ಬೆಚ್ಚಗಿರ್ಲಿ ಅಂತ ಮುಸುಕು ಹಾಕ್ಕೊಂಡು ಮಲಗ್ತೀರಾ ? ಹುಷಾರ್ ಜೀವಾನೇ ಹೋಗ್ಬೋದು !

By Vinutha Perla  |  First Published Jan 4, 2023, 12:12 PM IST

ಚಳಿಗಾಲದಲ್ಲಿ ಬೆಚ್ಚಗೆ ಹೊದಿಕೆ ಹೊದ್ದುಕೊಂಡು ಮಲಗೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಆದರೆ ಮುಖವನ್ನು ಪೂರ್ತಿ ಹೊದಿಕೆಯಿಂದ ಮುಚ್ಚಿ ಮಲಗುವ ಅಭ್ಯಾಸ ನಿಮಗೂ ಇದ್ದರೆ, ಈ ಅಭ್ಯಾಸವನ್ನು ಬದಲಾಯಿಸಲು ಪ್ರಯತ್ನಿಸಿ. ಯಾಕೆಂದರೆ ಇದರಿಂದ ಉಂಟಾಗೋ ಸಮಸ್ಯೆಗಳು ಒಂದೆರಡಲ್ಲ.
 


ನಿದ್ದೆ (Sleep) ಮಾಡುವುದು ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ನಿದ್ದೆ ಮಾಡುವ ಭಂಗಿ, ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಕೆಲವೊಬ್ಬರು ಅಂಗಾತ ಮಲಗಿದರೆ, ಇನ್ನು ಕೆಲವರು ಗೋಡೆಗೆ ಮುಖ ಮಾಡಿ ಮಲಗುತ್ತಾರೆ. ಇದಲ್ಲದೆ ಕೆಲವೊಬ್ಬರು ಪೂರ್ತಿ ಮುಸುಕು ಹಾಕಿ ಮಲಗಿದರೆ, ಇನ್ನು ಕೆಲವರಿಗೆ ಹೊದಿಕೆಯನ್ನು ಹೊದ್ದುಕೊಂಡ್ರೆ ನಿದ್ದೇನೆ ಬರೋದಿಲ್ಲ. ಆದ್ರೆ ನೀವು ಮಲಗುವುದಷ್ಟೇ ಅಲ್ಲ, ಯಾವ ರೀತಿ ಮಲಗುತ್ತೀರಿ ಅನ್ನೋದು ಸಹ ಮುಖ್ಯವಾಗುತ್ತದೆ. ಇದು ನಿಮ್ಮ ಆರೋಗ್ಯದ (Health) ಮೇಲೆ ಸಹ ಪರಿಣಾಮ ಬೀರಬಹುದು. ಹೀಗಾಗಿ ಯಾವಾಗಲೂ ಸರಿಯಾದ ರೀತಿಯಲ್ಲಿ ಮಲಗುತ್ತಿದ್ದೀರಾ ಎಂಬುದನ್ನು ಗಮನಿಸಿಕೊಳ್ಳಿ.

ಮಲಗುವುದರಲ್ಲಿ ಮುಖ್ಯವಾಗಿ ಜನರು ವಿಭಿನ್ನತೆಯನ್ನು ಹೊಂದಿರುವುದು ಹೊದಿಕೆ ಹೊದ್ದು ಮಲಗುವುದು ಮತ್ತು ಹೊದಿಕೆ (Blanket)ಯನ್ನು ಬಳಸದೇ ಮಲಗುವುದರಲ್ಲಿ. ಅದರಲ್ಲೂ ಈಗ ಚಳಿಗಾಲ (Winter) ಶುರುವಾಗಿದೆ. ಚುಮು ಚುಮು ಚಳಿಗೆ ಬೆಚ್ಚಗೆ ಹೊದ್ದಿಕೊಂಡು ಮಲಗೋಣ ಅನ್ಸುತ್ತೆ. ಜನರು ಚಳಿಯಿಂದ ತಪ್ಪಿಸಿಕೊಳ್ಳಲು ಕಂಬಳಿಗಳು, ಬೆಚ್ಚಗಿನ ಸ್ವೆಟರ್‌ಗಳನ್ನು ಬಳಸುತ್ತಾರೆ. ಹಾಗೆಯೇ ರಾತ್ರಿ ಮಲಗುವಾಗ, ಕುಟುಂಬದ ಕೆಲವರು ಚಳಿಯನ್ನು ತಪ್ಪಿಸಲು ಹೊದಿಕೆಯಿಂದ ಮುಖವನ್ನು ಮುಚ್ಚಿಕೊಳ್ಳುವುದನ್ನು ನೀವು ಆಗಾಗ್ಗೆ ಗಮನಿಸಿರಬಹುದು. ಆದ್ರೆ ಹೀಗೆ ಮಾಡುವುದರಿಂದ ಆರೋಗ್ಯಕ್ಕೇನಾದ್ರೂ ತೊಂದರೆಯಾಗಬಹುದು ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ ?

