ಅನಾದಿ ಕಾಲದಿಂದಲೂ ಭಾರತದಲ್ಲಿ ಕಷಾಯ ಕುಡಿದು ಜನರು ರೋಗದಿಂದ ರಕ್ಷಣೆ ಪಡೆಯುತ್ತಿದ್ದಾರೆ. ಆದ್ರೆ ಕಷಾಯ ಹೆಚ್ಚು ಪ್ರಸಿದ್ಧಿಗೆ ಬಂದಿದ್ದು ಕೊರೊನಾ ಸಂದರ್ಭದಲ್ಲಿ. ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗ್ತಿದ್ದಂತೆ ಕಂಪನಿಗಳು ಅನೇಕ ಕಷಾಯವನ್ನು ಮಾರುಕಟ್ಟೆಗೆ ತಂದಿವೆ.
ಕೊರೊನಾ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ತಡೆಯಲು ರೋಗ ನಿರೋಧಕ ಶಕ್ತಿ ದೊಡ್ಡ ಕೆಲಸ ಮಾಡಿತ್ತು. ಕೊರೊನಾ ಸಂದರ್ಭದಲ್ಲಿ ಕಷಾಯ ಕುಡಿಯುವಂತೆ ಅನೇಕರು ಸಲಹೆ ನೀಡಿದ್ದರು. ಕೊರೊನಾ ನಂತ್ರ ಜನರು ಆರೋಗ್ಯದ ಬಗ್ಗೆ ಜಾಗೃತರಾಗಿದ್ದಾರೆ. ಕೊರೊನಾಕ್ಕಿಂತ ಮೊದಲಿದ್ದ ನಿರ್ಲಕ್ಷ್ಯ ಈಗಿಲ್ಲ. ಜನರು ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ಹಿಂದಿನ ಕಾಲದಿಂದಲೂ ಭಾರತ (India) ದಲ್ಲಿ ಕಷಾಯ (Kadha) ಕ್ಕೆ ಹೆಚ್ಚಿನ ಮಹತ್ವವಿದೆ. ಅನೇಕ ಮನೆಗಳಲ್ಲಿ ಪ್ರತಿ ದಿನ ಕಷಾಯ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಅನಾರೋಗ್ಯ (illness) ದ ಸಂದರ್ಭದಲ್ಲಿ ಕಷಾಯ ಸೇವನೆಗೆ ಮುಂದಾಗ್ತಾರೆ. ಹಿಂದೆ ಮನೆಯಲ್ಲಿಯೇ ಕಷಾಯ ಸಿದ್ಧಪಡಿಸಿ ಕುಡಿಯಲಾಗ್ತಿತ್ತು. ಆದ್ರೀಗ ಕಷಾಯ ತಯಾರಿಸುವ ವಿಧಾನ ಅನೇಕರಿಗೆ ತಿಳಿದಿಲ್ಲ. ಅದನ್ನು ತಯಾರಿಸುವಷ್ಟು ಸಮಯ ಕೂಡ ಇಲ್ಲ. ಹಾಗಾಗಿ ದೊಡ್ಡ ದೊಡ್ಡ ಕಂಪನಿಗಳು ಇದ್ರ ಲಾಭ ಪಡೆಯಲು ಮುಂದಾಗಿವೆ. ಭಾರತದಲ್ಲಿ ಅನೇಕ ಕಂಪನಿಗಳು ಕಷಾಯವನ್ನು ಮಾರುಕಟ್ಟೆಗೆ ತಂದಿವೆ.
ಸದ್ಯ ಇ- ಕಾಮರ್ಸ್ ವೆಬ್ಸೈಟ್ ಗಳಲ್ಲಿ ಬಿಗ್ ಸೇಲ್ ನಡೆಯುತ್ತಿದೆ. ಅಮೆಜಾನ್ ಕೂಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸುತ್ತಿದೆ. ಕಷಾಯ ತಯಾರಿಸಲು ಬರೋದಿಲ್ಲ ಅಥವಾ ಸಮಯವಿಲ್ಲ ಎನ್ನುವವರು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಗೆ ಭೇಟಿ ನೀಡಬಹುದು. ಅಲ್ಲಿ ನಿಮಗೆ ಆರೋಗ್ಯಕರ ಕಷಾಯ ಲಭ್ಯವಿದೆ. ನಾವಿಂದು ಈ ಕಷಾಯದ ಬಗ್ಗೆ ಮಾಹಿತಿ ನೀಡ್ತೇವೆ.
