Eye Care: ಬೆಳಗ್ಗೆ ಎದ್ದ ಕೂಡಲೇ ಕಣ್ಣು ತೊಳಿಯೋದು ಬೇಡ ಅಂತಾರೆ ತಜ್ಞರು!

By Suvarna News  |  First Published Apr 22, 2024, 1:34 PM IST

ಕಣ್ಣಿನ ಆರೈಕೆಯಲ್ಲಿ ಸ್ವಲ್ಪ ಹೆಚ್ಚುವರಿ ಎಚ್ಚರಿಕೆ ಮುಖ್ಯ. ಕಣ್ಣಿನಲ್ಲಿ ಸಮಸ್ಯೆ ಶುರುವಾದ್ರೆ ನಿತ್ಯದ ಕೆಲಸ ಸಂಪೂರ್ಣ ಹಾಳಾಗುತ್ತೆ. ಕೆಲವರು ಯಡವಟ್ಟು ಮಾಡ್ಕೊಂಡು ಶಾಶ್ವತ ಕುರುಡರಾಗೋದಿದೆ. ನಿಮ್ಮ ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ವೈದ್ಯರ ಈ ಸಲಹೆ ಪಾಲಿಸಿ.
 


ನಮ್ಮ ದೇಶಹ ಅಮೂಲ್ಯ ಅಂಗಗಳಲ್ಲಿ ಕಣ್ಣು ಒಂದು. ಕಣ್ಣಿಲ್ಲದೆ ಬದುಕುವ ಅನೇಕ ಜನರ ಮಧ್ಯೆ ಕಣ್ಣಿರುವ ಜನರು ಅದೃಷ್ಟವಂತರು ಎಂದೇ ಭಾವಿಸಲಾಗುತ್ತದೆ. ಕೆಲವು ಬಾರಿ ನಿಮ್ಮ ನಿರ್ಲಕ್ಷ್ಯದಿಂದ ಅಥವಾ ಆರೈಕೆ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ನಿಮ್ಮ ಕಣ್ಣಿನ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ತೀರಿ. ಕಣ್ಣಿನ ಸ್ವಚ್ಛತೆ ಎಂಬ ವಿಷ್ಯ ಬಂದಾಗ ಪ್ರತಿಯೊಬ್ಬರೂ ಮೊದಲು ಮಾಡುವ ಕೆಲಸ ಕಣ್ಣಿಗೆ ನೀರು ಚಿಮುಕಿಸಿಕೊಳ್ಳುವುದು. ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಾಗ, ನಿದ್ರೆ ಬಂದ ಅನುಭವವಾಗ್ತಿದ್ದರೆ ಮೊದಲು ಕಣ್ಣಿಗೆ ನೀರು ಚಿಮುಕಿಸಿಕೊಂಡು ಬರ್ತೇವೆ. ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡೋದು ಹೆಚ್ಚು. ನಿದ್ರೆ ಹೋಗಿ, ಕಣ್ಣಿನ ಸುತ್ತ ಇರುವ ಕೊಳೆ ಹೋಗ್ಲಿ ಎನ್ನುವ ಕಾರಣಕ್ಕೆ ಕಣ್ಣಿಗೆ ನೀರು ಹಾಕಿ ಚಿಮುಕಿಸಿಕೊಳ್ತೇವೆ. ಹೀಗೆ ಮಾಡಿದ್ರೆ ಕಣ್ಣು ಸ್ವಚ್ಛವಾಗುತ್ತದೆ ಎಂಬ ನಂಬಿಕೆ ನಮಗಿದೆ. ಆದ್ರೆ ತಜ್ಞರು ಹೇಳೋದೇ ಬೇರೆ. ನಿಮ್ಮ ಕಣ್ಣಿನ ಸ್ವಚ್ಛತೆಗೆ ನೀವು ನೀರು ಚಿಮುಕಿಸಬೇಕಾಗಿಲ್ಲ ಎನ್ನುತ್ತಾರೆ ಅವರು. 

