65 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಆರೋಗ್ಯ ವಿಮೆ, ಹೊಸ ನಿಯಮ ಜಾರಿ!

By Suvarna News  |  First Published Apr 21, 2024, 3:34 PM IST

ಇಷ್ಟು ದಿನ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರೋಗ್ಯ ವಿಮೆ ಖರೀದಿಸುವ ಅವಕಾಶವಿರಲಿಲ್ಲ. ಇದೀಗ ಹೊಸ ನಿಯಮ ಜಾರಿಯಾಗಿದ್ದು, ವಯಸ್ಸಿನ ಮಿತಿಯನ್ನು ತೆಗೆದು ಹಾಕಿದೆ. ಇದೀಗ ಹೊಸ ವಿಮೆ ಪಾಲಿಸಿಯಲ್ಲಿ ಯಾವ ಬದಲಾವಣೆಗಳಾಗಿದೆ?
 


ನವದೆಹಲಿ(ಏ.21) ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಕೋವಿಡ್ ಬಳಿಕ ಭಾರತದಲ್ಲಿನ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಇದರ ಜೊತೆಗೆ ಆರೋಗ್ಯ ವಿಮೆಗಳ ಗಂಭೀರತೆಯನ್ನು ಜನರು ಅರಿತುಕೊಂಡಿದ್ದಾರೆ. ಇದೀಗ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹೊಸ ನಿಯಮ ಜಾರಿಗೆ ತಂದಿದೆ. ಇಷ್ಟು ವರ್ಷ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರೋಗ್ಯ ವಿಮೆ ಖರೀದಿಗೆ ಅವಕಾಶ ಇರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ ಈ ವಯಸ್ಸಿನ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ 65 ವರ್ಷಕ್ಕಿಂತ ಮೇಲ್ಪಟ್ಟವರೂ ಇದೀಗ ಆರೋಗ್ಯ ವಿಮೆ ಖರೀದಿಸಲು ಅರ್ಹರಾಗಿದ್ದಾರೆ.

ಹೊಸ ಆರೋಗ್ಯ ವಿಮೆ ಇದೀಗ ಎಲ್ಲಾ ವಯೋಮಾನದವರಿಗೆ ಲಭ್ಯವಿದೆ. ಹೊಸ ನೀತಿಯಿಂದ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿದೆ. IRDAI ಹೊಸ ನಿಯಮದಲ್ಲಿ ಕೇವಲ ವಯಸ್ಸು ಮಾತ್ರವಲ್ಲ, ಇತರ ಕೆರ ಮಹತ್ವದ ಬದಲಾವಣೆ ಮಾಡಲಾಗಿದೆ. ಕೆಲ ಆರೋಗ್ಯ ಸಮಸ್ಯೆ ಇರುವವರಿಗೆ ಆರೋಗ್ಯ ವಿಮೆಗಳನ್ನು ನಿರಾಕರಿಸಲಾಗುತ್ತಿತ್ತು. ಊದಾಹರಣೆಗೆ ಕ್ಯಾನ್ಸರ್, ಏಡ್ಸ್, ಹೃದಯ, ಮೂತ್ರಪಿಂಡ ವೈಫಲ್ಯಗಳಂತೆ ಆರೋಗ್ಯ ಸಮಸ್ಯೆಗಳಿದ್ದವರಿಗೆ ಆರೋಗ್ಯ ವಿಮೆಗಳನ್ನು ನಿರಾಕರಿಸಲಾಗುತ್ತಿತ್ತು. ಇದೀಗ ಎಲ್ಲಾ ವಯೋಮಾನದವರಿಗೆ ಆರೋಗ್ಯ ವಿಮೆ ಪಾಲಿಸಿ ಅಡಿಯಲ್ಲಿ ಈ ಷರತ್ತುಗಳನ್ನು ತೆಗೆದು ಹಾಕಲಾಗಿದೆ.

Latest Videos

ಎಲ್‌ಐಸಿ ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌: ಫೈನಾನ್ಸ್‌ ಇನ್ಷೂರೆನ್ಷ್‌ ವರದಿ!

65 ವರ್ಷಕ್ಕಿಂತ ಮೇಲ್ಪಟ್ಟವರು ಆರೋಗ್ಯ ವಿಮೆ ಪಾಲಿಸಿ ಖರೀದಿಸಿ ಬಳಿಕ ಪಾಲಿಸಿಯನ್ನು ಆರೋಗ್ಯ ಕೇಂದ್ರಗಳಲ್ಲಿ ಬಳಕೆ ಮಾಡುವಾಗ ಈ ಹಿಂದೆ ಪಾಲಿಸಿದಾರರು ಆರೋಗ್ಯ ಸಮಸ್ಯೆಗಳ ಕುರಿತು ಬಹಿರಂಗಪಡಿಸಿದ್ದಾರೆಯೇ? ಇಲ್ಲವೇ ಅನ್ನೋದು ಪರಿಗಣಿಸಲಾಗುತ್ತದೆ. ಇದರ ಆಧಾರದ ಮೇಲೆ ಕ್ಲೈಮ್ ಸ್ವೀಕರಿಸುವುದು, ತಿರಸ್ಕರಿಸುವುದು ವಿಮಾನ ನಿಯಂತ್ರಕರಿಗೆ ಸಂಬಂಧಿಸಿದೆ ಎಂದು ಹೊಸ ನಿಯಮ ಹೇಳುತ್ತಿದೆ. 

ಹೊಸ ಆರೋಗ್ಯ ವಿಮೆ ನಿಯಮಗಳು ಏಪ್ರಿಲ್ 1, 2024ರಿಂದ ಜಾರಿಯಾಗಿದೆ.  ಈಗಾಲೇ ಹೊಸ ನಿಯಮ ದೇಶದಲ್ಲೆಡೆ ಜಾರಿಯಾಗಿದ್ದು, ಈ ನಿಯಮದನ್ವಯ ಹಿರಿಯ ನಾಗರೀಕರು ಇದೀಗ ಆರೋಗ್ಯ ವಿಮೆ ಖರೀದಿಸಿ ಆರೋಗ್ಯ ಸುರಕ್ಷತೆ ಪಡೆದುಕೊಳ್ಳಬಹುದು. 

ಸಂಬಂಧಕ್ಕೂ ಬಂತು ವಿಮೆ! ಸಂಗಾತಿ ಮಧ್ಯೆ ಅನ್ಯೋನ್ಯತೆ ಜೊತೆ ಆರ್ಥಿಕ ಭದ್ರತೆ ನೀಡುತ್ತೆ!

ಆರೋಗ್ಯ ವಿಮೆ ವಿಚಾರದಲ್ಲಿ ಭಾರತ ಸರ್ಕಾರ ಕೂಡ ಅತೀವ ಒತ್ತು ನೀಡುತ್ತಿದೆ. ಎಲ್ಲರಿಗೂ ಆರೋಗ್ಯ ಸುರಕ್ಷತೆ ಒದಗಿಸಲು ಈಗಾಗಲೇ ಹಲವು ಯೋಜನೆಗಳನ್ನು ತಂದಿದೆ. ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಸೌಲಭ್ಯಗಳು ಸರ್ಕಾರದಿಂದ ಲಭ್ಯವಿದೆ. 

click me!