ಖುಷಿಪಡಲೂ ಹೆದರೋ ಒಂದು ರೋಗವಿದೆ, ಇದ್ಯಾವ ಚೆರೊಫೋಬಿಯಾ?

By Suvarna News  |  First Published Apr 20, 2024, 5:19 PM IST

ಚೆರೊಫೋಬಿಯಾ ಎನ್ನುವುದು ಖುಷಿಪಡಲು ಉಂಟಾಗುವ ಭಯ. ಸಂತಸದಿಂದ ಇರಲು ಹಿಂಜರಿಕೆಯಾಗುವ ಮನಸ್ಥಿತಿ. ಇದಕ್ಕೆ ಹಲವು ಕಾರಣ. ಈ ಸಮಸ್ಯೆ ಇರುವವರಲ್ಲಿ ಕೆಲವು ಲಕ್ಷಣಗಳು ಸಾಮಾನ್ಯವಾಗಿರುತ್ತವೆ. 
 


ಯಾವುದು ಅತಿಯಾದರೂ ಅದು ಸಮಸ್ಯೆಯೇ. ಭಾವನೆಗಳಿಗೂ ಈ ಮಾತು ಅನ್ವಯವಾಗುತ್ತವೆ. ಯಾವುದೇ ಭಾವನೆಗಳು ಹೆಚ್ಚಾದರೂ ಅದು ವ್ಯಕ್ತಿತ್ವದ ಕೊರತೆಯಾಗಿ ಬಿಡುತ್ತದೆ. ಮನಸ್ಸಿನ ಭಾವನೆಗಳಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಜೀವನದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ. ಮಾನಸಿಕ ತೊಂದರೆಗಳು ಹೀಗೆಯೇ ನಿರ್ದಿಷ್ಟವಾಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗದ, ಆದರೆ, ಹಲವರಲ್ಲಿ ಅಡಕವಾಗಿರುವ ಸಮಸ್ಯೆಗಳಲ್ಲಿ ಚೆರೊಫೋಬಿಯಾ ಕೂಡ ಒಂದು. ಚೆರೊಫೋಬಿಯಾ ಎಂದರೆ, ಖುಷಿಗೆ ಭಯಪಡುವ ಮನಸ್ಥಿತಿ. ಯಾರಾದರೂ ಖುಷಿಯಾಗಿರುವುದಕ್ಕೆ ಭಯಪಡುತ್ತಾರೆಯೇ ಎಂದು ಕೇಳಬಹುದು. ಹೌದು, ಸಂತಸಪಡಲು, ಖುಷಿಯಾಗಿರಲು ಭಯಪಡುವವರು ಸಹ ನಮ್ಮೊಟ್ಟಿಗಿರುತ್ತಾರೆ. ಅವರನ್ನು ಗುರುತಿಸಿ, ಸಹಜವಾಗಿಸಲು ಪ್ರಯತ್ನಿಸುವುದು ಅಗತ್ಯ. ಎಲ್ಲರಂತೆ ಅವರೂ ಸಹ ಸುಖ-ಸಂತೋಷಗಳನ್ನು ಅನುಭವಿಸಿದರೆ ಮಾತ್ರ ಜೀವನದ ಮೌಲ್ಯದ ಅರಿವಾಗುತ್ತದೆ. ಚೆರೊ ಎನ್ನುವ ಶಬ್ದ ಗ್ರೀಕ್‌ ನ ಚೈರೋ ಎನ್ನುವ ಶಬ್ದದಿಂದ ಬಂದಿದೆ. ಇದರರ್ಥ, ಖುಷಿಯಾಗಿರುವುದು. ಚೆರೊಫೋಬಿಯಾ ಎಂದರೆ, ಖುಷಿಯಾಗಿರಲು ಭಯಪಡುವ ಸ್ಥಿತಿ. ಸಂತಸದ ಸನ್ನಿವೇಶಗಳನ್ನು ಅನುಭವಿಸಲು ಹಿಂದೇಟು ಹಾಕುವ ಮನೋಭಾವ. 

