ಕಾಮಕಲೆಯ ಬಗ್ಗೆ ಅತ್ಯಂತ ವಿಸ್ತಾರವಾಗಿ, ಅದ್ಭುತವಾಗಿ ಬರೆದ ಗ್ರಂಥ ಎಂದರೆ ಕಾಮಸೂತ್ರ. ಅದರಲ್ಲಿ ಲೈಂಗಿಕ ಶಕ್ತಿವರ್ಧಕಗಳೆಂದು ಹೇಳಿದ ಫುಡ್‌ಗಳು ಯಾವುವು ಗೊತ್ತಾ?
ಭಾರತದ ಮಹಾಪಂಡಿತ, ಕಾಮಕಲೆಯಲ್ಲಿ ನಿಷ್ಣಾತನಾದ ವಾತ್ಸಾಯನ ಎಂಬಾತ ಕಾಮಸೂತ್ರ ಎಂಬ ಗ್ರಂಥವನ್ನು ಬರೆದ. ಈ ಗ್ರಂಥವನ್ನು ಗುರುಕುಲಗಳಲ್ಲೂ ಅರಮನೆಗಳಲ್ಲೂ ರಾಜಕುಮಾರರಿಗೆ ಪಾಠ ಮಾಡಲಾಗುತ್ತಿತ್ತಂತೆ. ಸ್ತ್ರೀಯರೂ ಇದನ್ನು ಕಲಿಯಬೇಕಿತ್ತು. ನಮ್ಮ ಹಿಂದಿನ ಕಾಲದಲ್ಲಿ ಲೈಂಗಿಕ ಕಲೆಯ ಬಗ್ಗೆ ಈಗ ಇರುವ ಮುಜುಗರ ಇರಲೇ ಇಲ್ಲ. ಹೀಗಾಗಿ ವ್ಯಕ್ತಿಯ ದೈಹಿಕ ಆರೋಗ್ಯ, ಲೈಂಗಿಕ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳ ಬಗ್ಗೆಯೂ ಎಲ್ಲರೂ ಅರಿತಿರುತ್ತಿದ್ದರು. ಅಂಥ ಕೆಲವು ಆಹಾರಗಳು ಇಲ್ಲಿವೆ.
ಹಾಲು
ಹಾಲು ಲೈಂಗಿಕ ಶಕ್ತಿವರ್ಧಕ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ಹಿಂದಿ- ಕನ್ನಡದ ಹಿಂದಿನ ಫಿಲಂಗಳಲ್ಲಿ ಮದುವೆಯ ಮೊದಲ ರಾತ್ರಿಯ ದೃಶ್ಯದಲ್ಲಿ ವಧು ಲಜ್ಜೆಯಿಂದ ಹಾಲಿನ ಗ್ಲಾಸು ಹಿಡಿದು ಕೋಣೆಯೊಳಗೆ ಹೋಗುವುದನ್ನು ನೀವು ನೋಡಿರಬಹುದು. ದೇಶಿ ಹಸುವಿನ ಮಂದ ಹಾಲು ಸ್ತ್ರೀ- ಪುರುಷರಿಬ್ಬರಿಗೂ ಒಳ್ಳೆಯ ಆರೋಗ್ಯವನ್ನೂ ಕಾಮದಾಸೆಯನ್ನೂ ಕೊಡುತ್ತದೆ. ಹಾಲಿಗೆ ಸ್ವಲ್ಪ ಸಕ್ಕರೆ ಹಾಗು ಜೇನು ಬೆರೆಸಿಕೊಂಡರೆ ದಿ ಬೆಸ್ಟ್. ಆಯುರ್ವೇದದ ವಾಜೀಕರಣ ಅಧ್ಯಾಯದಲ್ಲಿ ಈ ಹಾಲಿನ ಲೈಂಗಿಕ ಉಪಯೋಗಗ ಬಗ್ಗೆ ಹೇಳಲಾಗಿದೆ. ದೇವಾಲಯಗಳಲ್ಲಿ ಹಾಲು, ಮೊಸರು, ಜೇನು, ಸಕ್ಕರೆ, ತುಪ್ಪ ಬೆರೆಸಿದ ಪಂಚಾಮೃತವನ್ನು ಸೇವಿಸಲು ಕೊಡುತ್ತಾರೆ. ಇದು ಕೂಡ ಧಾತುವರ್ದಕ.
