Manage Anxiety: ಮೂರು ನಿಯಮ ಪಾಲನೆ ಮಾಡಿ ಆತಂಕ ಓಡಿಸಿ

By Suvarna News  |  First Published Feb 2, 2022, 4:20 PM IST

ತೀವ್ರ ಗೊಂದಲವಾದಾಗ, ದುಃಖ, ಚಿಂತೆ, ಆತಂಕ, ಉದ್ವೇಗ ತುಂಬಿದಾಗ ದೀರ್ಘವಾದ ಉಸಿರು ತೆಗೆದುಕೊಳ್ಳಬೇಕು. ಕೆಲವು ಬಾರಿ ದೀರ್ಘವಾಗಿ ಶ್ವಾಸೋಚ್ಛಾಸ ಮಾಡಬೇಕು. ಇದರಿಂದ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಇದರೊಂದಿಗೆ ಮೂರು ನಿಯಮಗಳನ್ನು ಅಪ್ಲೈ ಮಾಡುವುದು ಉತ್ತಮ.
 


ಪ್ರತಿದಿನ ಬೆಳಗಾದ ತಕ್ಷಣದಿಂದ ಒಂದು ರೀತಿಯ ಆತಂಕ (Anxiety) ಶುರು. ಇವತ್ತು ಆ ಕೆಲಸವಿದೆ, ಈ ಡೆಡ್ ಲೈನ್ ಇದೆ. ಅವರನ್ನು ಭೇಟಿಯಾಗಬೇಕು, ಇವರ ಕೆಲಸ ಮುಗಿಸಿಕೊಡಬೇಕು...ಮುಗಿಯುವುದೇ ಇಲ್ಲ ಲಿಸ್ಟು. ಮಹಿಳೆ(Women)ಯರದ್ದು ಮತ್ತೊಂದು ಗೋಳು. ಇವತ್ತು ತಿಂಡಿಗೆ, ಊಟಕ್ಕೆ (Food) ಏನು ಮಾಡಲಿ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತದೆ. ಅದೇ ಒಂದು ರೀತಿಯ ಆತಂಕವನ್ನು ಸೃಷ್ಟಿಸುತ್ತದೆ. ಗೃಹಿಣಿಯರಾದರೆ ಒಂದು ರೀತಿ, ಉದ್ಯೋಗಸ್ಥ (Working) ಮಹಿಳೆಯರಾದರೆ ಮತ್ತೊಂದು ರೀತಿ. ಒಟ್ಟಿನಲ್ಲಿ ಒತ್ತಡ (Stress), ಆತಂಕ ಹಾಗೂ ಗಡಿಬಿಡಿಯ ಮನಸ್ಥಿತಿ ತಪ್ಪಿದ್ದಲ್ಲ. 

ಆತಂಕದ ಮನಸ್ಥಿತಿ (Mental Stage) ಕೈಬಿಡಿ
ಆದರೆ, ನೀವು ದಿನದ ಸಂಪೂರ್ಣ ಸಮಯವನ್ನು ಆತಂಕದಲ್ಲಿಯೇ ಕಳೆಯುತ್ತೀರಾ? ವಿವರಿಸಿ ಹೇಳಲು ಸಾಧ್ಯವಾಗದ ಆತಂಕವೊಂದು ನಿಮ್ಮನ್ನು ಸದಾಕಾಲ ಕಾಡುತ್ತದೆಯೇ? ಅಂಥವರು ನೀವಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಮನೋತಜ್ಞರ ಪ್ರಕಾರ, ಮಾನಸಿಕ ಆರೋಗ್ಯಕ್ಕೆ ನಿರಂತರವಾಗಿರುವ ಆತಂಕದ ಮನಸ್ಥಿತಿ ಒಳ್ಳೆಯದಲ್ಲ. 

