
ಮುಟ್ಟಿನ ಸಮಯದಲ್ಲಿ ಮಹಿಳೆಯರು ತಮ್ಮ ದೇಹದಲ್ಲಿ ಅನೇಕ ರೀತಿಯ ಅಸ್ವಸ್ಥತೆಯನ್ನು ಅನುಭವಿಸುತ್ತಾರೆ. ಮೈ ಬಿಸಿಯಾದ ಹಾಗೆ, ಅತಿಯಾದ ಬೆವರುವಿಕೆ ಮತ್ತು ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಸಮಸ್ಯೆಗಳು ಉಂಟಾಗುತ್ತವೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಕಾಲುಗಳು, ಹೊಟ್ಟೆ ಮತ್ತು ಸೊಂಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನೋವನ್ನು ಅನುಭವಿಸುತ್ತಾರೆ. ಮುಟ್ಟಿನ ನೋವನ್ನು ಕಡಿಮೆ ಮಾಡಲು ಜನರು ವಿವಿಧ ಪರಿಹಾರಗಳನ್ನು ಸಹ ಪ್ರಯತ್ನಿಸುತ್ತಾರೆ. ಮುಟ್ಟಿನ ಸಮಯದಲ್ಲಿ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳಿತು ಕೂಡ.
ಅಂದಹಾಗೆ ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಸರಿಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಮಹಿಳೆಯರ ಮನಸ್ಸಿನಲ್ಲಿ ಹಲವು ಬಾರಿ ಉದ್ಭವಿಸುತ್ತದೆ. ನಿಮ್ಮ ಮನಸ್ಸಿನಲ್ಲಿಯೂ ಈ ಪ್ರಶ್ನೆ ಇದ್ದರೆ ಈ ಲೇಖನವನ್ನು ಖಂಡಿತ ಓದಿ. ಸಾಮಾನ್ಯವಾಗಿ, ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಕೆಲವು ಆರೋಗ್ಯ ತಜ್ಞರು ಬಿಸಿನೀರಿನ ಸ್ನಾನ ಸುರಕ್ಷಿತವೆಂದು ಪರಿಗಣಿಸುತ್ತಾರೆ. ಇದರ ಬಗ್ಗೆ ವೃಂದಾವನ ಮತ್ತು ನವದೆಹಲಿಯ ಮದರ್ಸ್ ಲ್ಯಾಪ್ ಐವಿಎಫ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕಿ, ಸ್ತ್ರೀರೋಗತಜ್ಞೆ ಮತ್ತು ಐವಿಎಫ್ ತಜ್ಞೆ ಡಾ. ಶೋಭಾ ಗುಪ್ತಾ ಜನಪ್ರಿಯ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ.
ಬಿಸಿನೀರಿನ ಸ್ನಾನ ಮಾಡುವುದು ಸರಿಯೇ?
ವೈದ್ಯರ ಪ್ರಕಾರ, ನೀವು ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಬಹುದು. ಅನೇಕ ಮಹಿಳೆಯರಿಗೆ ಬಿಸಿನೀರಿನ ಸ್ನಾನವು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕೆಲವು ಮಹಿಳೆಯರಿಗೆ, ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಹಾನಿಕಾರಕವಾಗಬಹುದು. ಆದರೆ, ನೀವು ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ. ಆದರೆ, ನೀವು ತುಂಬಾ ಬಿಸಿನೀರಿನಿಂದ ಸ್ನಾನ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಇದನ್ನು ಮಾಡುವ ಮೊದಲು, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ನೈರ್ಮಲ್ಯದ ಬಗ್ಗೆ ಸಂಪೂರ್ಣವಾಗಿ ಸಕ್ರಿಯರಾಗಿರಬೇಕು.
ರಕ್ತ ಪರಿಚಲನೆ ಹೆಚ್ಚಿಸಲು ಸಹಾಯಕ
ಮುಟ್ಟಿನ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ದೇಹದಲ್ಲಿ ರಕ್ತದ ಹರಿವು ವೇಗವಾಗಿ ಹೆಚ್ಚಾಗುತ್ತದೆ. ಮುಟ್ಟಿನ ಸಮಯದಲ್ಲಿ ಉತ್ತಮ ರಕ್ತದ ಹರಿವು ಇರುವುದು ಬಹಳ ಮುಖ್ಯ. ಇದು ನಿಮ್ಮ ಸ್ನಾಯುಗಳನ್ನು ಸಕ್ರಿಯವಾಗಿರಿಸುತ್ತದೆ. ಜೊತೆಗೆ ನಿಮ್ಮ ಋತುಚಕ್ರವೂ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಶ್ರೋಣಿಯ ಪ್ರದೇಶದ ಸುತ್ತಲಿನ ಸ್ನಾಯುಗಳನ್ನು ಸಕ್ರಿಯವಾಗಿರಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳು
ಋತುಚಕ್ರದ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
* ಮುಟ್ಟಿನ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುವುದರಿಂದ ಮುಟ್ಟಿನ ಸೆಳೆತ ಮತ್ತು ಕೆಳ ಬೆನ್ನು ನೋವು ನಿವಾರಣೆಯಾಗುತ್ತದೆ.
* ನಿಮಗೆ ವಾಯು ಸಮಸ್ಯೆ ಇರುವುದಿಲ್ಲ ಮತ್ತು ಬೆನ್ನು ನೋವಿನಿಂದಲೂ ಪರಿಹಾರ ಸಿಗುತ್ತದೆ.
* ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯ ಸ್ನಾಯುಗಳು ಸಡಿಲಗೊಂಡು ಮುಟ್ಟಿನ ಸೆಳೆತದಿಂದ ಪರಿಹಾರ ಸಿಗುತ್ತದೆ.
* ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಹಾಗೂ ನಿಮ್ಮನ್ನು ಸಂತೋಷಪಡಿಸುತ್ತದೆ.
* ಇದು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ.
* ಮುಟ್ಟಿನ ಸಮಯದಲ್ಲಿ ನೀವು ಒತ್ತಡ ಮತ್ತು ಆತಂಕದಿಂದ ತೊಂದರೆಗೊಳಗಾಗಿದ್ದರೆ ಅಂತಹ ಪರಿಸ್ಥಿತಿಯಲ್ಲಿಯೂ ನೀವು ಬಿಸಿ ನೀರಿನಿಂದ ಸ್ನಾನ ಮಾಡಬಹುದು.
* ಹೀಗೆ ಮಾಡುವುದರಿಂದ ಮುಟ್ಟಿನ ಚಕ್ರವು ಉತ್ತಮವಾಗಿ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.