ಬರೀ ನಿದ್ದೆ ಮಾಡೋದಷ್ಟೇ ಕೆಲ್ಸ, ಭರ್ತಿ 15 ಲಕ್ಷ ರೂ. ಸಂಬಳ! ನೀವೂ ಟ್ರೈ ಮಾಡ್ಬೋದು

By Vinutha PerlaFirst Published Jan 4, 2023, 11:22 AM IST
Highlights

ಜೀವನದಲ್ಲಿ ದಿನಪೂರ್ತಿ ಹೊಟ್ಟೆ ತುಂಬಾ ತಿನ್ತಾ, ಕಣ್ತುಂಬಾ ನಿದ್ದೆ ಮಾಡ್ತಾ ಇರ್ಬೇಕು ಅನ್ನೋದು ಹಲವರ ಆಸೆ. ಆದ್ರೆ ಹಾಗೆ ಮಾಡಿದ್ರೆ ದುಡ್ಡು ಸಿಗಲ್ವಲ್ಲಾ, ಜೀವನ ಸಾಗಿಸೋಕಾಗಲ್ಲ, ಹೀಗಾಗಿ ಕೆಲಸ ಮಾಡ್ಲೇಬೇಕು. ಆದ್ರೆ ಕೆಲಸ ಮಾಡೋಕು ಇಷ್ಟವಿಲ್ಲ, ಕೈ ತುಂಬಾ ದುಡ್ಡು ಬೇಕು ಅನ್ನೋರಿಗೆ ನಾಸಾ ಬಂಪರ್ ನೀಡಿದೆ. ಅದೇನು ತಿಳ್ಕೊಳ್ಳಿ.

ನಿದ್ದೆ (Sleep) ಆರೋಗ್ಯಕ್ಕೆ ತುಂಬಾ ಅಗತ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ದಿನವೊಂದಕ್ಕೆ ವ್ಯಕ್ತಿಯೊಬ್ಬ ಸರಾಸರಿ 8ರಿಂದ 9 ಗಂಟೆಗಳ ಕಾಲ ಮಲಗಿಕೊಂಡಿರಬೇಕು ಅನ್ನುತ್ತೆ ಅಧ್ಯಯನ. ಇದಲ್ಲದೆಯೂ ಕೆಲವೊಬ್ಬರು ಸೋಮಾರಿತನದಿಂದ ದಿನ ಪೂರ್ತಿ ಮಲಗಿಕೊಂಡಿರುತ್ತಾರೆ. ಸುಮ್ಮನೆ ಮಲಗಿಕೊಂಡು ಮೊಬೈಲ್ ನೋಡ್ತಾ ಸಮಯ ಕಳೆಯುತ್ತಾರೆ. ಮುಂಜಾನೆಯೆದ್ದು ಧಾವಂತದಲ್ಲೇ ಆಫೀಸಿಗೆ ಹೋಗುವ ಹಲವರಿಗೆ ವಿಶ್ರಾಂತಿ (Rest) ಬೇಕು ಅನಿಸುತ್ತದೆ. ಅಂಥಾ ಸಂದರ್ಭದಲ್ಲಿ ಸುಮ್ನೆ ತಿನ್ತಾ, ಮಲಗ್ತಾ ಇದ್ರೆ ಜೀವನ (Life) ಎಷ್ಟು ಚೆನ್ನಾಗಿರುತ್ತೆ ಅಂತ ಅನಿಸದೇ ಇರಲ್ಲ. ಇಂಥವರಿಗೆ ಹೇಳಿ ಮಾಡಿಸಿದಂತಿಎ ನಾಸಾ ಕೊಟ್ಟಿರೋ ಆಫರ್‌. ಹೌದು, ನಾಸಾ ಸಂಸ್ಥೆ ಬರೀ ನಿದ್ದೆ ಮಾಡ್ತಾ ಇದ್ದರಷ್ಟೆ ಸಾಕು ಕೈ ತುಂಬಾ ಸಂಬಳ (Salary) ಕೊಡ್ತೀವಿ ಅಂತಿದೆ.