“ಇವತ್ತು ಅತಿಯಾಗಿ ಖುಷಿಯಲ್ಲಿದ್ದರೆ (Happy) ನಾಳೆ ಇದೇ ವೇಳೆಗೆ ಅಳುತ್ತೀಯ (Cry), ಹಾಗೆ ನಗು(Laugh)ತ್ತಿರಬೇಡʼ ಎನ್ನುವ ಎಚ್ಚರಿಕೆ (Warn) ಮಾತುಗಳು ಹಿಂದೆಲ್ಲ ಸಾಮಾನ್ಯವಾಗಿತ್ತು. ಯಾರಾದರೂ ಅತಿಯಾಗಿ ನಗುತ್ತಿದ್ದ ಸಮಯದಲ್ಲಿ ಅವರಿಗೆ ಇಂತಹ ಮಾತುಗಳ ಮೂಲಕ ಒಂದು ರೀತಿಯ ಹಿಂಜರಿಕೆಯ ಭಾವನೆಯನ್ನು ಮೂಡಿಸಲಾಗುತ್ತಿತ್ತು. ಅಂದರೆ, ಹೆಚ್ಚು ಖುಷಿಯಾಗಿರುವುದಕ್ಕೆ ತಡೆ ಒಡ್ಡುವುದು ಇದರ ಉದ್ದೇಶವಾಗಿತ್ತು. ಅಷ್ಟಕ್ಕೂ ಇದು ಕೇವಲ ನಂಬಿಕೆ (Belief). ಜೀವನದಲ್ಲಿ ಖುಷಿ (Happiness), ನೋವು (Pain) ಇರುವುದೇ. ಇವತ್ತು ನಕ್ಕರೆ, ನಾಳೆ ಅಳುವ ಸನ್ನಿವೇಶಗಳು ಎದುರಾದರೆ ಅಚ್ಚರಿಯಿಲ್ಲ. ಆದರೆ, ಇಂದು ನಕ್ಕರೆ, ನಾಳೆ ಅಳು ಗ್ಯಾರೆಂಟಿ ಎನ್ನಲಾಗದು. ಆದರೆ ಇಂಥದ್ದನ್ನು ಗಾಢವಾಗಿ ನಂಬುವವರು ಈಗಲೂ ಸಾಕಷ್ಟಿರಬಹುದು. ಕೆಲವೊಮ್ಮೆ ಚೆರೊಫೋಬಿಯಾಕ್ಕೆ (Cherophobia) ಇಂತಹ ನಂಬುಗೆಯೂ ಕಾರಣವಾಗಿರಬಹುದು ಎಂದರೆ ಅಚ್ಚರಿಯಿಲ್ಲ. ಬಾಲ್ಯಕಾಲದಲ್ಲಿ (Childhood) ಇಂತಹ ಬೆದರಿಕೆಗಳನ್ನು ಕೇಳುತ್ತ ಬೆಳೆದವರು ಸಂತಸಪಡಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಬಹುದು.  

ನಿಂಬೆ ಜ್ಯೂಸ್‌ vs ಎಳನೀರು, ಬೇಸಿಗೆಯಲ್ಲಿ ಹೈಡ್ರೇಟ್ ಆಗಿರಲು ಯಾವುದು ಒಳ್ಳೇದು?

Tap to resize

Latest Videos

ಚೆರೊಫೋಬಿಯಾ ವ್ಯಕ್ತಿ ತನ್ನ ಇತಿಹಾಸದಲ್ಲಿ ಅಥವಾ ಬಾಲ್ಯಕಾಲದಲ್ಲಿ ಅನುಭವಿಸಿದ ತೀವ್ರವಾದ ನೋವು ಅಥವಾ ಖುಷಿಯಾಗಿರುವುದಕ್ಕೆ ಸಂಬಂಧಿಸಿದ ನಂಬಿಕೆಗಳಿಂದ ಉಂಟಾಗಬಹುದು ಎಂದು ವೈಜ್ಞಾನಿಕ (Scientific) ಅಧ್ಯಯನಗಳು (Study) ಹೇಳುತ್ತವೆ. ಇಂದು ಖುಷಿಯಾಗಿರುವುದು ಎಂದರೆ, ಮುಂದೇನೋ ಕೆಟ್ಟದ್ದು (Bad) ಸಂಭವಿಸುತ್ತದೆ ಎನ್ನುವ ನಿರೀಕ್ಷೆಯೇ ಚೆರೊಫೋಬಿಯಾ ಉಂಟುಮಾಡಬಲ್ಲದು. ಮೊದಲೇ ಭಯಪಡುವ ಸ್ವಭಾವ ಹೊಂದಿರುವವರು ಇಂತಹ ನಂಬಿಕೆಗಳನ್ನು ಬೆಳೆಸಿಕೊಂಡು ಹೆದರುತ್ತಾರೆ. 

