ಬೇಸಿಗೆಯಲ್ಲಿ ಕರುಳಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚುವುದು ಸಾಮಾನ್ಯ. ಕರುಳಿಗೆ ಸಂಬಂಧಿಸಿದ ವಿವಿಧ ಸೋಂಕು ಬೇಸಿಗೆಯಲ್ಲಿ ಹೆಚ್ಚು ಕಂಡುಬರುತ್ತದೆ. ಹಾಲಿ ಬೇಸಿಗೆಯಲ್ಲಿ ಕರುಳಿನ ಆರೋಗ್ಯ ಚೆನ್ನಾಗಿರಬೇಕು ಎಂದಾದರೆ ಕೆಲ ಟಿಪ್ಸ್ ಫಾಲೋ ಮಾಡಿ.
ಹವಾಮಾನದಲ್ಲಿ ಏಕಾಏಕಿ ಉಷ್ಣಾಂಶ ಹೆಚ್ಚಾಗಿದೆ. ಮಾರ್ಚ್ ನಲ್ಲೇ ಈ ಪರಿಯ ಸೆಕೆ ಕಾಡುತ್ತಿದೆ ಎಂದರೆ ಮುಂದಿನ ಒಂದೆರಡು ತಿಂಗಳು ಅದ್ಯಾವ ನಮೂನೆಯ ಬಿಸಿ ಇರಬಹುದು ಎಂದು ಅಂದಾಜಿಸಬಹುದು. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಕರುಳಿಗೆ ಸಂಬಂಧಿಸಿದ ಸೋಂಕುಗಳು ಹೆಚ್ಚು. ಕಾಲರಾ ಸೇರಿದಂತೆ ಕರುಳಿಗೆ ಹಲವು ನಮೂನೆಯ ವೈರಸ್, ಬ್ಯಾಕ್ಟೀರಿಯಾ ಕಾಟ ಬೇಸಿಗೆಯಲ್ಲಿ ಅಧಿಕ. ಹೀಗಾಗಿ, ಈ ಬಾರಿಯ ಬೇಸಿಗೆಯನ್ನು ಆರೋಗ್ಯಪೂರ್ಣವಾಗಿ ಕಳೆಯಬೇಕು ಎಂದರೆ ಸ್ವಲ್ಪ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಈಗಂತೂ ಹೇಳಿಕೇಳಿ ಎಲ್ಲೆಡೆ ಜ್ವರ, ನೆಗಡಿ ಹೆಚ್ಚಾಗಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ವಾಂತಿ, ಭೇದಿ ಎಲ್ಲವೂ ಹೆಚ್ಚಾಗಿವೆ. ಹೀಗಾಗಿ, ಇನ್ನಷ್ಟು ಎಚ್ಚರಿಕೆ ಅಗತ್ಯ. ಸೂಕ್ಷ್ಮಾಣುಜೀವಿಗಳು ಬೇಸಿಗೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ವೃದ್ಧಿಯಾಗುತ್ತವೆ. ಬೇಸಿಗೆಯ ಬಿಸಿ ವಾತಾವರಣ ಅವು ಬೆಳೆಯಲು ಅನುಕೂಲವಾಗಿರುತ್ತವೆ. ಪರಿಣಾಮವಾಗಿ, ನಮ್ಮ ಹೊಟ್ಟೆ ಬಹುಬೇಗ ಹಾಳಾಗುತ್ತದೆ. ಕರುಳಿನ ಆರೋಗ್ಯವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ. ಏಕೆಂದರೆ, ಕರುಳು ನಮ್ಮ ಎರಡನೇ ಮಿದುಳು. ನಿಮಗೆ ಗೊತ್ತಿರಲಿ, ನಮ್ಮ ರೋಗ ನಿರೋಧಕ ಶಕ್ತಿಯ ಬಹುದೊಡ್ಡ ಭಾಗ ಕರುಳಿನಲ್ಲಿದೆ.
• ಸಾತ್ವಿಕ (Vegetarian Food) ಆಹಾರ ಮತ್ತು ನಿಯಮಿತ ವ್ಯಾಯಾಮ (Regular Exercise)
ಬೇಸಿಗೆಯ (Summer) ವಾತಾವರಣದಲ್ಲಿ ಬಹುಬೇಗ ಸುಸ್ತೆನಿಸುತ್ತದೆ. ಇದಕ್ಕೆ ಪರಿಹಾರವೆಂದರೆ, ಸಸ್ಯಾಹಾರದ ಸೇವನೆ. ತಾಜಾ ತರಕಾರಿ, ಹಣ್ಣುಗಳು, ಶುಂಠಿ, ಈರುಳ್ಳಿ, ಬೀಜಗಳನ್ನು ಬಳಕೆ ಮಾಡಬೇಕು. ಇವು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು (Defence Mechanism) ಸದೃಢಪಡಿಸುತ್ತವೆ. ವಿಟಮಿನ್ಸ್ ಮತ್ತು ಆಂಟಿಆಕ್ಸಿಡೆಂಟ್ ಗಳು ಹಣ್ಣು ಮತ್ತು ತರಕಾರಿಗಳಲ್ಲಿ ಹೇರಳವಾಗಿರುತ್ತವೆ. ಇವು ಬೇಸಿಗೆಯಲ್ಲಿ ಕಾಡುವ ಜ್ವರದಿಂದ (Fever) ನಮ್ಮನ್ನು ದೂರವಿರಿಸಬಲ್ಲವು. ನಾರಿನಂಶ (Fibre) ಅಧಿಕವಾಗಿರುವ ಆಹಾರ ಸೇವಿಸಿ. ಹಸಿರು ಸೊಪ್ಪುಗಳ ಬಳಕೆ ಮಾಡಿ. ಬೇಸಿಗೆಯ ಬಿಸಿಯಲ್ಲಿ ವ್ಯಾಯಾಮ ಮಾಡುವುದೇ ಬೇಡವೆನಿಸಬಹುದು. ಆದರೆ, ನಿಯಮಿತವಾಗಿ ವ್ಯಾಯಾಮ ಮಾಡಲೇಬೇಕು. ಬೆಳಗಿನ ಹೊತ್ತು ಸ್ವಲ್ಪ ಸಮಯ ಜಾಗ್ ಮಾಡಿದರೆ ಜೀರ್ಣಾಂಗ (Digestive) ವ್ಯವಸ್ಥೆ ಚೆನ್ನಾಗಿರುತ್ತದೆ.
