World Sleep Day: ನಿದ್ದೆ ಕಡಿಮೆಯಾದ್ರೆ ಎಂಥಾ ಗಂಭೀರ ಕಾಯಿಲೆ ಬರುತ್ತೆ ನೋಡಿ !

By Suvarna News  |  First Published Mar 18, 2022, 11:35 AM IST

ದಿನಕ್ಕೆ ನೀವೆಷ್ಟು ಗಂಟೆ ನಿದ್ದೆ (Sleep) ಮಾಡ್ತೀರಿ. ಆರೋಗ್ಯ (Health)ವಾಗಿರಲು ಸಾಕಾಗುವಷ್ಟು ಗಂಟೆ, ಗುಣಮಟ್ಟದ ನಿದ್ದೆ ಮಾಡ್ತಿದ್ದೀರಾ ? ಇಲ್ಲ ಬೆಡ್‌ ಮೇಲೆ ಬಿದ್ಕೊಂಡು ಮೊಬೈಲ್‌ (Mobile) ಸ್ಕ್ರಾಲ್‌ ಮಾಡ್ತಾ ಸಮಯ (Time) ಕಳೀತೀರಾ. ಹೀಗೆ ಮಾಡ್ತಾ ಇದ್ರೆ ತಿಳ್ಕೊಳ್ಳಿ. ಇಂಥವರು ಸಂಭಾವ್ಯ ಸ್ಲೀಪ್ ಅಪ್ನಿಯಾ ರೋಗಿಗಳಂತೆ.


ಮನುಷ್ಯ ದಿನಪೂರ್ತಿ ಚಟುವಟಿಕೆಯಿಂದ ಇರುವುದು ಹೇಗೆ ಮುಖ್ಯವೋ ಹಾಗೆಯೇ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ (Sleep) ಮಾಡಿ ವಿಶ್ರಾಂತಿ (Rest) ಪಡೆಯುವುದು ಸಹ ಮುಖ್ಯ. ನಿದ್ದೆ ಸರಿಯಾಗಿ ಆಗದೆ, ದೇಹ (Body) ಸರಿಯಾಗಿ ವಿಶ್ರಾಂತಿ ಪಡೆಯದೇ ಇದ್ದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಮನುಷ್ಯನೊಬ್ಬರಿಗೆ ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ನಿದ್ದೆಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಆದ್ರೆ ಮನುಷ್ಯನ ಬಿಡುವಿಲ್ಲದ ಜೀವನಶೈಲಿಯಲ್ಲಿ ಸರಿಯಾಗಿ ನಿದ್ದೆ ಮಾಡೋಕು ಸಮಯ ಸಿಗ್ತಿಲ್ಲ. ಹೆಚ್ಚು ದುಡಿಯುವ, ಹೆಚ್ಚು ಎಂಜಾಯ್ ಮಾಡುವ ಮನೋಭಾವದಿಂದ ಮನುಷ್ಯರು ನಿದ್ದೆಯ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲ್ತಿದ್ದಾರೆ. 

ಇವತ್ತು ಮಾರ್ಚ್‌ 18, ವಿಶ್ವ ನಿದ್ರಾ ದಿನ. ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿರುವ ಹೊಸ ವಿಚಾರ ಏನೂಂತ ಕೇಳಿ. ಹೊಸ ಅಧ್ಯಯನದ ಪ್ರಕಾರ,  93% ಭಾರತೀಯರು ನಿದ್ರಾಹೀನರಾಗಿದ್ದಾರಂತೆ ಮತ್ತು ಅವರಲ್ಲಿ 65% ಸಂಭಾವ್ಯ ಸ್ಲೀಪ್ ಅಪ್ನಿಯಾ ರೋಗಿಗಳು ಎಂದು ತಿಳಿದುಬಂದಿದೆ. ಸ್ಲೀಪ್ ಅಪ್ನಿಯ ಕೇವಲ ನಿದ್ರೆಗಿಂತ ಹೆಚ್ಚು ಪರಿಣಾಮ ಬೀರುತ್ತದೆ. ಇದು ನಿಮ್ಮ ಹೃದಯರಕ್ತನಾಳದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಅಧ್ಯಯನದಿಂದ ತಿಳಿದುಬಂದಿರುವ ಮಾಹಿತಿ.

Tap to resize

Latest Videos

Dry mouth at night: ರಾತ್ರಿ ಸಿಕ್ಕಾಪಟ್ಟೆ ಬಾಯಿ ಒಣಗಿದ್ರೆ ಏನ್ಬಾಡ್ಮೇಕು?