 ಕೆಲವು ಲಕ್ಷಣಗಳು (Signs)
•    ಖುಷಿಯಾಗಿರಬೇಕಾದ ಸಮಯದಲ್ಲಿ ಈ ವ್ಯಕ್ತಿಗಳು ಏಕಾಏಕಿ ಗಿಲ್ಟ್‌ (Guilt) ಅನುಭವಿಸುತ್ತಾರೆ ಹಾಗೂ ಏನೋ ಕಳೆದುಕೊಂಡಂತೆ ಫೀಲ್‌ (Feel) ಆಗುತ್ತಾರೆ. ಜೀವನಕ್ಕೆ ಮೌಲ್ಯವಿಲ್ಲದ ಭಾವನೆ ಇವರನ್ನು ಕಾಡುತ್ತದೆ.
•    ಇವರು ಪದೇ ಪದೆ ನಕಾರಾತ್ಮಕ (Negative) ಘಟನೆಗಳು ಸಂಭವಿಸುತ್ತವೆ ಎಂದು ಹೇಳುತ್ತಿರುತ್ತಾರೆ. ಸಂತಸದಿಂದ ಇರಬೇಕಾದ ಸಮಯದಲ್ಲೂ ಅವರಲ್ಲಿ ಈ ಭಾವನೆ ತುಂಬಿರುತ್ತದೆ. 
•    ಹೀಗಾಗಿ, ಇವರು ಖುಷಿಪಡುವ ಸಂದರ್ಭಗಳನ್ನು ಮಿಸ್‌ ಮಾಡಿಕೊಳ್ಳುತ್ತಾರೆ. ಅಂದರೆ, ಪಾರ್ಟಿಗಳಿಗೆ ಹೋಗುವುದಿಲ್ಲ. ಸ್ನೇಹಿತರ ಕೂಟಗಳನ್ನು ತಪ್ಪಿಸಿಕೊಳ್ಳುತ್ತಾರೆ. ಗೆಟ್‌ ಟುಗೆದರ್‌ ಸನ್ನಿವೇಶಗಳನ್ನು ಅವಾಯ್ಡ್‌ (Avoid) ಮಾಡುತ್ತಾರೆ. ಇದನ್ನು ಅವರು ಉದ್ದೇಶಪೂರ್ವಕವಾಗಿ ಮಾಡುತ್ತಾರೆ. 
•    ಇಂದು ಖುಷಿಯಾಗಿದ್ದರೆ ನಾಳೆ ದುಃಖ ಎದುರಾಗುತ್ತದೆ ಎನ್ನುವ ನಂಬಿಕೆ ಇವರಲ್ಲಿ ತೀವ್ರವಾಗಿರುತ್ತದೆ. 

ಆಫೀಸ್, ಮನೆ ಅಂತ ಬಿಝಿಯಲ್ಲಿ ಆರೋಗ್ಯ ಕಡೆಗಣಿಸ್ತಿದ್ದೀರಾ, ಹೆಲ್ದೀಯಾಗಿರೋಕೆ ಇವಿಷ್ಟನ್ನು ಮಾಡಿ ಸಾಕು

•    ಧನಾತ್ಮಕ (Positive) ಭಾವನೆಗಳನ್ನು ವ್ಯಕ್ತಪಡಿಸಲು ಇವರಿಗೆ ಭಾರೀ ಕಷ್ಟವಾಗುತ್ತದೆ. ಒಂದೊಮ್ಮೆ ಅವರು ವ್ಯಕ್ತಪಡಿಸಿದರೂ ಅದರ ಮರುಕ್ಷಣವೇ ದುಃಖಿತರಾಗುತ್ತಾರೆ. 
•    ಖುಷಿಯನ್ನು ಅನುಭವಿಸುವುದೇ ಇವರಲ್ಲಿ ಒತ್ತಡ (Stress) ಹಾಗೂ ಆತಂಕವನ್ನು ಮೂಡಿಸುತ್ತದೆ! ಹೀಗಾಗಿ, ಇಂತಹ ಸನ್ನಿವೇಶಗಳನ್ನು ಅವಾಯ್ಡ್‌ ಮಾಡುತ್ತಾರೆ. 

click me!