ಝಂಡು ತುಳಸಿ (Zandu Tulsi ) ದಾಲ್ಚಿನಿ ಇಮ್ಯುನಿಟಿ ಬೂಸ್ಟರ್ ಹರ್ಬಲ್ ಕಡಾ : ಝಂಡು ಕಂಪನಿ, ಝಂಡು ತುಳಸಿ ಮತ್ತು ದಾಲ್ಚಿನ್ನಿಯಿಂದ ತಯಾರಿಸಿದ ಆಯುರ್ವೇದ ಕಷಾಯವನ್ನು ಮಾರುಕಟ್ಟೆಗೆ ತಂದಿದೆ. ಇದು ನೈಸರ್ಗಿಕ ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಇದು ಆಯುರ್ವೇದ ಟೀಯಾಗಿದೆ. ಝಂಡು ತುಳಸಿ ದಾಲ್ಚಿನಿ ಇಮ್ಯುನಿಟಿ ಬೂಸ್ಟರ್ ಹರ್ಬಲ್ ಕಷಾಯದಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಈ ಇದರಲ್ಲಿ ತುಳಸಿ ಮತ್ತು ದಾಲ್ಚಿನಿ ಬಳಸಲಾಗಿದೆ. ಯಾವುದೇ ರಾಸಾಯನಿಕ ವಸ್ತುವನ್ನು ಬಳಸಲಾಗಿಲ್ಲ. ಚಹಾ ಉತ್ತಮ ಪರಿಮಳ ಮತ್ತು ರುಚಿಯನ್ನು ಹೊಂದಿದೆ. ನೀವು ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಇದನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
ಡಾಬರ್ ಆಯುಷ್ ಕ್ವಾತ್ ಕಡಾ ಇಮ್ಯುನಿಟಿ ಬೂಸ್ಟರ್ : ಡಾಬರ್ ಕಂಪನಿ ಇದನ್ನು ತಯಾರಿಸಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಶೀತ ಮತ್ತು ಕೆಮ್ಮಿಗೆ ಇದನ್ನು ಬಳಸಬಹುದು. ಇದು ಶೀತ ಹಾಗೂ ಕೆಮ್ಮು ಬರದಂತೆ ನಿಮ್ಮ ದೇಹವನ್ನು ರಕ್ಷಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿಡುತ್ತದೆ.
Relationship Tips: ದಾಂಪತ್ಯದಲ್ಲಿನ ಒತ್ತಡ ನಿವಾರಣೆಗೆ ಇಲ್ಲಿದೆ ಸಲಹೆ!
ಯೋಗಾಫಿ ಆಯುಷ್ ಕಡಾ ಇಮ್ಯುನಿಟಿ ಬೂಸ್ಟರ್ : ಅಮೆಜಾನ್ ನಲ್ಲಿ ಯೋಗಾಫಿ ಆಯುಷ್ ಕಡಾ ಕೂಡ ಲಭ್ಯವಿದೆ. ರುಬ್ಬಿದ ಮಸಾಲೆ ಹಾಗೂ ತುಳಸಿಯಿಂದ ಇದನ್ನು ತಯಾರಿಸಲಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರ ಮತ್ತು ಗಂಟಲು ನೋವಿಗೆ ಅತ್ಯುತ್ತಮ ಮನೆಮದ್ದು ಎಂದು ಕಂಪನಿ ಹೇಳಿದೆ.
Mental Health : ಈ ಟಚ್ಚಲಿ ಏನೇನೋ ಇದೆ…
ಹಸ್ನರ್ ಹೆಲ್ತ್ ಆಂಡ್ ಪರ್ಸನಲ್ ಕೇರ್ ಆಯುಷ್ ಕಡಾ : ಹಸ್ನರ್ ಹೆಲ್ತ್ ಆಂಡ್ ಪರ್ಸನಲ್ ಕೇರ್ ಆಯುಷ್ ಕಡಾ, ಹರ್ಬಲ್ ಟೀ ಪುಡಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕುಡಿಯಬಹುದು. ಇದನ್ನು ನೈಸರ್ಗಿಕವಾಗಿ ಸಿದ್ಧಪಡಿಸಲಾಗಿದೆ. ಕೆಮ್ಮು, ಜ್ವರಕ್ಕೆ ಇದು ಒಳ್ಳೆ ಮದ್ದಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.