ಬೆಟ್ಟದಂತೆ ಬೆಳೆಯುತ್ತಿರುವ ಮಹಿಳೆಯ ಹೊಟ್ಟೆ; ಕಾರಣ ನಿಗೂಢ

By Suvarna News  |  First Published Aug 8, 2020, 2:55 PM IST

ಪಾಪ, ಚೀನಾದ ಈ ಮಹಿಳೆಯನ್ನು ನೋಡಿ, ಎಷ್ಟು ಸಣ್ಣಗಿದ್ದಾರೆ! ಆದರೆ, ಆಕೆಯ ಹೊಟ್ಟೆ ಮಾತ್ರ ನಿಗೂಢ ಕಾಯಿಲೆಯ ಕಾರಣಕ್ಕೆ ನಿಯಂತ್ರಣವಿಲ್ಲದೆ ಬೆಳೆಯುತ್ತಿದೆ. ಈಗಾಗಲೇ ಬರೋಬ್ಬರಿ 19 ಕೆಜಿ ತೂಗುತ್ತಿರುವ ಹೊಟ್ಟೆಯ ಕಾರಣದಿಂದಾಗಿ ಈಕೆಗೆ ನಡೆದಾಡಲೇ ಸಾಧ್ಯವಾಗುತ್ತಿಲ್ಲ...


ಬಳಕುವ ಬಳ್ಳಿಯಂಥ ಸೊಂಟ ಇರಬೇಕೆಂದು ಬಯಸದ ಹೆಣ್ಣುಮಕ್ಕಳೇ ಇರಲಿಕ್ಕಿಲ್ಲ. ಸಣ್ಣ ಸೊಂಟಕ್ಕಾಗಿ ಅವರು ಡಯಟ್, ವ್ಯಾಯಾಮ ಎಂದು ಹಲವಾರು ಕಸರತ್ತು ನಡೆಸುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆಯ ಪಾಡು ನೋಡಿ... ಎಲ್ಲವೂ ಸರಿ ಇದ್ದಿದ್ದರೆ ಖಂಡಿತಾ ಆಕೆಯ ಸೊಂಟ ಸಣ್ಣಗೆ ಬಳುಕುತ್ತಿತ್ತು ಎಂಬುದನ್ನು ಅವರ ದೇಹವೇ ಹೇಳುತ್ತದೆ. ಆದರೆ, ಈಕೆ ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದು, ಪರಿಣಾಮವಾಗಿ ಆಕೆಯ ಹೊಟ್ಟೆ ನಿಯಂತ್ರಣವೇ ಇಲ್ಲದೆ ಬೆಳೆಯುತ್ತಾ ಹೋಗುತ್ತಿದೆ. 

ಈಕೆ ಚೀನಾದ ಆನ್ಶುನ್ ನಗರದ ಹೊರವಲಯದಲ್ಲಿರುವ ದಾಝಿ ಎಂಬ ಹಳ್ಳಿಯ ಮಹಿಳೆ. ಹೆಸರು ಹುವಾಂಗ್ ಗುವೋಕ್ಸಿಯಾನ್.  36 ವರ್ಷದ ಈಕೆ ಎರಡು ಮಕ್ಕಳ ತಾಯಿ. ಪತಿ ನಗರದಲ್ಲಿದ್ದು ದುಡಿಯುತ್ತಿದ್ದಾನೆ, ಎರಡು ವರ್ಷದ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಪಾದರಸದಂತೆ ಈಕೆ ಎಲ್ಲ ಕೆಲಸವನ್ನೂ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಒಮ್ಮೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಆಗ ವೈದ್ಯರ ಬಳಿ ಹೋಗಿ ಅವರು ಕೊಟ್ಟ ಔಷಧಿ ತೆಗೆದುಕೊಂಡ ಬಳಿಕ ಹೊಟ್ಟೆನೋವೇನೋ ನಿಂತಿತು. ಆದರೆ, ಹೊಟ್ಟೆ ದೊಡ್ಡದಾಗಿ ಬಲೂನ್‌ನಂತೆ ಊದಲಾರಂಭಿಸಿತು. 

ಇ ಸಂಜೀವಿನಿ ಮೂಲಕ ಹಿರಿಯರಿಗೆ ಉಚಿತ ಚಿಕಿತ್ಸೆ; ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