Tap to resize

Latest Videos

ಬರೀ ನಿದ್ದೆ ಮಾಡೋದಷ್ಟೇ ಕೆಲ್ಸ, ಭರ್ತಿ 15 ಲಕ್ಷ ರೂ. ಸಂಬಳ! ನೀವೂ ಟ್ರೈ ಮಾಡ್ಬೋದು

ಹೌದು,ಹೊದಿಕೆಯಿಂದ ಪೂರ್ತಿ ದೇಹವನ್ನು ಕವರ್ ಮಾಡಿ ಮಲಗುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ತೊಂದರೆಯಿದೆ. ಚಳಿ ಅಂತ ನೀವು ಕೂಡಾ ಈ ರೀತಿ ಮುಸುಕು ಹಾಕಿ ಮಲಗ್ತಿದ್ರೆ ಆ ಅಭ್ಯಾಸವನ್ನು ಇಂದೇ ತಪ್ಪಿಸಿ. ಅದಕ್ಕಿಂತ ಮೊದಲು ಹೀಗೆ ಹೊದ್ದುಕೊಂಡು ಆರೋಗ್ಯಕ್ಕೇನು ತೊಂದ್ರೆಯಾಗುತ್ತೆ ಅನ್ನೋದನ್ನು ತಿಳ್ಕೊಳ್ಳಿ.

ಆಕ್ಸಿಜನ್‌ನ ಕೊರತೆ
ಸಂಪೂರ್ಣವಾಗಿ ಹೊದಿಕೆಯನ್ನು ಹೊದ್ದು ಮಲಗುವ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯಲ್ಲ. ಹೀಗೆ ಹೊದ್ದು ಮಲಗುವಾಗ ಹಲವಾರು ಬಾರಿ ಉಸಿರು ಕಟ್ಟಿದಂತೆ ಆಗುತ್ತಿರುತ್ತದೆ. ನಿಮ್ಮ ಹೊದಿಕೆಯ ಅಡಿಯಲ್ಲಿ ಗಾಳಿಯು ಬೆಚ್ಚಗಿದ್ದರೂ ಸಹ ನೀವು ಸಾಕಷ್ಟು ಆಕ್ಸಿಜನ್ ಕೊರತೆಯನ್ನು ಅನುಭವಿಸುವಂತಾಗಬಹುದು. ಇದು ಚಳಿಯಲ್ಲೂ ವಿಪರೀತ ಬೆವರುವುದು, ಸುಸ್ತಾಗುವುದು ಮೊದಲಾದ ಸಮಸ್ಯೆಗೆ ಕಾರಣವಾಗುತ್ತದೆ.

​ಹೃದಯಾಘಾತದ ಸಾಧ್ಯತೆ
ಚಳಿಯಿಂದ ತಪ್ಪಿಸಿಕೊಳ್ಳಲು ತಲೆಯನ್ನೂ ಮುಚ್ಚಿಕೊಂಡು ಜನರು ಭದ್ರವಾಗಿ ಮಲಗುತ್ತಾರೆ. ಆದ್ರೆ ಹೀಗೆ ಮಾಡುವುದರಿಂದ ಆಕ್ಸಿಜನ್ ದೇಹಕ್ಕೆ ಸರಿಯಾಗಿ ಹರಿಯುವುದಿಲ್ಲ, ಇದರಿಂದ ಉಸಿರುಗಟ್ಟುವಿಕೆಯಂತಹ ಸ್ಥಿತಿ ಬರುತ್ತದೆ. ಕುಟುಂಬದಲ್ಲಿ ಯಾರಾದರೂ ಆಸ್ತಮಾ ಅಥವಾ ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಆಮ್ಲಜನಕದ ಕೊರತೆಯು ಅವರಿಗೆ ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಬಹುದು. ಇದರಿಂದ ಅನೇಕ ಬಾರಿ ಹೃದಯಾಘಾತವೂ (Heartattack) ಆಗುತ್ತದೆ.

