕವಾಗಿ ತಯಾರಿಸುವ ಸಕ್ಕರೆಯಲ್ಲಿ ಪ್ರಾಣಿ ಮತ್ತು ಹಸುವಿನ ಮೂಳೆಯ ಪುಡಿಯನ್ನು ಸೇರಿಸುತ್ತಾರೆ.

ಬೋನ್ ಚಾರ್ ಎಂದರೇನು ? ಸಕ್ಕರೆ ಉತ್ಪಾದನೆಯಲ್ಲಿ ಇದನ್ನು ಹೇಗೆ ಬಳಸಲಾಗುತ್ತದೆ ?
ಬೋನ್ ಚಾರ್‌ನ್ನು ನೈಸರ್ಗಿಕ ಕಾರ್ಬನ್ ಎಂದೂ ಕರೆಯುತ್ತಾರೆ, ಇದು ಜಾನುವಾರುಗಳ ಮೂಳೆಗಳಿಂದ ತಯಾರಿಸಿದ ಉತ್ಪನ್ನವಾಗಿದೆ. ಬೋನ್ ಚಾರ್ ಟ್ರೈಕಾಲ್ಸಿಯಂ ಫಾಸ್ಫೇಟ್, ಕ್ಯಾಲ್ಸಿಯಂ ಕಾರ್ಬೋನೇಟ್ ಮತ್ತು ಕಾರ್ಬನ್ ಅನ್ನು ಹೊಂದಿದೆ, ಇದನ್ನು ಹಲವಾರು ವಾಣಿಜ್ಯ ಪ್ರಕ್ರಿಯೆಗಳಲ್ಲಿ ಫಿಲ್ಟರ್ ಆಗಿ ಬಳಸಲಾಗುತ್ತದೆ.

ಬೋನ್ ಚಾರ್ ಮಾಡಲು, ಪ್ರಾಣಿಗಳ ಮೂಳೆಗಳನ್ನು ಪುಡಿಮಾಡಿ ಸಕ್ಕರೆ ಕಾರ್ಖಾನೆಗಳಿಗೆ ಮಾರಲಾಗುತ್ತದೆ. ಇದನ್ನು ಸಂಸ್ಕರಿಸಿದ ಸಕ್ಕರೆಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಅಧ್ಯಯನದ ಪ್ರಕಾರ, ಮೂಳೆಯ ಚಾರ್‌ನ್ನು ಸಕ್ಕರೆಯ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ ಏಕೆಂದರೆ ಇದು ಕಚ್ಚಾ ಫಿಲ್ಟರ್‌ನಂತೆ ಕಾರ್ಯನಿರ್ವಹಿಸುತ್ತದೆ.

Kids Health: ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬೇಡಿ

ಮೂಳೆಯ ಚಾರ್ ಒಳಗೊಂಡಿರದ ಸಕ್ಕರೆಗಳು
ವಾಣಿಜ್ಯಿಕವಾಗಿ ಬೋನ್ ಚಾರ್‌ ಸೇರಿಸಿ ಉತ್ಪಾದಿಸಲಾದ ಸಕ್ಕರೆಯನ್ನು ಕಂಡುಹಿಡಿಯುವುದು ಸ್ಪಲ್ಪ ಟ್ರಿಕಿ ಆಗಿರಬಹುದು. ಆದರೆ ಆಗದ ಕೆಲಸವೇನಲ್ಲ. ಸಸ್ಯಾಹಾರಿ ಮತ್ತು ಆರೋಗ್ಯಕರ ಆಹಾರ (Food)ದ ಕಡೆಗೆ ಬೆಳೆಯುತ್ತಿರುವ ಒಲವು, ಮೂಳೆಯ ಚಾರ್ ಅನ್ನು ಸೇರಿಸದೆಯೇ ತಯಾರಿಸಲಾದ ಸಕ್ಕರೆಯ ಬಗ್ಗೆ ತಿಳಿದುಕೊಳ್ಳುವಂತೆ ಮಾಡುತ್ತದೆ. 

