Health Tips: ಪ್ರತಿ ಮಹಿಳೆಯೂ ಮಾಡಿಸ್ಕೊಳ್ಳಬೇಕಾದ ಹೆಲ್ತ್‌ ಚೆಕಪ್‌

Suvarna News   | Asianet News
Published : Mar 12, 2022, 10:32 AM ISTUpdated : Mar 12, 2022, 10:37 AM IST
Health Tips: ಪ್ರತಿ  ಮಹಿಳೆಯೂ ಮಾಡಿಸ್ಕೊಳ್ಳಬೇಕಾದ ಹೆಲ್ತ್‌ ಚೆಕಪ್‌

ಸಾರಾಂಶ

ಮಹಿಳೆ (Woman)ಯರು ಮನೆ ಕೆಲಸ, ಆಫೀಸ್‌ ಕೆಲಸ ಎಂದು ಒಂದಲ್ಲ, ಎರಡಲ್ಲ ಹಲವಾರು ಕೆಲಸ (work)ಗಳನ್ನು ಒಬ್ಬರೇ ನಿಭಾಯಿಸುತ್ತಿರುತ್ತಾರೆ. ಆದ್ರೆ ತಮ್ಮ ಆರೋಗ್ಯ (Health)ದ ಬಗ್ಗೆ ಕಾಳಜಿ ವಹಿಸಲು ಮರೆತುಬಿಡುತ್ತಾರೆ. ಆದ್ರೆ ಪ್ರತಿ ಮಹಿಳೆಯರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾದ ಕೆಲವೊಂದು ಆರೋಗ್ಯ ತಪಾಸಣೆಗಳಿವೆ. ಅದೇನೂಂತ ತಿಳ್ಕೊಳ್ಳಿ.

ಮನುಷ್ಯನಿಗೆ ಆರೋಗ್ಯ (Health)ವೇ ಭಾಗ್ಯ. ಆರೋಗ್ಯವಿಲ್ಲದಿದ್ದಾಗ ಬೇರೆ ಏನಿದ್ದರೂ ಪ್ರಯೋಜನವಿಲ್ಲ. ಆದರೆ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಅದರಲ್ಲೂ ಮಹಿಳೆ (Woman)ಯರಂತೂ ಸಾಮಾನ್ಯವಾಗಿ ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಆ ರೀತಿ ಮಾಡಬಾರದು. ಯಾಕೆಂದರೆ ಇದು ಪ್ರಮುಖ ಕಾಯಿಲೆಯ ಸಂಭಾವ್ಯ ಲಕ್ಷಣವಾಗಿದೆ. ದಿನನಿತ್ಯದ ಆರೋಗ್ಯ ತಪಾಸಣೆಗಳನ್ನು ನಿಗದಿಪಡಿಸುವುದರಿಂದ ಸಂಭಾವ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಬಹುದು ಮತ್ತು ನಿಯಮಿತ ತಪಾಸಣೆಯು ರೋಗದ ತೊಡಕುಗಳನ್ನು ತಡೆಗಟ್ಟಬಹುದು.

ಜೀವನ (Life)ದ ಗುಣಮಟ್ಟವನ್ನು ಸುಧಾರಿಸಬಹುದು ಮತ್ತು ನಿಮ್ಮ ಜೀವವನ್ನು ಸಹ ಉಳಿಸಬಹುದು. ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ಸರಿಯಾದ ಆಹಾರವನ್ನು ಆರಿಸುವುದರಿಂದ ಆರೋಗ್ಯಕ್ಕೆ ಪ್ರಮುಖವಾಗಿದೆ. ಪ್ರತಿ ಮಹಿಳೆ ತೆಗೆದುಕೊಳ್ಳಬೇಕಾದ 12 ಆರೋಗ್ಯ ತಪಾಸಣೆ (Health Checkup)ಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಗಾಜಿಯಾಬಾದ್‌ನ ಮಣಿಪಾಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ.ರಂಜನಾ ಬೆಕಾನ್ ಹಂಚಿಕೊಂಡಿದ್ದು,  ಅದೇನೆಂದು ತಿಳಿಯೋಣ. 

Women Rights : ಪ್ರತಿಯೊಬ್ಬ ಮಹಿಳೆಗೂ ತಿಳಿದಿರಬೇಕು ಈ ಕಾನೂನು

1. ರಕ್ತದೊತ್ತಡ ಪರೀಕ್ಷೆ: ಹೆಚ್ಚಿನ ಮಹಿಳೆಯರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ವಿಶೇಷವಾಗಿ ಗರ್ಭಧಾರಣೆಯ ನಂತರ, ರಕ್ತದೊತ್ತಡ ಸಮಸ್ಯೆಗಳು, ಹೃದ್ರೋಗಗಳ ಸಮಸ್ಯೆಗಳನ್ನು ಹೆಚ್ಚುತ್ತವೆ. ಹೀಗಾಗಿ ಈ ಕುರಿತು ನಿಯಮಿತವಾಗಿ ತಪಾಸಣೆ ನಡೆಸುವುದು ಮುಖ್ಯವಾಗಿದೆ.

2. ಮೂಳೆ ಸಾಂದ್ರತೆ ಪರೀಕ್ಷೆ: ನಿರ್ದಿಷ್ಟ ವಯಸ್ಸಿನ ನಂತರ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಮೂಳೆ ಸಾಂದ್ರತೆಯನ್ನು ಬಹಳ ಬೇಗನೆ ಕಳೆದುಕೊಳ್ಳುತ್ತಾರೆ. ಆದ್ದರಿಂದ, ಮಹಿಳೆಯರು 50ನೇ ವಯಸ್ಸಿನಲ್ಲಿಯೇ ಮೂಳೆ ಸಾಂದ್ರತೆ ಪರೀಕ್ಷೆಯನ್ನು ಮಾಡಿಕೊಳ್ಳಬೇಕು.