Summer Season ಇದು, ಇವನ್ನು ಕುಡಿದು ಆರೋಗ್ಯ ಚೆನ್ನಾಗಿರುವಂತೆ ನೋಡ್ಕಳ್ಳಿ
• ಕೈಗಳ ಸ್ವಚ್ಛತೆ (Wash Hands) ಅಗತ್ಯ
ಸೂಕ್ಷ್ಮಾಣುಜೀವಿಗಳು ಬಹುಬೇಗ ಕೈಗಳಿಗೆ ಅಂಟಿಕೊಳ್ಳುತ್ತವೆ. ಅವು ದೇಹ ಪ್ರವೇಶಿದಂತೆ ನೋಡಿಕೊಳ್ಳುವುದು ಅಗತ್ಯ. ಪದೇ ಪದೆ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳಬೇಕು. ಜನಸಂದಣಿ ಅವಾಯ್ಡ್ ಮಾಡಿ. ಸಮಾರಂಭಗಳ ಊಟ-ತಿನಿಸು ಹೆಚ್ಚು ಬೇಡ. ಹಾಗೆಯೇ, ಮನೆಯಲ್ಲಿ ಇಡೀ ದಿನ ಏರ್ ಕಂಡಿಷನ್ ಬಳಕೆ ಮಾಡುವುದು ಸೂಕ್ತವಲ್ಲ. ಗಾಳಿ (Air) ಮನೆಯೊಳಕ್ಕೆ ಬರುವಂತೆ ನೋಡಿಕೊಳ್ಳಿ. ಕೊನೆಯ ಪಕ್ಷ ಬೆಳಗ್ಗೆ, ಸಂಜೆ ಏರ್ ಕಂಡಿಷನ್ ಬೇಡ.
• ನೀರು (Water) ಕುಡಿಯೋಕೆ ಮರೀಬೇಡಿ
ಮನೆಯಲ್ಲೇ ಇರಿ, ಹೊರಗೆ ಓಡಾಡುವ ಕೆಲಸದಲ್ಲಿರಿ. ಎಲ್ಲೇ ಇದ್ದರೂ ಚೆನ್ನಾಗಿ ನೀರು ಕುಡಿಯುತ್ತಿರಿ. ಹೆಚ್ಚು ಬೆವರು (Sweat) ಬರುವ ಕೆಲಸ ಮಾಡುತ್ತಿದ್ದರಂತೂ ನೀರನ್ನು ಆಗಾಗ ಕುಡಿಯುತ್ತಲೇ ಇರಬೇಕು. ಬೇಸಿಗೆಯಲ್ಲಿ ಡಿಹೈಡ್ರೇಷನ್ (Dehydration) ಆದರೆ ದೇಹದ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಡಿಹೈಡ್ರೇಷನ್ ಆದಾಗ ಕರುಳಿನ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ.
ಹೊಟ್ಟೆ ಕಡೆ ಇರಲಿ ಗಮನ… ಇಲ್ಲಾಂದ್ರೆ ಈ ಸಮಸ್ಯೆಗಳು ಕಾಡಬಹುದು ಜೋಪಾನ!
• ಪ್ರೊಬಯಾಟಿಕ್ಸ್ (Probiotics) ಕರುಳಿಗೆ (Gut) ಅಗತ್ಯ
ಪ್ರೊಬಯಾಟಿಕ್ಸ್ ಇರುವ ಆಹಾರವನ್ನು (Food) ಸೇವಿಸಬೇಕು. ಸೋಯಾ ಉತ್ಪನ್ನ, ಸೋಯಾ ಹಾಲು, ಮೊಸರು, ಮಜ್ಜಿಗೆ, ಯೋಗರ್ಟ್, ಹಾಲು, ಎಲೆಕೋಸು ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಪ್ರತಿದಿನ ಬಳಕೆ ಮಾಡಬೇಕು. ಪ್ರೊಬಯಾಟಿಕ್ಸ್ ಕೊರತೆ ಉಂಟಾದರೆ, ಕರುಳಿನ ಸಮಸ್ಯೆ ಹೆಚ್ಚುತ್ತದೆ. ಸೋಂಕು (Infection), ಉರಿಯೂತದ ತೊಂದರೆ ಕಾಡುತ್ತದೆ. ಇಂತಹ ತೊಂದರೆ ಭಾದಿಸಬಾರದು ಎಂದಾದರೆ ಪ್ರೊಬಯಾಟಿಕ್ಸ್ ಸೇವನೆ ಮಾಡಬೇಕು.