ಹೆಚ್ಚಿನ ಸಂಸ್ಕರಿಸಿದ ಸಕ್ಕರೆಗಳು ಮೂಳೆಯ ಚಾರ್‌ನ್ನು ಹೊಂದಿರುತ್ತವೆ ಮತ್ತು ನೀವು ಸಕ್ಕರೆಗೆ ಮೂಳೆಯ ಚಾರ್ ಅನ್ನು ಸೇರಿಸುವುದನ್ನು ತಪ್ಪಿಸಲು ಬಯಸಿದರೆ ತೆಂಗಿನಕಾಯಿ ಸಕ್ಕರೆ, ಹಣ್ಣಿನ ಸಕ್ಕರೆ, ಖರ್ಜೂರದ ಸಕ್ಕರೆ ಮೊದಲಾದವುಗಳನ್ನು ಪರ್ಯಾಯವಾಗಿ ಬಳಸಬಹುದು. ಅಥವಾ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆ ಪರ್ಯಾಯಗಳಾದ ಕಚ್ಚಾ ಅಥವಾ ಸಾವಯವ ಜೇನುತುಪ್ಪ (Honey), ಮೇಪಲ್ ಸಿರಪ್, ಖರ್ಜೂರದ ಸಿರಪ್ ಬಳಸಬಹುದು.

ಭಾರತೀಯ ಸಕ್ಕರೆಯನ್ನು ಮೂಳೆಯ ಚಾರ್‌ನಿಂದ ಸಂಸ್ಕರಿಸಲಾಗಿದೆಯೇ ?
ಪ್ರಾಣಿ ಹಕ್ಕುಗಳ ಸಂಸ್ಥೆ ಬ್ಯೂಟಿ ವಿತೌಟ್ ಕ್ರೌಲ್ಟಿ ಪ್ರಕಟಿಸಿದ ವರದಿಯ ಪ್ರಕಾರ, 'ಭಾರತದ ಈ ಸಂಸ್ಕರಣಾಗಾರಗಳಲ್ಲಿ ಕಬ್ಬಿನಿಂದ ಪಡೆದ ಸಕ್ಕರೆ ಸಸ್ಯಾಹಾರಿಯಾಗಿದೆ. ಕಬ್ಬಿನ ಸಕ್ಕರೆಯ ಶೋಧನೆ ಮತ್ತು ಡಿಕ್ಲೋರೈಸೇಶನ್ ತಂತ್ರಗಳು ಮೂಳೆಯ ಚಾರ್, ಸಾಂಪ್ರದಾಯಿಕ ಹರಳಿನ, ಸಕ್ರಿಯ ಇಂಗಾಲವನ್ನು (ಕಲ್ಲಿದ್ದಲು, ಮರ, ತೆಂಗಿನಕಾಯಿ) ಒಳಗೊಂಡಿರುತ್ತದೆ). ಅಥವಾ ಸಂಶ್ಲೇಷಿತ ಅಯಾನು ವಿನಿಮಯ ರಾಳಗಳ ಬಳಕೆ. ಭಾರತದಲ್ಲಿ ಕಬ್ಬಿನ ಸಕ್ಕರೆಯ ತಯಾರಕರು ಎರಡನೆಯ ಅಥವಾ ಸಲ್ಫರ್ ಡೈಆಕ್ಸೈಡ್ ಅನ್ನು ಬಳಸುತ್ತಾರೆ.

ಹೀಗಾಗಿ ಇನ್ಮುಂದೆ ಸೀದಾ ಅಂಗಡಿಗೆ ಹೋಗಿ ಸೀದಾ ಸಕ್ಕರೆ ಖರೀದಿಸುವ ಅಭ್ಯಾಸ ಇನ್ನು ಬಿಟ್ಬಿಡಿ. ಮೊದ್ಲು ಆ ಸಕ್ಕರೆ ಸಸ್ಯಾಹಾರಿನಾ, ಮಾಂಸಾಹಾರಿನಾ ತಿಳ್ಕೊಳ್ಳಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್