3. ಥೈರಾಯ್ಡ್ ಪರೀಕ್ಷೆ: ಥೈರಾಕ್ಸಿನ್ ಮತ್ತು ಟ್ರೈಯೋಡೋಥೈರೋನೈನ್ ಥೈರಾಯ್ಡ್ ಗ್ರಂಥಿಗಳಿಂದ ಸ್ರವಿಸುವ ಎರಡು ಅಗತ್ಯ ಹಾರ್ಮೋನುಗಳು. ಹೈಪರ್ ಆಕ್ಟಿವ್ ಅಥವಾ ಅಂಡರ್ಆಕ್ಟಿವ್ ಥೈರಾಯ್ಡ್ ಗ್ರಂಥಿಗಳ ಸಮಸ್ಯೆಯು ಹೆಚ್ಚಿನ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಮಹಿಳೆಯರು ನಿಯಮಿತವಾಗಿ ಥೈರಾಯ್ಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

Health Tips: ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತೆ ಸಾಬೂದಾನ ಕಿಚಡಿ

4. ಮ್ಯಾಮೊಗ್ರಾಮ್: 40 ವರ್ಷ ವಯಸ್ಸಿನಿಂದ, ಸ್ತನ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ವಾರ್ಷಿಕ ಸ್ಕ್ರೀನಿಂಗ್ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಇದನ್ನು ಮ್ಯಾಮೊಗ್ರಾಮ್ ಎನ್ನುತ್ತಾರೆ

5. BMI ಸೂಚ್ಯಂಕ: 18ನೇ ವಯಸ್ಸಿನಿಂದ, ಸ್ಥೂಲಕಾಯತೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಇತರ ಅಂಗಗಳ ಮೇಲೆ ಇದು ಪರಿಣಾಮ ಬೀರಬಹುದು ಏಕೆಂದರೆ ಇದು ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮುಖ ಕಾರಣವಾಗಿದೆ. ಹೀಗಾಗಿ ಬಿಎಂಐ (ಎತ್ತರ ಹಾಗೂ ತೂಕದ ಸಮತೋಲನದ ಪರೀಕ್ಷೆ) ಟೆಸ್ಟ್ ಮಾಡಿಕೊಳ್ಳಬೇಕಾಗುತ್ತದೆ.

6. ಕಣ್ಣಿನ ಪರೀಕ್ಷೆ: 18 ವರ್ಷದಿಂದ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ.

7. ಕೊಲೆಸ್ಟ್ರಾಲ್ ಪರೀಕ್ಷೆ: ಅಧಿಕ ಕೊಲೆಸ್ಟ್ರಾಲ್ ((Cholesterol) ಸಮಸ್ಯೆಯು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.

8. ಲೈಂಗಿಕವಾಗಿ ಹರಡುವ ರೋಗಗಳು: ಲೈಂಗಿಕವಾಗಿ ಹರಡುವ ರೋಗಗಳು ಆರಂಭಿಕ ಹಂತದಲ್ಲಿ ಯಾವುದೇ ಸರಿಯಾದ ಲಕ್ಷಣಗಳನ್ನು ತೋರಿಸುವುದಿಲ್ಲ. ಒಬ್ಬ ವ್ಯಕ್ತಿಯು ಲೈಂಗಿಕ ರೋಗದಿಂದ ಬಳಲುತ್ತಿದ್ದರೆ, ಇದು ಸುಲಭವಾಗಿ ಗಂಡ, ಮಕ್ಕಳಿಗೆ ಹರಡಬಹುದು.  ಮಹಿಳೆಯು ಲೈಂಗಿಕವಾಗಿ ಸಕ್ರಿಯವಾಗಿದ್ದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ.

9. ಕೊಲೊನೋಸ್ಕೋಪಿ: ಈ ಪರೀಕ್ಷೆಯ ಸಹಾಯದಿಂದ, ಆರಂಭಿಕ ಹಂತದಲ್ಲಿ ಕರುಳಿನ ಕ್ಯಾನ್ಸರ್‌ನ ಲಕ್ಷಣಗಳನ್ನು ಪತ್ತೆಹಚ್ಚಬಹುದು ಮತ್ತು ಸಕಾಲಿಕ ಮಧ್ಯಸ್ಥಿಕೆಯೊಂದಿಗೆ, ಸರಿಯಾದ ಚಿಕಿತ್ಸೆಯನ್ನು ಕೈಗೊಳ್ಳಬಹುದು.

10. ಶ್ರವಣ ಪರೀಕ್ಷೆ: ಮಹಿಳೆಯರಲ್ಲಿ ಶ್ರವಣ ಸಮಸ್ಯೆಗಳು ಹೆಚ್ಚುತ್ತಿವೆ ಮತ್ತು ಜೀವನದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ, ಇದು ವ್ಯಕ್ತಿಯ ಮಾನಸಿಕ ಆರೋಗ್ಯವನ್ನೂ ಕೆಡಿಸಬಹುದು. ಪ್ರತಿ 10 ವರ್ಷಗಳಿಗೊಮ್ಮೆ, 50 ವರ್ಷ ವಯಸ್ಸಿನ ನಂತರ ಮಹಿಳೆಯರಿಗೆ ಸ್ಕ್ರೀನಿಂಗ್ ಮಾಡಲು ಶಿಫಾರಸು ಮಾಡಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..