ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ವೈರಸ್ | ಇನ್ಫೆಕ್ಷನ್ ಆದ್ರೆ ಮಕ್ಕಳಾಗಲ್ಲ | ಈಗಾಗಲೇ ಸಾವಿರಾರು ಜನಕ್ಕೆ ಟೆಸ್ಟ್ ಪಾಸಿಟಿವ್
ವಾಯುವ್ಯ ಚೀನಾದಲ್ಲಿ ಹೊಸದೊಂದು ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಈ ಭಾಗದ ಸಾವಿರಾರು ಜನರು ಬ್ರುಸೆಲ್ಲೋಸಿಸ್ ಎಂಬ ಕೀಟಾಣುವಿನ ರೋಗಕ್ಕೆ ತುತ್ತಾಗಿದ್ದಾರೆ. ಟೆಸ್ಟ್‌ನಲ್ಲಿ ಬಹಳಷ್ಟು ಜನಕ್ಕೆ ಪಾಸಿಟಿವ್ ಫಲಿತಾಂಶ ಬಂದಿದೆ.
ಜೈವಿಕ ಔಷಧ ಪ್ರಯೋಗಾಲಯದಲ್ಲಿ ಕಳೆದ ವರ್ಷ ಉಂಟಾದ ಸೋರಿಕೆಯಿಂದ ಬ್ಯಾಕ್ಟೀರಿಯಾ ಹುಟ್ಟಿಕೊಂಡಿದೆ ಎಂದು ಚೀನಾ ದೃಢಪಡಿಸಿದೆ. ಲಾನ್ಝೋದ ಆರೋಗ್ಯ ಸಮಿಷನ್‌ನ ಪ್ರಕಾರ ಗಾನ್ಸೂ ರಾಜ್ಯದ ರಾಜಧಾನಿಯಲ್ಲಿ 3,245 ಜನರಿಗೆ ಈ ರೋಗಕ್ಕೆ ಪಾಸಿಟಿವ್ ಫಲಿತಾಂಶ ಬಂದಿದೆ. ಇದು ಸಂಪರ್ಕದಿಂದ ಹರಡುತ್ತದೆ.
ವೀರ್ಯ ನುಂಗಿದ್ರೆ ಮಕ್ಕಳು ಹುಟ್ತಾವಾ? ಈ ಕತೆ ಓದಿ!
ಇದು ತಗುಲಿದರೆ ವೃಷಣಗಳ ಮೇಲೆ ಅಡ್ಡ ಪರಿಣಾಮಗಳಾಗುತ್ತದೆ. ಕೆಲವರಲ್ಲಿ ಇದು ಸಪುಂಸಕತೆಯನ್ನೂ ತರಬಲ್ಲದು ಎಂದು ತಿಳಿದು ಬಂದಿದೆ. ಮಾಲ್ಟಾ ಜ್ವರ ಅಥವಾ ಮೆಡಿಟರೇನಿಯನ್ ಜ್ವರ ಎಂದು ಕರೆಯಲ್ಪಡುವ ಈ ರೋಗ ತಲೆನೋವು, ಮಸಲ್ಸ್ ನೋವು, ಜ್ವರಕ್ಕೂ ಕಾರಣವಾಗುತ್ತದೆ.
undefined
ಕೆಲವು ಲಕ್ಷಣ ಸ್ವಲ್ಪ ಸಮಯದಲ್ಲಿ ಕಡಿಮೆಯಾಗಬಹುದು. ಇನ್ನು ಕೆಲವು ಸ್ವಲ್ಪ ಸಮಯ ಉಳಿಯಬಹುದು. ಇನ್ನೂ ಕೆಲವು ಸಂಧಿವಾತದಂತೆ ಎಂದೂ ಕಡಿಮೆಯಾಗದೆ ಉಳಿಯಬಹುದು ಎಂದು ಅಮೆರಿಕದ ರೋಗ್ಯ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ.
ಲೈಂಗಿಕ ಕ್ರಿಯೆಯಿಂದ ಕೊರೋನಾ ಹರಡುತ್ತಾ? ಸಿಕ್ಕಿತು ಉತ್ತರ
ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಬಹಳ ಕಡಿಮೆ. ಕಲುಷಿತ ಆಹಾರ ಸೇವನೆ ಮತ್ತು, ಬ್ಯಾಕ್ಟೀರಿಯಾ ಇರುವ ಗಾಳಿ ಉಸಿರಾಡಿದರೆ ಇನ್ಫೆಕ್ಷನ್ ಆಗುತ್ತದೆ ಎಂದಿದೆ. ಝಾಂಗ್ಮೂ ಲಾನ್ಝೋ ಬಯಲಾಜಿಕಲ್ ಪ್ರಯೋಗಾಲಯ ಫ್ಯಾಕ್ಟರಿಯಿಂದ ಕಳೆದ ವರ್ಷ ಜುಲೈ-ಆಗಸ್ಟ್ ಸಂದರ್ಭ ಸೋರಿಕೆ ಸಂಭವಿಸಿತ್ತು.
ಪ್ರಾಣಿಗಳ ಬಳಕೆಗೆ ಬ್ರುಸೆಲ್ಲಾ ಲಸಿಕೆ ಕಂಡು ಹಿಡಿಯುವ ಸಂದರ್ಭ ಇದು ಸಂಭವಿಸಿದೆ. ಫ್ಯಾಕ್ಟರಿ ಡೇಟ್ ಬಾರ್ ಆದ ಸ್ಯಾನಿಟೈಸರ್ ಮತ್ತು ಡಿಸ್‌ಇನ್ಫೆಕ್ಷನ್ ವಸ್ತು ಬಳಸಿದ್ದರಿಂದ ಈ ರೀತಿಯಾಗಿದೆ ಎನ್ನಲಾಗಿದೆ.
ಸ್ವಿಮಿಂಗ್ ಫೂಲ್‌ನಲ್ಲಿ ಪ್ರಬಲ ವೀರ್ಯಾಣು ಇದ್ರೆ ಮಹಿಳೆ ಪ್ರಗ್ನೆಂಟ್!
ಆರಂಭದಲ್ಲಿ ಸ್ವಲ್ಪ ಜನರಿಗಷ್ಟೇ ಇನ್ಫೆಕ್ಷನ್ ಆಗಿದೆ ಎಂದು ಊಹಿಸಲಾಗಿತ್ತು. 21 ಸಾವಿರ ಜನರನ್ನು ಪರೀಕ್ಷೆಗೊಳಪಡಿಸಿದಾಗ ಬಹಳಷ್ಟು ಜನ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ. ಈವರೆಗೆ ಯಾವುದೇ ಸಾವು ವರದಿಯಾಗಿಲ್ಲ. ಆದರೆ ಈ ವೈರಸ್ ಇನ್ನಷ್ಟು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.