Tap to resize

Latest Videos

undefined

ನಿರಂತರ ಆತಂಕದಿಂದ ಹಾನಿ 
ಸಾಮಾನ್ಯವಾಗಿ ನಾವೆಲ್ಲವೂ ದೈಹಿಕ (Physical) ಆರೋಗ್ಯದ ಕಡೆಗೆ ಗಮನ ನೀಡುತ್ತೇವೆ. ಆಹಾರ, ವ್ಯಾಯಾಮ (Exercise), ನಿದ್ರೆ (Sleep)ಗಳ ಬಗ್ಗೆ ಕಾಳಜಿ ವಹಿಸುತ್ತೇವೆ. ಆದರೆ, ಮಾನಸಿಕ ವೆಲ್ ಬೀಯಿಂಗ್ (Well Being) ಅಥವಾ ಸುಸ್ಥಿತಿಯ ಬಗ್ಗೆ ಯೋಚಿಸುವುದು ಕಡಿಮೆ. ಉದಾಹರಣೆಗೆ, ದಿನವೂ ವ್ಯಾಯಾಮ ಮಾಡಲು ಸಮಯ ಹೊಂದಾಣಿಕೆ ಮಾಡಿಕೊಳ್ಳುವುದೇ ನಮ್ಮನ್ನು ಆತಂಕಕ್ಕೆ ದೂಡಬಹುದು. 

Tips for smartness: ನೀವು ಇನ್ನಷ್ಟು ಸ್ಮಾರ್ಟ್ ಆಗಬೇಕಾ? ಈ 7 ಟಿಪ್ಸ್ ಫಾಲೋ ಮಾಡಿ..

ಬಹಳಷ್ಟು ಜನರು ತಮ್ಮಲ್ಲಿರುವ ಆತಂಕವನ್ನು ಗುರುತಿಸಿ ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಏಕೆಂದರೆ, ಇದೊಂದು ಸಮಸ್ಯೆ (Problem) ಎಂದೇ ಅವರಿಗೆ ಅನಿಸುವುದಿಲ್ಲ. ಆದರೆ, ತಮ್ಮ ಸಮೀಪದವರಿಗೆ ಸಮಸ್ಯೆ ಒಡ್ಡುತ್ತಿರುತ್ತಾರೆ. ತೀವ್ರವಾದ ಆತಂಕದಿಂದ ಕೂಡಿದ್ದು ಇನ್ನೊಬ್ಬರನ್ನೂ ಆತಂಕಕ್ಕೆ ತಳ್ಳಲು ಅಥವಾ ತಾವು ನಂಬಿಕೊಂಡಿರುವುದೇ ಪರಮಸತ್ಯವೆಂದು ತಿಳಿದು ಅವರನ್ನೂ ತಮ್ಮ ಹಾದಿಗೆ ತರಲು ಯತ್ನಿಸುತ್ತಾರೆ. ಅಷ್ಟೇ ಅಲ್ಲ, ದೀರ್ಘಕಾಲದ ಈ ಮನಸ್ಥಿತಿ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತದೆ. 
ನಿಮ್ಮಲ್ಲೂ ಆತಂಕವಿದ್ದರೆ, ಅದರ ಬಗ್ಗೆ ದಿನಕ್ಕೊಮ್ಮೆಯಾದರೂ ಗಮನ ನೀಡಬೇಕು. ಅದೇನು ಎಂದು ಅರಿತುಕೊಳ್ಳಬೇಕು ಹಾಗೂ ಅದನ್ನು ಒಪ್ಪಿಕೊಂಡು ಪರಿಹರಿಸಿಕೊಳ್ಳಲು ಪ್ರಾಮಾಣಿಕವಾಗಿ ಯತ್ನಿಸಬೇಕು. ಯಾರಲ್ಲೂ ಹಂಚಿಕೊಳ್ಳಲು ಸಾಧ್ಯವಾಗದ ಯೋಚನೆಗಳು, ಚಿಂತೆ, ಆತಂಕಗಳು ಸದಾಕಾಲ ಮನಸ್ಸನ್ನು ಕಾಡುತ್ತಿದ್ದರೆ ಅದನ್ನು ನಿವಾರಿಸಿಕೊಳ್ಳುವುದು ಅತ್ಯಗತ್ಯ.