ಕೇಸರಿ
ಕೇಸರಿ ಎಂಬ ಹೆಸರಿನಲ್ಲೇ ಸಿಂಹವೆಂಬ ಆವನೆ ಮೂಡುತ್ತದೆ. ಕಾಶ್ಮೀರದಲ್ಲಿ ಹೆಚ್ಚಾಗಿ ಬೆಳೆಯುವ ಇದನ್ನು ಭಾರತದ ರಾಜರೆಲ್ಲ ಮುಗಿಬಿದ್ದು ತರಿಸಿಕೊಳ್ಳುತ್ತಿದ್ದರು. ಇದು ತುಸು ದುಬಾರಿ, ಆದರೂ ದೇಹಕ್ಕೆ ಬಲು ಒಳ್ಳೇದು. ಗರ್ಭಿಣಿಯರು ತಮಗೆ ಹುಟ್ಟುವ ಮಗು ಕೆಂಪಗಾಗಿರಲಿ ಎಂದು ಇದನ್ನು ಹಾಲಿನೊಂದಿಗೆ ಸೇರಿಸಿ ಕುಡಿಯುವುದು ವಾಡಿಕೆ. ದುಬಾರಿ ಸ್ವೀಟ್‌ಗಳಿಗೂ ಇದನ್ನು ಮಿಕ್ಸ್ ಮಾಡಿರುತ್ತಾರೆ. ಪುರುಷರಲ್ಲಿ ಇದು ಅವರ ವೀರ್ಯದ ಬಲವಂತಿಕೆಯನ್ನೂ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಇದು ವೈಜ್ಞಾನಿಕವಾಗಿಯೂ ಪ್ರೂವ್ ಆಗಿದೆ.
ಶತಾವರಿ
ಗ್ರೀಕ್ ಪುರಾಣಗಳಲ್ಲಿ ಇದರ ಉಲ್ಲೇಖವಿದೆ. ಭಾರತೀಯ ಪುರಾಣ ಇತಿಹಾಸಗಳಲ್ಲೂ ಜನ ಇದನ್ನು ಬಳಸುತ್ತಿದ್ದುದರ ಉಲ್ಲೇಖವಿದೆ. ಆಯುರ್ವೇದದಲ್ಲಿ ಇದರಿಂದ ತಯಾರಿಸಿದ ಲೇಹ್ಯಗಳು ಸೇವನೆಗೆ ಲಭ್ಯವಿವೆ. ಇದು ವಯಾಗ್ರಾದಂತೆಯೇ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. ಅಂದರೆ ಲೈಂಗಿಕ ಕ್ರಿಯೆಗೆ ಅರ್ಧ ಗಂಟೆ ಮುನ್ನ ಶತಾವರಿಯ ಲೇಹ್ಯವನ್ನು ಸೇವಿಸಿದರೆ, ರಾತ್ರಿ ಸುಮಧುರವಾಗಲಿದೆ ಎಂಬುದು ಖಾತ್ರಿಯಂತೆ. ದೇಹದಿಂದ ಹೆಚ್ಚುವರಿ ಅಮೋನಿಯಾವನ್ನು ಇದು ಹೊರಹಾಕುತ್ತದೆ. ಇದರಿಂದ ಬಳಲಿಕೆ ದೂರವಾಗುತ್ತದೆ.
#Feelfree: ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು!