ನೀವು ರಾತ್ರಿಯಲ್ಲಿ ಮಲಗಲು ಕಷ್ಟಪಡುತ್ತೀರಾ ಅಥವಾ ಸಾಕಷ್ಟು ನಿದ್ರೆ ಪಡೆಯುತ್ತಿಲ್ಲವೇ? ಈ ರೀತಿಯ ಸಮಸ್ಯೆ ಅನುಭವಿಸುವವರು ನೀವು ಮಾತ್ರವಲ್ಲ. ಅಪೊಲೊ ಟೆಲಿಹೆಲ್ತ್‌ನ ಸಿಇಒ ವಿಕ್ರಮ್ ಥಾಪ್ಲೂ ಪ್ರಕಾರ, ಶೇಕಡಾ 90ಕ್ಕಿಂತ ಹೆಚ್ಚು ಭಾರತೀಯರು ನಿದ್ರೆಯಿಂದ ವಂಚಿತರಾಗಿದ್ದಾರೆ ಮತ್ತು ಅವರಲ್ಲಿ ಶೇಕಡಾ 65ರಷ್ಟು ಜನರು ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಸಮಸ್ಯೆ ಎದುರಿಸುತ್ತಿರುವ ಸಂಭಾವ್ಯ ರೋಗಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿ ವರ್ಷ ಮಾರ್ಚ್ 18ರಂದು ಆಚರಿಸಲಾಗುವ ವಿಶ್ವ ನಿದ್ರಾ ದಿನವನ್ನು ಗುರುತಿಸಿ, ಅಪೊಲೊ ಟೆಲಿಹೆಲ್ತ್ 'ಗುಡ್ ನಿದ್ರಾ' ಕಾರ್ಯಕ್ರಮವನ್ನು ಸ್ಲೀಪ್ ಅಪ್ನಿಯ ಚಿಕಿತ್ಸೆ ಮತ್ತು ರೋಗನಿರ್ಣಯಕ್ಕಾಗಿ ಸಮಗ್ರ ನಿದ್ರೆ ಕಾರ್ಯಕ್ರಮವನ್ನು ಪರಿಚಯಿಸಿದೆ. ಹೊಸ ಕಾರ್ಯಕ್ರಮದ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಥಾಪ್ಲೂ, ನಿದ್ದೆಯ ಸಮಸ್ಯೆಯನ್ನು ಗುರುತಿಸಿ, ರೋಗನಿರ್ಣಯ ಮಾಡಿ ಸಮರ್ಪಕವಾಗಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ಈ ಮೀಸಲಾದ ಕಾರ್ಯಕ್ರಮದ ಮೂಲಕ, ನಾವು ಹೆಚ್ಚು ರೋಗಿಗಳನ್ನು ಕಂಡು ಹಿಡಿಯಲು ಮತ್ತು ಸ್ಲೀಪ್ ಅಪ್ನಿಯದ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

Sleep Disorder: ನಿದ್ರೆ ಬರುತ್ತಿಲ್ಲವೇ? ನಿರ್ಲಕ್ಷಿಸಬೇಡಿ

ಅಬಸ್ಟ್ರಾಕ್ಟಿವ್ ಸ್ಲೀಪ್ ಅಪ್ನಿಯ (OSA) ಎಂದರೇನು ?
ಅಬಸ್ಟ್ರಾಕ್ಟಿವ್ ಸ್ಲೀಪ್ ಅಪ್ನಿಯ ಅಥವಾ ನಿದ್ದೆಯಲ್ಲಿ ಉಸಿರುಕಟ್ಟುವಿಕೆ (OSA)ಎಂಬುದು ಶ್ವಾಸನಾಳದ ಸಂಪೂರ್ಣ/ಭಾಗಶಃ ಅಡಚಣೆಗೊಂಡ ಸ್ಥಿತಿಯಾಗಿದೆ. ಇದು ಒತ್ತಡದ ಜೀವನಶೈಲಿ ಅನುಸರಿಸುತ್ತಿರುವವರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಈ ಸ್ಥಿತಿಯು ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಕಡಿಮೆಯಾದ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯೊಂದಿಗೆ ಸ್ವತಂತ್ರವಾಗಿ ಸಂಬಂಧಿಸಿದೆ. ಆದ್ದರಿಂದ, ಆರೋಗ್ಯ ಸಿಬ್ಬಂದಿಗೆ ಶೀಘ್ರವಾಗಿ ರೋಗನಿರ್ಣಯ ಮಾಡುವುದು ಒಂದು ಪ್ರಮುಖ ಕಾಳಜಿಯಾಗಿದೆ.

ನಿದ್ರಾಹೀನತೆ ಮತ್ತು ಸ್ಥೂಲಕಾಯತೆಯನ್ನು ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ಪಟ್ಟಿಗೆ ಸೇರಿಸಲು ಪರಿಗಣನೆಯಲ್ಲಿದೆ ಎಂದು ಥಾಪ್ಲೂ ಹೇಳಿದ್ದಾರೆ. ಅಪೊಲೊ ಟೆಲಿಹೆಲ್ತ್ ಸ್ಲೀಪ್‌ನ ಮುಖ್ಯ ವೈದ್ಯಕೀಯ ಅಧಿಕಾರಿ,  ಡಾ.ಆಯೇಶಾ ನಜ್ನೀನ್, ಅಪ್ನಿಯ ಗಂಭೀರ ದೀರ್ಘಕಾಲದ ಸ್ಥಿತಿಯಾಗಿದ್ದು ಅದು ನಿದ್ರೆಗಿಂತ ಹೆಚ್ಚು ಪರಿಣಾಮ ಬೀರುತ್ತದೆ. ಇದು ರೋಗಿಗಳ ಜೀವನದ ಗುಣಮಟ್ಟ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

'ಗುಡ್ ನಿದ್ರಾ' ಕಾರ್ಯಕ್ರಮದೊಂದಿಗೆ, ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಬಳಲುತ್ತಿರುವ ರೋಗಿಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ ಮತ್ತು ಯಾವುದೇ ದಿನದಲ್ಲಿ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ ಎಂದು ಅವರು ನಂಬುತ್ತಾರೆ.

click me!