Misunderstanding: ಸಂಬಂಧದಲ್ಲಿ ಅಪಾರ್ಥಗಳನ್ನು ಹೀಗೆ ಬಗೆಹರಿಸಿಕೊಳ್ಳಿ..

ಮೂರು ನಿಯಮ (3 Rules) ಪಾಲಿಸಿ
ಮನಶಾಸ್ತ್ರಜ್ಞರ ಪ್ರಕಾರ, ಮೂರು ನಿಯಮಗಳ ಮೂಲಕ ಆತಂಕವನ್ನು ದೂರ ಮಾಡಿಕೊಳ್ಳಬಹುದು. 
•    ದೇಹದ ಮೂರು ಅಂಗಗಳನ್ನು ಚಲಿಸಿ (Move).
ಕುಳಿತುಕೊಂಡಿರುವಾಗ ಬೆರಳುಗಳು, ಭುಜ ಹಾಗೂ ಪಾದಗಳನ್ನು ಚಲಿಸಬೇಕು. ಇದರಿಂದ ಮನಸ್ಸು ವಾಸ್ತವಕ್ಕೆ ಬರುತ್ತದೆ. ಮಿದುಳು 100 ಕಿಲೋಮೀಟರ್ ರೇಂಜಿನಲ್ಲಿ ಓಡುತ್ತಿದ್ದರೆ ಅದನ್ನು ತಕ್ಷಣ ನಿಯಂತ್ರಿಸುವುದು ಅಗತ್ಯ. 

•    ಕೇಳುವ ಮೂರು ಶಬ್ದ(Sound)ಗಳನ್ನು ಗುರುತಿಸಿ ಹೆಸರಿಸಿ.
ಕುಳಿತಲ್ಲೇ ನೀವು ಕೇಳಿಸಿಕೊಳ್ಳಬಲ್ಲ ಮೂರು ಶಬ್ದಗಳನ್ನು ಗುರುತಿಸಬೇಕು, ಅಷ್ಟೇ ಅಲ್ಲ, ಅವುಗಳನ್ನು ಹೆಸರಿಸಬೇಕು. ಆಗ ಮಿದುಳಿನ ಯೋಚನಾಲಹರಿಗೆ ಧಕ್ಕೆಯಾಗುತ್ತದೆ. ಕೇಳುವ ಶಬ್ದವನ್ನು ಗ್ರಹಿಸಲು ಆರಂಭಿಸುತ್ತದೆ. ಆಗ ಬೇರೆ ಬೇರೆ ತೆರನಾದ ವಿಚಾರ ಮನಸ್ಸಿಗೆ ತುಂಬುತ್ತದೆ. 

•    ನೋಡುವ (Look) ಮೂರು ವಸ್ತುಗಳನ್ನು ಗುರುತಿಸಿ. 
ಕಣ್ಣಿಗೆ ಕಾಣುವ ಮೂರು ವಸ್ತುಗಳನ್ನು ಗುರುತಿಸಿದಾಗ ಅದೇನು, ಅದು ಯಾಕೆ ಹಾಗಿದೆ ಎಂಬಿತ್ಯಾದಿಯಾಗಿ ವಸ್ತುಗಳ ಕುರಿತು ಗಮನ ಹೋಗುತ್ತದೆ. ಮಿದುಳು ಅತಿ ವೇಗವಾಗಿ ಚಲಿಸುತ್ತಿರುವಾಗ ಹೀಗೆ ಮಾಡುವುದು ಉತ್ತಮ. 
ಈ ಮೂರು ನಿಯಮಗಳನ್ನು ನಿಯಮಿತವಾಗಿ, ಕ್ರಮಬದ್ಧವಾಗಿ ಮಾಡಿದರೆ ಪ್ರಸ್ತುತ ಕ್ಷಣದಲ್ಲಿ ಜೀವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು ಎನ್ನುವುದು ಮನೋತಜ್ಞರ ಸಲಹೆ. 
 

click me!