ಕಣ್ಣಿ (Eye) ಗೆ ನೀರು ಹಾಕುವ ಮುನ್ನ : ಬೆಳಿಗ್ಗೆ ಎದ್ದ ತಕ್ಷಣ ಕಣ್ಣಿಗೆ ನೀರು (Water) ಚಿಮುಕಿಸಿಕೊಳ್ಳೋದು ಕೆಟ್ಟ ಅಭ್ಯಾಸ ಎನ್ನುತ್ತಾರೆ ತಜ್ಞರು. ನೀವು ಪ್ರತ್ಯೇಕವಾಗಿ ಕಣ್ಣಿನ ಸ್ವಚ್ಛತೆ (Clean) ಮಾಡ್ಬೇಕಾಗಿಲ್ಲ. ಕಣ್ಣೇ ತನ್ನ ಸ್ವಚ್ಛತೆಯನ್ನು ನೋಡಿಕೊಳ್ಳುತ್ತದೆ. ಕಣ್ಣೀರಿನ ಗ್ರಂಥಿಗಳು ನೈಸರ್ಗಿಕ ಎಣ್ಣೆಯನ್ನು ಹೊಂದಿರುತ್ತವೆ. ನೀವು ಕಣ್ಣು ಉರಿ ಅಥವಾ ಮತ್ತ್ಯಾವುದೋ ಕಾರಣಕ್ಕೆ ಕಣ್ಣಿನ ಮೇಲೆ ಪದೇ ಪದೇ ನೀರು ಹಾಕ್ತಿದ್ದರೆ ಇದ್ರಿಂದ ನಿಮ್ಮ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತದೆ. ಕಣ್ಣನ್ನು ನೀರಿನಿಂದ ಸ್ವಚ್ಛಗೊಳಿಸಿದ್ರೆ ಕಣ್ಣಿನಲ್ಲಿರುವ ದ್ರವ ಕಡಿಮೆ ಆಗುತ್ತದೆ. ಇದರಿಂದಾಗಿ ಕಣ್ಣು ಶುಷ್ಕವಾಗುತ್ತೆ ಎನ್ನುತ್ತಾರೆ ತಜ್ಞರು. 

Tap to resize

Latest Videos

ದುಬಾರಿ ಕ್ರೀಮ್‌ ಕೊಂಡು ಮುಖಕ್ಕೆ ಹಚ್ಚಬೇಕಿಲ್ಲ, ಈ ಡ್ರೈಫ್ರೂಟ್ಸ್ ತಿಂದ್ರೆ ಮುಖ ಫಳಫಳ ಹೊಳೆಯುತ್ತೆ

