ನೀವು ಕೂಡ ಕಾಫಿಗೆ ಅಡಿಕ್ಟ್ ಆಗಿದ್ದೀರಾ? ಪ್ರತಿ ದಿನ ಕಾಫಿ ಕುಡಿಯುವುದುಕ್ಕಾಗಿಯೇ ಸಮಯವನ್ನು ನಿಗದಿಪಡಿಸಿರುತ್ತೀರಿ. ಆ ಸಮಯದಲ್ಲಿ ಕಾಫಿ ಕುಡಿಯದೆ ಹೋದರೆ ಏನೋ ಕಳೆದುಕೊಂಡ ಭಾವನೆ. ಹಾಗಾದರೆ, ಕಾಫಿ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಹುದು ಎಂದು ಯೋಚನೆ ಮಾಡಿದ್ದೀರಾ?
ಅದೇನೇ ಬೇಸರ ಇರಲಿ, ಕೆಲಸದ ಒತ್ತಡ (Strss) ವಿರಲಿ ಒಂದು ಲೋಟ ಕಾಫಿ (Coffee) ಕುಡಿದು ಬಿಟ್ಟರೆ ಮನಸ್ಸಿಗೆ ಸಮಾಧಾನ. ಕಾಫಿ ಎನರ್ಜಿಯನ್ನು (Energy) ಹೆಚ್ಚಿಸಿದ ಅನುಭವ ನೀಡುತ್ತದೆ. ರಾತ್ರಿಯ ವೇಳೆಯಲ್ಲಿ ಕೆಲಸ ಮಾಡುವವರು ಆಗಾಗ ಕಾಫಿ ಕುಡಿಯುತ್ತಾ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ. ಇದು ನಿದ್ರೆಯನ್ನು ತಡೆಯುವುದರ ಜೊತೆಗೆ, ಬೋರ್ (Bore) ಆಗುವುದನ್ನು ಕೂಡ ಹೋಗಲಾಡಿಸುತ್ತದೆ ಎಂಬುದು ಜನರ ನಂಬಿಕೆ. ಹಾಗಾದರೆ, ಈ ಕಾಫಿಯಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲವೇ? ಕಾಫಿಯಲ್ಲಿರುವ ಕೆಫಿನ್ (Cafeine) ಅಂಶವು ನೀವು ಮತ್ತೆ ಮತ್ತೆ ಕಾಫಿಯನ್ನು ಕುಡಿಯಬೇಕು ಎಂದು ಅನಿಸುವ ಹಾಗೆ ಮಾಡುತ್ತದೆ. ಅದಕ್ಕಾಗಿಯೇ ಒಂದು ಲೋಟ ಕಾಫಿ ಕುಡಿದರೆ ಸಾಲದು, ಇನ್ನೂ ಒಂದು ಲೋಟ ಕುಡಿಯೋಣ ಎಂಬ ಭಾವನೆ ಮೂಡುವುದು. ಹಾಗಾಗಿಯೇ ಜನರು ಕಾಫಿಗೆ ಬಹುಬೇಗ ಅಡಿಕ್ಟ್ (Addict) ಆಗಿಬಿಡುತ್ತಾರೆ.
ಆದರೆ, ಇದರ ಕುರಿತಾಗಿ ತಜ್ಞರು ಹೇಳುವ ಪ್ರಕಾರ ಕಾಫಿ ನಾವಂದುಕೊಂಡ ಹಾಗೆ ಕಾಫಿ ನಮ್ಮ ಎನರ್ಜಿಯನ್ನು ಹೆಚ್ಚಿಸುವುದಿಲ್ಲ . ಬದಲಾಗಿ ಇದು ಬೇರೆಯದೇ ಪರಿಣಾಮವನ್ನು ಹೊಂದಿದೆ. ಪೌಷ್ಠಿಕ ತಜ್ಞೆ (Nutritionist) ಪೂಜಾ ಮುಖಿಜಾ ಅವರು ನಾವು ದೈನಂದಿನ ಜೀವನದಲ್ಲಿ ಬಳಸುವ ಆಹಾರ ಪದ್ಧತಿಯ ಬಗ್ಗೆ ತಮ್ಮ ಕೆಲವು ಒಳನೋಟಗಳನ್ನು (Insight) ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಏಲಕ್ಕಿ ಉಪಯೋಗಿಸುವುದರಿಂದ ಎಷ್ಟೆಲ್ಲ Health Benefits ಇವೆ ಗೊತ್ತಾ?