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಡಯಲೈಲ್ ಡೈಸಲ್ಫೈಡ್ ಎಂಬ ರಾಸಾಯನಿಕ ಇದೆ. ಇದು ದೇಹದಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಟೆಸ್ಟೋಸ್ಟಿರಾನ್ ನಿಮಗೇ ಗೊತ್ತಿದ್ದಂತೆ, ಲೈಂಗಿಕ ಆಸಕ್ತಿವರ್ಧಕ. ಹೀಗಾಗಿಯೇ ಬ್ರಹ್ಮಚರ್ಯ ಪಾಲಿಸುವವರು, ಹಿಂದೂ ಸನ್ಯಾಸಿಗಳು, ಬೌದ್ಧ- ಜೈನ ಯತಿಗಳು ಇದನ್ನು ದೂರವಿಡುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ತಿಂದರೆ ಅದರ ವಾಸನೆಯಿಂದಾಗಿ ಸಂಗಾತಿ ಓಡಿಹೋಗುವ ಚಾನ್ಸೇ ಹೆಚ್ಚು. ಹೀಗಾಗಿ ಆಹಾರದಲ್ಲಿ ಇದನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಬೆಳ್ಳುಳ್ಲಿ ದೇಹದ ರಕ್ತಶುದ್ಧಿಯನ್ನೂ ಮಾಡುತ್ತದೆ.
#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!
ಅಶ್ವಗಂಧ
ಅಶ್ವಗಂಧ ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲೂ ಬೆಳೆಯುತ್ತದೆ. ಇದರ ಬೇರು ಕುದುರೆಯ ಮೈವಾಸನೆಯಂತೆ ಪರಿಮಳ ಬೀರುವುದರಿಂದ ಇದಕ್ಕೆ ಹಾಗೆ ಹೆಸರು. ಕೆಲವೆಡೆ ಇದನ್ನು ವಿಂಟರ್ ಚೆರ್ರಿ, ಪಾಯ್ಸನ್ ಗೂಸ್‌ಬೆರ್ರಿ ಎಂದು ಕರೆಯುವುದೂ ಉಂಟು. ಇದರ ಬೇರುಗಳನ್ನು ಯಾವತ್ತಿಗೂ ವೈದ್ಯಕೀಯ ಉಪಯೋಗಕ್ಕಾಗಿ ಬಳಸುತ್ತಿದ್ದರು. ಆಯುರ್ವೇದದಲ್ಲಿ ಇದರ ಸಾಕಷ್ಟು ಉಪಯೋಗಗಳನ್ನು ಹೇಳಲಾಗಿದೆ. ಜಪಾನಿನ ವೈದ್ಯಕೀಯ ಸಂಸ್ಥೆಯೊಂದು ಇದನ್ನು ಬಳಸಿಕೊಂಡು ಕೊರೊನಾಗೆ ಔಷಧ ತಯಾರಿಸಲು ಮುಂದಾಗಿದೆ. ಇದನ್ನು ಸೇವಿಸಿದರೆ ಕುದುರೆಯಷ್ಟು ಶಕ್ತಿ ಬರುತ್ತದೆ ಎಂದು ಹೇಳುತ್ತಾರೆ. ಅದು ಉತ್ಪ್ರೇಕ್ಷೆಯೇ ಇರಬಹುದು. ಆದರೆ ಕೇಳೋದಕ್ಕೆ ಒಂಥರಾ ರೋಚಕವಾಗಿದೆ!
ಈ ಆರು ಫುಡ್ ಸೇವಿಸಿದ್ರೆ ಕೊರೊನಾ ದೂರ!
ಮೆಂತೆ
ಮೆಂತೆ ಸ್ತ್ರೀಯರಲ್ಲಿ ಕಾಮಾಸಕ್ತಿ ಹೆಚ್ಚಿಸುತ್ತದೆ. ಸ್ತ್ರೀಯರ ಪೃಷ್ಠ ಹಾಗೂ ಎದೆಭಾಗದ ಮಾಂಸದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಕಾಮಸೂತ್ರದಲ್ಲಿ ಹೇಳಲಾಗಿದೆ.
ಜಾಯಿಕಾಯಿ
ಜಾಯಿಕಾಯಿ ಸೇರಿಸಿದ ಹಾಲು ಅಥವಾ ಇತರ ಪಾನೀಯ ಕುಡಿಯುವುದು ಆರೋಗ್ಯಕಾರಿ, ರೋಮಾಂಚನಕಾರಿ. ಆದರೆ ಇದನ್ನು ಹೆಚ್ಚು ಸೇವಿಸುವುದು ಅಮಲು ಉಂಟುಮಾಡುತ್ತದೆ.