ಯಾರು ನೋಡಲಿ ಸರಿಯಾಗಿ ನಿದ್ರೆ ಬರೋಲ್ಲ ಅಂತಾರೆ, ಅದಕ್ಕೆ ಈ ಟೀ ಬೆಸ್ಟ್!

ಮಾನಸಿಕ ಆರೋಗ್ಯ ಹದಗೆಡಬಹುದು
ಆಕ್ಸಿಜನ್ ಕೊರತೆಯಿಂದ ತಲೆನೋವು, ನಿದ್ರಾಹೀನತೆ, ವಾಕರಿಕೆ, ಆಯಾಸದಂತಹ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ಬಾಯಿ ಮುಚ್ಚಿಕೊಂಡು ಮಲಗುವುದರಿಂದ ಮಾನಸಿಕ ಆರೋಗ್ಯದ (Mental health) ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಕೆಲವು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಈ ಕಾರಣದಿಂದಾಗಿ, ಜನರು ಆಲ್ಝೈಮರ್ಸ್ ಅಥವಾ ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳನ್ನು ಸಹ ಅನುಭವಿಸಬಹುದು.

​ತೂಕ ಹೆಚ್ಚಾಗಬಹುದು
ಚಳಿಗಾಲಕ್ಕೂ ತೂಕ ಹೆಚ್ಚಳಕ್ಕೂ ಏನು ಸಂಬಂಧವಿದೆ ಎಂದು ನೀವು ಅಂದುಕೊಳ್ಳಬಹುದು. ಆದರೆ ನಿಜವಾಗಿಯೂ ಇದೆರಡರ ನಡುವೆ ಸಂಬಂಧವಿದೆ. ಯಾಕೆಂದರೆ ಚಳಿಗಾಲದಲ್ಲಿ ರಾತ್ರಿಗಳು ಸುದೀರ್ಘವಾಗಿರುತ್ತವೆ. ಹೀಗಾಗಿ ಜನರು ಸಹಜವಾಗಿಯೇ ಹೆಚ್ಚು ಮಲಗುತ್ತಾರೆ. ಬೆಳಗ್ಗಾದರೂ ಅದೇ ಚಳಿಯಿರುವುದರಿಂದ ಹೆಚ್ಚು ಹೊತ್ತು ಮಲಗಿ ಸಮಯ ಕಳೆಯುತ್ತಾರೆ. ಇದರಿಂದ ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ತೂಕ (Weight) ಹೆಚ್ಚಳವಾಗುತ್ತದೆ. ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ, ಚಯಾಪಚಯವು ನಿಧಾನಗೊಳ್ಳುತ್ತದೆ ಮತ್ತು ಈ ಕಾರಣದಿಂದಾಗಿ, ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕೊಬ್ಬಿನ ಶೇಖರಣೆಯಿಂದಾಗಿ, ದೇಹದ ತೂಕವು ವೇಗವಾಗಿ ಹೆಚ್ಚಾಗುತ್ತದೆ.

ಮಹಿಳೆಯರು ಪುರುಷರಷ್ಟೇ ನಿದ್ದೆ ಮಾಡಿದ್ರೆ ಸಾಕಾಗಲ್ಲ, ಒಂಚೂರು ಜಾಸ್ತೀನೆ ಬೇಕು

ಉಸಿರುಗಟ್ಟುವಿಕೆಯ ಸಮಸ್ಯೆ
ಸಂಪೂರ್ಣವಾಗಿ ಹೊದಿಕೆಯನ್ನು ಮುಚ್ಚಿಕೊಳ್ಳುವುದರಿಂದ ಸರಿಯಾಗಿ ಗಾಳಿಯಾಡುವುದಿಲ್ಲ. ಇದು ಉಸಿರಾಟದ ಸಮಸ್ಯೆಯನ್ನುಂಟು ಮಾಡುತ್ತದೆ. ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಮಲಗಿರುವಾಗ ಉಸಿರಾಟದ ತೊಂದರೆ ಉಂಟಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯ ಉಸಿರಾಟವು ಅವನಿಗೆ ತಿಳಿದಿಲ್ಲದೆ ನಿಂತು ಹೋಗುತ್ತದೆ. ನಿದ್ರೆಯಲ್ಲಿ ಉಸಿರಾಟವನ್ನು ನಿಲ್ಲಿಸುವ ತೊಂದರೆ ಕೆಲವು ಸೆಕೆಂಡುಗಳಿಂದ 1 ನಿಮಿಷದವರೆಗೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. 

click me!