2 ತಿಂಗಳು ನಿದ್ರಿಸಿದ್ರೆ ಸಾಕು, ಭರ್ತಿ 15 ಲಕ್ಷ ರೂ. ಸಂಬಳ
ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ 2 ತಿಂಗಳುಗಳ ಕಾಲ ನಿದ್ರಿಸಬಲ್ಲ ಜನರನ್ನು ಹುಡುಕಾಡುತ್ತಿದೆ. ಅಷ್ಟು ಮಾತ್ರವಲ್ಲ ಇಂಥಾ ಉದ್ಯೋಗಿಗಳಿಗೆ 15 ಲಕ್ಷ ರೂ. ಸಂಬಳವನ್ನೂ ನೀಡಲು ಮುಂದಾಗಿದೆ. ಯುರೋಪಿಯನ್  ಸ್ಪೇಸ್ ಏಜೆನ್ಸಿ ಮತ್ತು ನಾಸಾದ ಜರ್ಮನ್ ಏರೋಸ್ಪೇಸ್ ಸೆಂಟರ್ ಜೊತೆಯಾಗಿ ಕೃತಕ ಗುರುತ್ವಾಕರ್ಷಣೆಯ ಆಧಾರದ ಮೇಲೆ ಮಲಗುವ ಅಧ್ಯಯನದಲ್ಲಿ (Study) ತೊಡಗಿಸಿಕೊಂಡಿದೆ. ಅಧ್ಯಯನದ ಭಾಗವಾಗಿ ಆಯ್ಕೆಯಾದ ಉದ್ಯೋಗಿಗಳು 2 ತಿಂಗಳು ಕೃತಕ ಗುರುತ್ವಾಕರ್ಷಣೆ ಬಲದಲ್ಲಿ ಮಲಗಬೇಕಾಗುತ್ತದೆ. ಈ ಅಧ್ಯಯನದ ಮೂಲಕ ವ್ಯಕ್ತಿಯ ದೇಹದ (Body) ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡು ಹಿಡಿಯಲು ನಾಸಾ ಮುಂದಾಗಿದೆ. 24 ವರ್ಷದೊಳಗಿನ 12 ಪುರುಷರು ಮತ್ತು 12 ಮಹಿಳೆಯರನ್ನು ಕೆಲಸಕ್ಕಾಗಿ ಸಂಸ್ಥೆ ಹುಡುಕಾಡುತ್ತಿದೆ. 

Sleeping Tips: ಪ್ರೀತಿಪಾತ್ರರ ಜೊತೆ ಮಲಗಿದ್ರೆ ಸ್ಟ್ರೆಸ್ ಕಡಿಮೆಯಾಗಿ, ಹಾಯಾಗಿ ನಿದ್ದೆ ಬರುತ್ತಂತೆ !

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಸಹಾಯ ಮಾಡುವ ಅಧ್ಯಯನ
ಅಧ್ಯಯನದ ಸಮಯದಲ್ಲಿ, ಸ್ವಯಂಸೇವಕರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹ ಅನುಮತಿಸಲಾಗುವುದಿಲ್ಲ. ಅವರ ಅರಿವಿನ ಸಾಮರ್ಥ್ಯ, ಸ್ನಾಯುವಿನ ಶಕ್ತಿ, ಸಮತೋಲನ ಮತ್ತು ಹೃದಯರಕ್ತನಾಳದ ಕ್ರಿಯೆಯ ವಿವಿಧ ಪರೀಕ್ಷೆಗಳಿಗೆ ಸಹ ಅವರು ಒಳಗಾಗುತ್ತಾರೆ. ಹೆಚ್ಚುವರಿಯಾಗಿ, ಅರ್ಧದಷ್ಟು ಭಾಗವಹಿಸುವವರು ಗುರುತ್ವಾಕರ್ಷಣೆ-ವಿರೋಧಿ ಚೇಂಬರ್‌ನ ಪರಿಣಾಮಗಳಿಗೆ ಒಳಗಾಗುತ್ತಾರೆ. ಅಧ್ಯಯನದ ಕೊನೆಯಲ್ಲಿ ಇವೆರಡರ ಭೌತಿಕ ಕ್ಷೀಣತೆಯನ್ನು ಹೋಲಿಸಲು ವಿಜ್ಞಾನಿಗಳು ಆಶಿಸಿದ್ದಾರೆ. ಈ ತಂತ್ರವು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಸಹಾಯ ಮಾಡುತ್ತದೆ ಎಂಬ ಡೇಟಾವನ್ನು ಬಹಿರಂಗಪಡಿಸುತ್ತದೆ.