ಇದರಲ್ಲಿ ಕೆಫೀನ್ ನಮ್ಮ ದೇಹದಲ್ಲಿ ಯಾವೆಲ್ಲಾ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬ ವಿಷಯ ಕೂಡ ಒಳಗೊಂಡಿದೆ. ಇವರು ಹೇಳುವ ಪ್ರಕಾರ, ನಾವು ನಮ್ಮ ಡಯಟ್ ನಲ್ಲಿ ಕೆಫೀನ್ ಅಂಶವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಮೇಲ್ನೋಟಕ್ಕೆ ಕಾಫಿ ಕುಡಿಯುವುದರಿಂದ ಹೆಚ್ಚು ಎನರ್ಜಿ ಬೆಳೆದಂತಹ ಅನುಭವವಾಗಬಹುದು. ಆದರೆ ವಾಸ್ತವವಾಗಿ ಕಾಫಿ ಇಂದಾಗಿ ನಾವು ನಮ್ಮ ಫ್ಯೂಚರ್ (Future) ನಲ್ಲಿ ಬಳಸುವ ಎನರ್ಜಿಯ ಮಟ್ಟವನ್ನು ಕಳೆದುಕೊಳ್ಳುತ್ತಾ ಬರುತ್ತೀವಿ. ಇದು ನಮ್ಮನ್ನು ಹೆಚ್ಚು ಸಮಯಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ. ಆದರೆ ನಮ್ಮ ಭವಿಷ್ಯದಲ್ಲಿ ಇರುವ ಉತ್ಸಾಹದ ಮಟ್ಟವನ್ನು ಈಗಲೇ ಖರ್ಚು ಮಾಡುವ ಮಾರ್ಗವನ್ನು ಕೆಫೀನ್ ತೋರಿಸಿಕೊಡುತ್ತದೆ ಅಷ್ಟೆ.
ಮೆದುಳಿನೊಳಗೆ ಕೆಫೀನ್ ಪ್ರಚೋದಿಸುವ ಜೀವರಾಸಾಯನಿಕ (Biochemical) ಕ್ರಿಯೆಗಳ ಬಗ್ಗೆ ಪೂಜಾ ಬರೆದಿದ್ದಾರೆ. ಮೆದುಳು ಅಡೆನೊಸಿನ್ (Adenosine) ಎಂಬ ಗ್ರಾಹಕಗಳನ್ನು ಹೊಂದಿದ್ದು ಅದು ನಿಮಗೆ ದಿನವಿಡೀ ನಿದ್ದೆ (Sleepy) ಬರುವ ಹಾಗೆ ಮಾಡುತ್ತದೆ. ಅಡೆನೊಸಿನ್‌ಗೆ ಸಮಾನವಾದ ರಚನೆಯನ್ನು ಹೊಂದಿರುವ ಕೆಫೀನ್ ಈ ಗ್ರಾಹಕಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಹಾಗೂ ನಿದ್ರೆಯನ್ನು ಹೋಗಲಾಡಿಸುತ್ತದೆ. ಆದರೂ, ಇದು ದೇಹ ಮತ್ತು ಮಿದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
Food And Mood: ತಿನ್ನೋ ಆಹಾರಕ್ಕೂ ಮನಸ್ಥಿತಿಗೂ ಸಂಬಂಧವಿದ್ಯಾ ?
ಆದರೂ ಕೂಡ, ನಿಮ್ಮ ಮೆದುಳು ಈ ಅಡೆನೊಸಿನ್ ಗ್ರಾಹಕಗಳನ್ನು ಬಯಸುತ್ತದೆ, ಆದ್ದರಿಂದ ಮೆದುಳಿನಲ್ಲಿ (Brain) ಹೆಚ್ಚು ಕೆಫೀನ್ ಅಥವಾ ಅಡೆನೊಸಿನ್‌ನಿಂದ ತುಂಬಿಕೊಂಡಿರುತ್ತದೆ. ಇದೇ ಕಾರಣದಿಂದ ಕೆಲವರು ಕೆಫೀನ್ ಸೇವಿಸುವುದಿಲ್ಲ. ಮಧ್ಯಾಹ್ನ 3-4 ಗಂಟೆಯ ನಂತರ ಕೆಫೀನ್ ನಿದ್ರೆಯನ್ನು ಹೋಗಲಾಡಿಸಿ ಬಿಡುತ್ತದೆ. ಕೆಲವರು ಒಂದು ಕಪ್ (Cup) ಕಾಫಿಯನ್ನು ಮಾತ್ರ ಸೇವಿಸಬಹುದು ಮತ್ತು ತಕ್ಷಣವೇ ಹಾಸಿಗೆಗೆ ಜಿಗಿಯಬಹುದು. ಹಾಗಂದ ಮಾತ್ರಕ್ಕೆ ಕಾಫಿಯನ್ನು ಕುಡಿಯಲೇಬಾರದು ಎಂದೇನಿಲ್ಲ. ನಮ್ಮ ಮೆದುಳಿಗೆ ಕೆಫೀನ್ ಅಗತ್ಯವೂ ಕೂಡ ಇದೆ. ಆದರೆ ಮಿತಿಯಲ್ಲಿ (Limit) ಇರಬೇಕು ಅಷ್ಟೇ. ಹೆಚ್ಚು ಕೆಫೀನ್ ಸೇವನೆಯಿಂದಾಗಿ ಆರೋಗ್ಯ ಹದಗೆಡಬಹುದು ಎಂಬುದು ತಜ್ಞರ ಅಭಿಪ್ರಾಯ.