Tap to resize

Latest Videos

ಬಲೂನಿನಂತಾ ಹೊಟ್ಟೆ
ಹುವಾಂಗ್‌ರ ಒಟ್ಟು ತೂಕ 54 ಕೆಜಿಗಳು. ಅದರಲ್ಲಿ ಆಕೆಯ ಹೊಟ್ಟೆಯೇ 19 ಕೆಜಿ ತೂಗುತ್ತಿದೆ. ಅಂದರೆ ದೇಹತೂಕದ ಶೇ.36ರಷ್ಟು ಭಾರವನ್ನು ಹೊಟ್ಟೆಯೇ ಹೊತ್ತಿದೆ. ಈ ಬೆಳೆಯುತ್ತಿರುವ ಹೊಟ್ಟೆಯನ್ನು ನಿಯಂತ್ರಿಸಲು, ಮುಂಚಿನಂತಾಗಿಸಲು ಹುವಾಂಗ್ ಹಲವಾರು ವೈದ್ಯರ ಬಳಿ ಹತ್ತಾರು ಬಾರಿ ತಿರುಗಾಡಿದ್ದಾರೆ. ಒಬ್ಬರು ಲಿವರ್ ಕ್ಯಾನ್ಸರ್ ಇದೆ ಎಂದರೆ ಮತ್ತೊಬ್ಬರು ಗರ್ಭಕೋಶದ ಕ್ಯಾನ್ಸರ್ ಎಂದರಂತೆ. ಮಗದೊಬ್ಬರು ಹೊಟ್ಟೆ ಹಾಗೂ ಎದೆಯಲ್ಲಿ ನೀರು ತುಂಬಿರಬಹುದು ಎನ್ನುತ್ತಾರಂತೆ. ಇನ್ನೊಬ್ಬರ ಪ್ರಕಾರ, ದೊಡ್ಡ ಗಡ್ಡೆಯೊಂದು ಬೆಳೆಯುತ್ತಿದೆ. ಎಲ್ಲ ಸಮಸ್ಯೆಗಳೂ ಇರಬಹುದು. ಆದರೆ, ಯಾವ ವೈದ್ಯರಿಗೂ ಹುವಾಂಗ್‌ಳ ಹೊಟ್ಟೆ ಊದುತ್ತಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಒಮ್ಮೆ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಲ್ಲಿರುವ ನೀರನ್ನು ತೆಗೆದು ಹಾಕಿದರಂತೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಹೊಟ್ಟೆ ಊದಲಾರಂಭಿಸಿತು. ಹೀಗಾಗಿ, ಇದೊಂದು ಬಗೆಹರಿಯದ ಸಮಸ್ಯೆಯಾಗಿ ನಿಂತಿದೆ. ಈಗ ಆಕೆ ಎಲ್ಲೇ ಹೊರಗೆ ಹೋದರೆ ತ್ರಿವಳಿ ಮಕ್ಕಳು ಹೊಟ್ಟೆಯಲ್ಲಿರಬಹುದೆಂದು ಜನ ಭಾವಿಸುತ್ತಾರಂತೆ. 

ಸಮಸ್ಯೆಯ ಮೇಲೆ ಸಮಸ್ಯೆ
ಈ ಊದಿರುವ ಹಾಗೂ ಊದುತ್ತಲೇ ಇರುವ ಹೊಟ್ಟೆಯಿಂದ ಹುವಾಂಗ್‌ಗೆ ಹಲವಾರು ಸಮಸ್ಯೆಗಳಾಗಿವೆಯಂತೆ. ಸರಿಯಾಗಿ ಮಲಗಲು ಸಾಧ್ಯವಿಲ್ಲವಾದ್ದರಿಂದ ನಿದ್ರಿಸಲಾಗುವುದಿಲ್ಲ, ಭಾರ ಹೆಚ್ಚಾಗಿ ನಡೆಯಲಾಗುವುದಿಲ್ಲ, ಈ ಕಾರಣಗಳಿಂದ ಮಕ್ಕಳನ್ನೂ ನೋಡಿಕೊಳ್ಳಲಾಗುತ್ತಿಲ್ಲ. ಈ ಎಲ್ಲ ಅಸಹಾಯಕತೆಗಳಿಂದಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡಕ್ಕೊಳಗಾಗಿರುವುದರಿಂದ ಆಕೆಗೆ ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರಲಾರಂಭವಾಗಿದೆ. 
'ನಾನು ಮುಂಚೆ ಎಲ್ಲ ಮನೆಕೆಲಸಗಳನ್ನು ವೇಗವಾಗಿ ಮಾಡುತ್ತಿದ್ದೆ. ಆದರೆ, ಈಗ ಹೊಟ್ಟೆಯ ಕಾರಣದಿಂದ ಸಾಮಾನ್ಯ ಬದುಕೇ ಇಲ್ಲವಾಗಿದೆ. ಮಕ್ಕಳಿನ್ನೂ ಚಿಕ್ಕವರು. ಅವರನ್ನು ಅಜ್ಜ ಅಜ್ಜಿ ನೋಡಿಕೊಳ್ಳುವಂತಾಗಿದೆ. ಆದಷ್ಟು ಬೇಗ ಮುಂಚಿನಂತಾಗುವೆನೆಂಬ ಆಸೆ ನನಗೆ' ಎನ್ನುತ್ತಾಳೆ ಹುವಾಂಗ್. 

ಕಾಮಸೂತ್ರದಲ್ಲಿ ಹೇಳಿದ ಈ ಫುಡ್‌ ಸೇವಿಸಿದ್ರೆ ವಯಾಗ್ರಾನೇ ಬೇಡ!

ಸೋಷ್ಯಲ್ ಮೀಡಿಯಾವೇ ದಿಕ್ಕು

ಇದೀಗ ಸ್ಥಳೀಯ ಆಸ್ಪತ್ರೆಯ ವಿಶೇಷ ತಜ್ಞರು ಹುವಾಂಗ್‌ಳ ನೆರವಿಗೆ ಬರಲು ಮನಸ್ಸು ಮಾಡಿದ್ದಾರೆ. ಆದರೆ, ಚಿಕಿತ್ಸೆಗೆ 3290 ಯೂರೋಗಳು ಖರ್ಚಾಗುತ್ತವೆ ಎಂದು ಹೇಳಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಸಂಗ್ರಹಕ್ಕಾಗಿ ಹುವಾಂಗ್ ಸೋಷ್ಯಲ್ ಮೀಡಿಯಾದ ಮೊರೆ ಹೋಗಿದ್ದಾಳೆ.  ದಾನಿಗಳ ಸಹಾಯ ಪಡೆದು ಮುಂಚಿನಂತಾಗುವ ಬಯಕೆ ಆಕೆಯದು. 

click me!