ಕೊರೋನಾ ಗುಣಮುಖರು ಹೆಚ್ಚು, ಆದ್ರೆ ಅಪಾಯ ಮುಗಿದಿಲ್ಲ, ಮಾಸ್ಕ್ ಹಾಕ್ಕೊಳಿ, ತಜ್ಞರ ವಾರ್ನಿಂಗ್

By Suvarna News  |  First Published Aug 8, 2020, 6:54 PM IST

ಭಾರತದಲ್ಲೀಗ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು,, ಭಾರತೀಯರು ಮಾಸ್ಕ್ ಧರಿಸುವುದು, ಸಮಾಜಿಕ ಅಂತರವನ್ನು ಕಾಪಾಡಲೇ ಬೇಕು ಎಂದು ತಜ್ಞರು ತಿಳಿಸಿದ್ದಾರೆ.


ಭಾರತದಲ್ಲೀಗ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು,, ಭಾರತೀಯರು ಮಾಸ್ಕ್ ಧರಿಸುವುದು, ಸಮಾಜಿಕ ಅಂತರವನ್ನು ಕಾಪಾಡಲೇ ಬೇಕು ಎಂದು ತಜ್ಞರು ತಿಳಿಸಿದ್ದಾರೆ.

ಅಮೆರಿಕ ಹಾಗೂ ಬ್ರೆಜಿಲ್ ನಂತರ ಅತಿ ಹೆಚ್ಚು ಕೊರೋನಾ ಸೋಂಕಿತರಿರುವ ಮೂರನೇ ರಾಷ್ಟ್ರವಾಗಿದ್ದು, ಸ್ಯಾನಿಟೈಸರ್ ಬಳಸುತ್ತಾ, ಕೈ ಶುಚಿಯಾಗಿಟ್ಟುಕೊಂಡು, ಭಷಧ ಕಂಡು ಹಿಡಿಯುವ ತನಕ ಭಾರತೀಯರು ಕೊರೋನಾ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

Tap to resize

Latest Videos

ಕುಕ್ಕರ್‌ನಲ್ಲಿ ಮಾಸ್ಕ್ ಸ್ಯಾನಿಟೈಸ್ ಮಾಡೋದು ಸುಲಭ: ಹೀಗನ್ನುತ್ತೆ ರಿಸರ್ಚ್..!

ಭಾರತದ ಹೆಲ್ತ್‌ ಕೇರ್ ಪ್ರೊವೈಡರ್ಸ್‌ ಆಯೋಜಿಸಿದ ವೆಬಿನಾರ್‌ನಲ್ಲಿ ಭಾಗವಹಿಸಿದ ತಜ್ಞರು ಇಂತಹದೊಂದು ನಿಗಮನಕ್ಕೆ ತಲುಪಿದ್ದಾರೆ. ಬ್ರೆಜಿಲ್ ಹಾಗೂ ಅಮೆರಿಕಗೆ ಹೋಲಿಸಿದಲ್ಲಿ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆ ಇದ್ದು, ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ ಎಂದೂ ಅವರು ತಿಳಿಸಿದ್ದಾರೆ.

ಭಾರತದ ಹೆಲ್ತ್‌ ಕೇರ್ ಪ್ರೊವೈಡರ್ಸ್‌ ನಿರ್ದೇಶಕ ಡಾ. ಗಿರಿಧರ್ ಜೆ ಗ್ಯಾನಿ ಪ್ರತಿಕ್ರಿಯಿಸಿ, ಭಾರತದಲ್ಲೀಗ 10 ಲಕ್ಷಕ್ಕೆ 30 ಕೊರೋನಾ ಸೋಂಕಿತರು ಸಾಯುತ್ತಾರೆ. ಆದರೆ ಬ್ರೆಜಿಲ್‌ನಲ್ಲಿ 10 ಲಕ್ಷಕ್ಕೆ 464, ಅಮೆರಿಕದಲ್ಲಿ 492 ಜನ ಸಾಯುತ್ತಿದ್ದಾರೆ. ಭಾರತದಲ್ಲಿ ರಿಕವರಿ ರೇಟ್ ಶೇ.65ರಷ್ಟು ಹೆಚ್ಚಾಗಿದೆ. ಸಾಯುವ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.

ಬೆಟ್ಟದಂತೆ ಬೆಳೆಯುತ್ತಿರುವ ಮಹಿಳೆಯ ಹೊಟ್ಟೆ; ಕಾರಣ ನಿಗೂಢ

ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ಕಮ್ಯುನಿಟಿ ಹಂತ ತಲುಪಿದ್ದು, ಪರಿಸ್ಥಿತಿ ಕೆಟ್ಟದಾಗಿದೆ ಎಂದುಬ ಭಾರತೀಯ ವೈದ್ಯಕೀಯ ಸಂಘಟನೆ ತಿಳಿಸಿದೆ. ಡಾ. ಸುನೀಲ ಗಾರ್ಗ್ ಪ್ರತಿಕ್ರಿಯಿಸಿ ಸೋಂಕು ಸಮುದಾಯದ ಹಂತಕ್ಕೆ ತಲುಪಿದ್ದು, ಈ ಸಂದರ್ಭ ಐಸೋಲೇಷನ್ ಅಥೌಆ ಕ್ವಾರೆಂಟೈನ್ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ ಎಂದಿದ್ದಾರೆ.

ಇ ಸಂಜೀವಿನಿ ಮೂಲಕ ಹಿರಿಯರಿಗೆ ಉಚಿತ ಚಿಕಿತ್ಸೆ; ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

ಜನರು ಮಾಸ್ಕ್‌ ಧರಿಸುವ ಬಗ್ಗೆ ಇನ್ನಷ್ಟು ಗಂಭೀರ ರೂಲ್ಸ್ ತರುವ ಅಗತ್ಯವಿದ್ದು, ಜನರು ಈಗಲೂ ಗಂಭೀರತೆನ್ನು ಅರ್ತ ಮಾಡಿಕೊಳ್ಳುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದು ತಜ್ಷರು ತಿಳಿಸಿದ್ದಾರೆ.

click me!