ದೀರ್ಘಕಾಲದ ವರೆಗೆ ಬಾಹ್ಯಾಕಾಶದಲ್ಲಿದ್ದಾಗ, ಗಗನಯಾತ್ರಿಗಳು ಎದುರಿಸಲು ಭೌತಿಕ ಪರಿಣಾಮಗಳ ಹೊರೆಯನ್ನು ಹೊಂದಿರುತ್ತಾರೆ. ತೂಕವಿಲ್ಲದ ಕಾರಣ, ಅವರ ಸ್ನಾಯುಗಳು ಕ್ಷೀಣಿಸಬಹುದು. ಅದಕ್ಕಾಗಿಯೇ ಅವರು ಭೂಮಿಯ ಮೇಲೆ ಇರುವುದಕ್ಕಿಂತ ಹೆಚ್ಚು ಅಲ್ಲಿ ಕೆಲಸ ಮಾಡಬೇಕಾಗುತ್ತದೆ. ಮೂಳೆ ಸಾಂದ್ರತೆಯಲ್ಲಿ ಗಣನೀಯ ನಷ್ಟ ಸಂಭವಿಸುವ ಸಾಧ್ಯತೆಯೂ ಇದೆ. ಕಾಸ್ಮಿಕ್ ವಿಕಿರಣ, ಪ್ರತ್ಯೇಕತೆಯ ಒತ್ತಡ ಮತ್ತು ತಿಂಗಳ ಕಾಲ ಅದೇ ಜನರೊಂದಿಗೆ ವಾಸಿಸುವ ಕಾರಣ ಮಾನಸಿಕ ಸಮಸ್ಯೆಯೂ ಕಾಣಿಸಿಕೊಳ್ಳಬಹುದು

ಬೆಡ್ ಬೇಡ ಬಿಡಿ, ಬರೀ ನೆಲದಲ್ಲಿ ಮಲಗಿ ನೋಡಿ..ಎಷ್ಟೊಂದು ಆರೋಗ್ಯ ಸಮಸ್ಯೆ ಪರಿಹಾರವಾಗುತ್ತೆ

ಈ ಅಧ್ಯಯನವು ಫಲಪ್ರದವೆಂದು ಸಾಬೀತುಪಡಿಸಿದರೆ, ಇದರರ್ಥ NASA ವಾಸ್ತವವಾಗಿ ISS ಗಾಗಿ ಆಂಟಿಗ್ರಾವಿಟಿ ಸಾಧನಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿಶೇಷವಾಗಿ ಮಂಗಳದಂತಹ ದೂರದ ಸ್ಥಳಗಳಿಗೆ ಬಾಹ್ಯಾಕಾಶ ನೌಕೆಗಾಗಿ ಹಣವನ್ನು ಖರ್ಚು ಮಾಡಬಹುದು. ಕನಿಷ್ಠ ಆಗ, ಆ ಗಗನಯಾತ್ರಿಗಳು ದೈಹಿಕವಾಗಿ ಆರೋಗ್ಯಕರವಾಗಿರುತ್ತಾರೆ ಎಂದು ತಿಳಿದುಬಂದಿದೆ.

click me!