ಈಗಾಗಲೇ ನಮ್ಮ ಕಣ್ಣಿನಲ್ಲಿ ಸಾಕಷ್ಟು ನೀರಿದೆ. ಧೂಳು ಅಥವಾ ಕೊಳಕನ್ನು ಸ್ವಚ್ಛಗೊಳಿಸಲು ಕಣ್ಣಿನಲ್ಲಿರುವ ನೀರು ಸಾಕಾಗುತ್ತದೆ. ಕಣ್ಣಿನ ದ್ರವವು ಮೂರು ಪದರಗಳನ್ನು ಹೊಂದಿದೆ. ಮೊದಲನೇಯರು ನೀರಾದ್ರೆ ಎರಡು ಮತ್ತು ಮೂರು ಕ್ರಮವಾಗಿ ಮ್ಯೂಸಿನ್ ಪದರ ಮತ್ತು ಲಿಪಿಡ್ ಪದರವಾಗಿದೆ. ಲೈಸೋಜೈಮ್, ಲ್ಯಾಕ್ಟೋಫೆರಿನ್, ಲಿಪೊಕಾಲಿನ್, ಲ್ಯಾಕ್ಟೋಫೆರಿನ್, ಇಮ್ಯುನೊಗ್ಲಾಬ್ಯುಲಿನ್, ಗ್ಲೂಕೋಸ್, ಯೂರಿಯಾ, ಸೋಡಿಯಂ ಮತ್ತು ಪೊಟ್ಯಾಸಿಯಮ್ ಮುಂದಾದ ಪದಾರ್ಥ ಅದರಲ್ಲಿದೆ. ಇದ್ರಲ್ಲಿ ಕೆಲವು ನಿಮ್ಮ ಕಣ್ಣನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ನೀವು ಆಗಾಗ ಕಣ್ಣಿಗೆ ನೀರು ಹಾಕಿ ಸ್ವಚ್ಛಗೊಳಿಸುವ ಕಾರಣ, ನೀರಿನಲ್ಲಿರುವ ಧೂಳು ನಿಮ್ಮ ಕಣ್ಣು ಸೇರುತ್ತದೆ.  ಕಾರ್ನಿಯಾ ಮತ್ತು ಕಾಂಜಂಕ್ಟಿವಾ ಕಣ್ಣಿನ ಸೂಕ್ಷ್ಮ ರಚನೆಯಾಗಿದ್ದು, ನೀರಿನಲ್ಲಿರುವ ಬ್ಯಾಕ್ಟೀರಿಯಾ ಇದಕ್ಕೆ ಹಾನಿ ಮಾಡುತ್ತದೆ. ಟ್ಯಾಪ್ ನೀರಿನಲ್ಲಿರ ಬ್ಯಾಕ್ಟೀರಿಯಾ, ಕಲ್ಮಶ ನಿಮ್ಮ ಕಣ್ಣನ್ನು ಸೇರಿ ಕಣ್ಣಿನ ಆರೋಗ್ಯ ಹಾಳು ಮಾಡುತ್ತದೆ. ಸೋಂಕು ಹಾಗೂ ಕಿರಿಕಿರಿಯುಂಟಾಗುತ್ತೆ. ಈ ವೇಳೆ ಕಣ್ಣಲ್ಲಿ ನೀರು ಬಂದರೆ ಇದರಿಂದ ದೃಷ್ಟಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ. 

65 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಆರೋಗ್ಯ ವಿಮೆ, ಹೊಸ ನಿಯಮ ಜಾರಿ!

ಕಣ್ಣನ್ನು ನೀವು ಹೀಗೆ ಸ್ವಚ್ಛಗೊಳಿಸಿಕೊಳ್ಳಿ(How to Clean Eyes) : ಕಣ್ಣಿಗೆ ನೀರು ಚುಮಕಿಸಬಾರದು ಅಂದ್ರೆ ಕಣ್ಣಿನ ಸ್ವಚ್ಛತೆ ಹೇಗೆ ಎಂದು ನೀವು ಪ್ರಶ್ನೆ ಮಾಡಬಹುದು. ಬೆಳಿಗ್ಗೆ ಎದ್ದಾಗ ನೀವು ಶುದ್ಧ ಬಟ್ಟೆಯಲ್ಲಿ ನೀರನ್ನು ಅದ್ದಿ ಕಣ್ಣಿನ ಸುತ್ತ ಕ್ಲೀನ್ ಮಾಡಿಕೊಳ್ಳಿ. ರಾತ್ರೆ ಕಣ್ಣಿನ ಸುತ್ತ ಇರುವ ಕೊಳೆ ಇದರಿಂದ ಕ್ಲೀನ್ ಆಗುವುದಲ್ಲದೆ ಕಣ್ಣು ಸ್ವಚ್ಛಗೊಳ್ಳುತ್ತದೆ. ಕಣ್ಣಿಗೆ ಇದ್ರಿಂದ ಯಾವುದೇ ಹಾನಿ ಆಗುವುದಿಲ್ಲ. ಕಂಪ್ಯೂಟರ್ ಬಳಕೆ ವೇಳೆ ಹಾಗೂ ಧೂಳಿನ ಪ್ರದೇಶಕ್ಕೆ ಹೋಗುವ ಸಮಯದಲ್ಲಿ ಗ್ಲಾಸ್ ಬಳಸಿದ್ರೆ ಕಣ್ಣಿಗೆ ಸೋಂಕು ಹೋಗದಂತೆ ತಡೆಯಬಹುದು. 

click me!